ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮಾಡೆಲ್ ಅಭಿ ಗೌಡ ಮೂಲತ ಮಂಡ್ಯದ ಹುಡುಗ. ಉದ್ಯಾನನಗರಿ ಬೆಂಗಳೂರಿನಲ್ಲಿ ಮಿಸ್ಟರ್ ಸೌತ್ ಇಂಡಿಯಾ ರನ್ನರ್ ಅಪ್, ಮಿಸ್ಟರ್ ಇಂಡಿಯಾ ಫೈನಲ್‌ವರೆಗೂ ತಲುಪಿ ಇದೀಗ ಜಾಹೀರಾತು ಕ್ಷೇತ್ರದಲ್ಲಿ ಬಿಝಿಯಾಗಿರುವ ಹುಡುಗ. ಮ್ಯಾನ್ ಆಫ್ ದಿ ಮ್ಯಾಚ್ ಸಿನಿಮಾದ ಮೂಲಕ ನಟನೆಗೂ ಕಾಲಿಟ್ಟಿರುವ ಅಭಿ, ಒಂದು ಪ್ರೈವೆಟ್ ಆಲ್ಬಂನಲ್ಲೂ ಕಾಣಿಸಿಕೊಂಡಿದ್ದಾರೆ. ಈ ಬಾರಿ ವೀಕೆಂಡ್ ಸ್ಟೈಲ್‌ನಲ್ಲಿ ತಮ್ಮ ಫ್ಯಾಷನ್ ಹಾಗೂ ಸ್ಟೈಲ್ ಸ್ಟೇಟ್‌ಮೆಂಟ್ ಬಗ್ಗೆ ಮಾತನಾಡಿಕೊಂಡಿದ್ದಾರೆ.
- ನಿಮ್ಮ ವೀಕೆಂಡ್ ಫ್ಯಾಷನ್ ಸ್ಟೇಟ್‌ಮೆಂಟ್ ಬಗ್ಗೆ ಹೇಳಿ?
ನನ್ನ ವೀಕೆಂಡ್ ಫ್ಯಾಷನ್ ಕಂಪ್ಲೀಟ್ ಕೂಲ್ ಅಟೈರ್ ಹೊಂದಿರುತ್ತದೆ. ಹೆಚ್ಚು ತಲೆಬಿಸಿಯಾಗದ ಸ್ಟೈಲ್ ಸ್ಟೇಟ್‌ಮೆಂಟ್ ನನ್ನದು. ನನಗೆ ಫ್ಯಾಷನ್ ಎನ್ನುವುದು ಕೇವಲ ಗ್ಲಾಮರಸ್ ಆಗಿ ಬಿಂಬಿಸುವುದು ಮಾತ್ರವಲ್ಲ, ಕಂಫರ್ಟಬಲ್ ಫೀಲಿಂಗ್ ಎನ್ನಬಹುದು.
- ನಿಮ್ಮ ಸ್ಟೈಲ್ ಸ್ಟೇಟ್‌ಮೆಂಟ್ ಹೇಗೆ ಡಿಫೈನ್ ಮಾಡ್ತೀರಾ?
ಪ್ರತಿ ಸಂದರ್ಭ ಹಾಗೂ ಹವಾಮಾನಕ್ಕೂ ತಕ್ಕಂತೆ ಡಿಫರೆಂಟ್ ಅಟೈರ್ ಫಾಲೋ ಮಾಡುವುದು ಹಾಗೂ ಅದಕ್ಕೆ ತಕ್ಕಂತೆ ಸ್ಟೈಲ್ ಫಾಲೋ ಮಾಡುವುದು ನನ್ನ ಸ್ಟೈಲ್ ಸ್ಟೇಟ್‌ಮೆಂಟ್. ನನಗಂತೂ ವೀಕೆಂಡ್‌ನಲ್ಲಿ ಬ್ಲಾಕ್ ಶೇಡ್ ಧರಿಸಲು ಇಷ್ಟ. ಇದು ವೀಕೆಂಡ್ ಸ್ಟೈಲ್‌ಗೂ ಸೂಟ್ ಆಗುತ್ತದೆ. ಪಾರ್ಟಿಗಳಿಗೂ ಸೂಟ್ ಆಗುತ್ತದೆ. ಸ್ಟಾರ್ ಫೀಲ್ ನೀಡುತ್ತದೆ. ಆತ್ಮವಿಶ್ವಾಸ ಹೆಚ್ಚಿಸುತ್ತದೆ.
- ಫ್ಯಾಷನ್ ಎನ್ನುವುದು ಕೇವಲ ಅಟೈರ್‌ಗೆ ಸೀಮಿತವೇ?
ಅಂದುಕೊಂಡರೇ ಅದು ಕೇವಲ ಅಟೈರ್‌ಗೆ ಮಾತ್ರ ಸೀಮಿತವಾಗುತ್ತದೆ. ನಾವು ಪರಿಸರ ಸ್ನೇಹಿ ಅಟೈರ್ ಅಳವಡಿಸಿಕೊಂಡಾಗ ತಂತಾನೇ ಸಂದೇಶ ನೀಡುವಂತಹ ಫ್ಯಾಷನ್ ನಮ್ಮದಾಗುತ್ತದೆ. ಪ್ರತಿ ಫ್ಯಾಷನ್ ಉಡುಪನ್ನು ಪಾಸಿಟಿವ್ ಆಗಿ ಪ್ರೆಸೆಂಟ್ ಮಾಡುವ ಅಭ್ಯಾಸ ನನಗಿದೆ.
- ಸೀಸನ್ಗೆ ತಕ್ಕ ಫ್ಯಾಷನ್ ಫಾಲೋ ಮಾಡುವುದು ನಿಮ್ಮಿಂದ ಸಾಧ್ಯವಾ?
ಯಾಕಿಲ್ಲ! ಖಂಡಿತಾ ಸಾಧ್ಯ. ಮಿಕ್ಸ್ ಮ್ಯಾಚ್ ಅಪ್ಷನ್ ಗೊತ್ತಿದ್ದಾಗ ಇವೆಲ್ಲವೂ ಸಾಧ್ಯವಿದೆ ಎನ್ನಬಹುದು. ಅದನ್ನು ನಾನು ಫಾಲೋ ಮಾಡುತ್ತೇನೆ ಕೂಡ.
ಇದನ್ನೂ ಓದಿ| Festive Fashion | ಕೃಷ್ಣ ಜನ್ಮಾಷ್ಟಮಿ ಸಂಭ್ರಮಕ್ಕೆ ಸಾಂಪ್ರದಾಯಿಕ ಉಡುಗೆ ಸಾಥ್