ದೇಹದ ತೂಕವನ್ನು ಸಮತೋಲನದಲ್ಲಿ ಇರಿಸುವುದು ಸುಲಭದ ಕೆಲಸವೇನಲ್ಲ. ಅದಕ್ಕಾಗಿ ನಾವು ತಿನ್ನುವ ಆಹಾರ (food), ನಿತ್ಯದ ದೈಹಿಕ ಚಟುವಟಿಕೆ (exercise) ಕೂಡ ಕಾರಣವಾಗುತ್ತದೆ. ಒಮ್ಮೆ ತೂಕ ಹೆಚ್ಚಾದರೆ ಅದನ್ನು ಇಳಿಸುವುದು ಸುಲಭದ ಪ್ರಕ್ರಿಯೆಯಲ್ಲ. ದೇಹದ ತೂಕ ಹೆಚ್ಚಳವು ಸಾಮಾನ್ಯವಾಗಿ ಆತಂಕ ಉಂಟು ಮಾಡುತ್ತದೆ. ಆದರೆ ಸರಿಯಾದ ಆಹಾರ ಮತ್ತು ದೈಹಿಕ ಚಟುವಟಿಕೆಯಿಂದ ದೇಹದ ತೂಕವನ್ನು ನಿಯಂತ್ರಿಸಿ (Weight Loss Tips Kannada) ಮತ್ತೆ ಹಿಂದಿನಂತೆ ಸ್ಮಾರ್ಟ್ ಆಂಡ್ ಸ್ಲಿಮ್ (smart and slim) ಆಗಲು ಸಾಧ್ಯವಿದೆ.
ತೂಕ ಇಳಿಸುವ ಪ್ರಕ್ರಿಯೆಯಲ್ಲಿ ಒಂದು ಆಹಾರದ ಸಲಹೆಯನ್ನು ನಿತ್ಯ ಪಾಲಿಸಿದರೆ ಆರೋಗ್ಯವಾಗಿಯೂ ಇರಬಹುದು ಮತ್ತು ದೇಹದ ತೂಕವನ್ನು ಸಮತೋಲನದಲ್ಲಿಯೂ ಇರಿಸಬಹುದು. ನಿತ್ಯವೂ ಬೆಳಗ್ಗೆ ಖಾಲಿ ಹೊಟ್ಟೆಗೆ ಕೆಲವು ಫ್ರೆಶ್ ಜ್ಯೂಸ್‌ಗಳನ್ನು ಕುಡಿಯುವುದರಿಂದ ದೇಹಕ್ಕೆ ಬೇಕಾದ ಫೈಬರ್, ಖನಿಜಾಂಶ ಮತ್ತು ವಿಟಮಿನ್ ಗಳನ್ನು ಪಡೆಯಬಹುದು. ಅಲ್ಲದೇ ಇದು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸಿ ಆರೋಗ್ಯವನ್ನು ಸುಸ್ಥಿತಿಯಲ್ಲಿ ಇಡುತ್ತದೆ. ದೇಹದ ತೂಕ ಇಳಿಸಬೇಕು ಎನ್ನುವ ಯೋಜನೆ ಇದ್ದರೆ ನಿತ್ಯವೂ ಕುಡಿಯಬೇಕಾದ ಕೆಲವು ಅದ್ಭುತ ಜ್ಯೂಸ್ ಗಳಿವೆ.
ಕೊತ್ತಂಬರಿ ನೀರು
ಖಾಲಿ ಹೊಟ್ಟೆಯಲ್ಲಿ ಬೆಳಗ್ಗೆ ಒಂದು ಲೋಟ ಕೊತ್ತಂಬರಿ ಸೊಪ್ಪಿನ ನೀರನ್ನು ಸೇವಿಸಿ. ಕೊತ್ತಂಬರಿ ನೈಸರ್ಗಿಕ ಮೂತ್ರವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ, ದೇಹದಲ್ಲಿ ನೀರಿನ ಧಾರಣವನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ. ಯಕೃತ್ತಿನ ಆರೋಗ್ಯ ಮತ್ತು ಇನ್ಸುಲಿನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಚಯಾಪಚಯವನ್ನು ಧನಾತ್ಮಕವಾಗಿ ವೃದ್ಧಿಸುತ್ತದೆ.
ನಿಂಬೆ ನೀರು
ತೂಕ ನಷ್ಟ ಮಾಡಬೇಕು ಎಂದು ಬಯಸುವವರು ನಿಂಬೆ ನೀರಿನ ಬಗ್ಗೆ ಸಾಕಷ್ಟು ಕೇಳಿರುತ್ತಾರೆ. ಆದರೆ ಬಹುತೇಕ ಮಂದಿ ಪ್ರಯೋಗ ಮಾಡಿರುವುದಿಲ್ಲ. ಮಾಡಿದ್ದರೂ ಒಂದೆರಡು ದಿನ ಮಾಡಿ ಸುಮ್ಮನಾಗಿರುತ್ತಾರೆ. ನಿಂಬೆ ನೀರು ತೂಕವನ್ನು ಅತ್ಯಂತ ವೇಗವಾಗಿ ನಷ್ಟ ಮಾಡುತ್ತದೆ. ಇದು ದೇಹದಲ್ಲಿ ಚಯಾಪಚಯ ಕ್ರಿಯೆಯನ್ನು ವೃದ್ಧಿಸುತ್ತದೆ.
ನೆಲ್ಲಿಕಾಯಿ ಜ್ಯೂಸ್
ನೆಲ್ಲಿಕಾಯಿ ಚಯಾಪಚಯವನ್ನು ಉತ್ತೇಜಿಸಲು ಮತ್ತು ಜೀರ್ಣಕ್ರಿಯೆಯ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ತ್ವರಿತವಾಗಿ ತೂಕವನ್ನು ಕಳೆದುಕೊಳ್ಳಲು ಬಯಸುವವರು ಆರೋಗ್ಯಕರ ಚಯಾಪಚಯವನ್ನು ಹೊಂದಿರುವುದು ಅಗತ್ಯ. ನೈಸರ್ಗಿಕ ಸಕ್ಕರೆಯ ರೂಪದಲ್ಲಿ ಒಂದು ಹನಿ ಜೇನುತುಪ್ಪವನ್ನು ಸೇರಿಸಿ ಸೇವಿಸಿದರೆ ಅದು ದಿನವಿಡೀ ನಮ್ಮನ್ನು ಶಕ್ತಿಯುತವಾಗಿರಿಸುತ್ತದೆ.
ಹಾಗಲಕಾಯಿ ಜ್ಯೂಸ್
ಹಾಗಲಕಾಯಿಯ ರಸವು ತೂಕ ನಷ್ಟಕ್ಕೆ ಉತ್ತಮವಾದ ಕೊಬ್ಬನ್ನು ಸುಡುವ ರಸಗಳಲ್ಲಿ ಒಂದಾಗಿದೆ. ಹಾಗಲಕಾಯಿ ಜ್ಯೂಸ್ ಅನ್ನು ನಿಯಮಿತವಾಗಿ ಕುಡಿಯುವುದರಿಂದ ಚಯಾಪಚಯ ಕ್ರಿಯೆಯಲ್ಲಿ ಸುಧಾರಣೆಯಾಗುತ್ತದೆ. ಇದು ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ. ತೂಕವನ್ನು ಕಳೆದುಕೊಳ್ಳಲು ಸಾಕಷ್ಟು ಪ್ರಯೋಜನಕಾರಿಯಾಗಿದೆ.
ಇದನ್ನೂ ಓದಿ: Blood Pressure: ರಕ್ತದೊತ್ತಡ ನಿಯಂತ್ರಿಸಲು ಈ ಆಹಾರಗಳು ಸೂಕ್ತ
ಸೌತೆಕಾಯಿ ಜ್ಯೂಸ್
ನೀರು ಸಮೃದ್ಧವಾಗಿರುವ ಕಡಿಮೆ ಕ್ಯಾಲೋರಿಗಳನ್ನು ಹೊಂದಿರುವ ಸೌತೆಕಾಯಿ ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಅದ್ಭುತವಾದ ಆಹಾರ. ಇದರಲ್ಲಿರುವ ಅತಿಯಾದ ನೀರು ಮತ್ತು ನಾರಿನಂಶವು ನಿಮ್ಮನ್ನುದೀರ್ಘಕಾಲದವರೆಗೆ ಹಸಿವನ್ನು ತಡೆಯಲು ಸಹಾಯ ಮಾಡುತ್ತದೆ. ಇದರಿಂದಾಗಿ ಅನಗತ್ಯ ಕಡುಬಯಕೆಗಳನ್ನು ನಿಯಂತ್ರಿಸಿ ದೇಹದ ತೂಕ ನಿರ್ವಹಣೆ ಮಾಡಬಹುದು.