ಶೀಲಾ ಸಿ. ಶೆಟ್ಟಿ,ಬೆಂಗಳೂರು
ತಾಯಿ, ಪತ್ನಿ, ಮಗಳು, ಸ್ನೇಹಿತೆ ಹೀಗೆ ನಾನಾ ಪಾತ್ರಗಳನ್ನು ನಿರ್ವಹಿಸುವ ಹೆಣ್ಣು ಫ್ಯಾಷನ್ ಲೋಕದಲ್ಲೂ ಛಾಪು ಮೂಡಿಸಬಲ್ಲಳು. ಮೂಲತಃ ಆರ್ಕಿಟೆಕ್ಟ್ ಆಗಿರುವ ನಾನು ಪ್ರತಿ ಮಹಿಳೆ ಸ್ವಾವಲಂಬಿಯಾಗಿ ಬದುಕಬೇಕೆಂದುಕೊಳ್ಳುತ್ತೇನೆ ಎನ್ನುವ ಮಿಸೆಸ್ ಇಂಡಿಯಾ ಕರ್ನಾಟಕ ಬ್ಯೂಟಿ ಪೇಜೆಂಟ್‌ನಲ್ಲಿ ಮಿಸೆಸ್ ಕಾರ್ಪೋರೇಟ್ ಕ್ವೀನ್ ಟೈಟಲ್ ಪಡೆದ ಮೈಸೂರಿನ ಮಲ್ಲಮ್ಮ ಗಾಣಿಗಿ ಅವರಿಗೆ ಬೈಕ್ ಚಾಲನೆ ಮಾಡುವುದು ಇಷ್ಟವಂತೆ. ನಾನು ಕೇವಲ ಮಾಡೆಲ್ ಆಗಿ ಸೀಮಿತವಾಗಿಲ್ಲ, ತಾನು ಕಂಪ್ಲೀಟ್ ವುಮೆನ್ ಎಂದು ಹೇಳುತ್ತಾರೆ. ಈ ಬಾರಿಯ ಮಾಡೆಲ್ ಲೈಫ್ ಕಾಲಂನಲ್ಲಿ ವಿಸ್ತಾರ ನ್ಯೂಸ್‌ನೊಂದಿಗೆ ಫ್ಯಾಷನ್ ಲೈಫ್ ಬಗ್ಗೆ (Style Statement) ಹಂಚಿಕೊಂಡಿದ್ದಾರೆ.
ನಿಮ್ಮ ಫ್ಯಾಷನ್ ಸ್ಟೇಟ್‌ಮೆಂಟ್ ಏನು?
ನನಗೆ ಆರ್ಟಿಸ್ಟಿಕ್, ಟ್ರೆಡಿಷನಲ್ ಹಾಗೂ ಕಂಟೆಪರರಿ ಸ್ಟೈಲ್ ಇರುವಂತಹ ಅಟೈರ್‌ಗಳನ್ನು ಪ್ರಯೋಗಿಸುವುದು ನನಗಿಷ್ಟ. ಪ್ರಯೋಗಾತ್ಮಕ ಫ್ಯಾಷನ್ ನನ್ನ ಲಿಸ್ಟ್‌ನಲ್ಲಿದೆ. ಇದು ನಮ್ಮತನವನ್ನು ಬಿಂಬಿಸಲು ಸಾಧ್ಯವಾಗುತ್ತದೆ. ನನಗೆ ಬ್ರೈಟ್ ಹಾಗೂ ಪಾಸ್ಟೆಲ್ ಕಲರ್ಸ್‌ನ ಔಟ್‌ಫಿಟ್‌ಗಳಿಷ್ಟ.
ಸ್ಟೈಲ್ ಸ್ಟೇಟ್‌ಮೆಂಟ್ ಬಗ್ಗೆ ಹೇಳುವೀರಾ?
ಮುಖದ ಮೇಲಿನ ನಗು ನನ್ನ ಯೂನಿಕ್ ಸ್ಟೈಲ್ ಸ್ಟೇಟ್‌ಮೆಂಟ್. ಇನ್ನು ಔಟ್‌ಫಿಟ್‌ಗಳನ್ನು ಮಿಕ್ಸ್ ಮ್ಯಾಚ್ ಮೂಲಕ ಪ್ರಯೋಗಿಸುವುದು ಸ್ಟೈಲ್‌ನ ಪ್ರತೀಕ ಎನ್ನಬಹುದು.
ವಿಂಟರ್ ಫ್ಯಾಷನ್ ಬಗ್ಗೆ ಹೇಳಿ?
ವಿಂಟರ್ ಫ್ಯಾಷನ್ ಲೇಯರ್ ಲುಕ್‌ಗೆ ಸಾಥ್ ನೀಡುತ್ತದೆ. ಜೊತೆಗೆ ಮಿಕ್ಸ್ ಮ್ಯಾಚ್ ಅಪ್ಷನ್ ಪ್ರಯೋಗಿಸಲು ಸಹಾಯ ಮಾಡುತ್ತದೆ. ಚಳಿಗಾಲದ ಸೀಸನ್‌ಗೆ ತಕ್ಕಂತೆ ಬದಲಾಗುವುದು, ಸೀಸನ್‌ಗೆ ತಕ್ಕಂತೆ ಸ್ಟೈಲಿಂಗ್ ಮಾಡುವುದು ರೂಢಿಯಲ್ಲಿದೆ.
ವಿಂಟರ್ ಬ್ಯೂಟಿ ಕೇರ್ ಬಗ್ಗೆ ಏನು ಟಿಪ್ಸ್ ನೀಡುತ್ತೀರಾ?
ಚಳಿಗಾಲದಲ್ಲಿ ಬ್ಯೂಟಿ ಕೇರ್ ಅತ್ಯಗತ್ಯ. ಅದರಲ್ಲೂ ಮುಖಕ್ಕೆ ಫ್ರೆಶ್ ಆಗಿರಲು ಫೇಸ್ ವ್ಯಾಯಾಮಗಳನ್ನು ಮಾಡಬೇಕು. ಇದರೊಂದಿಗೆ ಮಾಯಿಶ್ಚರೈಸರ್ ಹಚ್ಚುವುದನ್ನು ರೂಢಿಸಿಕೊಳ್ಳಬೇಕು. ಹೆಚ್ಚು ಹೊತ್ತು ಶವರ್‌ನಲ್ಲಿ ಮುಖ ಒಡ್ಡಬಾರದು. ನೀರು ಹೆಚ್ಚು ಕುಡಿಯಬೇಕು. ಹೊರಗೆ ಹೋಗಿ ಬಂದ ನಂತರ ಮುಖದ ಕ್ಲೆನ್ಸಿಂಗ್ ಮಾಡಬೇಕು.
ನಿಮ್ಮ ವಾರ್ಡ್ ರೊಬ್‌ನಲ್ಲಿರುವ ಕಲೆಕ್ಷನ್ ಹೇಳಿ?
ನಾನು ಆದಷ್ಟೂ ಉಡುಪುಗಳನ್ನು ಮರುಬಳಕೆ ಮಾಡುತ್ತೇನೆ. ಉಡುಪನ್ನು ಮಿಕ್ಸ್ ಮ್ಯಾಚ್ ಮಾಡಿ ಧರಿಸುತ್ತೇನೆ. ವಿಶೇಷ ಸಂದರ್ಭಗಳಲ್ಲಿ ಮಾತ್ರ ಖರೀದಿಸುತ್ತೇನೆ. ಕಾಟನ್, ಹ್ಯಾಂಡ್‌ಲೂಮ್ ಸೀರೆ ನನ್ನ ಫೇವರೇಟ್ ಲಿಸ್ಟ್‌ನಲ್ಲಿದೆ. ಡಿಸೈನರ್ ಬ್ಲೌಸ್‌ಗಳಿವೆ. ಸಲ್ವಾರ್, ಕುರ್ತಾ, ಜೀನ್ಸ್ ಸೇರಿದಂತೆ ಸಾಕಷ್ಟು ಕ್ಯಾಶುವಲ್‌ಗಳಿವೆ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Winter Sweater Fashion: ಚಳಿಗಾಲದಲ್ಲಿ ಹೀಗಿರಲಿ ವುಲ್ಲನ್ ಸ್ವೆಟರ್ಸ್ ಜೊತೆ ಔಟ್‌ಫಿಟ್ಸ್ ಸ್ಟೈಲಿಂಗ್!