ಶೀಲಾ ಸಿ. ಶೆಟ್ಟಿ, ಬೆಂಗಳೂರು
ಹಿಂದೆಲ್ಲಾ ಟ್ರೆಡಿಷನಲ್ ಇಯರ್ ಪಿಯರ್ಸಿಂಗ್‌ಗೆ ಸೀಮಿತವಾಗಿದ್ದ ಈ ಟ್ರೆಂಡ್ ಜೆನ್ ಜಿ ಹುಡುಗ-ಹುಡುಗಿಯರ ಆಯ್ಕೆಗೆ ತಕ್ಕಂತೆ ಬದಲಾಗಿದೆ. ಫ್ಯಾಷನ್ ಹೇಗೆ ಪ್ರತಿ ವರ್ಷ ಹೊಸ ಲೋಕವನ್ನು ತೆರೆದಿಡುತ್ತದೋ ಹಾಗೆಯೇ ಪಿಯರ್ಸಿಂಗ್ ಸ್ಟೈಲಿಂಗ್‌ನಲ್ಲೂ ಸಾಕಷ್ಟು ಮುಂದುವರಿದ ಬದಲಾವಣೆಗಳು ಟ್ರೆಂಡ್‌ನಲ್ಲಿವೆ. ಇಯರ್ ಪಿಯರ್ಸಿಂಗ್‌ನಿಂದ, ಮುಖದ ನಾನಾ ಭಾಗದ ಪಿಯರ್ಸಿಂಗ್‌ವರೆಗೂ ಇದ್ದ ಫ್ಯಾಷನ್, ಇದೀಗ ಇತರೇ ಬಾಡಿ ಪಾರ್ಟ್‌ಗಳಿಗೂ ವ್ಯಾಪ್ತಿ ವಿಸ್ತರಿಸಿಕೊಂಡಿದೆ. ಆಯಾ ಹುಡುಗ-ಹುಡುಗಿಯ ಅಭಿರುಚಿ ಹಾಗೂ ಲೈಫ್‌ಸ್ಟೈಲ್‌ಗೆ ಅನುಗುಣವಾಗಿ ಸ್ಟೈಲಿಂಗ್‌ನಲ್ಲೂ ಬದಲಾವಣೆ ಕಂಡಿದೆ ಎನ್ನುತ್ತಾರೆ ಪಿಯರ್ಸಿಂಗ್ ಸ್ಟೈಲಿಸ್ಟ್ ಜಾನ್.
2024ಕ್ಕೂ ಮುಂದುವರೆದ ಪಿಯರ್ಸಿಂಗ್ ಟ್ರೆಂಡ್
ಟ್ಯಾಟೂ ಆರ್ಟಿಸ್ಟ್ ಹಾಗೂ ಪಿಯರ್ಸಿಂಗ್ ಸ್ಪೆಷಲಿಸ್ಟ್ ಜಾನ್ ಈ ಕುರಿತಂತೆ ಒಂದಿಷ್ಟು ಐಡಿಯಾಗಳನ್ನು ಹಂಚಿಕೊಂಡಿದ್ದಾರೆ. ಈ ಕುರಿತಂತೆ ಇಲ್ಲಿದೆ ಡಿಟೇಲ್ಸ್.
ಕಿವಿಯ ಪಿಯರ್ಸಿಂಗ್
ಅಂದಹಾಗೆ, ಇದೇನು ಹೊಸ ಕಾನ್ಸೆಪ್ಟ್ ಅಲ್ಲ! ಮೊದಲು ಒಂದಕ್ಕಿಂತ ಹೆಚ್ಚು ಕಡೆ ಕಿವಿ ಚುಚ್ಚಿಸುವುದು ಸಾಮಾನ್ಯವಾಗಿತ್ತು. ಆದರೆ, ಜ್ಯುವೆಲರಿ ಧರಿಸುವ ಸ್ಟೈಲ್‌ನಲ್ಲಿ ಬದಲಾವಣೆಯಾಗಿದೆ. ಹೌದು. ಮೆಟಲ್ ಇಯರಿಂಗ್ಸ್ ಬದಲು ಇಕೋ ಫ್ರೆಂಡ್ಲಿ ಬ್ಯಾಂಬೂ ಅಥವಾ ವುಡನ್ ಟೈನಿ ಇಯರಿಂಗ್ ಧರಿಸುವುದು ಟ್ರೆಂಡಿಯಾಗಿದೆ.
ಮೂಗಿನ ಪಿಯರ್ಸಿಂಗ್
ಮೊದಲಿನಿಂದಲೂ ಮೂಗನ್ನು ಚುಚ್ಚಿಸುವುದು ಭಾರತೀಯ ಮಹಿಳೆಯ ಸಂಪ್ರದಾಯದಲ್ಲಿ ಸೇರಿದೆ. ಆದರೆ, ಇಂದು ಮೂಗನ್ನು ಎರಡೂ ಕಡೆ ಚುಚ್ಚುವುದು ಅಥವಾ ಮಧ್ಯ ಭಾಗ ಚುಚ್ಚಿ ಸೆಪ್ಟಮ್ ರಿಂಗ್ ಹಾಕುವುದು ಫ್ಯಾಷನ್ ಆಗಿದೆ. ಹುಡುಗಿಯರು ಮಾತ್ರವಲ್ಲ, ಅಲ್ಟಾ ಮಾಡರ್ನ್ ಯುವಕರು ಇದನ್ನು ಫಾಲೋ ಮಾಡಲಾರಂಭಿಸಿದ್ದಾರೆ.
ಟನಲ್ ಇಯರ್ ಎಕ್ಸ್‌ಟೆನ್ಷನ್
ಕಿವಿ ಚುಚ್ಚಿದಾಗ ಭಾರವಾದ ಓಲೆ ಹಾಕಿದರೇ ಅಗಲವಾಗುವುದು ಎಂದು ಹಿರಿಯರು ಬೈಯುತ್ತಿದ್ದದ್ದು ಸಾಕಷ್ಟು ಹುಡುಗಿಯರಿಗೆ ನೆನಪಿರಬಹುದು. ಆದರೆ, ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಈ ಶೈಲಿಯ ಟನಲ್‌ನಂತೆ ಅಗಲವಾಗಿ ಕಿವಿ ಚುಚ್ಚಿಸಿ ಸ್ಟಡ್ಸ್ ಹಾಕುವುದು ಫ್ಯಾಷನ್ ಆಗಿದೆ. ಸದ್ಯಕ್ಕೆ ಇದು ನಮ್ಮಲ್ಲಿ ಇನ್ನೂ ಕಾಮನ್ ಆಗಿಲ್ಲ!
ಡರ್ಮಲ್ ಹಾಗೂ ಮೈಕ್ರೋ ಡರ್ಮಲ್ ಪಿಯರ್ಸಿಂಗ್
ದೇಹದ ಯಾವುದೇ ಭಾಗಕ್ಕೂ ಚುಚ್ಚಿಸಬಹುದಾದ ಕಾನ್ಸೆಪ್ಟ್ ಇದು. ಒಂದು ಚಿಕ್ಕ ಜ್ಯುವೆಲರಿಯನ್ನು ಚರ್ಮದ ಮೇಲೆ ಚುಚ್ಚುವುದನ್ನು ಡರ್ಮಲ್ ಪಿಯರ್ಸಿಂಗ್ ಎನ್ನಬಹುದು. ಇನ್ನು ಸೂಕ್ಷ್ಮ ಚರ್ಮದ ಜಾಗಗಳಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಪಿಯರ್ಸಿಂಗ್ ಮಾಡುವುದನ್ನು ಮೈಕ್ರೋ ಡರ್ಮಲ್ ಪಿಯರ್ಸಿಂಗ್‌ನಲ್ಲಿ ಸೇರಿದೆ. ಉದಾಹರಣೆಗೆ., ಗದ್ದ, ಕೆನ್ನೆ, ಹೊಟ್ಟೆಯ ಬೆಲ್ಲಿ, ತೋಳು, ತುಟಿಯ ಅಂಚು ಇತ್ಯಾದಿ.
ಚಿತ್ರ-ವಿಚಿತ್ರ ಪಿಯರ್ಸಿಂಗ್ ಟ್ರೆಂಡ್
- ಟ್ಯಾಟೂ ಮೇಲೆ ಪಿಯರ್ಸ್ರಿಂಗ್ ಮಾಡುವ ಫ್ಯಾಷನ್ ಪರಿಚಿತಗೊಂಡಿದೆ.
- ಬಂಗಾರೇತರ ಮಲ್ಟಿ ಮೆಟಲ್ ಜ್ಯುವೆಲರಿ ಧರಿಸುವುದು ಟ್ರೆಂಡ್ನಲ್ಲಿದೆ.
- ಅಲ್ಟ್ರಾ ಮಾಡರ್ನ್ ಹುಡುಗಿಯರ ಚಾಯ್ಸ್ನಲ್ಲಿದೆ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: New Year Mens Fashion: ಹೀಗಿರಲಿ ಹೊಸ ವರ್ಷ ಸೆಲೆಬ್ರೇಷನ್‌ನ ಮೆನ್ಸ್ ಫ್ಯಾಷನ್ ಲುಕ್