ಶೀಲಾ ಸಿ. ಶೆಟ್ಟಿ, ಬೆಂಗಳೂರು
ಈ ಚಳಿಗಾಲಕ್ಕೆ ಸ್ಕಾರ್ಫ್ ಫ್ಯಾಷನ್ ಹೊಸ ರೂಪದೊಂದಿಗೆ ಮರಳಿದೆ. ಆದರೆ, ಈ ಬಾರಿ ಹೆಚ್ಚಾಗಿ ಅನಿಮಲ್ ಪ್ರಿಂಟ್ಸ್, ಸ್ಟ್ರೈಪ್ಸ್, ಆರ್ಟಿಸ್ಟಿಕ್ ಪ್ರಿಂಟ್ಸ್ ಇರುವಂತಹ ಸ್ಕಾರ್ಫ್ಗಳು ಟ್ರೆಂಡಿಯಾಗಿವೆ. ಉಡುಪಿನೊಂದಿಗೆ ಹಾಗೂ ವಿಂಟರ್ ಲೇಯರ್ ಲುಕ್ನೊಂದಿಗೆ ಸ್ಟೈಲಿಶ್ ಆಗಿ ಕಾಣಿಸಲು ಇವು ಸಹಕಾರಿಯಾಗಿವೆ.
ವೆರೈಟಿ ಸ್ಕಾರ್ಫ್ ಡಿಸೈನ್ಸ್
ಅಂದಹಾಗೆ, ಸ್ಕಾರ್ಫ್ ಡಿಸೈನ್ಸ್ ಎನ್ನುವುದಕ್ಕಿಂತ ಅವುಗಳ ಪ್ರಿಂಟ್ಸ್ ಹೆಚ್ಚು ಟ್ರೆಂಡಿಯಾಗಿವೆ. ಫ್ಲೋರಲ್ಗಿಂತ ಈ ಬಾರಿ ಅಬ್ಸ್ಟ್ರಾಕ್ಟ್ ಇಲ್ಯೂಷನ್ ನೀಡುವಂತಹ ಪ್ರಿಂಟ್ಸ್, ಅನಿಮಲ್ ಪ್ರಿಂಟ್ಸ್, ಆರ್ಟಿಸ್ಟಿಕ್ ಪ್ರಿಂಟ್ಸ್ನವು ಹೆಚ್ಚು ಪ್ರಚಲಿತದಲ್ಲಿವೆ. ಕಾರಣ, ಇವುಗಳನ್ನು ಯಾವುದೇ ಲೇಯರ್ ಲುಕ್ ನೀಡುವ ಉಡುಪಿಗೂ ಮ್ಯಾಚ್ ಮಾಡಬಹುದು ಎನ್ನುತ್ತಾರೆ ಡಿಸೈನರ್ಸ್.
ಇವುಗಳಲ್ಲಿ ಇದೀಗ ಲಾಂಗ್ ಹಾಗೂ ಶಾರ್ಟ್ ಸ್ಕಾರ್ಫ್ಗಳು ಲಭ್ಯ. ಸಾಟೀನ್ ಹಾಗೆಯೇ ಮೆಟಿರಿಯಲ್ನ ಸಾಫ್ಟ್ ಆಗಿರುವ ಸ್ಕಾರ್ಫ್ಗಳು ಹೆಚ್ಚು ಪ್ರಚಲಿತದಲ್ಲಿವೆ. ಎನ್ನುತ್ತಾರೆ ಡಿಸೈನರ್ ರಿಚಾ.
ಇನ್ನು ಎಂದಿನಂತೆ, ಕಾಶ್ಮೀರಿ ಸ್ಕಾರ್ಫ್, ಸಿಲ್ಕ್ ಪಶಿಮಾದಂತಹ ಬ್ರಾಂಡೆಡ್ ಸ್ಕಾರ್ಫ್ಗಳು ಕೂಡ ಇವುಗಳೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.
ಟ್ರೆಂಡಿಯಾಗಿರುವ ಸ್ಕಾರ್ಫ್ ಧರಿಸುವ ವಿಡಿಯೊ ಕ್ಲಿಪ್ಗಳು
ಮೊದಲಿನಂತೆ ನೀವು ಸ್ಕಾರ್ಫನ್ನು ತಲೆಗೆ ಕಟ್ಟಿಕೊಳ್ಳಲೇಬೇಕೆಂದಿಲ್ಲ! ಹೌದು. ಇದನ್ನು ಸುತ್ತಿಕೊಳ್ಳಬಹುದು, ಹೊದ್ದುಕೊಳ್ಳಬಹುದು, ತಲೆ ಮೇಲೆ ಬ್ಯಾಂಡ್ನಂತೆ ಕಟ್ಟಿಕೊಳ್ಳಬಹುದು. ಹೇಗೆ ಹಾಕಿಕೊಂಡರೂ ಇದು ಫ್ಯಾಷನ್ ಆಗುವುದು. ಅದರಲ್ಲೂ ಚಳಿಗಾಲದ ನಡುಗುವ ಸಂಜೆಗೆ ಇದು ಹೇಳಿ ಮಾಡಿಸಿದ ಫ್ಯಾಷನ್. ಇಂತಹ ಸ್ಟೈಲಿಂಗ್ನ ವಿಡಿಯೋ ಕ್ಲಿಪ್ಗಳು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಇವನ್ನು ಫಾಲೋ ಮಾಡಿದಲ್ಲಿ ಫ್ಯಾಷೆನಬಲ್ ಲುಕ್ ನಿಮ್ಮದಾಗುವುದು ಎನ್ನುತ್ತಾರೆ ಫ್ಯಾಷನಿಸ್ಟಾ ರಜತ್.
ಸ್ಕಾರ್ಫನ್ನು ಹೀಗೂ ಧರಿಸಬಹುದು
- ಔಟ್ಫಿಟ್ಗೆ ಸೂಟ್ ಆಗುವಂತಹ ಟ್ರೆಂಡಿ ಸ್ಕಾರ್ಫ್ ಧರಿಸಿ.
- ಕತ್ತಿನ ಹಿಂಭಾಗದಿಂದ ಮುಂಭಾಗ ನೆಲ ಕಾಣುವಂತೆ ಹಾಕುವ ಬಂದನಾ ಸ್ಟೈಲ್ ಟ್ರೈ ಮಾಡಿ ನೋಡಿ. ಇದು ಎವರ್ಗ್ರೀನ್ ಸ್ಟೈಲ್.
- ಮುಂದಲೆಯ ಮೇಲಿನಿಂದ ಕೆಳಗೆ ಕಾಣುವಂತೆ ಗಂಟು ಹಾಕುವ ಹೆಡ್ಬ್ಯಾಂಡ್ ಸ್ಟೈಲ್ ಟೀನೇಜ್ ಹುಡುಗಿಯರಿಗೆ ಸೂಟ್ ಆಗುತ್ತದೆ.
- ಸುರಳಿಯಂತೆ ಸುತ್ತಿದ ಲೂಪ್ಡ್ ಸ್ಕಾರ್ಫ್ ಸ್ಟೈಲ್, ಶಾಲಿನಂತೆ ಹೊದ್ದ ಶಾಲ್ಡ್ ಶ್ರಗ್ ಸ್ಟೈಲ್ ಪ್ರಯೋಗ ಮಾಡಿ.
- ಕತ್ತನ್ನು ಬಳಸಿ, ನೇತಾಡುವ ನೆಕ್ಕರ್ಚಿಫ್ ಸ್ಟೈಲ್, ಕ್ಯಾಶುವಲ್ ಔಟ್ಫಿಟ್ನ ಡ್ರೆಪ್ಡ್ ಸ್ಕಾರ್ಫ್ನಂತಹ ಫ್ಯಾಷನ್ ಸ್ಟೇಟ್ಮೆಂಟ್ ಕೂಡ ಇದೀಗ ಟ್ರೆಂಡ್ನಲ್ಲಿದೆ.
- ನೆಕ್ಸ್ಕಾರ್ಫ್ ಫ್ಯಾಷನ್ ಕಾರ್ಪೋರೇಟ್ ಕ್ಷೇತ್ರದವರಿಗೆ ಬೆಸ್ಟ್ ಸ್ಟೈಲಿಂಗ್ ಎನ್ನಬಹುದು.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ| Stars Winter Fashion | ತಾರೆಯರ ಟ್ರಾವೆಲ್ ಫ್ಯಾಷನ್ಗೆ ಸೇರಿದ ಬಣ್ಣಬಣ್ಣದ ಉಲ್ಲನ್ ಸ್ವೆಟರ್ಸ್