ಶೀಲಾ ಸಿ. ಶೆಟ್ಟಿ, ಬೆಂಗಳೂರು
ಚಳಿಗಾಲದ ಫ್ಯಾಷನ್‌ನಲ್ಲಿ ಇದೀಗ ಕಲರ್‌ಫುಲ್ ಮಫ್ಲರ್‌ಗಳು ಲಗ್ಗೆ ಇಟ್ಟಿವೆ. ಚಳಿ ಹೆಚ್ಚಾದಂತೆ ದೇಹವನ್ನು ಬೆಚ್ಚಗಿಡುವ ಮಫ್ಲರ್‌ಗಳಿಗೆ ಬೇಡಿಕೆ (mufflers for winter) ಹೆಚ್ಚಾಗಿದ್ದು, ಇದಕ್ಕೆ ಪೂರಕ ಎಂಬಂತೆ, ನಾನಾ ಫ್ಯಾಬ್ರಿಕ್‌ನ ಫ್ಯಾಷೆನಬಲ್ ಮಫ್ಲರ್‌ಗಳು ಮಾರುಕಟ್ಟೆಗೆ ಎಂಟ್ರಿ ನೀಡಿವೆ.
ಯಾವ್ಯಾವ ಫ್ಯಾಬ್ರಿಕ್‌ನವು ಲಭ್ಯ?
ಫರ್(fur muffler), ಸಾಫ್ಟ್ ಸ್ಯಾಟೀನ್, ದಪ್ಪನೆ ಮೇಟಿರಿಯಲ್‌ನ ಕೌದಿಯಂತಹ ಫ್ಯಾಬ್ರಿಕ್‌ನ ಮಫ್ಲರ್ (heavy muffler), ಉಲ್ಲನ್‌ನ ಮಫ್ಲರ್‌ಗಳು (woolen muffler) ಬಿಡುಗಡೆಯಾಗಿದ್ದು ಈ ಸೀಸನ್‌ನಲ್ಲಿ ಹೆಚ್ಚು ಮಾರಾಟವಾಗುತ್ತಿವೆ. ಆದರೆ, ಇವೆಲ್ಲದಕ್ಕಿಂತ ಉಲ್ಲನ್ ಮಫ್ಲರ್‌ಗಳು (woolen muffler) ಅತಿ ಹೆಚ್ಚಾಗಿ ಮಾರಾಟವಾಗುತ್ತಿವೆ. ಬಣ್ಣಬಣ್ಣದ ಡಿಸೈನ್‌ಗಳಲ್ಲಿ ದೊರೆಯುತ್ತಿವೆ. ಉಡುಪುಗಳೊಂದಿಗೆ ಮಫ್ಲರ್ ಧರಿಸಿದಾಗ ಆಕರ್ಷಕವಾಗಿ ಕಾಣಿಸುವುದರೊಂದಿಗೆ ಸ್ಟೈಲಾಗಿಯೂ (muffler style) ಬಿಂಬಿಸುತ್ತವೆ. ಹಾಗಾಗಿ ಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ” ಎನ್ನುತ್ತಾರೆ ಮಾರಾಟಗಾರರು.
ಉಲ್ಲನ್ ಮಫ್ಲರ್‌ಗೆ ಬೇಡಿಕೆ
ಇತರೇ ಮಫ್ಲರ್‌ಗಳಿಗಿಂತ ಉಲ್ಲನ್ ಮಫ್ಲರ್‌ಗಳಿಗೆ (woolen muffler) ಮೊದಲಿಗಿಂತ ಬೇಡಿಕೆ ಹೆಚ್ಚಾಗಿದೆ. ಕಾರಣ, ಇವು ಕಿವಿಗೆ ಅತಿ ಹೆಚ್ಚು ಗಾಳಿ ಹೋಗುವುದನ್ನು ತಡೆಯುವುದರೊಂದಿಗೆ ದೇಹವನ್ನು ಬೆಚ್ಚಗಿಡುತ್ತವೆ. ಚಳಿಯಿಂದ ಉಂಟಾಗುವ ಆರೋಗ್ಯ ಸಮಸ್ಯೆಯನ್ನು ತಡೆಹಿಡಿಯುತ್ತವೆ. ಇದನ್ನು ಮನಗಂಡ ಮಾರಾಟಗಾರರು ಈ ಸೀಸನ್‌ಗೆ ಹೊಂದುವಂತಹ ಬಗೆಬಗೆಯ ವಿನ್ಯಾಸದ ಮಫ್ಲರ್‌ಗಳನ್ನು ಬಿಡುಗಡೆಗೊಳಿಸಿದ್ದಾರೆ. ಆಯತಾಕಾರದಲ್ಲಿ ಲಭ್ಯವಿರುವ ಈ ಮಫ್ಲರ್‌ಗಳ ಕೊನೆಯಲ್ಲಿ ಮಾಡಿರುವ ಫ್ರಿಂಝ್ ವಿನ್ಯಾಸ ಕಲರ್‌ಫುಲ್ ಆಗಿರುತ್ತವೆ.
ಲೈಟ್‌ವೇಟ್ ಉಲ್ಲನ್ ಮಫ್ಲರ್
ಇದೀಗ ಭಾರವಿಲ್ಲದ ಯೂನಿಸೆಕ್ಸ್ ಲೈಟ್‌ವೇಟ್ ಉಲ್ಲನ್ ಮಫ್ಲರ್‌ಗಳು ಹೆಚ್ಚು ಪ್ರಚಲಿತದಲ್ಲಿವೆ. ಇವನ್ನು ಧರಿಸಿದಾಗ ಭಾರವಾಗುವುದಿಲ್ಲ. ಟ್ರಾವೆಲ್ ಮಾಡುವಾಗ ಇವನ್ನು ಕೊಂಡೊಯ್ಯವುದು ಸುಲಭ. ನೋಡಲು ಕೂಡ ಆಕರ್ಷಕವಾಗಿ ಕಾಣಿಸುತ್ತವೆ. ಸ್ಟ್ರೈಪ್ಸ್ ವಿನ್ಯಾಸದ ಉಲ್ಲನ್, ಬಾಕ್ಸ್ ವಿನ್ಯಾಸ, ಡಬ್ಬಲ್ ಕಲರ್‌ನವು ಹೆಚ್ಚು ಟ್ರೆಂಡಿಯಾಗಿವೆ.
ಮಫ್ಲರ್ ಧರಿಸುವ ಬಗೆ ಹೀಗಿರಲಿ
ತೀರಾ ಚಳಿಯಿದ್ದಲ್ಲಿ ಕುತ್ತಿಗೆಗೆ (wear muffler on neck) ಸುತ್ತಿಕೊಳ್ಳಬಹುದು.
ಕಡಿಮೆ ಚಳಿಯಿದ್ದಲ್ಲಿ ಸ್ಟೈಲಾಗಿ ಕುತ್ತಿಗೆಯಿಂದ ಮುಂಭಾಗಕ್ಕೆ ಸ್ಟೋಲ್‌ನಂತೆ ಹಾಕಿಕೊಳ್ಳಬಹುದು.
ಯೂನಿಸೆಕ್ಸ್ ಮಫ್ಲರನ್ನು (unisex muffler) ಪುರುಷ-ಮಹಿಳೆಯರು ಇಬ್ಬರೂ ಧರಿಸಬಹುದು.
ಬ್ಲಾಕ್ ಅಥವಾ ರೈನ್ಬೋ ಕಲರ್‌ನದ್ದಾದಲ್ಲಿ ಎಲ್ಲವಕ್ಕೂ ಮ್ಯಾಚ್ ಆಗುತ್ತದೆ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ| Kids Fashion | ಚಿಣ್ಣರ ಸಿಂಗಾರಕ್ಕೆ ಬಂತು ಕಲರ್‌ಫುಲ್ ಫಂಕಿ ಹೆಡ್‌ಬ್ಯಾಂಡ್ಸ್