Site icon Vistara News

Winter Fashion: ಚುಮುಚುಮು ಚಳಿಗೆ ಬೆಚ್ಚಗಿಡುವ ಟ್ರೆಂಚ್‌ ಕೋಟ್‌ ಸಾಥ್

Winter Fashion

Winter Fashion

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಚಳಿಗೆ ಬೆಚ್ಚಗಿಡುವ ನಾನಾ ವಿನ್ಯಾಸದ ಟ್ರೆಂಚ್‌ ಕೋಟ್‌ಗಳು ಈ ಚಳಿಗಾಲದಲ್ಲಿ ಟ್ರೆಂಡಿಯಾಗಿವೆ. ನೋಡಲು ಆಕರ್ಷಕ ವಿನ್ಯಾಸಗಳಲ್ಲಿ ಮಾರುಕಟ್ಟೆಗೆ ಕಾಲಿಟ್ಟಿರುವ ಈ ಟ್ರೆಂಚ್‌ ಕೋಟ್‌ಗಳು (trench coat) ನಾನಾ ಬಗೆಯ ಬೆಚ್ಚಗಿಡುವ ಫ್ಯಾಬ್ರಿಕ್‌ನಲ್ಲಿ ಬಿಡುಗಡೆಗೊಂಡಿವೆ.

ಹರ್ಷ್‌ ವರ್ಧನ್‌ ಕಪೂರ್‌, ನಟ

ವಿಂಟರ್‌ ಫ್ಯಾಷನ್‌ನ ಭಾಗವಾದ ಟ್ರೆಂಚ್‌ಕೋಟ್‌

ವಿದೇಶಿ ವಿಂಟರ್‌ ಫ್ಯಾಷನ್‌ನ ಟಾಪ್‌ ಲಿಸ್ಟ್‌ನಲ್ಲಿದ್ದ ಈ ಟ್ರೆಂಚ್‌ ಕೋಟ್‌ಗಳು (trench coat) ಇದೀಗ ಸೆಲೆಬ್ರಿಟಿಗಳು ಮಾತ್ರವಲ್ಲ, ಸಾಮಾನ್ಯರು ಧರಿಸುವ ಡ್ರೆಸ್‌ಕೋಡ್‌ನ ಭಾಗವಾಗಿದೆ.

ಇವು ನೋಡಲು ಒಂದೇ ಬಗೆಯದ್ದಾಗಿ ಕಾಣುತ್ತವಾದರೂ ಸ್ಲೀಕ್‌ ಲುಕ್‌, ಫಾರ್ಮಲ್‌ ಬ್ಲೇಜರ್‌ ಸ್ಟೈಲ್‌ನಲ್ಲೂದೊರಕುತ್ತವೆ. ವಿಂಟೇಜ್‌ ಬಟನ್‌ ಟ್ರೆಂಚ್‌ ಕೋಟ್‌ ಇದೀಗ ಪಾಪುಲರ್‌ ಆಗಿದೆ ಎನ್ನುತ್ತಾರೆ ಸ್ಟೈಲಿಸ್ಟ್‌ ದಿವ್ಯಾ.

ಸಿನಿಮಾ ತಾರೆಯರ ಟ್ರೆಂಚ್‌ ಕೋಟ್‌ ಮೋಹ

“ಮೊದಲೆಲ್ಲ ಹಿಲ್‌ ಸ್ಟೇಷನ್‌ಗಳಲ್ಲಿ ಟ್ರಾವೆಲ್‌ ಮಾಡುವವರು ಮಾತ್ರ ಇವುಗಳನ್ನು ಧರಿಸುತ್ತಿದ್ದರು. ಇದೀಗ ಸಿನಿಮಾ ತಾರೆಯರು ಇವುಗಳನ್ನು ಧರಿಸಲಾರಂಭಿಸಿದ ನಂತರ ಸಾಮಾನ್ಯ ಹುಡುಗಿಯರನ್ನು ಇವು ಸೆಳೆಯತೊಡಗಿವೆ. ಸ್ವೆಟರ್‌ ಹಾಗೂ ಜಾಕೆಟ್‌ ಧರಿಸುವಂತೆ ಟ್ರೆಂಚ್‌ ಕೋಟ್‌ಗಳನ್ನು (trench coat) ಧರಿಸುವುದು ಇಂದು ಕಾಮನ್‌ ಆಗಿದೆ ಎನ್ನುತ್ತಾರೆ ಸ್ಟೈಲಿಸ್ಟ್‌ ರಾಹುಲ್‌.

ಹುಮಾ ಖುರೇಶಿ, ನಟಿ

ಟ್ರೆಂಚ್‌ ಕೋಟ್‌ ಪ್ರೇಮಿಗಳು

ಬಾಲಿವುಡ್‌ ಸೆಲೆಬ್ರಿಟಿಗಳಾದ ದೀಪಿಕಾ ಪಡುಕೋಣೆ, ಪ್ರಿಯಾಂಕಾ ಚೋಪ್ರಾ, ಪರಿಣಿತಿ, ನೋರಾ ಸೇರಿದಂತೆ ನಾನಾ ನಟಿಯರು ಟ್ರೆಂಚ್‌ಕೋಟ್‌ ಪ್ರೇಮಿಗಳು. ಕೇವಲ ನಟಿಯರು ಮಾತ್ರವಲ್ಲ, ನಟರು ಕೂಡ ವಿಮಾನದಲ್ಲಿ ಪಯಾಣಿಸುವಾಗ ಟ್ರೆಂಚ್‌ ಕೋಟ್‌ ಧರಿಸುವುದು ಸಾಮಾನ್ಯವಾಗಿದೆ. ಕೇವಲ ಸ್ಟೈಲಿಶ್‌ ಆಗಿ ಕಾಣುವುದು ಮಾತ್ರವಲ್ಲ, ದೇಹವನ್ನು ಬೆಚ್ಚಗಿಡಲು ಟ್ರೆಂಚ್‌ ಕೋಟ್‌ ಧರಿಸುವುದು ಇಂದು ತೀರಾ ಕಾಮನ್‌ ಆಗಿದೆ ಎನ್ನುತ್ತಾರೆ ಸೆಲೆಬ್ರಿಟಿ ಸ್ಟೈಲಿಸ್ಟ್‌ ಶಿಲ್ಪಾ.

ಟ್ರೆಂಚ್‌ ಕೋಟ್‌ಗೆ ಮಿಕ್ಸ್‌ ಮ್ಯಾಚ್‌

ಟ್ರೆಂಚ್‌ ಕೋಟ್‌ಗಳನ್ನು ಧರಿಸುವವರು ತೆಳುವಾದ ಇನ್ನರ್‌ ಟಾಪ್‌, ಹುಡುಗರಾದಲ್ಲಿ ಟೀ ಶರ್ಟ್ ಆಯ್ಕೆ ಮಾಡಿಕೊಳ್ಳಬೇಕು. ಪ್ಯಾಂಟ್‌, ಕೋಟ್‌ಗೆ ಹೊಂದುವಂತಿರಬೇಕು. ಬಣ್ಣವಷ್ಟೇ ಅಲ್ಲ, ಫ್ಯಾಬ್ರಿಕ್‌ ಕೂಡ ಮ್ಯಾಚ್‌ ಆಗಬೇಕು. ಶೂ ಧರಿಸುವುದು ಉತ್ತಮ ಇದು ಔಟ್‌ಲುಕ್‌ಗೆ ಕ್ಲಾಸಿ ಟಚ್‌ ನೀಡುತ್ತದೆ ಎಂದು ಸಲಹೆ ನೀಡುತ್ತಾರೆ ಮಾಡೆಲ್‌ ದೀಪ್ತಿ. ಇನ್ನು ಹುಡುಗಿಯರು ಟ್ರೆಂಚ್‌ ಕೋಟ್‌ಗಳನ್ನು ದೇಸಿ ಲುಕ್‌ ಇರುವ ಉಡುಪುಗಳೊಂದಿಗೆ ಮಿಕ್ಸ್‌ ಮ್ಯಾಚ್‌ ಮಾಡುವುದು ತೀರಾ ಕಡಿಮೆ. ಮಾಡಲೇ ಬೇಕಿದ್ದಲ್ಲಿ, ಇದಕ್ಕೂ ಮುನ್ನ ಒಂದಿಷ್ಟು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಯಾವುದೇ ಕಾರಣಕ್ಕೂ ದುಪಟ್ಟಾ ಧರಿಸಕೂಡದು. ಧರಿಸಿದರೂ ಸ್ಟೋಲ್‌ ಶೈಲಿಯಲ್ಲಿ ಸ್ಟೈಲಿಂಗ್‌ ಮಾಡಬೇಕು.

ನೋರಾ ಪತೇಹಿ, ನಟಿ

ಯಾರಿಗೆ ಯಾವುದು ಸೂಕ್ತ?

ಉದ್ದಗಿರುವವರಿಗೆ ಎಲ್ಲಾ ಶೈಲಿಯವು ಓಕೆ.

ಪ್ಲಂಪಿಯಾಗಿರುವವರು ಫಿಟ್‌ ಸ್ಟೈಲ್‌ ಟ್ರೆಂಚ್‌ ಕೋಟ್‌ ಆಯ್ಕೆ ಮಾಡಬೇಕು.

ವಿಟೆಂಜ್‌ ಬಟನ್‌ ಇರುವಂತವು ರಾಯಲ್‌ ಲುಕ್‌ ನೀಡುತ್ತವೆ.

ಆಕ್ಸೆಸರೀಸ್‌ ಧರಿಸುವುದು ನಾಟ್‌ ಓಕೆ.

ಲೈಟ್‌ವೇಟ್‌ನ ಟ್ರೆಂಚ್‌ ಕೋಟ್‌ಗೆ ಆದ್ಯತೆ ನೀಡಿ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Wedding Fashion: ವೆಡ್ಡಿಂಗ್‌ ಫ್ಯಾಷನ್‌ ಫೋಟೋ ಶೂಟ್‌ನಲ್ಲಿ ಟ್ರೆಂಡಿಯಾದ ದೇಸಿ ಲುಕ್‌

Exit mobile version