Site icon Vistara News

Winter Fashion 2023-2024: ಚಳಿಗಾಲದ ಬೆಚ್ಚನೆಯ ಫ್ಯಾಷನ್‌ಗೆ ಸೈ ಎನ್ನಿ!

Winter Fashion 2023-2024

ಶೀಲಾ ಸಿ. ಶೆಟ್ಟಿ, ಬೆಂಗಳೂರು

ವಿಂಟರ್‌ ಸೀಸನ್‌ ಫ್ಯಾಷನ್‌ (Winter Fashion 2023-2024) ಬಂತು, ರೆಡಿಯಾಗಿ ಎನ್ನುತ್ತಿದ್ದಾರೆ ಫ್ಯಾಷನಿಸ್ಟ್‌ಗಳು. ಹೌದು. ಈಗಾಗಲೇ ಚಳಿಗಾಲ ಆರಂಭವಾಗಿದೆ. ಇದಕ್ಕೆ ಪೂರಕ ಎಂಬಂತೆ ಲೆಕ್ಕವಿಲ್ಲದಷ್ಟು ಈ ಸೀಸನ್‌ನ ಲೇಯರ್‌ ಲುಕ್‌ ನೀಡುವ ಫ್ಯಾಷನ್‌ವೇರ್‌ಗಳು ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡಿವೆ.

ಬಂತು ವಿಂಟರ್‌ ಶೇಡ್ಸ್

ಈ ವರ್ಷದ ಬಣ್ಣ ಮಾರ್ವಲೆಸ್‌ ಮ್ಯಾಗ್ನೆಟಾ ಇನ್ನೂ ಹಾಗೆಯೇ ಮುಂದುವರೆದಿದೆ. ಈ ಬಾರಿ ಮತ್ತೊಮ್ಮೆ ರಿಚ್‌ ಬಗ್ರ್ಯಾಂಡಿ, ವೈಬ್ರೆಂಟ್‌ ಯೆಲ್ಲೋ, ಕ್ಲಾಸಿಕ್‌ ರೆಡ್‌, ಲೈಲಾಕ್‌ ಗ್ರೇ, ನಾನಾ ಪಿಂಕ್‌ ಶೇಡ್ಸ್ ನಂತವಹ ಸಾಕಷ್ಟು ಗಾಢ ವರ್ಣಗಳು ಲಗ್ಗೆ ಇಟ್ಟಿವೆ. ಕ್ಲಾಸಿಕ್‌ ಲುಕ್‌ ನೀಡುವ ಕಲರ್ಸ್‌ಗೆ ಆದ್ಯತೆ ಹೆಚ್ಚಾಗಿದೆ. ಪ್ರಯೋಗಾತ್ಮಕ ವರ್ಣಗಳು ಪಾಪ್ಯು ಲರ್‌ ಆಗಲಿವೆ ಎನ್ನುತ್ತಾರೆ ಸ್ಟೈಲಿಸ್ಟ್‌ಳು.

ಫ್ಯಾಷನ್‌ನಲ್ಲಿ ಹೊಸತೇನಿದೆ ?

ಸ್ಕಟ್ರ್ಸ್ ಲೇಯರ್‌ ಓವರ್‌ ಪ್ಯಾಂಟ್ಸ್, ಗ್ರಾಫಿಕ್‌ ಸ್ಟ್ರಕ್ಚರ್ಡ್ ಶೋಲ್ಡರ್ಸ್ ಡಿಸೈನ್ಸ್, ನೆಕ್‌ ಕರ್ಚೀಫ್‌ ಡಿಸೈನ್‌, ಶೀರ್‌ ಲೇಸ್‌ ವರ್ಕ್ ಬಾಡಿಕಾನ್‌ ಡ್ರೆಸ್‌, ಲ್ಯಾಂಡ್‌ ಸ್ಕೇಪ್‌ ಔಟ್‌ಫಿಟ್ಸ್, ಶರ್ಬೆಟ್‌ ಪಾಸ್ಟೆಲ್ಸ್ ಡ್ರೆಸ್, ಡಬ್ಬಲ್‌ ಡೆನಿಮ್ಸ್, ಮಿನಿ ಪೊಲ್ಕಾ ಡಾಟ್ಸ್ ಡ್ರೆಸ್, ಪವರ್‌ ಶೋಲ್ಡರ್ಸ್ ವಿನ್ಯಾಸದ ಕೋಟ್ಸ್ –ಜಾಕೆಟ್ಸ್ –ಪುಲ್‌ಓವರ್ಸ್ ಸೇರಿದಂತೆ ಹೊಸ ವಿನ್ಯಾಸದ ಉಡುಪುಗಳನ್ನು ಅಂತರಾಷ್ಟ್ರೀಯ ಮಟ್ಟದ ಡಿಸೈನರ್ಸ್‌ ಈಗಾಗಲೇ ಫ್ಯಾಷನ್‌ ವೀಕ್‌ಗಳಲ್ಲಿ ಡಿಕ್ಲೇರ್‌ ಮಾಡಿದ್ದಾರೆ. ಇನ್ನು, ಡೆಲಿಕೇಟ್‌ ಪ್ಲೀಟ್ಸ್, 50ರ ದಶಕದ ವೇಸ್ಟ್‌ಲೈನ್‌ ಡಿಸೈನ್ಸ್, ಓವರ್‌ಸೈಝ್‌ ಲೇಯರ್‌ ಲುಕ್‌, ಫೇಕ್‌ ಲೆದರ್‌ ಔಟ್‌ಫಿಟ್ಸ್, ಲಾಂಗ್‌ ಪ್ರಿಂಟ್ಸ್ ಕೋಟ್ಸ್ ರೀಎಂಟ್ರಿ ನೀಡಿವೆ.

ಹಳೆ ವೈನ್‌ ಹೊಸ ಬಾಟಲ್‌ ಎಂಬಂತೆ ಮರುಕಳಿಸುವ ಫ್ಯಾಷನ್‌

ಎಂದಿನಂತೆ ವಿಂಟರ್‌ಗೆ ಲೇಯರ್‌ ಲುಕ್‌ಗೆ ಪ್ರಾಧಾನ್ಯತೆ ಹೆಚ್ಚು. ನೋಡಲು ಅದೇ ಎಂದೆನಿಸಿದರೂ ಹೊಸ ರೂಪದಲ್ಲಿ ಹಾಗೂ ಬಣ್ಣದಲ್ಲಿ ಬಿಡುಗಡೆಗೊಳ್ಳುತ್ತವೆ. ಒಂದರ ಮೇಲೊಂದು ಧರಿಸುವ ಉಡುಪುಗಳು, ಬೆಚ್ಚಗಿಡುವ ಕೋಟ್‌ಗಳು, ಬದಲಾದ ಶೇಪ್‌ನ ಪುಲ್‌ ಓವರ್ಸ್‌, ಚಿತ್ರ-ವಿಚಿತ್ರ ಪ್ರಿಂಟ್ಸ್‌ನ ಸ್ಟೋಲ್ಸ್‌, ಜಾಕೆಟ್ಸ್‌, ಸ್ವೆಟರ್ಸ್‌, ಸ್ಟಾಕಿನ್ಸ್‌, ಗ್ಲೌಸ್‌, ಕ್ಯಾಪ್‌, ಶಾಲ್ಸ್‌ ವಿನೂತನ ಶೇಡ್‌ಗಳಲ್ಲಿ ವಿಂಟರ್‌ ಕಲರ್ಸ್‌ನಲ್ಲಿ ಎಂಟ್ರಿಯಾಗಿವೆ. ಇನ್ನು ಹುಡುಗರ ಹಾಗೂ ಹುಡುಗಿಯರ ರಿವರ್ಸಿಬಲ್‌ ಕಲರ್‌ ಜಾಕೆಟ್ಸ್‌ , ಕಲರ್‌ಫುಲ್‌ ಸ್ಟ್ರೈಫ್ಸ್‌ ಫ್ಲಾಟ್‌ ವುಲ್ಲನ್‌ ಟೀ-ಶರ್ಟ್‌, ಲಾಂಗ್‌ ಸಲ್ವಾರ್‌-ಚೂಡಿದಾರ್‌ಗಳು ಲಾಂಗ್‌ ಸ್ಲಿಟ್‌ ಡಿಸೈನ್‌ನಲ್ಲಿ ಮತ್ತೊಮ್ಮೆ ಕಾಣಿಸಿಕೊಂಡಿವೆ.

ಬೆಚ್ಚಗಿರಲಿ ಚಳಿಗಾಲದ ಫ್ಯಾಷನ್‌

ಚಳಿಗಾಲದಲ್ಲಿಆದಷ್ಟೂ ಲೇಯರ್‌ ಲುಕ್‌ ಉಡುಪುಗಳ ಮೊರೆಹೋಗುವುದು ಜಾಣತನ ಎನ್ನುತ್ತಾರೆ ಫ್ಯಾಷನಿಸ್ಟ್‌ ರಾಜ್‌. ಅವರ ಪ್ರಕಾರ, ಬೆಚ್ಚಗಿನ ಉಡುಪುಗಳಲ್ಲೂ ಫ್ಯಾಷನಬಲ್‌ ಆಗಿ ಕಾಣಿಸಬಹುದು. ಹಳೆಯ ಉಡುಪು ಧರಿಸುವುದಾದಲ್ಲಿ ಮಿಕ್ಸ್‌ ಮ್ಯಾಚ್‌ ಮಾಡುವುದರೊಂದಿಗೆ ಆದಷ್ಟೂ ಟ್ರೆಂಡಿ ಬಣ್ಣದ ಆಯ್ಕೆ ಮಾಡಬೇಕು ಎಂದು ಸಲಹೆ ನೀಡುತ್ತಾರೆ. ಇನ್ನು

ಚಳಿಯಾಗುವ ಸ್ಲೀವ್‌ಲೆಸ್‌ ಔಟ್‌ಫಿಟ್‌ ಬೇಡ. ಫುಲ್‌ ಸ್ಲೀವ್‌ ಡ್ರೆಸ್‌ಗಳನ್ನು ಸೆಲೆಕ್ಟ್ ಮಾಡಿ. ಇನ್ನು ಎಥ್ನಿಕ್‌ ಲುಕ್‌ ವಿಷಯಕ್ಕೆ ಬಂದಲ್ಲಿ ಅಗಲವಿರುವ ದುಪ್ಪಟ್ಟಾ ಇರುವಂತಹ ಸಲ್ವಾರ್‌ಗಳ ಆಯ್ಕೆ ಓಕೆ. ನೆಕ್‌ಲೈನ್‌ ಇಲ್ಲದ ಫುಲ್‌ ಕಾಲರ್‌, ಚೈನಾ ಕಾಲರ್‌ ಔಟ್‌ಫಿಟ್‌ ಧರಿಸುವುದು ಬೆಸ್ಟ್.

ಪ್ರಿಂಟೆಡ್‌ ಶಾಲ್‌-ಮಫ್ಲರ್‌-ಸ್ಟೊಲ್ಸ್‌

ಜೆಮೆಟ್ರಿಕಲ್‌, ಫ್ಲೋರಲ್‌ ಪ್ರಿಂಟೆಡ್‌ ಸ್ಟೋಲ್‌, ಶಾಲ್‌ ಹಾಗೂ ಮಫ್ಲರ್‌ಗಳು ಊಹೆಗೂ ಮೀರಿದ ಡಿಸೈನ್‌ಗಳಲ್ಲಿ ಚಳಿಗಾಲಕ್ಕೆ ಎಂಟ್ರಿ ನೀಡಿವೆ.

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Tieing Pants Fashion: ಫ್ಯಾಷನ್‌ನಲ್ಲಿ ಬಂತು ಬೆಲ್ಟ್ ಇಲ್ಲದ ಟೈಯಿಂಗ್‌ ಪ್ಯಾಂಟ್‌

Exit mobile version