ಶೀಲಾ ಸಿ. ಶೆಟ್ಟಿ, ಬೆಂಗಳೂರು
ಈ ಬಾರಿಯ ವಿಂಟರ್ ಫ್ಯಾಷನ್‌ನಲ್ಲಿ ಕ್ರಾಪ್ ಸ್ವೆಟರ್‌ಗಳು ಲಗ್ಗೆ ಇಟ್ಟಿವೆ.
ಇದು ವೀಕೆಂಡ್ ಔಟ್‌ಫಿಟ್ ಲಿಸ್ಟ್‌ಗೆ ಸೇರಿದ್ದು, ಟೀನೇಜ್ ಹುಡುಗಿಯರ ಫೇವರೇಟ್ ಲಿಸ್ಟ್‌ಗೆ ಸೇರ್ಪಡೆಯಾಗಿವೆ. ನೋಡಲು ಗ್ಲಾಮರಸ್ ಲುಕ್ ನೀಡುವ ಇವು ವಿಂಟರ್ ಶೇಡ್ಸ್‌ನಲ್ಲಿ ಬಿಡುಗಡೆಯಾಗಿವೆ. ಜೀನ್ಸ್ ಪ್ಯಾಂಟ್ ಹಾಗೂ ಸ್ಕರ್ಟ್‌ಗಳಿಗೆ ಮಾತ್ರವಲ್ಲದೇ ಸಾಕಷ್ಟು ವೆಸ್ಟರ್ನ್ ಔಟ್‌ಫಿಟ್‌ಗಳೊಂದಿಗೆ ಮ್ಯಾಚ್ ಆಗುತ್ತಿವೆ.
ಕ್ರಾಪ್ ಟಾಪ್ ಬದಲು ಕ್ರಾಪ್ ಸ್ವೆಟರ್
ಚಳಿಗಾಲಕ್ಕೆ ಹೊಂದಿಕೆಯಾಗುವಂತೆ ಬೆಚ್ಚಗಿನ ಫ್ಯಾಬ್ರಿಕ್‌ನಲ್ಲಿ ತಯಾರಿಸಿದ ಕ್ರಾಪ್ ಸ್ವೆಟರ್‌ಗಳು ನೋಡಲು ಕ್ರಾಪ್ ಟಾಪ್ ಅಥವಾ ಕ್ರಾಪ್ ಟೀ ಶರ್ಟ್‌ನಂತೆಯೇ ಕಾಣುತ್ತವೆ. ಫ್ಯಾಷೆನಬಲ್ ಆಗಿಯೂ ಬಿಂಬಿಸುತ್ತವೆ. ನೋಡಲು ಗಿಡ್ಡವಾಗಿರುವ ಅಥವಾ ಕಟ್ ಮಾಡಿದಂತೆ ಕಾಣುವ ಕ್ರಾಪ್ ಸ್ವೆಟರ್, ಬೆಲ್ಲಿಯಿಂದ ಮೇಲೆ, ಸೈಡಲ್ಲಿಕೊಂಚ ಬಾಗಿದಂತಿರುತ್ತವೆ. ವಿದೇಶಿ ಕಾನ್ಸೆಪ್ಟ್ ಹೊಂದಿರುವ ಈ ಕ್ರಾಪ್ ಸ್ವೆಟರ್‌ಗಳು ಇದೀಗ ನಮ್ಮಲ್ಲೂ ಪಾಪ್ಯುಲರ್ ಆಗಿವೆ ಎನ್ನುತ್ತಾರೆ ಸೆಲೆಬ್ರಿಟಿ ಡಿಸೈನರ್ ದಿಶಾ.
ಮ್ಯಾಚಿಂಗ್ ಹೀಗಿರಲಿ
ಧರಿಸುವ ನಾರ್ಮಲ್ ಪ್ಯಾಂಟ್, ಪಲ್ಹಾಜೂ, ಕೇಪ್ರಿಸ್‌ಗಳಿಗೂ ಕ್ರಾಪ್ ಸ್ವೆಟರ್ ಪರ್ಫೆಕ್ಟ್ ಸೂಟ್ ಆಗುತ್ತದೆ. ಆದರೆ, ಪ್ಯಾಂಟ್‌ಗಳ ಕಟ್ಸ್ ಹಾಗೂ ಸ್ಟಿಚ್ಚಿಂಗ್ ಕ್ರಾಪ್ ಟಾಪ್‌ಗಳಿಗೆ ಮ್ಯಾಚ್ ಆಗಬೇಕು. ಸೆಮಿ ಫಾರ್ಮಲ್ ಉಡುಪುಗಳಿಗೂ ಕ್ರಾಪ್ ಸ್ವೆಟರ್ ಧರಿಸಬಹುದು. ಕ್ರಾಪ್ ಸ್ವೆಟರ್ ಜತೆಗೆ ಮ್ಯಾಚ್ ಆಗುವಂತಹ ಶೇಡ್ಸ್, ಇಲ್ಲವೇ ಪ್ರಿಂಟ್ಸ್ ಅಥವಾ ಚೆಕ್ಸ್‌ನೊಳಗೊಂಡ ಪ್ಯಾಂಟ್ ಸೂಟ್ ಆಗುತ್ತದೆ. ಜತೆಗೆ ಕಲರ್ ಫ್ರೇಮ್ ಇರುವ ಕೂಲ್ ಗ್ಲಾಸ್ ಇಲ್ಲವೇ ಸಾದಾ ಫ್ಯಾಷನಬಲ್ ಕನ್ನಡಕ ಧರಿಸಿದರೇ ಫಂಕಿ ಲುಕ್ ಗ್ಯಾರಂಟಿ. ಕ್ರಾಪ್ ಸ್ವೆಟರ್‌ಗಳಿಗೆ ಆದಷ್ಟೂ ಫಂಕಿ ಆಕ್ಸೆಸರೀಸ್ ಧರಿಸುವುದು ಉತ್ತಮ ಎನ್ನುತ್ತಾರೆ ಸ್ಟೈಲಿಸ್ಟ್ ದಿವಿಜಾ. ಅವರ ಪ್ರಕಾರ, ಕ್ರಾಪ್ ಸ್ವೆಟರ್ ಧರಿಸುವಾಗ ಕೆಲವು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಮೊದಲಿಗೆ ನೀವು ಧರಿಸುತ್ತಿರುವ ಕ್ರಾಪ್ ಸ್ವೆಟರ್ ಯಾವ ಬಗೆಯ ಉಡುಪಿಗೆ ಮ್ಯಾಚ್ ಮಾಡುತ್ತಿರುವಿರಿ ಎಂಬುದನ್ನು ತಿಳಿದುಕೊಂಡಿರಬೇಕು. ಇದರ ಮೇಲೆ ಸ್ಟೋಲ್ ಹಾಗೂ ಶಾಲು ಧರಿಸುವುದು ಮ್ಯಾಚ್ ಆಗದು ಎನ್ನುತ್ತಾರೆ ಅವರು.
ಸೆಲೆಬ್ರಿಟಿಗಳ ಕ್ರಾಪ್ ಸ್ವೆಟರ್ ಲವ್
ಹಾಲಿವುಡ್ ಸೇರಿದಂತೆ ಬಾಲಿವುಡ್‌ನ ದಿಶಾ ಪಟಾನಿ, ಸಾರಾ, ಸ್ವರ, ತಾರಾ ಸುತಾರಿಯಾ, ಅಲಯಾ ಸೇರಿದಂತೆ ನಾನಾ ಬಾಲಿವುಡ್ ತಾರೆಯರು ಕೂಡ ಉದ್ದನೆಯ ಸ್ಕರ್ಟ್ ಜತೆಗೆ ಕ್ರಾಪ್ ಸ್ವೆಟರ್ ಧರಿಸಲಾರಂಭಿಸಿದ್ದಾರೆ.
ಕ್ರಾಪ್ ಸ್ವೆಟರ್ ಧರಿಸುವವರು ಗಮನದಲ್ಲಿಟ್ಟುಕೊಳ್ಳಿ
- ನೋಡಲು ತೆಳ್ಳಗಿದ್ದರೆ ಆದಷ್ಟೂ ಪ್ರಿಂಟ್ಸ್ನದ್ದು ಸೆಲೆಕ್ಟ್ ಮಾಡಿ.
- ಪ್ಲಂಪಿಯಾಗಿರುವವರಿಗೆ ಕ್ರಾಪ್ ಸ್ವೆಟರ್ ಆಯ್ಕೆ ನಾಟ್ ಓಕೆ.
- ಈ ಔಟ್ಫಿಟ್ಗೆ ಆಕ್ಸೆಸರೀಸ್ ಕಡಿಮೆ ಧರಿಸಿ.
- ಬ್ಲ್ಯಾಕ್ ಪ್ಯಾಂಟ್ ಎಲ್ಲಾ ಬಗೆಯ ಕ್ರಾಪ್ ಸ್ವೆಟರ್ಗೂ ಮ್ಯಾಚ್ ಆಗುತ್ತದೆ.
- ಕ್ರಾಪ್ ಸ್ವೆಟರ್ ನಾನಾ ನೆಕ್ಲೈನ್ಗಳಲ್ಲೂ ದೊರೆಯುತ್ತದೆ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ| Stars Fashion | ಬ್ಯೂಟಿ ಅವಾರ್ಡ್ಸ್ ರೆಡ್‌ಕಾರ್ಪೆಟ್: ಬಿಂದಾಸ್ ಗ್ಲಾಮರಸ್ ಡಿಸೈನರ್‌ವೇರ್‌ಗಳಲ್ಲಿ ತಾರೆಯರು