Winter Fashion | ಚಳಿಗಾಲಕ್ಕೆ ಬಂತು ಕಲರ್‌ಫುಲ್‌ ಕ್ರಾಪ್‌ ಸ್ವೆಟರ್‌ - Vistara News

ಫ್ಯಾಷನ್

Winter Fashion | ಚಳಿಗಾಲಕ್ಕೆ ಬಂತು ಕಲರ್‌ಫುಲ್‌ ಕ್ರಾಪ್‌ ಸ್ವೆಟರ್‌

ಈ ಬಾರಿಯ ಚಳಿಗಾಲದಲ್ಲಿಗ್ಲಾಮರಸ್‌ ಲುಕ್‌ ನೀಡುವ ಕ್ರಾಪ್‌ ಸ್ವೆಟರ್‌ಗಳು ಎಂಟ್ರಿ ನೀಡಿದ್ದುವೀಕೆಂಡ್‌ ಫ್ಯಾಷನ್‌ಗೆ ಲಗ್ಗೆ ಇಟ್ಟಿವೆ. ಈ ಬಗ್ಗೆ ಇಲ್ಲಿದೆ ವಿವರ.

VISTARANEWS.COM


on

Winter Fashion
ಚಿತ್ರಕೃಪೆ : ಪಿಕ್ಸೆಲ್‌
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಈ ಬಾರಿಯ ವಿಂಟರ್‌ ಫ್ಯಾಷನ್‌ನಲ್ಲಿ ಕ್ರಾಪ್‌ ಸ್ವೆಟರ್‌ಗಳು ಲಗ್ಗೆ ಇಟ್ಟಿವೆ.

ಇದು ವೀಕೆಂಡ್‌ ಔಟ್‌ಫಿಟ್‌ ಲಿಸ್ಟ್‌ಗೆ ಸೇರಿದ್ದು, ಟೀನೇಜ್‌ ಹುಡುಗಿಯರ ಫೇವರೇಟ್ ಲಿಸ್ಟ್‌ಗೆ ಸೇರ್ಪಡೆಯಾಗಿವೆ. ನೋಡಲು ಗ್ಲಾಮರಸ್‌ ಲುಕ್‌ ನೀಡುವ ಇವು ವಿಂಟರ್‌ ಶೇಡ್ಸ್‌ನಲ್ಲಿ ಬಿಡುಗಡೆಯಾಗಿವೆ. ಜೀನ್ಸ್‌ ಪ್ಯಾಂಟ್‌ ಹಾಗೂ ಸ್ಕರ್ಟ್‌ಗಳಿಗೆ ಮಾತ್ರವಲ್ಲದೇ ಸಾಕಷ್ಟು ವೆಸ್ಟರ್ನ್ ಔಟ್‌ಫಿಟ್‌ಗಳೊಂದಿಗೆ ಮ್ಯಾಚ್‌ ಆಗುತ್ತಿವೆ.

Winter Fashion

ಕ್ರಾಪ್‌ ಟಾಪ್‌ ಬದಲು ಕ್ರಾಪ್‌ ಸ್ವೆಟರ್‌

ಚಳಿಗಾಲಕ್ಕೆ ಹೊಂದಿಕೆಯಾಗುವಂತೆ ಬೆಚ್ಚಗಿನ ಫ್ಯಾಬ್ರಿಕ್‌ನಲ್ಲಿ ತಯಾರಿಸಿದ ಕ್ರಾಪ್‌ ಸ್ವೆಟರ್‌ಗಳು ನೋಡಲು ಕ್ರಾಪ್‌ ಟಾಪ್‌ ಅಥವಾ ಕ್ರಾಪ್‌ ಟೀ ಶರ್ಟ್‌ನಂತೆಯೇ ಕಾಣುತ್ತವೆ. ಫ್ಯಾಷೆನಬಲ್‌ ಆಗಿಯೂ ಬಿಂಬಿಸುತ್ತವೆ. ನೋಡಲು ಗಿಡ್ಡವಾಗಿರುವ ಅಥವಾ ಕಟ್‌ ಮಾಡಿದಂತೆ ಕಾಣುವ ಕ್ರಾಪ್‌ ಸ್ವೆಟರ್‌, ಬೆಲ್ಲಿಯಿಂದ ಮೇಲೆ, ಸೈಡಲ್ಲಿಕೊಂಚ ಬಾಗಿದಂತಿರುತ್ತವೆ. ವಿದೇಶಿ ಕಾನ್ಸೆಪ್ಟ್‌ ಹೊಂದಿರುವ ಈ ಕ್ರಾಪ್‌ ಸ್ವೆಟರ್‌ಗಳು ಇದೀಗ ನಮ್ಮಲ್ಲೂ ಪಾಪ್ಯುಲರ್‌ ಆಗಿವೆ ಎನ್ನುತ್ತಾರೆ ಸೆಲೆಬ್ರಿಟಿ ಡಿಸೈನರ್‌ ದಿಶಾ.

Winter Fashion

ಮ್ಯಾಚಿಂಗ್‌ ಹೀಗಿರಲಿ

ಧರಿಸುವ ನಾರ್ಮಲ್‌ ಪ್ಯಾಂಟ್‌, ಪಲ್ಹಾಜೂ, ಕೇಪ್ರಿಸ್‌ಗಳಿಗೂ ಕ್ರಾಪ್‌ ಸ್ವೆಟರ್‌ ಪರ್ಫೆಕ್ಟ್ ಸೂಟ್‌ ಆಗುತ್ತದೆ. ಆದರೆ, ಪ್ಯಾಂಟ್‌ಗಳ ಕಟ್ಸ್‌ ಹಾಗೂ ಸ್ಟಿಚ್ಚಿಂಗ್‌ ಕ್ರಾಪ್‌ ಟಾಪ್‌ಗಳಿಗೆ ಮ್ಯಾಚ್‌ ಆಗಬೇಕು. ಸೆಮಿ ಫಾರ್ಮಲ್‌ ಉಡುಪುಗಳಿಗೂ ಕ್ರಾಪ್‌ ಸ್ವೆಟರ್‌ ಧರಿಸಬಹುದು. ಕ್ರಾಪ್‌ ಸ್ವೆಟರ್‌ ಜತೆಗೆ ಮ್ಯಾಚ್‌ ಆಗುವಂತಹ ಶೇಡ್ಸ್‌, ಇಲ್ಲವೇ ಪ್ರಿಂಟ್ಸ್‌ ಅಥವಾ ಚೆಕ್ಸ್‌ನೊಳಗೊಂಡ ಪ್ಯಾಂಟ್‌ ಸೂಟ್‌ ಆಗುತ್ತದೆ. ಜತೆಗೆ ಕಲರ್‌ ಫ್ರೇಮ್‌ ಇರುವ ಕೂಲ್‌ ಗ್ಲಾಸ್‌ ಇಲ್ಲವೇ ಸಾದಾ ಫ್ಯಾಷನಬಲ್‌ ಕನ್ನಡಕ ಧರಿಸಿದರೇ ಫಂಕಿ ಲುಕ್‌ ಗ್ಯಾರಂಟಿ. ಕ್ರಾಪ್‌ ಸ್ವೆಟರ್‌ಗಳಿಗೆ ಆದಷ್ಟೂ ಫಂಕಿ ಆಕ್ಸೆಸರೀಸ್‌ ಧರಿಸುವುದು ಉತ್ತಮ ಎನ್ನುತ್ತಾರೆ ಸ್ಟೈಲಿಸ್ಟ್‌ ದಿವಿಜಾ. ಅವರ ಪ್ರಕಾರ, ಕ್ರಾಪ್‌ ಸ್ವೆಟರ್‌ ಧರಿಸುವಾಗ ಕೆಲವು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಮೊದಲಿಗೆ ನೀವು ಧರಿಸುತ್ತಿರುವ ಕ್ರಾಪ್‌ ಸ್ವೆಟರ್‌ ಯಾವ ಬಗೆಯ ಉಡುಪಿಗೆ ಮ್ಯಾಚ್‌ ಮಾಡುತ್ತಿರುವಿರಿ ಎಂಬುದನ್ನು ತಿಳಿದುಕೊಂಡಿರಬೇಕು. ಇದರ ಮೇಲೆ ಸ್ಟೋಲ್‌ ಹಾಗೂ ಶಾಲು ಧರಿಸುವುದು ಮ್ಯಾಚ್‌ ಆಗದು ಎನ್ನುತ್ತಾರೆ ಅವರು.

ಸೆಲೆಬ್ರಿಟಿಗಳ ಕ್ರಾಪ್‌ ಸ್ವೆಟರ್‌ ಲವ್‌

ಹಾಲಿವುಡ್‌ ಸೇರಿದಂತೆ ಬಾಲಿವುಡ್‌ನ ದಿಶಾ ಪಟಾನಿ, ಸಾರಾ, ಸ್ವರ, ತಾರಾ ಸುತಾರಿಯಾ, ಅಲಯಾ ಸೇರಿದಂತೆ ನಾನಾ ಬಾಲಿವುಡ್‌ ತಾರೆಯರು ಕೂಡ ಉದ್ದನೆಯ ಸ್ಕರ್ಟ್‌ ಜತೆಗೆ ಕ್ರಾಪ್‌ ಸ್ವೆಟರ್‌ ಧರಿಸಲಾರಂಭಿಸಿದ್ದಾರೆ.

Winter Fashion

ಕ್ರಾಪ್‌ ಸ್ವೆಟರ್‌ ಧರಿಸುವವರು ಗಮನದಲ್ಲಿಟ್ಟುಕೊಳ್ಳಿ

  • ನೋಡಲು ತೆಳ್ಳಗಿದ್ದರೆ ಆದಷ್ಟೂ ಪ್ರಿಂಟ್ಸ್‌ನದ್ದು ಸೆಲೆಕ್ಟ್ ಮಾಡಿ.
  • ಪ್ಲಂಪಿಯಾಗಿರುವವರಿಗೆ ಕ್ರಾಪ್‌ ಸ್ವೆಟರ್‌ ಆಯ್ಕೆ ನಾಟ್‌ ಓಕೆ.
  • ಈ ಔಟ್‌ಫಿಟ್‌ಗೆ ಆಕ್ಸೆಸರೀಸ್‌ ಕಡಿಮೆ ಧರಿಸಿ.
  • ಬ್ಲ್ಯಾಕ್‌ ಪ್ಯಾಂಟ್‌ ಎಲ್ಲಾ ಬಗೆಯ ಕ್ರಾಪ್‌ ಸ್ವೆಟರ್‌ಗೂ ಮ್ಯಾಚ್‌ ಆಗುತ್ತದೆ.
  • ಕ್ರಾಪ್‌ ಸ್ವೆಟರ್‌ ನಾನಾ ನೆಕ್‌ಲೈನ್‌ಗಳಲ್ಲೂ ದೊರೆಯುತ್ತದೆ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ| Stars Fashion | ಬ್ಯೂಟಿ ಅವಾರ್ಡ್ಸ್‌ ರೆಡ್‌ಕಾರ್ಪೆಟ್‌: ಬಿಂದಾಸ್‌ ಗ್ಲಾಮರಸ್‌ ಡಿಸೈನರ್‌ವೇರ್‌ಗಳಲ್ಲಿ ತಾರೆಯರು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಫ್ಯಾಷನ್

Kim Kardashian Saree Fashion: ರೆಡಿ ರೆಡ್‌ ಸೀರೆಯಲ್ಲಿ ಸೆಕ್ಸಿಯಾಗಿ ಕಂಡ ಕಿಮ್‌ ಕಾರ್ಡಶಿಯಾನ್‌! ವಿಡಿಯೊ ನೋಡಿ

Kim Kardashian Saree Fashion: ಕಿಮ್‌ ಕಾರ್ಡಶಿಯಾನ್‌ ಯಾರಿಗೆ ಗೊತ್ತಿಲ್ಲ! ಪ್ರಪಂಚದ ಸೆಕ್ಸಿ ಮಹಿಳೆಯೆಂದೇ ಖ್ಯಾತಿಗಳಿಸಿದ ಹಾಲಿವುಡ್‌ ನಟಿ, ಮಾಡೆಲ್‌ ಹಾಗೂ ಬಿಸ್ನೆಸ್‌ ವುಮೆನ್‌ ಇವರು. ಅಂಬಾನಿ ಫ್ಯಾಮಿಲಿಯ ವೆಡ್ಡಿಂಗ್‌ನಲ್ಲಿ ಮನೀಶ್‌ ಮಲ್ಹೋತ್ರಾ ಡಿಸೈನ್‌ನ ರೆಡಿ ರೆಡ್‌ ಸೀರೆಯುಟ್ಟು ಸೆಕ್ಸಿಯಾಗಿ ಕಾಣಿಸಿಕೊಂಡರು. ಹೇಗಿತ್ತು ಅವರ ಈ ಲುಕ್‌ ! ಇಲ್ಲಿದೆ ವರದಿ.

VISTARANEWS.COM


on

Kim Kardashian Saree Fashion
ಚಿತ್ರಗಳು : ಕಿಮ್‌ ಕಾರ್ಡಶಿಯಾನ್‌, ಹಾಲಿವುಡ್‌ ನಟಿ, ಮಾಡೆಲ್‌ & ಬಿಸ್ನೆಸ್‌ ವುಮೆನ್‌
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸದಾ ಸೆಕ್ಸಿ ಇಮೇಜ್‌ನಿಂದ ಸೆಳೆಯುವ ಕಿಮ್‌ ಕಾರ್ಡಶಿಯಾನ್‌ (kim kardashian saree fashion) ಅಂಬಾನಿ ಫ್ಯಾಮಿಲಿಯ ಮದುವೆಯಲ್ಲಿ, ರೆಡಿ ರೆಡ್‌ ಸೀರೆಯುಟ್ಟು ಸಂಭ್ರಮಿಸಿದ್ದು, ಪ್ರಪಂಚದಾದ್ಯಂತ ಅವರಿಗಿರುವ ಕೋಟಿಗಟ್ಟಲೇ ಅಭಿಮಾನಿಗಳನ್ನು ಸೆಳೆದಿದೆ. ಅಂದಹಾಗೆ, ಕಿಮ್‌ ಕಾರ್ಡಶಿಯಾನ್‌ ಯಾರಿಗೆ ಗೊತ್ತಿಲ್ಲ! ಪ್ರಪಂಚದ ಸೆಕ್ಸಿ ಮಹಿಳೆಯರಲ್ಲಿ ಒಬ್ಬರು ಎಂದು ಖ್ಯಾತಿಗಳಿಸಿದ ಹಾಲಿವುಡ್‌ ನಟಿ ಹಾಗೂ ಇಂಟರ್‌ನ್ಯಾಷನಲ್‌ ಸೆಲೆಬ್ರೆಟಿ ಇವರು.

Kim Kardashian Saree Fashion

ನಟಿ, ಮಾಡೆಲ್‌ ಮಾತ್ರವಲ್ಲ, ಸಕ್ಸ್‌ಫುಲ್‌ ಬಿಸ್ನೆಸ್‌ ವುಮೆನ್‌ ಕೂಡ. ಅಂಬಾನಿ ಫ್ಯಾಮಿಲಿಯ ಅನಂತ್‌-ರಾಧಿಕಾ ಮರ್ಚೆಂಟ್‌ ವೆಡ್ಡಿಂಗ್‌ಗೆ ಸಹೋದರಿ ಖ್ಲೋ ಜೊತೆಗೆ ಆಗಮಿಸಿದ್ದ ಕಿಮ್‌, ಡಿಸೈನರ್‌ ಮನೀಶ್‌ ಮಲ್ಹೋತ್ರಾ ಡಿಸೈನರ್‌ವೇರ್‌ ಹಾಗೂ ಜ್ಯುವೆಲರಿಗಳನ್ನು ಧರಿಸಿ, ಸೀರೆಯಲ್ಲೂ ಸೆಕ್ಸಿಯಾಗಿ ಕಾಣಿಸಿಕೊಂಡರು.

ಸೀರೆಯಲ್ಲೂ ಸೆಕ್ಸಿ ಲುಕ್‌

ಸದಾ ಎಕ್ಸ್ಪೋಸಿಂಗ್‌ ವೆಸ್ಟರ್ನ್‌ ಔಟ್‌ಫಿಟ್‌ಗಳಲ್ಲೆ ಕಾಣಿಸುವ ಕಿಮ್‌, ಅಂಬಾನಿ ಫ್ಯಾಮಿಲಿಯ ಮದುವೆಗಾಗಿ ರೆಡಿ ರೆಡ್‌ ಸೀರೆ ಧರಿಸಿದ್ದರು. ಗ್ಲಿಟ್ಟರ್‌ ರೆಡ್‌ ಸೀರೆಯನ್ನು ಉಟ್ಟಿದ್ದರು. ಆಫ್‌ ಶೋಲ್ಡರ್‌ ಡಿಸೈನ್‌ನ ಡಬ್ಬಲ್‌ ಸ್ಟ್ರಾಪ್‌ ಹೊಂದಿರುವ ವೈಡ್‌ ನೆಕ್‌ನ ಬಿಕಿನಿ ಶೈಲಿಯ ಟಾಸೆಲ್‌ ಬ್ಲೌಸ್‌ ಧರಿಸಿದ್ದರು. ಇನ್ನು, ಫ್ರೀ ವೆವ್ವಿ ಹೇರ್‌ಸ್ಟೈಲ್‌ಗೆ ಜರ್ಕೋನಿ ಮಾಂಗ್‌ಟೀಕಾ ಹಾಗೂ ಎರಡು ಲೇಯರ್‌ನ ನೆಕ್ಲೇಸ್‌, ಬ್ರೇಸ್‌ಲೆಟ್‌ ಧರಿಸಿ ನೋಡುಗರ ಮನಸೆಳೆದರು.

ಇವರ ಸಹೋದರಿ ಕೂಡ ಐವರಿ ಶೇಡ್‌ನ ಗ್ರ್ಯಾಂಡ್‌ ಡಿಸೈನರ್‌ ಸೀರೆ ಹಾಗೂ ಹೆವ್ವಿ ಲುಕ್‌ ನೀಡುವ ಮಾಂಗ್‌ಟೀಕಾ ಹಾಗೂ ಲೇಯರ್‌ ಜಿರ್ಕೋನ್‌ ಹಾರಗಳನ್ನು ಧರಿಸಿ, ಕೆಲವು ಕಾಲ ಇಂಡಿಯನ್‌ ಲುಕ್‌ನಲ್ಲಿ ಮಿಂಚಿದರು. ಸ್ಟೈಲಿಶ್‌ ಡಾನಿ ಸ್ಟೈಲಿಂಗ್‌ ಇಬ್ಬರನ್ನು ಅತ್ಯಾಕರ್ಷಕವಾಗಿ ಬಿಂಬಿಸಿತ್ತು.

ಡಿಸೈನರ್‌ ಮನೀಶ್‌ ಮಲ್ಹೋತ್ರಾ ಸಂತಸ

“ಕಿಮ್‌, ನಮ್ಮ ಇಂಡಿಯನ್‌ ಔಟ್‌ಫಿಟ್‌ ಧರಿಸಿದ್ದು, ಹೆಮ್ಮೆಯ ವಿಚಾರ. ಅಂತರಾಷ್ಟ್ರೀಯ ಮಟ್ಟದ ಸೆಲೆಬ್ರೆಟಿಗಳು ಈ ರೀತಿ ಭಾರತೀಯ ಉಡುಪುಗಳನ್ನು ಧರಿಸಿದಾಗ, ಇಲ್ಲಿನ ಡಿಸೈನ್‌ಗಳಿಗೆ ಹೆಚ್ಚು ಆದ್ಯತೆ ದೊರಕಿದಂತಾಗುತ್ತದೆ ” ಎಂದು ಮನೀಶ್‌ ಮಲ್ಹೋತ್ರಾ ಸಂತಸ ವ್ಯಕ್ತಪಡಿಸಿದ್ದಾರೆ.

ಅಲ್ಲದೇ, ಕಿಮ್‌ ಸಹೋದರಿಯರ ಮುಂಬರುವ ರಿಯಾಲಿಟಿ ಶೋನ ಸೀರೀಸ್‌ನಲ್ಲಿ, ಅಂಬಾನಿ ಫ್ಯಾಮಿಲಿಯ ಮದುವೆಯ ಝಲಕ್‌ಗಳು ಪ್ರಸಾರವಾಗುವ ಸಾಧ್ಯತೆಗಳಿದ್ದು, ಭಾರತೀಯ ಡಿಸೈನರ್‌ವೇರ್‌ಗಳು ಜಗತ್ತಿನಾದ್ಯಂತ ಕಾಣಿಸಿಕೊಳ್ಳಲಿವೆ. ಇದು ಪ್ರಶಂಸನೀಯ ಎನ್ನುತ್ತಾರೆ ಫ್ಯಾಷನ್‌ ಎಕ್ಸ್‌ಫರ್ಟ್ಸ್‌.

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

ಇದನ್ನೂ ಓದಿ: Ambani Wedding Fashion: ಅನಂತ್ ಅಂಬಾನಿ ಶೆರ್ವಾನಿ ಬೆಲೆಯೇ 214 ಕೋಟಿ ರೂ! ಹೇಗಿತ್ತು ನೋಡಿ ಅಂಬಾನಿ ಜೋಡಿಯ ವೆಡ್ಡಿಂಗ್ ಫ್ಯಾಷನ್!

Continue Reading

ಫ್ಯಾಷನ್

Healthy Food For Dengue: ಈ ಆಹಾರಗಳನ್ನು ತಿನ್ನಿ; ಡೆಂಗ್ಯೂಗೆ ಡೋಂಟ್ ಕೇರ್ ಅನ್ನಿ

Healthy Food For Dengue: ಈಗಾಗಲೇ ರಾಜ್ಯದಲ್ಲಿ ಡೆಂಗ್ಯೂನಿಂದ ಸಾವಿರಾರು ಮಂದಿ ಬಳಲುತ್ತಿದ್ದು, ಈ ಬಗ್ಗೆ ಮುಂಜಾಗರೂಕತೆ ವಹಿಸಬೇಕಿದೆ. ಡೆಂಗ್ಯೂ, ಮಲೇರಿಯಾ ಸೇರಿದಂತೆ ಯಾವುದೇ ಜ್ವರವಿರಬಹುದು, ಸೊಳ್ಳೆಯ ಕಡಿತದಿಂದ ಬರುತ್ತದೆಯಾದರೂ, ದೇಹದಲ್ಲಿ ಎಲ್ಲಕ್ಕಿಂತ ಮುಖ್ಯವಾಗಿ ರೋಗ ನಿರೋಧಕ ಶಕ್ತಿಯನ್ನು ಈ ಮಳೆಗಾಲದಲ್ಲಿ ಹೆಚ್ಚಿಸಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಹಾಗಾಗಿ, ಈ ಸಂದರ್ಭ ಆರೋಗ್ಯಕರ ಆಹಾರ ಸೇವನೆ ಅತ್ಯಂತ ಮುಖ್ಯ.

VISTARANEWS.COM


on

Healthy Food For Dengue
Koo

ಮಳೆಗಾಲ ಬಂದಿದೆ. ಮಳೆಗಾಲದ ಜೊತೆಗೆ ಸಹಜವಾಗಿ, ಜ್ವರ, ಶಿತ, ನೆಗಡಿ, ಕೆಮ್ಮುಗಳೂ ಬಂದಿವೆ. ಮುಖ್ಯವಾಗಿ, ಎಲ್ಲೆಡೆ ವ್ಯಾಪಕವಾಗಿ ಕೇಳಿಬರುತ್ತಿರುವ ಡೆಂಗ್ಯೂ ಜ್ವರ ಕೂಡಾ ದಿನೇ ದಿನೇ ಹೆಚ್ಚಾಗುತ್ತಿವೆ. ಈಗಾಗಲೇ, ಕರ್ನಾಟಕದಲ್ಲಿ ಡೆಂಗ್ಯೂನಿಂದ ಸಾವಿರಾರು ಮಂದಿ ಬಳಲುತ್ತಿದ್ದು, ಈ ಬಗ್ಗೆ ಮುಂಜಾಗರೂಕತೆ ವಹಿಸಬೇಕಿದೆ. ಡೆಂಗ್ಯೂ, ಮಲೇರಿಯಾ ಸೇರಿದಂತೆ ಯಾವುದೇ ಜ್ವರವಿರಬಹುದು, ಸೊಳ್ಳೆಯ ಕಡಿತದಿಂದ ಬರುತ್ತದೆಯಾದರೂ, ದೇಹದಲ್ಲಿ ಎಲ್ಲಕ್ಕಿಂತ ಮುಖ್ಯವಾಗಿ ರೋಗ ನಿರೋಧಕ ಶಕ್ತಿಯನ್ನು ಈ ಮಳೆಗಾಲದಲ್ಲಿ ಹೆಚ್ಚಿಸಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಹಾಗಾಗಿ, ಈ ಸಂದರ್ಭ ಆರೋಗ್ಯಕರ ಆಹಾರ ಸೇವನೆ ಅತ್ಯಂತ ಮುಖ್ಯ. ಬನ್ನಿ, ಡೆಂಗ್ಯೂ ಹಾಗೂ ಮಲೇರಿಯಾದಂತಹ ಜ್ವರ ನಮ್ಮನ್ನು ಬಾಧಿಸದಂತೆ ಯಾವೆಲ್ಲ ಆಹಾರ ಸೇವನೆಯಿಂದ ನಮ್ಮಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು ಎಂಬುದನ್ನು (Healthy Food For Dengue) ನೋಡೋಣ.

Citrus fruits

ಸಿಟ್ರಸ್‌ ಹಣ್ಣುಗಳು

ವಿಟಮಿನ್‌ ಸಿ ಹೆಚ್ಚಿರುವ ಹಣ್ಣುಗಳು ರೋಗ ನಿರೋಧಕ ಶಕ್ತಿಯನ್ನು ದೇಹದಲ್ಲಿ ಹೆಚ್ಚಿಸುತ್ತದೆ. ನಿಂಬೆ, ಕಿತ್ತಳೆ, ಮುಸಂಬಿ ಇತ್ಯಾದಿ ಹಣ್ಣುಗಳಲ್ಲಿ ವಿಟಮಿನ್‌ ಸಿ ಅಧಿಕವಾಗಿದೆ. ಇವಿಷ್ಟೇ ಅಲ್ಲದೆ, ನೆಲ್ಲಿಕಾಯಿ, ಕಿವಿ, ಸ್ಟ್ರಾಬೆರಿ, ಟೊಮೇಟೋ ಇತ್ಯಾದಿಗಳಲ್ಲಿಯೂ ವಿಟಮಿನ್‌ ಸಿ ಇರುವುದರಿಂದ ವಿಟಮಿನ್‌ ಸಿ ಅಧಿಕವಾಗಿರುವ ತರಕಾರಿ ಹಣ್ಣುಗಳ ಸೇವನೆ ಮಾಡುವ ಮೂಲಕ ರೋಗ ನಿರೋಧಕತೆಯನ್ನು ಹೆಚ್ಚಿಸಿಕೊಳ್ಳಬಹುದು.

Selection of leafy green vegetables in wicker basket.

ಹಸಿರು ಸೊಪ್ಪು ತರಕಾರಿಗಳು

ಮಲೇರಿಯಾ, ಚಿಕುನ್‌ಗುನ್ಯಾ, ಡೆಂಗ್ಯೂ ಇವುಗಳು ಬರದಂತೆ ಅಂತಷ್ಟೇ ಅಲ್ಲ, ನಮ್ಮ ದೇಹದಲ್ಲಿ ಆರೋಗ್ಯ ಚೈತನ್ಯವನ್ನು ಹೊರಹೊಮ್ಮಿಸಲು ಈ ಹಸಿರು ಸೊಪ್ಪು ತರಕಾರಿಗಳ ನಿಯಮಿತ ಸೇವನೆಯನ್ನು ನಾವು ಮರೆಯಲೇಬಾರದು.

ಆಂಟಿ ಆಕ್ಸಿಡೆಂಟ್‌ನಿಂದ ಸಮೃದ್ಧವಾಗಿರುವ ಆಹಾರಗಳು

ಈರುಳ್ಳಿ, ಸೇಬು, ಬೆರ್ರಿಗಳು, ಒಣದ್ರಾಕ್ಷಿ ಸೇರಿದಂತೆ ಆಂಟಿ ಆಕ್ಸಿಡೆಂಟ್‌ ಹೇರಳವಾಗಿರುವ ಆಹಾರವನ್ನು ಸೇವಿಸಿ. ಇದು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಪ್ರಮುಖ ಆಗರ.

Papaya leaf juice

ಪಪ್ಪಾಯ ಎಲೆಯ ರಸ

ಪಪ್ಪಾಯಿಯನ್ನು ತಿನ್ನುವುದಕ್ಕಿಂತಲೂ, ಅದರ ಎಲೆಯ ರಸ ಕುಡಿಯುವುದರಿಂದ ಡೆಂಗ್ಯುವನ್ನು ದೂರವಿಡಬಹುದು. ಇದು ಡೆಂಗ್ಯುಗೆ ಪ್ರಕೃತಿಯೇ ನೀಡಿದ ದಿವ್ಯವೌಷಧ. ಡೆಂಗ್ಯು ಬಂದಿರುವ ಮಂದಿಗೂ ಇದು ಒಳ್ಳೆಯ ಔಷಧ. ನೀವು ಮೊದಲೇ ಪಪ್ಪಾಯಿ ಹಾಗೂ ಪಪ್ಪಾಯಿ ಎಲೆಯ ರಸವನ್ನು ಆಗಾಗ ಸೇವಿಸುತ್ತಿದ್ದರೆ, ಡೆಂಗ್ಯುವಿನ ಅಪಾಯದಿಂದ ದೂರವಿರಬಹುದು.

Almonds Zinc Foods Soaked in water at night and eaten in the morning provides zinc, protein along with omega 3 fatty acids and many minerals

ಬಾದಾಮಿ

ಬಾದಾಮಿಯಂಥ ವಿಟಮಿನ್‌ ಇ ಹೇರಳವಾಗಿರುವ ಆಹಾರದಲ್ಲಿ ಡೆಂಗ್ಯು, ಮಲೇರಿಯಾದಂತಹ ರೋಗಗಳನ್ನು ದೂರವಿಡುವ ಗುಣವಿದೆ. ನಿತ್ಯವೂ ಬೆಳಿಗ್ಗೆ ಬಾದಾಮಿ, ವಾಲ್‌ನಟ್‌ ತಿನ್ನುವುದರಿಂದ ಒಳ್ಳೆಯ ಲಾಭ ಪಡೆಯಬಹುದು. ಕೇವಲ, ಇದಕ್ಕೆ ಮಾತ್ರವಲ್ಲ, ಹೃದಯದ ಆರೋಗ್ಯವೂ ಸೇರಿದಂತೆ ಸಂಪೂರ್ಣ ಆರೋಗ್ಯಕ್ಕೆ ಈ ಅಭ್ಯಾಸ ಒಳ್ಳೆಯದು.

Garlic

ಬೆಳ್ಳುಳ್ಳಿ

ಬೆಳ್ಳುಳ್ಳಿಯಲ್ಲಿರುವ ವಾಸನೆಗೆ ಹಲವು ಕೀಟಗಳನ್ನೂ, ಸೊಳ್ಳೆಗಳನ್ನೂ ದೂರವಿರಿಸುವ ಗುಣವಿದೆ. ಇದು ಆಂಟಿ ಫಂಗಲ್‌ ಹಾಗೂ ಆಂಟಿ ಬ್ಯಾಕ್ಟೀರಿಯಲ್‌ ಗುಣಗಳನ್ನು ಹೊಂದಿರುವುದರಿಂದ ಸೇವನೆ ಒಳ್ಳೆಯದು.

Benefits Of Ginger

ಶುಂಠಿ

ಶೀತ, ನೆಗಡಿ, ಜ್ವರ ಏನೇ ಇರಲಿ ಶುಂಠಿಯ ಗುಣಗಳು ಇದಕ್ಕೆ ಪೂರಕವಾಗಿರುವುದು ನಿಮಗೆ ಗೊತ್ತೇ ಇದೆ. ಹಾಗಾಗಿ ಮಳೆಗಾಲದಲ್ಲಿ ಶುಂಠಿಯ ಉಪಯೋಗ ಬಹಳ ಮುಖ್ಯ. ಗಂಟಲು ಕೆರೆತ, ಶೀತ, ನೆಗಡಿ ಕೆಮ್ಮು ಏನೇ ಇರಲಿ, ಬರದೇ ಇರಲಿ ಶುಂಠಿಯ ಸೇವನೆಯಿಂದ ಇವೆಲ್ಲ ಬರದಂತೆ ತಡೆಯಬಹುದು. ಅಷ್ಟೇ ಅಲ್ಲ, ಬಂದರೂ ಇದರ ಸೇವನೆಯಿಂದ ಪರಿಹಾರ ಪಡೆಯಬಹುದು.

Tips To Prevent Curd

ಮೊಸರು

ಮೊಸರಿನಲ್ಲಿರುವ ಪ್ರೊಬಯಾಟಿಕ್‌ ಗುಣವು ರೋಗ ನಿರೋಧಕತೆಯನ್ನು ಹೆಚ್ಚು ಮಾಡುತ್ತದೆ. ಹಾಗಾಗಿ ದಿನಕ್ಕೊಂದು ಕಪ್‌ ಮೊಸರಿನ ಸೇವನೆ ಒಳ್ಳೆಯದು.

Raw Turmeric with Powder Cutout

ಅರಿಶಿನ

ಅರಿಶಿನದ ಗುಣಗಳ ಬಗ್ಗೆ ಮತ್ತೆ ವಿವರಿಸಿ ಹೇಳಬೇಕಾಗಿಲ್ಲ. ದಿನವೂ ಅರಿಶಿನ ಹಾಕಿದ ಬಿಸಿ ಹಾಲನ್ನು ಕುಡಿಯುವ ಮೂಲಕ ರೋಗ ನಿರೋಧಕತೆಯನ್ನು ಹೆಚ್ಚಿಸಿಕೊಳ್ಳಬಹುದು. ಮಕ್ಕಳಿಗೆ ಮುಖ್ಯವಾಗಿ ಇದನ್ನು ಕೊಡುವುದರಿಂದ ಸಾಕಷ್ಟು ಲಾಭಗಳಿವೆ.

Nutrition Alert

ಎಳನೀರು

ಎಳನೀರು ಅಥವಾ ತೆಂಗಿನಕಾಯಿ ನೀರನ್ನು ಸೇವಿಸುವುದರಿಂದ ರೋಗ ನಿರೋಧಕತೆ ಹೆಚ್ಚುತ್ತದೆ. ಇದರಲ್ಲಿ ಇಲೆಕ್ಟ್ರೋಲೈಟ್‌ಗಳಿದ್ದು, ಇವು ಡೆಂಗ್ಯು, ಮಲೇರಿಯಾದಂಹತ ಸಮಸ್ಯೆಗಳು ಬರದಂತೆ ದೂರವಿರಿಸುತ್ತದೆ.

Continue Reading

ಫ್ಯಾಷನ್

Ambani Wedding Fashion: ಅನಂತ್ ಅಂಬಾನಿ ಶೆರ್ವಾನಿ ಬೆಲೆಯೇ 214 ಕೋಟಿ ರೂ! ಹೇಗಿತ್ತು ನೋಡಿ ಅಂಬಾನಿ ಜೋಡಿಯ ವೆಡ್ಡಿಂಗ್ ಫ್ಯಾಷನ್!

Ambani Wedding Fashion: ವಜ್ರ-ವೈಢೂರ್ಯ ಹಾಗೂ ಬಂಗಾರದಿಂದಲೇ ತಯಾರಾದ ಗ್ರ್ಯಾಂಡ್‌ ಡಿಸೈನರ್‌ವೇರ್‌ಗಳನ್ನು ಧರಿಸಿ ಮದುವೆಯಾದ ಅಂಬಾನಿ ಜೋಡಿ ಅನಂತ್‌-ರಾಧಿಕಾ ಮರ್ಚೆಂಟ್‌ ವೆಡ್ಡಿಂಗ್‌ ಫ್ಯಾಷನ್‌ನಲ್ಲಿ ಹೊಸ ಭಾಷ್ಯವನ್ನೇ ಬರೆದಿದ್ದಾರೆ. ಹಾಗಾದಲ್ಲಿ, ಅವರ ಮದುವೆಯ ದಿನದ ಡಿಸೈನರ್‌ವೇರ್ಸ್ & ಆಭರಣಗಳು ಹೇಗಿದ್ದವು? ಇಲ್ಲಿದೆ ವರದಿ.

VISTARANEWS.COM


on

Ambani Wedding Fashion
ಚಿತ್ರಗಳು: ಅನಂತ್‌ ಅಂಬಾನಿ-ರಾಧಿಕಾ ಮರ್ಚೆಂಟ್‌ ಮದುವೆಯ ಚಿತ್ರಗಳು
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ವಜ್ರ-ವೈಢೂರ್ಯದಲ್ಲೆ ಮಿಂದೆದ್ದಿರುವ ಅಂಬಾನಿ ಜೋಡಿ ಅನಂತ್‌-ರಾಧಿಕಾ ಮರ್ಚೆಂಟ್‌, ಇಂಡಿಯನ್‌ ವೆಡ್ಡಿಂಗ್‌ ಫ್ಯಾಷನ್‌ನಲ್ಲಿ (Ambani Wedding Fashion) ಹೊಸ ಭಾಷ್ಯ ಬರೆದಿದ್ದಾರೆ. ಹೌದು, ಜನರ ಕಣ್ಣು ಕುಕ್ಕುವಂತಹ ವಜ್ರ-ವೈಢೂರ್ಯ ಹಾಗೂ ಬಂಗಾರದಿಂದಲೇ ತಯಾರಾದ ಗ್ರ್ಯಾಂಡ್‌ ಡಿಸೈನರ್‌ವೇರ್ಸ್, ದುಬಾರಿ ಜ್ಯುವೆಲರಿಗಳನ್ನು ಧರಿಸಿ ಲಕ್ಷುರಿಯಾಗಿ ಮದುವೆಯಾದ ಅಂಬಾನಿ ಜೋಡಿ ಅನಂತ್‌-ರಾಧಿಕಾ ಮರ್ಚೆಂಟ್‌ , ಬಿಗ್‌ ಗ್ರ್ಯಾಂಡ್‌ ವೆಡ್ಡಿಂಗ್‌ ಫ್ಯಾಷನ್‌ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಹಾಗಾದಲ್ಲಿ, ಮದುವೆಯ ದಿನ ಅವರು ಧರಿಸಿದ್ದ ವಿಶೇಷವಾದ ಡಿಸೈನರ್‌ವೇರ್ಸ್ ಹಾಗೂ ಆಭರಣಗಳು ಹೇಗಿದ್ದವು?ಎಷ್ಟು ಕೋಟಿ ರೂ. ಬೆಲೆಬಾಳುತ್ತಿದ್ದವು. ಈ ಕುರಿತಂತೆ ಫ್ಯಾಷನ್‌ ವಿಮರ್ಶಕರು ಹೇಳುವುದೇನು? ಇಲ್ಲಿದೆ ವಿವರ.

Ambani Wedding Fashion

ವಜ್ರ- ವೈಢೂರ್ಯ ಬಂಗಾರದಲ್ಲೆ ಮಿಂದೆದ್ದ ಜೋಡಿ

ಮದುವೆಯ ದಿನದಂದು ಅಡಿಯಿಂದ ಮುಡಿಯವರೆಗೂ ಕೋಟಿಗಟ್ಟಲೇ ಬೆಲೆ ಬಾಳುವ ವಜ್ರ ವೈಡೂರ್ಯಗಳಿಂದಲೇ ಅಲಂಕೃತಗೊಂಡಿದ್ದ ಅನಂತ್‌-ರಾಧಿಕಾ ಅಂಬಾನಿಯವರ ಸೆಲೆಬ್ರೇಷನ್‌, ವೆಡ್ಡಿಂಗ್‌ ಇಂಡಸ್ಟ್ರೀಯಲ್ಲಿ ಭಾರಿ ಸಂಚಲನ ಮೂಡಿಸಿರುವುದರೊಂದಿಗೆ ಬಿಗ್‌ ಫ್ಯಾಟ್‌ ವೆಡ್ಡಿಂಗ್‌ ಪ್ರಿಯರನ್ನು ಉತ್ತೇಜಿಸಿದೆ. ಡಿಸೈನಿಂಗ್‌ ಕ್ಷೇತ್ರದಲ್ಲಿ ಸಾಕಷ್ಟು ಮಂದಿಗೆ ಉದ್ಯೋಗ ಕಲ್ಪಿಸಿದೆ.

ಅನಂತ್‌ ಅಂಬಾನಿಯ 214 ಕೋಟಿ ರೂ. ಗಳ ಶೆರ್ವಾನಿ

ಅಬ್ಬಬ್ಬಾ., ಮದುವೆಯ ದಿನ ಅನಂತ್‌ ಅಂಬಾನಿ ಧರಿಸಿದ್ದ ವಜ್ರ ಹಾಗೂ ಬಂಗಾರ ಮಿಶ್ರಿತ ಡಿಸೈನ್‌ನ ಶೆರ್ವಾನಿ ಬೆಲೆ 214 ಕೋಟಿ ರೂ. ಗಳು. ಅದರೊಂದಿಗೆ ಧರಿಸಿದ್ದ, ಆನೆಯ ಆಕಾರದ ಬ್ರೋಚ್‌ 14 ಕೋಟಿ ರೂ. ಎಂದರೇ ನೀವು ನಂಬಲೇಬೇಕು. ದೇಸಿ ಕಲಾಕಾರರಿಂದ ಸಿದ್ಧಗೊಂಡ ಶೆರ್ವಾನಿಗೆ ಎಥ್ನಿಕ್‌ ಜೂತಿ ಧರಿಸುವ ಬದಲು, ಬಂಗಾರದ ಪಾಲಿಶ್‌ ಪ್ರಿಂಟ್ಸ್ ಇರುವಂತಹ ಕಸ್ಟಮೈಸ್ಡ್ ಸ್ಪೋರ್ಟ್ಸ್ ಶೂ ಧರಿಸಿದ್ದು, ಹೊಸ ಟ್ರೆಂಡ್‌ಗೆ ಗ್ರೀನ್‌ ಸಿಗ್ನಲ್‌ ನೀಡಿತು ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರಾದ ಜಾನ್‌.

ಮಹಾರಾಣಿಯಂತೆ ಬಿಂಬಿಸಿದ ರಾಧಿಕಾ ಮರ್ಚೆಂಟ್‌ ಬ್ರೈಡಲ್‌ ಲುಕ್‌

ಇನ್ನು, ಮದುವೆಯ ದಿನ ಗುಜರಾತಿ ಸಂಪ್ರದಾಯದಂತೆ ವಿಶೇಷ ಲೆಹೆಂಗಾ ಹಾಗೂ ಗಾಗ್ರದಲ್ಲಿ ಕಾಣಿಸಿಕೊಂಡ ರಾಧಿಕಾ ಧರಿಸಿದ್ದ, ಡಿಸೈನರ್‌ವೇರ್‌ಗಳು ಕೂಡ ಅಷ್ಟೇ, ಶುದ್ಧ ಬಂಗಾರ ಹಾಗೂ ವಜ್ರದಿಂದಲೇ ಸಿಂಗಾರಗೊಂಡಿದ್ದವು. ತವರು ಮನೆಯಿಂದ ಹೊರಡುವ ಲುಕ್‌, ರಾತ್ರಿ ಮಹೂರ್ತದ ಲುಕ್‌, ವಿದಾಯಿ ಲುಕ್‌ ಹೀಗೆ ನಾನಾ ಟ್ರೆಡಿಷನಲ್‌ ಲುಕ್‌ಗಳಲ್ಲಿ ರಾಧಿಕಾ ಧರೆಗಿಳಿದ ಅಪ್ಸರೆಯಂತೆ ಕಾಣಿಸಿಕೊಂಡರು. ಅಗ್ನಿಸಾಕ್ಷಿ ಸಂದರ್ಭದಲ್ಲಿ, ಡಿಸೈನರ್‌ ಅಬುಜಾನಿ ಸಂದೀಪ್‌ ಕೋಸ್ಲಾ ಅವರ ಡಿಸೈನ್‌ನ ವೈಟ್‌ ಹಾಗೂ ರೆಡ್‌ ಕಾಂಬಿನೇಷನ್‌ನ ಬಂಗಾರದ ವಿನ್ಯಾಸದ ಗಾಗ್ರದಲ್ಲಿ ಮಿನುಗಿದರು. ವಿಶೇಷವೆಂದರೇ, ಸಹೋದರಿಯ ನೂರಾರು ಕೋಟಿ. ರೂ ಬೆಲೆಬಾಳುವ ಜ್ಯುವೆಲರಿ ಸೆಟ್‌ ಧರಿಸಿ, ಸಸ್ಟೈನಬಲ್‌ ಜ್ಯುವೆಲರಿ ಫ್ಯಾಷನ್‌ಗೂ ಸೈ ಎಂದರು. ಅಂದಹಾಗೆ, ಈ ಅಂಬಾನಿ ಜೋಡಿಯ ಈ ಗ್ರ್ಯಾಂಡ್‌ ವೆಡ್ಡಿಂಗ್‌ ಫ್ಯಾಷನ್‌ ಭಾರತೀಯ ಸಂಸ್ಕೃತಿ ಎತ್ತಿ ಹಿಡಿಯುವ ಸಾಕಷ್ಟು ಡಿಸೈನರ್‌ಗಳಿಗೆ ವೇದಿಕೆಯನ್ನು ಸೃಷ್ಟಿಸಿತು ಎನ್ನಬಹುದು ಎನ್ನುತ್ತಾರೆ ಫ್ಯಾಷನ್‌ ವಿಶ್ಲೇಷಕರು.

Ambani wedding Fashion: ಇಂದ್ರಲೋಕವನ್ನೇ ಧರೆಗಿಳಿಸಿದ ಅಂಬಾನಿ ಫ್ಯಾಮಿಲಿ!ಇದನ್ನೂ ಓದಿ:

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

Continue Reading

ಫ್ಯಾಷನ್

Ambani wedding Fashion: ಇಂದ್ರಲೋಕವನ್ನೇ ಧರೆಗಿಳಿಸಿದ ಅಂಬಾನಿ ಫ್ಯಾಮಿಲಿ!

Ambani wedding Fashion: ಅಂಬಾನಿ ಫ್ಯಾಮಿಲಿ ವೆಡ್ಡಿಂಗ್‌ ಸಂಭ್ರಮದಲ್ಲಿ ಮಿಂದೆದ್ದಿದೆ. ಮದುಮಗ ಅನಂತ್‌ ಅಂಬಾನಿ – ರಾಧಿಕಾ ಮರ್ಚೆಂಟ್‌ ಮಾತ್ರವಲ್ಲ, ಕುಟುಂಬದವರೆಲ್ಲರೂ ತಮ್ಮದೇ ಆದ ಟ್ರೆಡಿಷನಲ್‌ ಡ್ರೆಸ್‌ಕೋಡ್‌ಗಳೊಂದಿಗೆ ಇಂದ್ರ ಲೋಕವನ್ನೇ ಮರು ಸೃಷ್ಟಿಸಿದ್ದಾರೆ. ಅಭಿರುಚಿಗೆ ತಕ್ಕಂತೆ ಹೇಗೆಲ್ಲಾ ಕಾಣಿಸಿಕೊಳ್ಳುತ್ತಿದ್ದಾರೆ ಎಂಬುದರ ಕುರಿತಂತೆ ಇಲ್ಲಿದೆ ಡಿಟೇಲ್ಸ್.

VISTARANEWS.COM


on

Ambani wedding Fashion
ಚಿತ್ರಗಳು: ಅನಂತ್‌ ಅಂಬಾನಿ-ರಾಧಿಕಾ ಮರ್ಚೆಂಟ್‌ ವೆಡ್ಡಿಂಗ್‌ ಫ್ಯಾಷನ್‌ ಚಿತ್ರಗಳು
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಅಂಬಾನಿ ಫ್ಯಾಮಿಲಿಯ ವೆಡ್ಡಿಂಗ್‌ (Ambani wedding Fashion) ಸಂಭ್ರಮ ಮುಗಿಲು ಮುಟ್ಟಿದೆ. ಮದುಮಗ ಅನಂತ್‌ ಅಂಬಾನಿ – ರಾಧಿಕಾ ಮರ್ಚೆಂಟ್‌ ಮಾತ್ರವಲ್ಲ, ಕುಟುಂಬದವರೆಲ್ಲರೂ ಸೇರಿ ಕೆಲಕಾಲ ಇಡೀ ಇಂದ್ರ ಲೋಕವನ್ನೇ ಧರೆಗಿಳಿಸಿದ್ದಾರೆ. ಮದುವೆಯ ಹೆಸರಲ್ಲಿ ಟ್ರೆಡಿಷನಲ್‌ ಫ್ಯಾಷನ್‌ಗೆ ಪ್ರಾಮುಖ್ಯತೆ ನೀಡುವುದರೊಂದಿಗೆ ದೇಸಿ ಫ್ಯಾಷನ್‌ಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.

ಅನಂತ್‌ ಅಂಬಾನಿ-ರಾಧಿಕಾ ಮರ್ಚೆಂಟ್‌ ಕಪಲ್‌ ಗೋಲ್ಸ್

ಪ್ರಿ-ವೆಡ್ಡಿಂಗ್‌ ಕಾರ್ಯಕ್ರಮಗಳ ಆರಂಭದಿಂದಲೂ ಅನಂತ್‌ ಅಂಬಾನಿ -ರಾಧಿಕಾ ಮರ್ಚೆಂಟ್‌ ಜೋಡಿಯ ಕಪಲ್‌ ಗೋಲ್ಸ್ ಫ್ಯಾಷನ್‌ವೇರ್‌ನಲ್ಲೂ ಕಂಡುಬಂದಿದೆ. ಅದರಲ್ಲೂ ಕುಟುಂಬದ ಅರಿಷಿಣ ಶಾಸ್ತ್ರ, ಸಂಗೀತ್‌, ಮೆಹೆಂದಿ, ಮಾತಾ ಕೀ ಚೌಕಿ, ಗೃಹ ಶಾಂತಿ ಪೂಜಾ ಸೇರಿದಂತೆ ಎಲ್ಲಾ ಕಾರ್ಯಕ್ರಮಗಳಲ್ಲೂ ಇವರಿಬ್ಬರ ಉಡುಗೆ ತೊಡುಗೆಗಳು ಒಂದಕ್ಕೊಂದು ಮ್ಯಾಚ್‌ ಆಗುವುದರೊಂದಿಗೆ ನೋಡುಗರ ಕಣ್ಮನ ಸೆಳೆದಿವೆ. ಸನ್‌ ಕಲರ್‌ನಿಂದಿಡಿದು, ಪಿಂಕ್‌ ಆರೆಂಜ್‌, ಬ್ಲ್ಯೂ ಪರ್ಪಲ್‌, ರೆಡ್‌ನಂತಹ ಶೇಡ್‌ಗಳ ಟ್ವಿನ್ನಿಂಗ್‌ ಹಾಗೂ ಕಾಂಟ್ರಸ್ಟ್ ಸ್ಟೈಲಿಂಗ್‌ ಜೊತೆಗೆ ಅವರ ಬಂಗಾರ ಮಿಶ್ರಿತ ಪ್ರತಿ ಎಥ್ನಿಕ್‌ ಫ್ಯಾಷನ್‌ವೇರ್‌ಗಳು ನೋಡುಗರ ಮನ ಮುಟ್ಟುತ್ತಿವೆ.

ನೀತಾ ಅಂಬಾನಿಯ ಹೆರಿಟೆಜ್‌ ಸೀರೆಗಳು

ಬನಾರಸಿ ರೇಷ್ಮೆ, ಕಾಂಚಿವರಂ ಸೇರಿದಂತೆ ದೇಸಿ ಹ್ಯಾಂಡ್‌ಲೂಮ್‌ನಿಂದ ಸಿದ್ಧಗೊಂಡ ಬಂಗಾರದ ದಾರದಿಂದಲೇ ನೇಯ್ದ ಸಿಲ್ಕ್‌ ಸೀರೆಗಳು ಸೀರೆಗಳು ನೀತಾ ಅಂಬಾನಿಯ ಸೌಂದರ್ಯವನ್ನು ಹೆಚ್ಚಿಸುತ್ತಿವೆ ಎಂದರೂ ಅತಿಶಯೋಕ್ತಿಯಾಗದು.

ಇಶಾ-ಶ್ಲೋಕ ಲೆಹೆಂಗಾ ಲವ್‌

ನೀತಾ ಅಂಬಾನಿಯ ಮಗಳು ಇಶಾ ಈ ವೆಡ್ಡಿಂಗ್‌ ಫ್ಯಾಷನ್‌ನಲ್ಲಿ ಧರಿಸಿದ್ದ ಒಂದೊಂದು ಲೆಹೆಂಗಾ ಕೂಡ ಒಂದೊಂದು ಕಥೆಯನ್ನೇ ಹೇಳಿವೆ. ಅಡಿಯಿಂದ ಮುಡಿಯವರೆಗೂ ಧರಿಸಿದ ವಜ್ರ-ವೈಢೂರ್ಯದ ಆಕ್ಸೆಸರೀಸ್‌ಗಳು ಫ್ಯಾಷನ್‌ ಲೋಕ ಮಾತ್ರವಲ್ಲ, ಜ್ಯುವೆಲರಿ ಲೋಕದಲ್ಲೂ ಸಂಚಲ ಮೂಡಿಸುವಲ್ಲಿ ಯಶಸ್ವಿಯಾಗಿವೆ. ಇನ್ನು, ಶ್ಲೋಕ ಅಂಬಾನಿ ಕೂಡ ಇದರಿಂದ ಹೊರತಾಗಿಲ್ಲ! ಇಲ್ಲಿ ಗಮನಿಸಬೇಕಾದ್ದು ಒಂದೇ ಒಬ್ಬರಿಗಿಂತ ಒಬ್ಬರದು ವಿಭಿನ್ನ ವಿನ್ಯಾಸ ಒಳಗೊಂಡಿದ್ದವು.

Ambani wedding Fashion

ನಾಯಿಮರಿ ಪಾಪ್‌ಕಾರ್ನ್‌ಗೂ ವೆಡ್ಡಿಂಗ್‌ ಔಟ್‌ಫಿಟ್‌

ಕುಟುಂಬದವರೊಂದಿಗೆ ಮೆಹಂದಿ ನೈಟ್‌ ಕಾರ್ಯ್ರಕಮದಲ್ಲಿ ರಾಧಿಕಾರ ಮುದ್ದು ನಾಯಿ ಮರಿ ಕೂಡ ಪಾಲ್ಗೊಂಡಿತ್ತು. ಪಾಪ್ಕಾರ್ನ್‌ ಹೆಸರಿನ ಈ ಶ್ವಾನ ಕೂಡ ಪಂಕ್‌ ಪೆಟ್‌ನ ಮಲ್ಟಿ ಶೇಡ್‌ನ ಡಿಸೈನರ್‌ವೇರ್‌ ಧರಿಸಿತ್ತು ಎಂದರೇ ಆಶ್ಚರ್ಯವಾಗಬಹುದು.

Ambani wedding Fashion

ಅಂಬಾನಿ ಮೆನ್ಸ್ ಬಂದ್ಗಾಲ ಫ್ಯಾಷನ್‌

ಸದ್ಯ ಅಂಬಾನಿ ಫ್ಯಾಮಿಲಿಯ ಬಹುತೇಕ ಎಲ್ಲಾ ಪುರುಷರು ನಾನಾ ವೆರೈಟಿ ಬಂದ್ಗಾಲ ಇಲ್ಲವೇ ಗೋಲ್ಡನ್‌ ಶೇಡ್‌ ಮಿಕ್ಸ್ ಕುರ್ತಾ ಸ್ಟೈಲಿಂಗ್‌ಗೆ ಸೈ ಎಂದಿದ್ದು, ಪ್ರತಿ ಕಾರ್ಯಕ್ರಮಕ್ಕೆ ತಕ್ಕಂತೆ ಡಿಸೈನ್‌ ಬದಲಿಸುತ್ತಿದ್ದಾರೆ ಎನ್ನಲಾಗಿದೆ.
ಒಟ್ಟಾರೆ, ಅಂಬಾನಿ ಫ್ಯಾಮಿಲಿಯ ವೆಡ್ಡಿಂಗ್‌ ಔಟ್‌ಫಿಟ್‌ಗಳು ಎಲ್ಲರನ್ನು ಸಮ್ಮೋಹನಗೊಳಿಸುತ್ತಿವೆ ಎನ್ನುತ್ತಾರೆ ಪ್ಯಾಷನ್‌ ವಿಮಶರ್ಕರು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Ambani Wedding Fashion: ಫ್ಯಾಷನ್‌ ಪ್ರಿಯರ ಹುಬ್ಬೇರಿಸಿದ ರಾಧಿಕಾ ಮರ್ಚೆಂಟ್‌ ದುಂಡು ಮಲ್ಲಿಗೆ ದುಪಟ್ಟಾ! ಏನಿದು ಫೂಲೋಂಕಾ ಚಾದರ್‌?

Continue Reading
Advertisement
Salman Khan and Iulia Vantur spotted at Anant-Radhika wedding
ಬಾಲಿವುಡ್37 seconds ago

Salman Khan: ಅಂಬಾನಿ ಮದುವೆಯಲ್ಲಿ ಮಾಜಿ ಗೆಳತಿ ಜತೆ ಸಲ್ಮಾನ್‌ ಡ್ಯಾನ್ಸ್‌; ರಿಲೇಶನ್​ಶಿಪ್​ನಲ್ಲಿದ್ದಾರಾ ಹೇಗೆ?

BSP President
ದೇಶ15 mins ago

BSP President: ತಮಿಳುನಾಡು ಬಿಎಸ್‌ಪಿ ರಾಜ್ಯಾಧ್ಯಕ್ಷ ಆರ್ಮ್‌ಸ್ಟ್ರಾಂಗ್‌ ಕೊಲೆ; ಹಂತಕನ ಎನ್‌ಕೌಂಟರ್‌- ಮತ್ತೊಂದೆಡೆ ಹತ್ಯೆಯ ಭೀಕರ ದೃಶ್ಯ ವೈರಲ್‌

Copa America Final
ಕ್ರೀಡೆ33 mins ago

Copa America Final: ದಾಖಲೆಯ ಕೊಪಾ ಅಮೆರಿಕ ಪ್ರಶಸ್ತಿ ಗೆದ್ದ ಅರ್ಜೆಂಟೀನಾ

World Record
ದೇಶ34 mins ago

World Record: ಒಂದೇ ದಿನ ಬರೋಬ್ಬರಿ 11 ಲಕ್ಷ ಗಿಡ ನೆಟ್ಟು ವಿಶ್ವ ದಾಖಲೆ ಬರೆದ ಇಂದೋರ್‌; ದೇಶದ ಸ್ವಚ್ಛ ನಗರಕ್ಕೆ ಇನ್ನೊಂದು ಗರಿ

karnataka Rain
ಮಳೆ37 mins ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

Anant Ambani Wedding AR Rahman Shreya Ghoshal sings wedding reception
ಬಾಲಿವುಡ್43 mins ago

Anant Ambani Wedding: ರಾಧಿಕಾ-ಅನಂತ್ ಅಂಬಾನಿ ಆರತಕ್ಷತೆ; ಮನಸೂರೆಗೊಂಡ ಗಾಯಕಿ ಶ್ರೇಯಾ ಘೋಷಾಲ್, ಎಆರ್ ರೆಹಮಾನ್ ಗಾಯನ!

karnataka assembly live CM Siddaramaiah and Vidhanasoudha
ಪ್ರಮುಖ ಸುದ್ದಿ53 mins ago

Karnataka Assembly Live: ವಿಧಾನ ಮಂಡಲ ಮಳೆಗಾಲದ ಅಧಿವೇಶನ ಆರಂಭ; ಇಲ್ಲಿದೆ ‌ಕ್ಷಣಕ್ಷಣದ ಲೈವ್‌

assault case udupi
ಕ್ರೈಂ1 hour ago

Assault Case: ಆಪದ್ಬಾಂಧವನಲ್ಲ ವಿಕೃತ! ಮಗಳ ಅಶ್ಲೀಲ ವಿಡಿಯೋ ಮಾಡಿದ ಆಸೀಫ್‌ನ ಇನ್ನೊಂದು ವಿಕೃತಿ ಬಯಲು

SBI
ದೇಶ1 hour ago

SBI: ದುಬಾರಿಯಾಗಲಿದೆ ಎಸ್‌ಬಿಐ ಸಾಲ; ಲೆಂಡಿಂಗ್‌ ದರದಲ್ಲಿ ಭಾರೀ ಏರಿಕೆ

Sanju Samson
ಕ್ರೀಡೆ2 hours ago

Sanju Samson: ‘ಔಟ್​ ಆಫ್​ ದಿ ಪಾರ್ಕ್​’​ ಸಿಕ್ಸರ್​ ಬಾರಿಸಿದ ಸಂಜು ಸ್ಯಾಮ್ಸನ್​; ವಿಡಿಯೊ ವೈರಲ್

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ37 mins ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

karnataka weather Forecast
ಮಳೆ5 hours ago

Karnataka Weather : ಮುಂದಿನ 24 ಗಂಟೆಯಲ್ಲಿ ರಣಮಳೆ ಫಿಕ್ಸ್‌; ರೆಡ್‌ ಅಲರ್ಟ್‌ ಘೋಷಣೆ

Karnataka Rain
ಮಳೆ18 hours ago

Karnataka Rain : ಧಾರಾಕಾರ ಮಳೆಗೆ ತೇಲಿ ಹೋದ ಸ್ಕೂಲ್‌ ಬಸ್‌; ಕೊಡಗಿನಲ್ಲಿ ಕುಸಿದು ಬಿದ್ದ ಮನೆಗಳ ಗೋಡೆ

karnataka Rain
ಮಳೆ19 hours ago

Karnataka Rain : ಭಾರಿ ಗಾಳಿ ಮಳೆ; ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದು ವಿಲವಿಲ ಒದ್ದಾಡಿ ಸತ್ತ ಗಬ್ಬದ ಹಸು

haveri News
ಹಾವೇರಿ23 hours ago

Haveri News : ಹಾವೇರಿಯಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ ನಾಯಿ ಜಗಳ; ಊರಿನೊಳಗೆ ದಾಂಧಲೆ ಮಾಡುತ್ತಿದ್ದ ಕರಡಿ ಸೆರೆ

karnataka Rain
ಮಳೆ1 day ago

Karnataka Rain : ಭಾರಿ ಮಳೆ ಎಫೆಕ್ಟ್‌; ಕಪಿಲಾ ನದಿ ತೀರದಲ್ಲೀಗ ಪ್ರವಾಹ ಭೀತಿ

karnataka Weather Forecast
ಮಳೆ2 days ago

Karnataka Weather : ಶಿರಸಿಯಲ್ಲಿ ಭೂಕುಸಿತ; ಮತ್ತೆ ಕರಾವಳಿ, ಮಲೆನಾಡಿಗೆ ಭಾರಿ ಮಳೆ ಎಚ್ಚರಿಕೆ

karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ಕಳಚಿ ಬಿದ್ದ ಚಾವಣೆ; ರಸ್ತೆಗೆ ಅಡ್ಡಲಾಗಿ ಉರುಳಿದ ಬೃಹತ್‌ ಮರ

Wild Animal Attack
ಹಾಸನ2 days ago

Wild Animal Attack : ಬೇಲೂರಿನಲ್ಲಿ ಒಂಟಿ ಸಲಗ ಡೆಡ್ಲಿ ಅಟ್ಯಾಕ್; ಮನೆ ಅಂಗಳದಲ್ಲಿ ಓಡಾಡಿದ ಚಿರತೆ

karnataka Rain Effect
ಮಳೆ4 days ago

Karnataka Rain : ಭಾರಿ ಮಳೆಗೆ ಕರೆಯಂತಾದ ರಸ್ತೆಯಲ್ಲಿ ಬೈಕ್‌ ಚಲಾಯಿಸಿ ಮುಗ್ಗರಿಸಿ ಬಿದ್ದ ಸವಾರರು; ನಾಳೆಗೂ ರೈನ್‌ ಅಲರ್ಟ್‌

ಟ್ರೆಂಡಿಂಗ್‌