ಶೀಲಾ ಸಿ. ಶೆಟ್ಟಿ, ಬೆಂಗಳೂರು
ಈ ಕ್ರಿಸ್ಮಸ್ ಸೀಸನ್‌ನ ಚಳಿಗಾಲಕ್ಕೆ ಬೆಚ್ಚಗಿಡುವ ನಾನಾ ಡಿಸೈನ್ ಬಣ್ಣಬಣ್ಣದ ಉಲ್ಲನ್, ನಿಟ್‌ವೇರ್ ಗ್ಲವ್ಸ್ ಹಾಗೂ ಫಂಕಿ ಗ್ಲವ್ಸ್ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಹೊರಗಿನ ಚಳಿಗೆ ಕೈಗಳನ್ನು ಬೆಚ್ಚಗಿರಿಸುವ ಈ ಗ್ಲವ್ಸ್ ಎಲ್ಲಾ ವಯೋಮಾನದವರನ್ನೂ ಸೆಳೆಯುತ್ತಿವೆ.
ಕ್ರಿಸ್ಮಸ್ ಸೀಸನ್ ಗ್ಲವ್ಸ್
ಪ್ರತಿ ವರ್ಷ ಕ್ರಿಸ್ಮಸ್ ಸೀಸನ್‌ನಲ್ಲಿ ಸಾಕಷ್ಟು ಬಗೆಯ ಗ್ಲವ್ಸ್ ಬಿಡುಗಡೆಗೊಳ್ಳುತ್ತವೆ. ಕಾರಣ ಚಳಿಗಾಲ. ಔಟಿಂಗ್, ಟ್ರಾವೆಲಿಂಗ್ ಹೋಗುವವರು ಹೆಚ್ಚಾಗಿರುತ್ತಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಸಾಕಷ್ಟು ಬಗೆಬಗೆಯ ಗ್ಲವ್ಸ್, ಇತರೆ ವಿಂಟರ್‌ವೇರ್‌ಗಳ ಜತೆಗೆ ಟ್ರೆಂಡಿಯಾಗುತ್ತವೆ ಎನ್ನುತ್ತಾರೆ ಸ್ಟೈಲಿಸ್ಟ್ ರಿಚಾ.
ಔಟಿಂಗ್‌ನಲ್ಲಿ ಬೆಚ್ಚಗಿಡುವ ಗ್ಲವ್ಸ್
ಫಿಂಗರ್ ಫುಲ್, ಫಿಂಗರ್ ಲೆಸ್, ಎಲ್ಬೋ ಗ್ಲವ್ಸ್ಗಳಲ್ಲಿ ಸಾದಾ, ಬಣ್ಣಬಣ್ಣದವು, ಮಿಕ್ಸ್ ಮ್ಯಾಚ್, ರೇನ್‌ಬೋ ಕಲರ್, ಫೋಲ್ಕಾ ಡಾಟ್ಸ್, ಫರ್ ವ್ರಿಸ್ಟ್ ಸೇರಿದಂತೆ ಪ್ರಿಂಟೆಡ್‌ನವು ಆಗಮಿಸಿವೆ. ಇನ್ನು ಲೈಟ್‌ವೇಟ್‌ನವಕ್ಕೆ ಹೆಚ್ಚಿನ ಬೇಡಿಕೆಯಿದೆ ಎನ್ನುತ್ತಾರೆ ಸ್ಟೈಲಿಸ್ಟ್ ರಕ್ಷಾ. ಅವರ ಪ್ರಕಾರ, ಔಟಿಂಗ್‌ನಲ್ಲಿ ಇವು ಚಳಿಯಿಂದ ರಕ್ಷಣೆ ನೀಡುವುದಲ್ಲದೇ ನೋಡಲು ಚೆನ್ನಾಗಿ ಕಾಣುತ್ತವೆ.
ಚಿಣ್ಣರ ಆಕರ್ಷಕ ಗ್ಲವ್ಸ್
ಪುಟಾಣಿಗಳಿಗೂ ಇಷ್ಟವಾಗುವಂತಹ ಕಾರ್ಟೂನ್ ಕ್ಯಾರೆಕ್ಟರ್ ಇಲ್ಲವೇ ಕ್ರಿಸ್ಮಸ್ ತಾತ ಅಂದರೇ, ಸಾಂತಾ ಕ್ಲಾಸ್ ಹಾಗೂ ಕ್ರಿಸ್ಮಸ್ ಟ್ರೀ ಚಿತ್ರ ಇರುವಂತವು ಈ ಸೀಸನ್‌ನಲ್ಲಿ ಮಾರುಕಟ್ಟೆಗೆ ಬಂದಿವೆ. ಇನ್ನು ಎಂದಿನಂತೆ ಪ್ರಾಣಿ-ಪಕ್ಷಿ ಚಿತ್ತಾರದ ವುಲ್ಲನ್ ಗ್ಲೌವ್ಸ್ ಟ್ರೆಂಡಿಯಾಗಿವೆ. ಫರ್‌ನವು ಆಕರ್ಷಕವಾಗಿವೆ.
ಟು ವೀಲರ್ ಪ್ರಿಯರ ಗ್ಲವ್ಸ್
ಚಳಿಗಾಲದಲ್ಲಿ ಟೂ ವೀಲರ್ ಚಾಲನೆ ಮಾಡುವ ಯುವಕ ಯುವತಿಯರು ಇತ್ತೀಚೆಗೆ ಫ್ಯಾಷನಬಲ್ ಗ್ಲೌಸ್‌ಗಳನ್ನು ಧರಿಸಲಾರಂಭಿಸಿದ್ದಾರೆ. ಇದಕ್ಕೆ ಪೂರಕ ಎಂಬಂತೆ, ವಿನೈಲ್, ಲ್ಯಾಟೆಕ್ಸ್, ನಿಟ್ರಿಲ್, ಸಿಲಿಕಾನ್, ಮ್ಯಾಜಿಕ್‌ಮೆನ್ಸ್, ಎಕ್ಸ್-ಮಸ್, ಮಿಟ್ರಿಲ್, ಆಕ್ರ್ಯಾಲಿಕ್, ಸೇರಿದಂತೆ ನಾನಾ ಬಗೆಯವು ಬೇಡಿಕೆ ಹೆಚ್ಚಿಸಿಕೊಂಡಿವೆ.
ಗ್ಲವ್ಸ್ ಪ್ರಿಯರಿಗೆ ತಿಳಿದಿರಲಿ
- ಕೈಗಳ ಅಳತೆಗೆ ತಕ್ಕಂತೆ ಖರೀದಿಸಿ.
- ವ್ಯಕ್ತಿತ್ವಕ್ಕೆ ಹೊಂದುವಂತದ್ದನ್ನು ಗುರುತಿಸಿ.
- ಉಡುಪಿಗೆ ಹೊಂದುವಂತದ್ದನ್ನು ಹಾಕಿಕೊಳ್ಳಿ.
- ಟೂ ವೀಲರ್ ಚಾಲನೆ ಮಾಡುವವರು ಫ್ಯಾನ್ಸಿ ಗ್ಲವ್ಸ್ ಧರಿಸಕೂಡದು.
(ಲೇಖಕಿ : ಫ್ಯಾಷನ್ ಪತ್ರಕರ್ತೆ
ಇದನ್ನೂ ಓದಿ| Dupatta Fashion | ಗ್ರ್ಯಾಂಡ್ ಲುಕ್‌ಗೆ ಸಾಥ್ ನೀಡುವ ಬಾಂದನಿ ದುಪಟ್ಟಾ