ಶೀಲಾ ಸಿ. ಶೆಟ್ಟಿ, ಬೆಂಗಳೂರು
ಚಳಿಗಾಲದ ಡ್ರೆಸ್‌ಕೋಡ್‌ಗೆ ಸಾಥ್ ನೀಡುವ ಸ್ಟೋಲ್ ಫ್ಯಾಷನ್ ಇದೀಗ ವಯಸ್ಸಿನ ಭೇದ-ಭಾವವಿಲ್ಲದೇ ಎಲ್ಲರನ್ನೂ ಆಕರ್ಷಿಸಿದೆ. ನೋಡಲು ವಿಭಿನ್ನ ಲುಕ್ ನೀಡುತ್ತಿದೆ. ವುಲ್ಲನ್, ಸಾಟಿನ್, ಕಾಟನ್, ಫರ್, ನೆಟ್ಟೆಡ್, ಡ್ರೆಡ್, ಶಾಲಿನಂತಹ ಸ್ಟೋಲ್‌ಗಳು ಇಂದು ಎಲ್ಲರ ಮನ ಗೆದ್ದಿವೆ. ಧರಿಸಿದಾಗ ವಿಭಿನ್ನ ಲುಕ್ ನೀಡುತ್ತವೆ. ಜತೆಗೆ ವಿಂಟರ್ ಲುಕ್‌ಗೆ ಸಾಥ್ ನೀಡುತ್ತಿವೆ.
“ಯಾವುದೇ ವಿಂಟರ್ ಡ್ರೆಸ್ ಜತೆಗೆ ಸ್ಟೋಲನ್ನು ಸುತ್ತಿಕೊಳ್ಳಿ, ಹೊದ್ದುಕೊಳ್ಳಿ, ತಲೆ ಮೇಲೆ ಬ್ಯಾಂಡ್‌ನಂತೆ ಕಟ್ಟಿಕೊಳ್ಳಿ, ಚೋಟುದ್ದದ ಸ್ಟೋಲನ್ನು ಹೇಗೆ ಹಾಕಿಕೊಂಡರೂ, ಇದು ಫ್ಯಾಷನ್ ಆಗತ್ತೆ. ನಿಮ್ಮ ಡ್ರೆಸ್ಸಿಂಗ್ ಸೆನ್ಸ್‌ಗೆ ಹೊಸ ಟಚ್ ನೀಡುತ್ತೆ. ನಯಾ ಲುಕ್ ನೀಡುತ್ತೆ” ಎನ್ನುತ್ತಾರೆ ಸ್ಟೈಲಿಸ್ಟ್ ರಿಯಾ.
ಮಾನಿನಿಯರನ್ನು ಸೆಳೆಯುತ್ತಿರುವ ಬಗೆಬಗೆಯ ಸ್ಟೋಲ್ಸ್
ಡಿಸೈನರ್ ದಿವಿಜಾ ಹೇಳುವಂತೆ, ಕಶ್ಮೀರಿ, ಸಿಲ್ಕ್ ಪಶಿಮಾ, ವುಲನ್, ಅನಿಮಲ್ ಪ್ರಿಂಟ್ಸ್ ಡಿಸೈನ್‌ನ ಸ್ಟೋಲ್‌ಗಗಳಿಗೆ ಇದೀಗ ಭಾರಿ ಡಿಮ್ಯಾಂಡ್ ಹೆಚ್ಚಂತೆ. ಜತೆಜತೆಗೆ ಹ್ಯಾಂಡ್‌ಮೇಡ್ ಡಿಸೈನರ್ ಸ್ಟೋಲ್ಸ್, ಶ್ಮೀರಿ ಪಶಿಮಾ, ಸಿಲ್ಕ್, ನಿಟ್ಟೆಡ್ ಸ್ಟೋಲ್ಸ್ ವೆರೈಟಿಗಳು ವಿವಾಹಿತರನ್ನು ಸೆಳೆಯುತ್ತಿವೆಯಂತೆ. ಸ್ಟ್ರೈಫ್ಸ್, ಪ್ರಿಂಟೆಡ್, ವುಲನ್, 3-ಡಿ ಒಪೆರಾ ಸ್ಟೋಲ್ಸ್ ಟೀನೇಜ್ ಹಾಗೂ ಯುವತಿಯರ ಫೆವ್‌ರೇಟ್ ಲಿಸ್ಟ್‌ಗೆ ಸೇರಿವೆಯಂತೆ. ನೋಡಲು ಸ್ಕಾರ್ಫ್ ಹಾಗೂ ಮಫ್ಲರ್‌ನಂತೆ ಕಾಣುವ ಸ್ಟೋಲ್‌ಗಳು ಲಭ್ಯ. ಇವು ಕ್ಯಾಶುವಲ್ ಉಡುಪುಗಳಿಗೆ ಮಾತ್ರ ಸೂಟ್ ಆಗುತ್ತವೆ. ಇನ್ನು ಹೈ ಫ್ಯಾಷನ್‌ಗೆ ಸಾಥ್ ನೀಡುವ ಬೆಲೆಬಾಳುವ ಕಶ್ಮೀರಿ ಶಾರ್ಟ್ ಶಾಲ್ಸ್ ಮಾದರಿಯ ಸ್ಟೋಲ್‌ಗಳು ಕೂಡ ಪ್ರಚಲಿತದಲ್ಲಿವೆ. ಸಾಮಾನ್ಯ ಹುಡುಗಿಯರು ಕೊಳ್ಳಬಹುದಾದ ಕೈಗೆಟಕುವ ಬೆಲೆಯಲ್ಲಿ ದೊರೆಯುವ ಸಿಲ್ಕ್, ಕಾಟನ್ ಸ್ಕಾರ್ಫ್‌ನಂತವು, ಚೋಟುದ್ದ ಶಾಲ್ಸ್ ನಂತಿರುವವು ಸ್ಟ್ರೀಟ್ ಶಾಪ್‌ಗಳಲ್ಲಿ ದೊರೆಯುತ್ತಿವೆ.
ವೆರೈಟಿ ಸ್ಟೋಲ್ ಧರಿಸಲು ಐಡಿಯಾ
ಸ್ಟೈಲಿಸ್ಟ್ ರಫಿಕ್ ಸ್ಟೋಲ್‌ಗಳ ಸ್ಟೈಲಿಂಗ್ ಟಿಪ್ಸ್ ಕೂಡ ನೀಡುತ್ತಾರೆ. ನಿಮ್ಮ ಔಟ್‌ಫಿಟ್‌ಗೆ ಸೂಟ್ ಆಗುವಂತಹ ಸ್ಟೋಲ್ಸ್ ಧರಿಸಿ. ಕತ್ತಿನ ಹಿಂಭಾಗದಿಂದ ಮುಂಭಾಗ ನೆಲ ಕಾಣುವಂತೆ ಹಾಕುವ ಬಂದನಾ ಸ್ಟೈಲ್, ಮುಂದಲೆಯ ಮೇಲಿನಿಂದ ಕೆಳಗೆ ಕಾಣುವಂತೆ ಗಂಟು ಹಾಕುವ ಹೆಡ್‌ಬ್ಯಾಂಡ್ ಸ್ಟೈಲ್, ಸುರಳಿಯಂತೆ ಸುತ್ತಿದ ಲೂಪ್ಡ್ ಸ್ಕಾರ್ಫ್ ಸ್ಟೈಲ್, ಶಾಲಿನಂತೆ ಹೊದ್ದ ಶಾಲ್ಡ್ ಶ್ರಗ್ ಸ್ಟೈಲ್, ಕತ್ತನ್ನು ಬಳಸಿ, ನೇತಾಡುವ ನೆಕ್ಕರ್‌ಚಿಫ್ ಸ್ಟೈಲ್, ಕ್ಯಾಶುವಲ್ ಔಟ್‌ಫಿಟ್‌ನ ಡ್ರೆಪ್ಡ್ ಸ್ಕಾರ್ಫ್‌ನಂತಹ ಫ್ಯಾಷನ್ ಸ್ಟೇಟ್‌ಮೆಂಟನ್ನು ಟ್ರೈ ಮಾಡಿ ನೋಡಿ.
ಧರಿಸುವವರ ಗಮನಕ್ಕೆ
- ಪ್ಯಾಂಟ್ ಹಾಗೂ ಸಿಂಪಲ್ ಕುರ್ತಾಗಳಿಗೆ ಬೆಸ್ಟ್ ಚಾಯ್ಸ್
- ಟಿಪಿಕಲ್ ಡ್ರೆಸ್ಗಳಿಗೆ ಹಾಕುವ ಮುನ್ನ ಸೂಟ್ ಆಗುವುದೇ ಗಮನಿಸಿ.
- ಇದಕ್ಕೆ ಮ್ಯಾಚ್ ಆಗುವ ಜಂಕ್ ಆಕ್ಸೆಸರೀಸ್ ಧರಿಸಿ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ| Star holiday Fashion | ಬಾಲಿ ಹಾಲಿಡೇ ಫ್ಯಾಷನ್‌ಗೆ ಸೈ ಎಂದ ನಟಿ ಹರ್ಷಿಕಾ ಪೊಣಚ್ಚ