ಶೀಲಾ ಸಿ. ಶೆಟ್ಟಿ, ಬೆಂಗಳೂರು
ಚಳಿಗಾಲದ ಸೀಸನ್ಗೆ ಮಕ್ಕಳನ್ನು ಬೆಚ್ಚಗಿಡುವ ನಾನಾ ಬಗೆಯ ಹೂಡಿಗಳು (Winter Kids Hoodie Fashion) ಎಂಟ್ರಿ ನೀಡಿವೆ. ಚಿಣ್ಣರು ಧರಿಸಿದಾಗ ಆರಾಮ ಎಂದೆನಿಸುವ ಹಾಗೂ ಬೆಚ್ಚಗಿಡುವುದರೊಂದಿಗೆ ನೋಡಲು ಕ್ಯೂಟ್ ಎನಿಸುವ ಹೂಡಿಗಳು ಕಾಲಿಟ್ಟಿವೆ. ಯುವಕ-ಯುವತಿಯರು ಸ್ಟೈಲಿಶ್ ಆಗಿ ಧರಿಸುವಂತಹ ಡಿಸೈನ್ಗಳಲ್ಲಿ ಮಕ್ಕಳಿಗೂ ಆಗಮಿಸಿವೆ.
ಟ್ರೆಂಡ್ನಲ್ಲಿ ಲಭ್ಯವಿರುವ ಡಿಸೈನ್ಸ್
ಜಿಪ್ ಹೂಡಿ, ಟೀ ಶರ್ಟ್ ಸ್ಟೈಲ್ ಹೂಡಿ, ವುಲ್ಲನ್ ಹೂಡಿ, ಪ್ಲೀಝ್ ಹೂಡಿ, ಪಾಲಿಸ್ಟಾರ್ ಹೂಡಿ, ಕಾರ್ಟೂನ್ ಕ್ಯಾರೆಕ್ಟರ್ ಪ್ರಿಂಟ್ಸ್ ಹೂಡಿ ಸೇರಿದಂತೆ ನಾನಾ ಬಗೆಯವು ಮಾರುಕಟ್ಟೆಗೆ ಕಾಲಿಟ್ಟಿವೆ. ಇವುಗಳಲ್ಲಿ ಹುಡುಗಿಯರಿಗಾಗಿ ಯೂನಿಕಾರ್ನ್ ಹಾಗೂ ಬಾರ್ಬಿ ಪ್ರಿಂಟ್ಸ್ ಇರುವಂತವು ಹೆಚ್ಚು ಟ್ರೆಂಡಿಯಾಗಿವೆ. ಇನ್ನು ಹುಡುಗರ ಹೂಡಿಗಳಲ್ಲಿ ಸೂಪರ್ ಹೀರೋ ಕಾರ್ಟೂನ್ ಪ್ರಿಂಟ್ಸ್, ಆವೆಂಜರ್ಸ್ ಪ್ರಿಂಟ್ಸ್ ಸೇರಿದಂತೆ ಡಾರ್ಕ್ ಕಲರ್ನವು ಚಾಲ್ತಿಯಲ್ಲಿವೆ ಎನ್ನುತ್ತಾರೆ ಕಿಡ್ಸ್ ಸ್ಟೈಲಿಸ್ಟ್ ರಿಯಾ. ಅವರ ಪ್ರಕಾರ, ಮಕ್ಕಳ ಹೂಡಿಗಳಲ್ಲಿ ಬ್ರಾಂಡೆಡ್ನವು ಬಲು ದುಬಾರಿ. ಲೋಕಲ್ ಬ್ರಾಂಡ್ನವು ಮಾತ್ರ ಕೈಗೆಟಕುವ ಬೆಲೆಯಲ್ಲಿ ದೊರಕುತ್ತವಂತೆ.
ಫ್ಯಾಬ್ರಿಕ್ಗೆ ಪ್ರಾಮುಖ್ಯತೆ ನೀಡಿ
ಮಕ್ಕಳ ಹೂಡಿಗಳು ಉತ್ತಮ ಫ್ಯಾಬ್ರಿಕ್ ಹೊಂದಿರಬೇಕು. ಫಿನಿಶಿಂಗ್ ಚೆನ್ನಾಗಿರಬೇಕು. ವಾಸಿಸುವ ಸ್ಥಳದ ಹವಾಮಾನಕ್ಕೆ ಹೊಂದುವಂತಿರಬೇಕು. ಇದು ನೋಡಲು ಸ್ಟೈಲಿಶ್ ಆಗಿ ಕಂಡರೇ ಸಾಲದು, ದೇಹವನ್ನು ಬೆಚ್ಚಗಿಡಬೇಕು. ಚಳಿಗಾಲಕ್ಕೆ ಬೆಚ್ಚಗಿಡುವ ವುಲ್ಲನ್, ಪಾಲಿಸ್ಟಾರ್, ಪ್ಲೀಸ್ ಫ್ಯಾಬ್ರಿಕ್ನ ಹೂಡಿಗಳನ್ನೇ ಆಯ್ಕೆ ಮಾಡಿ.
ದೊಗಲೆ ಹೂಡಿ ಬೇಡ
ಮಕ್ಕಳಿಗೆ ತೀರಾ ದೊಗಲೆ ಹೂಡಿ ಆಯ್ಕೆ ಬೇಡ. ತೀರಾ ಫಿಟ್ ಆಗಿರುವುದು ಬೇಡ. ದೊಗಲೆಯಾಗಿದ್ದಲ್ಲಿ ಗಾಳಿಯಾಡಬಹುದು ಚಳಿಯಾಗಬಹುದು. ಇನ್ನು ಟೈಟಾಗಿದ್ದಲ್ಲಿ ಮೈ ರ್ಯಾಶಸ್ ಆಗಬಹುದು. ಉಸಿರುಗಟ್ಟಿಸಬಹುದು. ಹಾಗಾಗಿ ಬ್ರಿತಬಲ್ ಹೂಡಿಗಳನ್ನು ಟ್ರಯಲ್ ನೋಡಿ, ಮಕ್ಕಳಿಗೆ ಹಾಕಿಸಿ, ನೋಡಿ ಪರಿಶೀಲಿಸಿ ಕೊಳ್ಳಿ ಎಂದು ಸಲಹೆ ನೀಡುತ್ತಾರೆ ಕಿಡ್ಸ್ ಸ್ಟೈಲಿಸ್ಟ್ಸ್.
ಮಕ್ಕಳ ಹೂಡಿ ಖರೀದಿಸುವಾಗ ಗಮನದಲ್ಲಿರಲಿ
- ಮಕ್ಕಳಿಗೆ ಯೂನಿಸೆಕ್ಸ್ ಡಿಸೈನ್ ಆಯ್ಕೆ ಬೇಡ.
- ಬೆಚ್ಚಗಿರುವಂತಹದ್ದನ್ನು ಆಯ್ಕೆ ಮಾಡಿ.
- ಪಾಕೆಟ್ಗಳಿರುವಂತದ್ದನ್ನು ಖರೀದಿಸಿ. ಚಿಣ್ಣರಿಗೆ ಇಷ್ಟವಾಗುವುದು.
- ಕೋಟ್ನಂತವಾದಲ್ಲಿ ನಾನಾ ಉಡುಪುಗಳಿಗೆ ಧರಿಸಬಹುದು.
ಇದನ್ನೂ ಓದಿ: Winter Fashion 2023-2024: ಚಳಿಗಾಲದ ಬೆಚ್ಚನೆಯ ಫ್ಯಾಷನ್ಗೆ ಸೈ ಎನ್ನಿ!