Site icon Vistara News

Winter Woolen Accessories: ವಿಂಟರ್‌ ಸೀಸನ್‌ನಲ್ಲಿ ಸೃಷ್ಟಿಯಾದ ಹ್ಯಾಂಡ್‌ಮೇಡ್‌ ವುಲ್ಲನ್‌ ಆಕ್ಸೆಸರೀಸ್‌

Winter Woolen Accessories

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಹ್ಯಾಂಡ್‌ಮೇಡ್‌ ವುಲ್ಲನ್‌ ಬ್ಯಾಂಗಲ್ಸ್‌, ಕೈ ಉಂಗುರಗಳು ಹಾಗೂ ಕಿವಿಯೊಲೆಗಳು ಈ ಸೀಸನ್‌ನಲ್ಲಿ ಕಲಾತ್ಮಕ ಡಿಸೈನ್‌ನಲ್ಲಿ ಕಾಣಿಸಿಕೊಳ್ಳುತ್ತಿವೆ. ನೋಡಲು ಕಲರ್‌ಫುಲ್‌ ಆಗಿರುವ ಇವು, ಕೈಗಳಿಗೆ ಬೆಚ್ಚನೆಯ ಅನುಭವ ನೀಡುವುದರ ಜತೆಗೆ ಕಲಾತ್ಮಕ ಲುಕ್‌ ನೀಡುತ್ತಿವೆ. ದೇಸಿ ಫ್ಯಾಷನ್‌ ಆಕ್ಸೆಸರೀಸ್‌ (Winter Woolen Accessories) ಪ್ರಿಯರಿಗೆ ಇವು ಪ್ರಿಯವಾಗುತ್ತಿವೆ.

ಕಲರ್‌ಫುಲ್‌ ವುಲ್ಲನ್‌ ಬ್ಯಾಂಗಲ್ಸ್‌

ನಾನಾ ವರ್ಣದ ವುಲ್ಲನ್‌ ದಾರದಿಂದ ನಿಟ್ಟಿಂಗ್‌ ಮಾಡಿರುವ ಹ್ಯಾಂಡ್‌ಮೇಡ್‌ ಬ್ಯಾಂಗಲ್ಸ್ ದೇಸಿ ಫ್ಯಾಷನ್‌ ಆಕ್ಸೆಸರೀಸ್‌ (Winter Woolen Accessories) ಲಿಸ್ಟ್‌ನಲ್ಲಿ ಸೇರಿವೆ. ನೋಡಲು ಆಕರ್ಷಕವಾದ ಡಿಸೈನ್‌ಗಳಲ್ಲಿವೆ. ಸಿಂಗಲ್‌ ಕಲರ್‌, ಡಬಲ್‌ ಕಲರ್‌, ಮಲ್ಟಿಕಲರ್‌, ರೇನ್‌ ಬೋ ಕಲರ್‌ ವುಲ್ಲನ್‌ ದಾರಗಳನ್ನು ಬಳಸಿ ಕಲಾತ್ಮಕವಾಗಿ ಹಾಗೂ ಕ್ರಿಯಾತ್ಮಕವಾಗಿ ಸಿದ್ಧಪಡಿಸಲಾಗಿರುತ್ತದೆ.

ವುಲ್ಲನ್‌ ಕಿವಿಯೊಲೆಗಳು

ನೋಡಲು ಕಲರ್‌ಫುಲ್‌ ಆಗಿರುವ ಕಿವಿಯೊಲೆಗಳು, ಬ್ಯಾಂಗಲ್‌ಗಳಿಗೆ ಮ್ಯಾಚ್‌ ಮಾಡಿ ಧರಿಸಬಹುದು. ಸ್ಟಡ್ಸ್‌ ಸೇರಿದಂತೆ ಹ್ಯಾಂಗಿಂಗ್ಸ್ ಶೈಲಿಯವನ್ನು ಆಯ್ಕೆ ಮಾಡಿಕೊಳ್ಳಬಹುದು.

ವುಲ್ಲನ್‌ ಫಿಂಗರ್‌ ರಿಂಗ್‌ ಡಿಸೈನ್ಸ್

ಇನ್ನು, ವುಲ್ಲನ್‌ ಫಿಂಗರ್‌ ರಿಂಗ್‌ಗಳಲ್ಲಿ ಇದೀಗ ಹೂವು, ಹಣ್ಣು, ರಂಗೋಲಿ ಡಿಸೈನ್‌, ಪೋಂ ಪೋಂ ಡಿಸೈನ್‌, ಸ್ಟಾರ್‌, ಮೂನ್‌ ಹೀಗೆ ಕ್ರಿಯಾತ್ಮಕವಾಗಿ ವುಲ್ಲನ್‌ನಲ್ಲಿ ವಿನ್ಯಾಸಗೊಳಿಸಿರುವ ಸಾಫ್ಟ್ ಫಿಂಗರ್‌ ರಿಂಗ್‌ಗಳು ಸಾಮಾನ್ಯವಾಗಿವೆ.

ಸೋಷಿಯಲ್‌ ಮೀಡಿಯಾ ಪೇಜ್‌ಗಳಲ್ಲಿ ಮಾರಾಟ

‘ವುಲ್ಲನ್‌ ಆಕ್ಸೆಸರೀಸ್‌ಗಳು ಹ್ಯಾಂಡ್‌ಮೇಡ್‌, (Winter Woolen Accessories) ಇದು ದೇಸಿ ಲುಕ್‌ ನೀಡುತ್ತದೆ. ಅದರಲ್ಲೂ ಟ್ರೆಡಿಷನಲ್‌ ಸ್ಟೈಲಿಂಗ್‌ಗೆ ಸಾಥ್‌ ನೀಡುತ್ತವೆ. ಮ್ಯಾಚಿಂಗ್‌ ಕೂಡ ಮಾಡಬಹುದು” ಎನ್ನುತ್ತಾರೆ ಹ್ಯಾಂಡ್‌ಮೇಡ್‌ ಆಕ್ಸೆಸರೀಸ್‌ ಕಲಾವಿದೆ ತಾರಿಣಿ. ಅವರ ಪ್ರಕಾರ, ಇವುಗಳನ್ನು ಕಸ್ಟಮೈಸ್ಡ್ ಕೂಡ ಮಾಡಬಹುದು. ಬ್ಯೂಟಿ ಬ್ಲಾಗ್‌ ಹಾಗೂ ಅನೇಕ ಸೋಷಿಯಲ್‌ ಮೀಡಿಯಾಗಳಲ್ಲಿ ಇವುಗಳನ್ನು ಸಿದ್ಧಪಡಿಸುವ ಕಲಾವಿದರಿದ್ದಾರೆ. ಆರ್ಡರ್‌ ಮೇರೆಗೆ ಸಿದ್ಧಪಡಿಸಿಕೊಡುತ್ತಾರೆ. ಮನೆ ಬಾಗಿಲಿಗೆ ತಲುಪಿಸುತ್ತಾರೆ. ಆನ್‌ಲೈನ್‌ನಲ್ಲಿ ಆರ್ಡರ್‌ ಮೂಲಕ ತರಿಸಿಕೊಳ್ಳಬಹುದು” ಎನ್ನುತ್ತಾರೆ.

ನೀವೂ ಸಿದ್ಧಪಡಿಸಬಹುದು

ಆನ್‌ಲೈನ್‌ನಲ್ಲಿ ಈ ಕುರಿತ ಟ್ಯೂಷನ್‌ ನೀಡುವ ಯೂಟ್ಯೂಬ್‌ ಚಾನೆಲ್‌ಗಳಿವೆ. ಅವುಗಳನ್ನು ನೋಡಿ ನೀವು ಸಿದ್ಧಪಡಿಸಬಹುದು. ವುಲ್ಲನ್‌ ಆಕ್ಸೆಸರೀಸ್‌ಗಳನ್ನು (Winter Woolen Accessories) ನಿಟ್ಟಿಂಗ್‌ನಲ್ಲಿ ಹೇಗೆ ಮಾಡಬಹುದು ಎಂಬುದನ್ನು ತಿಳಿದುಕೊಳ್ಳಬಹುದು. ಈ ಕುರಿತ ಸಾಕಷ್ಟು ವಿಡಿಯೋಗಳು ಯ್ಯೂಟೂಬ್‌ನಲ್ಲಿ ಲಭ್ಯವಿದೆ ಎನ್ನುತ್ತಾರೆ ವುಲ್ಲನ್‌ ಹ್ಯಾಂಡ್‌ಮೇಡ್‌ ಆಕ್ಸೆಸರೀಸ್‌ (Winter Woolen Accessories) ಕಲಾವಿದೆ ಚಾಯಾ ಹಾಗೂ ರಾಧಾ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Winter Fashion 2023 : ಚಳಿಗಾಲದಲ್ಲಿ ಜೆನ್‌ ಜಿ ಹುಡುಗಿಯರ ಮನ ಸೆಳೆದ ವುಲ್ಲನ್‌ ಕ್ರಾಪ್‌ ಟಾಪ್ಸ್

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version