Site icon Vistara News

World Hypertension Day | ಹೈಪರ್‌ಟೆನ್ಷನ್‌ ಗೆಲ್ಲಲು 5 ಸೂತ್ರಗಳು

ಹೈಪರ್‌ಟೆನ್ಷನ್‌ ಎನ್ನುವುದು ಇತ್ತೀಚೆಗೆ ಜನರಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಸಮಸ್ಯೆ. ಅನೇಕರು ಈ ಸಮಸ್ಯೆಯ ಬಗ್ಗೆ ಅರಿವಿಲ್ಲದೇ ಒದ್ದಾಡುತ್ತಾರೆ. ಕೆಲವೊಮ್ಮೆ ಅನವಶ್ಯಕ ಸಂಭವಿಸದ ವಿಷಯನ್ನು ಮನಸ್ಸಿನಲ್ಲೇ ಕಲ್ಪಿಸಿಕೊಂಡು ಟೆನ್ಷನ್‌ ಮಾಡಿಕೊಳ್ಳುವವರು ಅನೇಕರಿದ್ದಾರೆ.

ವಿದ್ಯಾರ್ಥಿಗಳು, ಯುವಕ/ಯುವತಿಯರಿಗೆ ಈ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.

ಹೀಗೇ ಪಟ್ಟಿ ಮುಂದುವರಿಯುತ್ತದೆ.

ಈ ರೀತಿ ಎಲ್ಲದಕ್ಕೂ ಟೆನ್ಷನ್‌ ಮಾಡಿಕೊಂಡರೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಈ ಬಗ್ಗೆ ಅನೇಕರಿಗೆ ಕಾಳಜಿಯಿಲ್ಲ. ಹೈಪರ್‌ಟೆನ್ಷನ್‌ ಇಂದು ಕಿಡ್ನಿ ಸಮಸ್ಯೆ, ಹೃದಯಾಘಾತ, ಪಾರ್ಶ್ವವಾಯುವಿನಂತಹ ಸಮಸ್ಯೆಗಳಿಗೆ ಕಾರಣ ಆಗಬಹುದು. ಈ ಹೈಪರ್‌ಟೆನ್ಷನ್‌ ವಿಷಯ ಬಗ್ಗೆಯೂ ಟೆನ್ಷನ್‌ ಮಾಡಿಕೊಳ್ಳುವ ಅವಶ್ಯಕತೆಯಿಲ್ಲ. ಈ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಮೇ 17ರಂದು ವಿಶ್ವ ಹೈಪರ್‌ಟೆನ್ಷನ್‌ ದಿನ ಎಂದು ಆಚರಿಸಲಾಗಿದೆ. ಈ ಸಮಸ್ಯೆಯ ಬಗ್ಗೆ ಕಾಳಜಿ ವಹಿಸಲು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಈ ದಿನದಂದು ನಡೆಯುತ್ತದೆ.

ಟೆನ್ಷನ್‌ ದೂರ ಮಾಡಿಕೊಂಡು ನೆಮ್ಮದಿಯನ್ನು ಪಡೆಯಲು ಅನೇಕ ದಾರಿಗಳಿವೆ. ಸದ್ಯ ಈ 5 ಮಾರ್ಗಗಳನ್ನು ಪಾಲಿಸಿದರೆ ಸಮಾಧಾನದ ಬದುಕು ನಿಮ್ಮದಾಗಬಹುದು.

ಸಮಾಧಾನಕರ ಬದುಕಿಗೆ 5 ಮಾರ್ಗಗಳು

  1. ಯೋಗಾಸನ:
    ಯೋಗಾಸನ ಎನ್ನುವುದು ಪ್ರಾಚೀನ ಭಾರತದ ಶ್ರೇಷ್ಠ ವಿಷಯಗಳಲ್ಲಿ ಒಂದು. ನೀವು ದೈಹಿಕವಾಗಿ ಗಟ್ಟಿಯಾಗಿರಲು ಅತ್ಯತ್ತಮ ಮಾರ್ಗ ಯೋಗಾಸನಗಳನ್ನು ಮಾಡುವುದು. ಇತ್ತೀಚಿನ ದಿನಗಳಲ್ಲಿ ಯುವಕ/ಯುವತಿಯರು ದೈಹಿಕ ಶ್ರಮಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲು ಅವಕಾಶವಾಗುವುದಿಲ್ಲ ಎಂದು ಅಲಕ್ಷ್ಯ ಮಾಡುತ್ತಾರೆ. ಆದರೆ, ಅದು ಬಹಳ ಮುಖ್ಯ. ಯೋಗಾಸನಗಳು ದೈಹಿಕವಾಗಿ ಹಾಗೂ ಮಾನಸಿಕವಾಗಿ ನಿಮ್ಮನ್ನು ವೃದ್ಧಿಗೊಳಿಸುತ್ತವೆ. ಉದಾಹರಣೆಗೆ, ಉತ್ಥಾನಾಸನ, ಪಶ್ಚಿಮೋತ್ಥಾಸನ, ಅಧೋಮುಖ ಶ್ವಾನಾಸನ, ಸೇತುಬಂಧಾಸನ ಈ ಕೆಲವು ಆಸನಗಳು ದೇಹದಲ್ಲಿನ ರಕ್ತದೊತ್ತಡವನ್ನು ಸಮತೋಲದಲ್ಲಿಡಲು ಅನುಕೂಲ ಮಾಡುತ್ತವೆ.
  2. ಧ್ಯಾನ:
    ಉದ್ವೇಗಕ್ಕೆ ಒಳಗಾದ ಮನಸ್ಸನ್ನು ಶಾಂತಗೊಳಿಸಲು ಬಹು ಮಹತ್ವದ ಮಾರ್ಗವೆಂದರೆ ಅದು ಧ್ಯಾನ. ಸಮಾಧಾನಕರವಾದ ವಾತಾವರಣದಲ್ಲಿ, ಸರಿಯಾದ ಭಂಗಿಯಲ್ಲಿ ಆಸೀನರಾಗಿ, ಕಣ್ಣುಗಳನ್ನು ಮುಚ್ಚಿ, ಪ್ರಪಂಚದ ಆಗುಹೋಗುಗಗಳ ಬಗ್ಗೆ ಲಕ್ಷ್ಯ ಹರಿಸದೇ, ಕೆಲವೇ ಕೆಲವು ಕ್ಷಣವಾದರೂ ಮನಸ್ಸನ್ನು ಒಂದು ನಿಯಂತ್ರಣಕ್ಕೆ ತರುವ ಪ್ರಯತ್ನವೇ ಧ್ಯಾನ. “ಓಂ”ಕಾರ ಅಥವಾ ನಿಮ್ಮಿಷ್ಟದ ಪ್ರಾರ್ಥನೆಯನ್ನು ಸಣ್ಣದಾಗಿ ಹೇಳಿದರೆ ಮನಸ್ಸಿಗೆ ಏಕಾಗ್ರತೆ ಮೂಡುತ್ತದೆ. ಇದರಿಂದ ಟೆನ್ಷನ್‌ ಕಡಿಮೆಯಾಗಿ ಉತ್ಸಾಹ ಹೆಚ್ಚಾಗುತ್ತದೆ.
  3. ಸಂಗೀತ:
    ಒಂದು ಸುಂದರ ಹಾಡು, ಮನಸ್ಸಿನ ಭಾವನೆಯ ಮೇಲೆ ಪರಿಣಾಮ ಬೀರುತ್ತದೆ. ಅನುಮಾನವಿದ್ದರೆ ಒಮ್ಮೆ ಚಿಕ್ಕವಯಸ್ಸಿನಲ್ಲಿ ಮಲಗಲು ಒದ್ದಾಡುತ್ತಿದ್ದಾಗ ಅಮ್ಮ ಹಾಡಿದ ಜೋಗುಳವನ್ನು ನೆನಪಿಸಿಕೊಳ್ಳಿ. ಸುಮಧುರ ಸಂಗೀತವು ಮನಸ್ಸಿನ ಮೇಲೆ ಗಾಢವಾದ ಪರಿಣಾಮ ಬೀರುತ್ತದೆ. ಟೆನ್ಷನ್‌ ಹೆಚ್ಚಾದಾಗ, ಯಾವುದಾದರೂ ಶಾಂತವಾದ ವಾತಾವರಣದಲ್ಲಿ ನಿಮ್ಮಿಷ್ಟದ ಮಧುರವಾದ ಸಂಗೀತವನ್ನು ಕೇಳಿದರೆ ಮನಸ್ಸು ಕೂಡ ಶಾಂತವಾಗಬಹುದು.
  4. ಸಾಹಿತ್ಯ:
    ಜೀವನದಲ್ಲಿ ಸೋಲು ಅನುಭವಿಸಿದ ಭಾವದಿಂದ ಮುಂದೆ ಏನು ಮಾಡುವುದು ಎಂಬ ಚಿಂತೆಯಲ್ಲಿ ಹೈಪರ್‌ಟೆನ್ಷನ್‌ ಸಮಸ್ಯೆ ಉಂಟಾಗುವ ಸಂದರ್ಭವಿರುತ್ತದೆ. ಆಗ ಒಂದು ಒಳ್ಳೆಯ ಸಾಹಿತ್ಯ ಕೃತಿಯನ್ನು ಓದುವುದರಿಂದ ಟೆನ್ಷನ್‌ ಕಡಿಮೆಯಾಗಿ ಜೀವನಕ್ಕೆ ಹೊಸ ಸ್ಫೂರ್ತಿ ದೊರಕಬಹುದು. ನಿಮ್ಮಿಷ್ಟದ ಕಥೆ, ಕಾದಂಬರಿ, ಕವಿತೆ ಅಥವಾ ಯಾವುದಾದರೂ ಸ್ಫೂರ್ತಿದಾಯಕ ಪುಸ್ತಕ ಅಥವಾ ಲೇಖನ ಕೂಡ ನಿಮ್ಮ ಟೆನ್ಷನ್‌ ದೂರ ಮಾಡುತ್ತದೆ.
  5. ಸಂಖ್ಯಾ ಥೆರಪಿ
    ಇದೊಂದು ಹೊಸ ದಾರಿ. ಸಂಖ್ಯೆಗಳಿಂದ ಕೂಡ ನಿಮ್ಮ ಟೆನ್ಷನ್‌ ದೂರ ಮಾಡಬಹುದು. ಇತ್ತೀಚಿನ ತಜ್ಞರು ಕಂಡುಹಿಡಿದಿರುವ ಹೊಸ ಉಪಾಯ ಇದು. ನಿಮ್ಮ ಎಡಗೈ ಮುಂಗೈ ಮೇಲೆ ನೀಲಿ ಶಾಯಿಯ ಪೆನ್‌ನಿಂದ ಒಂದಿಷ್ಟು ನಿರ್ದಿಷ್ಟ ಸಂಖ್ಯೆಯನ್ನು ಬರೆಯುವುದು. ಹೀಗೆ ಬರೆಯುವುದರಿಂದ ಟೆನ್ಷನ್‌ ಕಡಿಮೆಯಾಗುತ್ತದೆ ಎಂದು ತಜ್ಞರು ತಿಳಿಸಿದ್ದಾರೆ. “11 84 744” ಅಥವಾ “88 63 292” ಬರೆಯಬಹುದು. ಇದರಿಂದ ರಕ್ತದ ಒತ್ತಡ ಸಮತೋಲನಕ್ಕೆ ಬರುತ್ತದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ನಡುರಾತ್ರಿ ಏನಾಗುತ್ತೆ ಹೃದಯಕ್ಕೆ? ಜಯದೇವ ಆಸ್ಪತ್ರೆ ಹೊರಗೆಡಹಿದ ಸತ್ಯ

Exit mobile version