ಶೀಲಾ ಸಿ. ಶೆಟ್ಟಿ, ಬೆಂಗಳೂರು
ಯೋಗ ಮಾಡುವಾಗ ಧರಿಸುವ ಕಂಫರ್ಟಬಲ್ ಫ್ಯಾಷನ್‌ವೇರ್‌ಗಳು ಇಂದು ಎಲ್ಲಾ ವಯೋಮಾನದವರನ್ನು ಸೆಳೆದಿವೆ. ನಾನಾ ಬಗೆಯ ಯೋಗ ದಿರಸುಗಳು ಮಾರುಕಟ್ಟೆಗೆ ಕಾಲಿಟ್ಟಿದ್ದು, ಒಂದಕ್ಕಿಂತ ಒಂದು ಭಿನ್ನವಾಗಿವೆ. ಪಾಶ್ಚಿಮಾತ್ಯ ಶೈಲಿಯ ಕ್ಯಾಶುವಲ್ ಲುಕ್ ನೀಡುವ ಇವು ಪುರುಷರು ಹಾಗೂ ಮಹಿಳೆಯರಿಗೆ ಪ್ರತ್ಯೇಕ ವಿನ್ಯಾಸದಲ್ಲಿ ಬಿಡುಗಡೆಗೊಂಡಿವೆ
ಮೊದಲೆಲ್ಲಾ ಕುರ್ತಾ, ಇಲ್ಲವೇ ಯಾವುದೋ ಒಂದು ಟೀ ಶರ್ಟ್ ಹಾಗೂ ಪ್ಯಾಂಟ್ ಧರಿಸಿ ಯೋಗ ಮಾಡುತ್ತಿದ್ದದ್ದು ಸಾಮಾನ್ಯವಾಗಿತ್ತು. ಆದರೆ, ಈಗ ಕಾಲ ಬದಲಾಗಿದೆ. ಈ ಚಿತ್ರಣ ಕಂಪ್ಲೀಟ್ ಬದಲಾಗಿದೆ. ಯೋಗ ಪ್ರಿಯರ ದಿನಚರಿಗೆ ಸೂಟ್ ಆಗುವಂತೆ ನಾನಾ ವರ್ಣಗಳಲ್ಲಿ, ವಿನ್ಯಾಸಗಳಲ್ಲಿ ಈ ಔಟ್‌ಫಿಟ್ಸ್ ಆಗಮಿಸಿದ್ದು, ನೋಡಲು ಕೂಡ ಅತ್ಯಾಕರ್ಷಕವಾಗಿವೆ.
ಯೋಗ ಎಕ್ಸ್‌ಪರ್ಟ್ ಸುಷ್ಮಾ ಸೂಡಾ ಹೇಳುವಂತೆ: ಯೋಗ ಫ್ಯಾಷನ್‌ವೇರ್‌ಗಳು ಇಂದು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತಮ್ಮದೇ ಆದ ಸ್ಥಾನ ಕಲ್ಪಿಸಿಕೊಂಡಿದ್ದು, ಇತರೇ ದಿರಿಸುಗಳಂತೆಯೇ ತಮ್ಮದೇ ಆದ ಗ್ರಾಹಕರನ್ನು ಹೊಂದಿವೆ. ಬಹುತೇಕ ದಿನಚರಿಗಳಲ್ಲಿ ಒಂದಾದ ಯೋಗಕ್ಕೂ ಪ್ರಾಮುಖ್ಯತೆ ನೀಡುವವರು ಹೆಚ್ಚಾದಂತೆ ಯೋಗ ಫ್ಯಾಷನ್‌ವೇರ್‌ಗಳ ವಿನ್ಯಾಸ ಹಾಗೂ ವೆರೈಟಿ ಅಧಿಕಗೊಂಡಿದೆ.
ಗ್ಲಾಮರಸ್ ಯೋಗ ಔಟ್‌ಫಿಟ್
ಅಂತಾರಾಷ್ಟ್ರೀಯ ಮಟ್ಟದಲ್ಲಿ ಯೋಗ ಪ್ರೇಮಿಗಳು ಹೆಚ್ಚಾದಂತೆ ಗ್ಲಾಮರಸ್ ಲುಕ್ ನೀಡುವ ಯೋಗದ ಔಟ್‌ಫಿಟ್‌ಗಳು ಹೆಚ್ಚು ಪ್ರಚಲಿತಗೊಂಡಿವೆ. ಫಿಟ್ಟಾಗಿ ಕೂರುವ ಕ್ರಾಪ್ ಟಾಪ್‌ನಂತಹ ಸ್ಲಿವ್‌ಲೆಸ್ ಟಾಪ್, ಲೆಗ್ಗಿಂಗ್ಸ್‌ನಂತಿರುವ ಬ್ರಿಥೆಬಲ್ ಪ್ಯಾಂಟ್‌ಗಳು ನೈಲಾನ್, ಪಾಲಿಸ್ಟರ್, ಸ್ಪಾಂಡೆಕ್ಸ್ ಹಾಗೂ ಕಾಟನ್ ಫ್ಯಾಬ್ರಿಕ್‌ನಲ್ಲಿ ಹೆಚ್ಚಾಗಿ ದೊರೆಯುತ್ತಿದ್ದು, ಹೆಚ್ಚು ಬೇಡಿಕೆ ಸೃಷ್ಟಿಸಿಕೊಂಡಿವೆ.
ಮಿಕ್ಸ್-ಮ್ಯಾಚ್ ಯೋಗ ಫ್ಯಾಷನ್
ಯೋಗ ಫ್ಯಾಷನ್‌ವೇರ್‌ನಲ್ಲಿ ಧರಿಸುವ ಪ್ಯಾಂಟ್‌ಗೆ ಮಿಕ್ಸ್-ಮ್ಯಾಚ್ ಮಾಡುವ ಟ್ರೆಂಡ್ ಚಾಲ್ತಿಯಲ್ಲಿದೆ. ಕ್ರಾಪ್ಡ್ ಟ್ಯಾಂಕ್ ಟಾಪ್ಸ್, ಶಾರ್ಟ್ ಟೀ ಶರ್ಟ್, ಸ್ಲಿಮ್ ಫಿಟ್ ಟೀ ಶರ್ಟ್ಗಳು ಧರಿಸುವುದು ಸಾಮಾನ್ಯವಾಗಿದೆ. ಇದೀಗ ಪಾಸ್ಟೆಲ್ ಶೇಡ್‌ಗಳು ಹೆಚ್ಚು ಜನಪ್ರಿಯಗೊಂಡಿದ್ದು, ಅದರೊಂದಿಗೆ ಯುವತಿಯರು ಮಿಲಿಟರಿ ಸ್ಟೈಲ್ ಯೋಗ ಔಟ್‌ಫಿಟ್ಸ್, ಫ್ಲೋರಲ್ ಯೋಗ ಸೆಟ್, ಹಾಲ್ಟರ್ ಟ್ಯಾಂಕ್ ಟಾಪ್, ರಾಸಾ ಟಾಪ್, ಹೈ ವೇಸ್ಟ್ ಲೆಗ್ಗಿಂಗ್ಸ್, ಡಿಸ್ಕೋ ಹೈ ವೇಸ್ಟ್ ಪ್ಯಾಂಟ್ಸ್, ಟ್ವಿಸ್ಟ್ ಬ್ಯಾಕ್ ಟೀ ಶರ್ಟ್, ರೈಡರ್ಸ್ ಲೆಗ್ಗಿಂಗ್ಸ್, ಒಪನ್ ಬ್ಯಾಕ್ ಟೀ ಶರ್ಟ್, ಬಾಡಿ ಸೂಟ್ಸ್, ಹಾರೆಮ್ ಪ್ಯಾಂಟ್ಸ್, ಮೆಶ್ ಕಟ್‌ಔಟ್ಸ್ ಪ್ಯಾಂಟ್ಸ್ ಮೋಹ ಪಾಶಕ್ಕೆ ಒಳಗಾಗಿದ್ದಾರೆ.
ಪುರುಷರ ಯೋಗ ಔಟ್‌ಫಿಟ್ಸ್
ಇನ್ನು ಪುರುಷರ ಯೋಗ ಔಟ್‌ಫಿಟ್ ವೆರೈಟಿಯಲ್ಲಿ ಎಂದಿನಂತೆ ಈಗಲೂ ಅತಿ ಹೆಚ್ಚು ಜನಪ್ರಿಯವಾಗಿರುವುದು ಯೋಗ ಶಾರ್ಟ್ಸ್, ವೆಂಟಿಲೇಷನ್ ಟ್ಯಾಂಕ್ ಟೀ ಶರ್ಟ್, ಇಂಟೆಂಟ್ ಪ್ಯಾಂಟ್, ಯೋಗ ಸ್ವೆಟ್ ಪ್ಯಾಂಟ್, ಕಂಪ್ರೆಶನ್ ಪ್ಯಾಂಟ್ಸ್, ಯೋಗ ಜಾಗರ್ಸ್.
ಹೀಗಿರಲಿ ಯೋಗ ಔಟ್‌ಫಿಟ್
ಯೋಗ ಪ್ರಿಯರು ಟ್ರೆಂಡಿ ಔಟ್‌ಫಿಟ್‌ಗಳನ್ನು ಖರೀದಿಸುವ ಮುನ್ನ ಒಂದಿಷ್ಟು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಎಲ್ಲದಕ್ಕಿಂತ ಹೆಚ್ಚಾಗಿ ಇವನ್ನು ಧರಿಸಿದಾಗ ಕಂಪರ್ಟಬಲ್ ಫೀಲ್ ಆಗಬೇಕು. ಬ್ರಿಥೆಬಲ್ ಯೋಗ ಔಟ್‌ಫಿಟ್ಸ್ ಆಯ್ಕೆ ಮಾಡುವುದು ಉತ್ತಮ. ಯಾವುದೇ ಔಟ್‌ಫಿಟ್ ದೇಹದ ಅಂಗಾಂಗವನ್ನು ಹಿಡಿದಿಡಬಾರದು. ಫಿಟ್ಟಿಂಗ್ ಇದ್ದರೂ ಕೈ ಕಾಲು ಸುಲಭವಾಗಿ ಆಡಿಸುವಂತಹ ಔಟ್‌ಫಿಟ್ ಆಯ್ಕೆ ಮಾಡಬೇಕು. ಧರಿಸುವ ಟಾಪ್ ಅಥವಾ ಟೀ ಶರ್ಟ್ ಅಪ್ ಸೈಡ್ ಡೌನ್ ಆದಾಗ ನೆಕ್‌ಲೈನ್ ಅಥವಾ ಕಾಲರ್ ಮುಖದ ಮೇಲೆ ಇಳಿಯಬಾರದು. ದೇಹ ಫ್ಲೆಕ್ಸಿಬಲ್ ಆಗಿರುವಂತೆ, ಧರಿಸುವ ಔಟ್‌ಫಿಟ್ ಕೂಡ ಸಾಫ್ಟ್ ಆಗಿರಬೇಕು.
…………
ಇದನ್ನೂ ಓದಿ: Fashion News: ಇಂಟರ್‌ನ್ಯಾಷನಲ್ ಶೋನಲ್ಲಿ ಬೆಂಗಳೂರಿನ ರೂಪದರ್ಶಿಯರು