ಶೀಲಾ ಸಿ. ಶೆಟ್ಟಿ, ಬೆಂಗಳೂರು
ಯೋಗಾಸನ ಮಾಡುವ ಯುವತಿಯರಿಗಾಗಿ 5 ಟ್ರೆಂಡಿ ಹೇರ್‌ಸ್ಟೈಲ್‌ಗಳನ್ನು ಹೇರ್‌ಸ್ಟೈಲ್ ಎಕ್ಸ್‌ಪರ್ಟ್ ಗಳು ಬ್ಯೂಟಿ ಡೈರಿಯಲ್ಲಿ ಬಿಡುಗಡೆಗೊಳಿಸಿದ್ದಾರೆ. ನೋಡಲು ಆಕರ್ಷಕವಾಗಿ ಕಾಣುವ ಇವು ಕಂಫರ್ಟಬಲ್ ಕೂಡ. ಈ ಬಗ್ಗೆ ಅವರು ಒಂದಿಷ್ಟು ಒಂದಿಷ್ಟು ಮಾಹಿತಿ ಹಂಚಿಕೊಂಡಿದ್ದಾರೆ.
“ಇಂದು ಯೋಗ ಮಾಡುವ ಯುವತಿಯರು ಸದಾ ಆಕರ್ಷಕವಾಗಿ ಕಾಣಲು ಬಯಸುತ್ತಾರೆ. ಅದರಲ್ಲೂ ಗ್ರೂಪ್ ಯೋಗ ಕ್ಲಾಸ್‌ಗಳಲ್ಲಿ ಪಾಲ್ಗೊಳ್ಳುವ ಮಹಿಳೆಯರು ತಮ್ಮ ಔಟ್‌ಫಿಟ್ಸ್ ಮಾತ್ರವಲ್ಲದೇ, ತಮ್ಮ ಹೇರ್‌ಸ್ಟೈಲ್‌ಗಳ ಬಗ್ಗೆಯೂ ಗಮನ ನೀಡುತ್ತಾರೆ. ಚೆನ್ನಾಗಿ ಕಾಣುತ್ತದೆ ಎಂದು ಎಲ್ಲಾ ಫ್ರೀ ಹೇರ್‌ಸ್ಟೈಲ್ ಮಾಡಲಾಗುವುದಿಲ್ಲ. ಇದು ಯೋಗ ಮಾಡುವಾಗ ಡಿಸ್ಟರ್ಬ್ ಆಗಬಹುದು. ಕಿರಿಕಿರಿಯುಂಟು ಮಾಡಬಹುದು. ಹಾಗಾಗಿ, ಕೂದಲನ್ನು ಒಟ್ಟಾಗಿ ಕಟ್ಟಿಡುವಂತಹ ಹೇರ್‌ಸ್ಟೈಲ್‌ಗಳಿಗೆ ಪ್ರಾಮುಖ್ಯತೆ ನೀಡಲಾಗುತ್ತದೆ. ಇವು ನೋಡಲು ಆಕರ್ಷಕವಾಗಿ ಕಾಣುತ್ತವಲ್ಲದೇ, ವಿಭಿನ್ನ ಲುಕ್ ನೀಡುತ್ತವೆ’ ಎನ್ನುತ್ತಾರೆ ಹೇರ್‌ಸ್ಟೈಲಿಸ್ಟ್ ರೋಮಿ.
- ರಿವರ್ಸ್ ಫ್ರೆಂಚ್ ಜಡೆ
ಸಾಮಾನ್ಯವಾಗಿ ಫ್ರೆಂಚ್ ಫ್ಲಾಟ್ ಎಂದೇ ಹೆಸರಾಗಿರುವ ಈ ಹೇರ್‌ಸ್ಟೈಲನ್ನು ಉಲ್ಟಾ ಹಾಕಿದಾಗ ಅದನ್ನು ರಿವರ್ಸ್ ಫ್ರೆಂಚ್ ಜಡೆಯೆಂದು ಹೇಳಬಹುದು. ಜಡೆ ಹಾಕುವುದು ಸುಲಭ. ಕೂದಲನ್ನು ಸ್ಟಿಫ್ಫಾಗಿ ಇರಿಸುತ್ತದೆ. ನೋಡಲು ಚೆನ್ನಾಗಿ ಬಿಂಬಿಸುತ್ತದೆ.
- ಟಾಪ್ ನಾಟ್/ಬನ್ ಹೇರ್‌ಸ್ಟೈಲ್
ನೆತ್ತಿ ಮೇಲೆ ಹಾಕುವ ತುರುಬಿಗೆ ಹೀಗೆ ಕರೆಯಲಾಗುತ್ತದೆ. ಈ ಹೇರ್‌ಸ್ಟೈಲ್ ಯೋಗ ಮಾಡುವಾಗ ಹೆಚ್ಚು ಸೆಕೆಯಾಗಿಸದು. ಆದರೆ ಆರಾಮ ಎನಿಸುವ ಹೇರ್‌ಸ್ಟೈಲ್ ಇದು. ಅತಿ ಹೆಚ್ಚು ತಲೆ ಭಾಗವನ್ನು ಬಗ್ಗಿಸಿ, ಕೆಳಗಿಳಿಸಿ ಮಾಡುವ ಯೋಗಾಸನಕ್ಕೆ ಈ ಹೇರ್ ಸ್ಟೈಲ್ ನಾಟ್ ಓಕೆ.
- ಸೈಡ್ ಜಡೆ
ಇದು ನಮ್ಮ ಸಾಂಪ್ರದಾಯಿಕ ಶೈಲಿಯ ಜಡೆಯ ವಿನ್ಯಾಸದ ಒಂದು ಶೈಲಿ. ಆದರೆ, ಈ ಸ್ಟೈಲ್‌ನಲ್ಲಿ ಜಡೆಯನ್ನು ಕಿವಿಯ ಹಿಂದೆ ಅಂದರೆ ಕೊಂಚ ಸೈಡಿಗೆ ಹಾಕಬೇಕಾಗುತ್ತದೆ. ಇದನ್ನು ಹೆಣೆಯುವುದು ತೀರಾ ಸಿಂಪಲ್. ಗ್ಲಾಮರಸ್ ಲುಕ್ ನೀಡದಿದ್ದರೂ ಕಂಫರ್ಟಬಲ್ ಫೀಲ್ ನೀಡುತ್ತದೆ.
- ಬಬಲ್ ಪೋನಿಟೇಲ್
ಈ ಹೇರ್‌ಸ್ಟೈಲ್ ನೋಡಲು ಆಕರ್ಷಕವಾಗಿ ಕಾಣುತ್ತದೆ. ಪೋನಿಟೇಲ್ ಅಂದರೆ ರಬ್ಬರ್ ಬ್ಯಾಂಡ್‌ನಿಂದ ನೆತ್ತಿಯ ಸಮೀಪ ಜುಟ್ಟು ಹಾಕಿ, ನಂತರ ಇಡೀ ಕೂದಲನ್ನು ಸಮನಾಂತರವಾಗಿ ತೆಗೆದುಕೊಂಡು ಮಧ್ಯೆ ಮಧ್ಯೆ ಚಿಕ್ಕ ಕಲರ್ ರಬ್ಬರ್ ಬ್ಯಾಂಡ್ ಹಾಕುತ್ತಾ ಬಂದಲ್ಲಿ ಬಬ್ಬಲ್ ಪೋನಿಟೇಲ್ ಹೇರ್‌ಸ್ಟೈಲ್ ಸಿದ್ಧ. ಇದು ವಿಭಿನ್ನ ಲುಕ್ ನೀಡುವುದು.
- ಫಿಶ್‌ಟೇಲ್ ಬ್ರೈಡ್ಸ್
ಉದ್ದ ಕೂದಲಿರುವವರು ಈ ವಿನ್ಯಾಸ ಮಾಡಿಕೊಳ್ಳಬಹುದು. ಇದು ನೋಡಲು ಅತ್ಯಾಕರ್ಷಕವಾಗಿ ಕಾಣುತ್ತದೆ ಹಾಗೂ ಕೂದಲು ಹಾರಾಡುವುದಿಲ್ಲ. ಜಡೆಯನ್ನೇ ವಿಭಿನ್ನವಾಗಿ ಹಾಕುವುದು ಈ ಹೇರ್‌ಸ್ಟೈಲ್‌ನ ಹೈಲೈಟ್.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Hair Style: ಕೂದಲಿನ ಆರೋಗ್ಯಕ್ಕೆ ಉಲ್ಟಾ ಬಾಚಿ ನೋಡಿ!