ಶೀಲಾ ಸಿ. ಶೆಟ್ಟಿ, ಬೆಂಗಳೂರು
ಯೋಗಾಸನವು ಸೌಂದರ್ಯವನ್ನು ಹೆಚ್ಚಿಸುತ್ತದೆ ಎನ್ನುತ್ತಾರೆ ಯೋಗ ಪರಿಣತರು.
ಹೌದು. ಇದು ಸತ್ಯ. ಕೆಲವು ಯೋಗಾಸನಗಳು ಆರೋಗ್ಯ ಮಾತ್ರವಲ್ಲ, ಮುಖದ ಸೌಂದರ್ಯವನ್ನೂ ಹೆಚ್ಚಿಸುತ್ತದೆಯಂತೆ.
ಕೆಲವು ಆಸನಗಳು ದೇಹದ ಫಿಟ್ನೆಸ್‌ನೊಂದಿಗೆ ಸೌಂದರ್ಯವನ್ನು ಹೆಚ್ಚಿಸುವ ಕೆಲಸವನ್ನು ಮಾಡುತ್ತವೆ. ಪ್ರಾಣಾಯಾಮ, ಮತ್ಸಾಸನ, ಶಿರ್ಷಾಸನ, ಹಾಲಾಸನ, ಸರ್ವಾಂಗಾಸನ, ತ್ರೀಕೊನಾಸನ, ಸಿಂಹಾಸನ ಮಾಡುವುದರಿಂದ ದೇಹದ ವಿವಿಧ ಅಂಗಗಳಲ್ಲಿ ರಕ್ತ ಸಂಚಲನೆ ಹೆಚ್ಚಾಗಿ ತ್ವಚೆಯ ಸೌಂದರ್ಯ ಹೆಚ್ಚಾಗುತ್ತದೆ. ದೇಹದೊಳಗಿನ ಟಾಕ್ಸಿಕ್ ಅಂಶಗಳು ಹೊರ ಹೋಗಲು ಈ ಆಸನಗಳು ಸಹಕರಿಸುತ್ತವೆ ಎನ್ನುತ್ತಾರೆ ಯೋಗ ಎಕ್ಸ್ ಪರ್ಟ್ ವಿರಾಜ್. ಅವುಗಳಲ್ಲಿ ಒಂದಿಷ್ಟು ಆಸನಗಳು ಹೇಗೆ ಸೌಂದರ್ಯ ಹೆಚ್ಚಲು ಸಹಕಾರಿ ಎಂಬುದರ ಬಗ್ಗೆ ಅವರಿಲ್ಲಿ ಮಾಹಿತಿ ನೀಡಿದ್ದಾರೆ.
- ಪ್ರಾಣಾಯಾಮ ಮಾಡುವುದರಿಂದ ದೇಹದ ಎಲ್ಲೆಡೆ ಶುದ್ಧ ಆಮ್ಲಜನಕ ಪೂರೈಕೆಯಾಗುತ್ತದೆ. ಇದು ಉತ್ತಮ ಸ್ಕಿನ್ ಟೋನ್ ಪಡೆಯಲು ಸಹಕರಿಸುತ್ತದೆ.
- ಹಾಲಾಸನವು ದೇಹದಲ್ಲಿನ ರಕ್ತ ಸಂಚಾರವನ್ನು ಸುಗುಮಗೊಳಿಸುತ್ತದೆ. ಇದರಿಂದ ಚರ್ಮಕ್ಕೆ ಶುದ್ಧ ರಕ್ತದ ಪೂರೈಕೆಯಾಗುತ್ತದೆ. ಜೀರ್ಣಾಂಗದಲ್ಲಿನ ಟಾಕ್ಸಿನ್ ಅಂಶಗಳನ್ನು ಹೊರಹಾಕುವಲ್ಲಿ ಈ ಆಸನ ಸಹಕರಿಸುತ್ತದೆ.
- ಮೀನಿನಂತೆ ದೇಹವನ್ನು ಬಗ್ಗಿಸುವ ಮತ್ಸಾಸನವು ಅಂಗಗಳನ್ನು ಸ್ಟ್ರೆಚ್ ಆಗಿಸುತ್ತದೆ. ಇದು ಕುತ್ತಿಗೆ ಹಾಗೂ ಭುಜವನ್ನು ರಿಲ್ಯಾಕ್ಸ್ ಮಾಡುತ್ತದೆ. ಇದರಿಂದ ಚರ್ಮವು ರಿಲ್ಯಾಕ್ಸ್ ಆಗಿ ಕಾಂತಿಯುಕ್ತವಾಗಲು ಕಾರಣವಾಗುತ್ತದೆ.
- ಸಿಂಹದಂತೆ ಗರ್ಜಿಸುವಂತೆ ನಾಲಿಗೆಯನ್ನು ಹೊರ ಹಾಕಿ ಮಾಡುವ ಸಿಂಹಾಸನವು ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ. ಮುಖದಲ್ಲಿನ ರಕ್ತ ಸಂಚಾರವನ್ನು ಹೆಚ್ಚಿಸುತ್ತದೆ. ತ್ವಚೆಯನ್ನು ಸದಾ ಆರೋಗ್ಯವಾಗಿರಿಸುತ್ತದೆ.
- ಸರ್ವಾಂಗಾಸನ ಮಾಡುವುದರಿಂದ ವಿಶೇಷವಾಗಿ ಮುಖದ ಭಾಗದಲ್ಲಿನ ರಕ್ತ ಸಂಚಲನೆ ಹೆಚ್ಚಾಗುತ್ತದೆ. ಯಂಗ್ಲುಕ್ಗೆ ಕಾರಣವಾಗುತ್ತದೆ. ವಯಸ್ಸಾಗುವುದರಿಂದ ತ್ವಚೆಯ ಕಾಂತಿ ಕಳೆಗುಂದುವುದನ್ನು ತಡೆಯುತ್ತದೆ. ತ್ವಚೆಯು ಸದಾ ಫ್ರೆಶ್ ಆಗಿರುವಂತೆ ನೋಡಿಕೊಳ್ಳುತ್ತದೆ.
ಇದನ್ನೂ ಓದಿ: Beauty Care: ಸೌಂದರ್ಯ ವರ್ಧಕ ರೋಸ್ ವಾಟರ್