Site icon Vistara News

Yoga Day 2023 : ಸುಲಭವಾಗಿ ತೂಕ ಕಡಿಮೆ ಮಾಡಿಕೊಳ್ಳಬೇಕೆ? ನಿತ್ಯ ಈ ಐದು ಆಸನಗಳನ್ನು ಮಾಡಿ

yoga for Weight Loss

#image_title

ಬೆಂಗಳೂರು: ಈಗಿನ ಯಾಂತ್ರಿಕ ಯುಗದಲ್ಲಿ ಬೇಡವೆಂದರೂ ದೇಹಕ್ಕೆ ಬೊಜ್ಜು ಬಂದು ಕೂತುಬಿಡುತ್ತದೆ. ಹೆಚ್ಚಾದ ತೂಕವನ್ನು ಕಡಿಮೆ ಮಾಡಬೇಕೆಂದು ಅನೇಕರು ಏನೇನೋ ಸರ್ಕಸ್‌ ಮಾಡುತ್ತಾರೆ. ವಾಕಿಂಗ್‌, ಜಿಮ್‌, ಯಾವ್ಯಾವುದೋ ಔಷಧಗಳನ್ನೂ ಸೇವಿಸಿಬಿಡುತ್ತಾರೆ. ಆದರೆ ಇವ್ಯಾವುದೂ ಇಲ್ಲದೆ ಯೋಗದಿಂದಲೇ ನಿಮ್ಮ ತೂಕವನ್ನು ಕಡಿಮೆ (Weight Loss) ಮಾಡಿಕೊಳ್ಳಬಹುದು. ದೇಹದ ಕ್ಯಾಲೋರಿಗಳನ್ನು ಬರ್ನ್‌ ಮಾಡುವಂತಹ ಐದು ಆಸನಗಳನ್ನು ನಾವಿಲ್ಲಿ ನಿಮಗೆ ಇಲ್ಲಿ ಪರಿಚಯಿಸುತ್ತಿದ್ದೇವೆ.

ಸೂರ್ಯ ನಮಸ್ಕಾರ

ಸೂರ್ಯ ನಮಸ್ಕಾರದ ವಿವಿಧ ಹಂತಗಳು


ಸೂರ್ಯ ನಮಸ್ಕಾರ ಹಲವಾರು ರೀತಿಯಲ್ಲಿ ಉಪಯೋಗವಾಗುವಂತಹ ಆಸನವೆಂದೇ ಹೇಳಬಹುದು. ಈ ಆಸನವನ್ನು ಮಾಡುವುದರಿಂದ ನಿಮ್ಮ ಪೂರ್ತಿ ದೇಹ ಬೆಚ್ಚಗಾಗಿ ರಕ್ತ ಸಂಚಾರ ಸಲೀಸಾಗುತ್ತದೆ. ಹಾಗೆಯೇ ಇದರಿಂದ ಚಯಾಪಚಯವೂ ಚೆನ್ನಾಗಿ ಆಗುತ್ತದೆ ಮತ್ತು ತೂಕ ಇಳಿಸುವಲ್ಲಿ ಸಹಕಾರಿಯಾಗುತ್ತದೆ. ಈ ಆಸನವನ್ನು ನಿಮಗೆ ಎಷ್ಟು ಸಾಧ್ಯವೋ ಅಷ್ಟು ಬಾರಿ ಮಾಡಬಹುದಾಗಿದೆ.

ಇದನ್ನೂ ಓದಿ: Viral video: ಸೂರ್ಯಂಗೆ ಟಾರ್ಚಾ ಎಂಬಂತೆ ಡಿಆರ್​ಎಸ್​ ಮೇಲೆ ಮತ್ತೆ ಡಿಆರ್​ಎಸ್ ಕೇಳಿದ ಆರ್​.ಅಶ್ವಿನ್​; ವಿಡಿಯೊ ವೈರಲ್​

ನವಾಸನ

ನವಾಸನದ ಭಂಗಿ


ಬೋಟ್‌ ಪೋಸ್‌ ಎಂದೂ ಕರೆಸಿಕೊಳ್ಳುವ ಈ ಆಸನದಿಂದ ನಿಮ್ಮ ಕಿಬ್ಬೊಟ್ಟೆಯ ಸ್ನಾಯುಗಳು ಸರಿಯಾದ ರೀತಿಯಲ್ಲಿ ಕೆಲಸ ಮಾಡಲಾರಂಭಿಸುತ್ತವೆ. ಇದು ಜೀರ್ಣಾಂಗಕ್ಕೆ ನೆರವಾಗುತ್ತದೆ. ಹಾಗೆಯೇ ಹೊಟ್ಟೆಯ ಭಾಗದಲ್ಲಿರುವ ಬೊಜ್ಜು ಕರಗುವುದಕ್ಕೆ ಸಹಾಯಕಾರಿ. ನೆಲದ ಮೇಲೆ ಕಾಲು ಚಾಚಿ ಕುಳಿತುಕೊಂಡು ದೇಹವನ್ನು ಸ್ವಲ್ಪ ಹಿಂದಕ್ಕೆ ವಾಲಿಸಿ, ಕಾಲುಗಳನ್ನು ಮೇಲಕ್ಕೆ ಎತ್ತಬೇಕು. ಹಾಗೆಯೇ ನಿಮ್ಮ ಕೈಗಳನ್ನು ಚಾಚಿ ಕಾಲಿನ ಮೊಣಕಾಲು ತಾಗುವಂತೆ ಹಿಡಿದುಕೊಳ್ಳಬೇಕು.

ವೀರಭದ್ರಾಸನ

ವೀರಭದ್ರಾಸನ


ವೀರಭದ್ರಾಸನದಲ್ಲಿ ಮೊದಲಿಗೆ ಕಾಲುಗಳನ್ನು ಅಗಲವಾಗಿಸಿ. ನಂತರ ಬಲಗಾಲನ್ನು ಸ್ವಲ್ಪ ಬಗ್ಗಿಸಿ ದೇಹವನ್ನು ಬಲಗಡೆ ತಿರುಗಿಸಿ. ಹಾಗೆಯೇ ಕೈಗಳನ್ನು ಕಾಲುಗಳಂತೆಯೇ ಅಗಲಿಸಿಟ್ಟುಕೊಳ್ಳಿ. ಈ ಆಸನವು ನಿಮ್ಮ ಸೊಂಟ ಮತ್ತು ಅದರ ಕೆಳಭಾಗದ ಸ್ನಾಯುಗಳನ್ನು ಬಳಸಿಕೊಳ್ಳುತ್ತದೆ. ಈ ರೀತಿ ಆಸನ ಮಾಡುವಾಗ ನೀವು ಉಸಿರಾಟದ ಬಗ್ಗೆ ಗಮನ ಹರಿಸಬೇಕು. ದೀರ್ಘ ಉಸಿರಾಟ ಮಾಡಬೇಕು. ಇದೇ ಆಸನವನ್ನು ಎರಡೂ ಕಡೆಗಳಲ್ಲಿ ಮಾಡಬೇಕು.

ಸೇತು ಬಂಧಾಸನ

ಸೇತು ಬಂಧಾಸನದ ಮಾದರಿ


ಈ ಆಸನದಲ್ಲಿ ನೀವು ನೆಲದ ಮೇಲೆ ಮಲಗಿ ನಿಮ್ಮ ತಲೆ ಮತ್ತು ಕಾಲಿನ ಪಾದಗಳನ್ನು ಹೊರೆತುಪಡಿಸಿ, ಪೂರ್ತಿ ದೇಹವನ್ನು ಮೇಲಕ್ಕೆ ಎತ್ತಬೇಕು. ಈ ರೀತಿ ಮಾಡಿದಾಗ ಸೇತುವೆಯ ರೀತಿಯಲ್ಲಿ ಕಾಣಿಸುತ್ತದೆ. ಇದರಲ್ಲಿ ನಿಮ್ಮ ಕೈಗಳು ಕೂಡ ನೆಲದ ಮೇಲೆಯೇ ಇರಬೇಕು. ಎರಡೂ ಕೈಗಳಿಂದ ಕಾಲನ್ನು ಹಿಡಿದುಕೊಳ್ಳಿ ಅಥವಾ ಹಾಗೆಯೇ ನೆಲದ ಮೇಲಿರಿಸಿ. ಈ ಆಸನ ಕೂಡ ನಿಮ್ಮ ದೇಹದ ತೂಕ ಕಡಿಮೆಗೊಳಿಸಲು ಸಹಾಯಕಾರಿ.

ಇದನ್ನೂ ಓದಿ: ಯೋಗ ದಿನ ಅಷ್ಟೇ ಅಲ್ಲ, ದಿನಾ ಯೋಗ ಮಾಡಬೇಕೆನ್ನಲು 11 ಕಾರಣಗಳು!


ಪೂರ್ವೋತ್ತಾಸನ

ಪೂರ್ವೋತ್ತಾಸನ ಮಾಡುವುದು ಹೀಗೆ


ಈ ಆಸನದಲ್ಲಿ ನಿಮ್ಮ ಪೂರ್ತಿ ದೇಹ ಕೆಲಸ ಮಾಡುತ್ತದೆ. ನೆಲದ ಮೇಲೆ ಮಲಗಿ ನಂತರ ನಿಮ್ಮ ಎರಡು ಪಾದಗಳನ್ನು ಸಂಪೂರ್ಣವಾಗಿ ನೆಲಕ್ಕೆ ತಾಗಿಸಿ. ಕೈಗಳೆರಡನ್ನು ನೆಲದ ಮೇಲೆ ಇರಿಸಿ ಪೂರ್ತಿ ದೇಹವನ್ನು ಮೇಲಕ್ಕೆ ಎತ್ತಿ. ಇಲ್ಲಿ ನಿಮ್ಮ ದೇಹದ ಭಾರ ಕೈಗಳ ಮೇಲೇ ಇರಬೇಕು. ಮೊದ ಮೊದಲು ಇದು ಕೆಲ ಸೆಕೆಂಡುಗಳಷ್ಟೇ ಸಮಯಕ್ಕೆ ಸಾಧ್ಯವಾಗುತ್ತದೆ. ಕ್ರಮೇಣ ನೀವು ಈ ಆಸನದ ಸಮಯವನ್ನು ಹೆಚ್ಚಿಸಿಕೊಳ್ಳಬಹುದು.

Exit mobile version