Site icon Vistara News

Yoga Day 2023: ಪರ್ಫೆಕ್ಟ್ ಯೋಗ ಔಟ್‌ಫಿಟ್‌ ಆಯ್ಕೆ ಮಾಡುವುದು ಹೇಗೆ?

Yoga Outfit

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಯಾವುದೋ ಒಂದು ಉಡುಪು ಧರಿಸಿ, ಯೋಗ ಕ್ಲಾಸ್‌ಗೆ ಹೋಗುವ ಕಾಲ ಇದಲ್ಲ! ಶ್ರದ್ಧೆಯಿಂದ ಮಾಡುವ ಈ ಯೋಗಕ್ಕೂ ಆರಾಮ ಎನಿಸುವಂತಹ ಸೂಕ್ತವಾದ ಔಟ್‌ಫಿಟ್‌ (Yoga Outfit) ಧರಿಸುವ ಕಾಲವಿದು. ಇದಕ್ಕೆ ಪೂರಕ ಎಂಬಂತೆ, ಮಾರುಕಟ್ಟೆಯಲ್ಲೂ ಕೂಡ ನಾನಾ ಬಗೆಯ ವೈವಿಧ್ಯಮಯ ಯೋಗದ ಔಟ್‌ಫಿಟ್‌ಗಳು ಲಗ್ಗೆ ಹಾಕಿವೆ(Yoga Day 2023).

ಹಿಂದೆಲ್ಲಾ ಲೂಸಾದ ಟೀ ಶರ್ಟ್-ಪ್ಯಾಂಟ್‌, ಇಲ್ಲವೇ ಶಾರ್ಟ್ ಕುರ್ತಾ, ಸಲ್ವಾರ್‌ ಹಾಗೂ ದೊಗಲೆ ಪ್ಯಾಂಟ್ ಧರಿಸಿದರೇ ಸಾಕು ಎಂಬ ಮನೋಭಾವವಿತ್ತು. ಇದೀಗ ಅದು ಬದಲಾಗಿದೆ. ಆಯಾ ವರ್ಗ ಹಾಗೂ ವಯಸ್ಸಿನವರ ಮನೋಭಿಲಾಷೆಗೆ ಮ್ಯಾಚ್‌ ಆಗುವಂತಹ ನಾನಾ ಬಗೆಯ ಯೋಗ ಸೂಟ್‌ ಹಾಗೂ ಸೆಟ್‌ಗಳು ಆಗಮಿಸಿವೆ ಎನ್ನುವ ಸ್ಟೈಲಿಸ್ಟ್‌ ಒಂದಿಷ್ಟು ಸಲಹೆಗಳನ್ನು ನೀಡಿದ್ದಾರೆ.

ಪರ್ಫೆಕ್ಟ್‌ ಬಿಎಂಐಗೆ ಟೂ ಪೀಸ್‌ ಯೋಗ ಸೆಟ್‌

ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ, ಸೋಹಾ, ಸಾರಾ, ಸೋನಂ, ಜಾನ್ವಿ ಸೇರಿದಂತೆ ನಾನಾ ನಟಿಯರು ಯೋಗಾಭ್ಯಾಸಕ್ಕೆ ಧರಿಸುವ ಟೂ ಪೀಸ್‌ ಯೋಗ ಔಟ್‌ಫಿಟ್‌ಗಳು ಇಂದು ಹೆಚ್ಚು ಬೇಡಿಕೆಯಲ್ಲಿವೆ ಹಾಗೂ ಟ್ರೆಂಡ್‌ನಲ್ಲಿವೆ. ದೇಹವನ್ನು ಎಕ್ಸ್‌ಪೋಸ್‌ ಮಾಡುವ ಇವನ್ನು ಪರ್ಫೆಕ್ಟ್‌ ಬಾಡಿ ಮಾಸ್‌ ಇಂಡೆಕ್ಸ್‌ ಇರುವವರು ಮಾತ್ರ ಧರಿಸಬಹುದು.

ಸ್ಲಿಮ್‌ ಇರುವವರಿಗೆ ಕ್ರಾಪ್‌ ಟಾಪ್‌-ಟೈಟ್ಸ್

ತೆಳ್ಳಗಿರುವರಿಗೆ ಸ್ಪೋಟ್ರ್ಸ್ ಬ್ರಾಲೆಟ್‌ ಇರುವ ಟೂ ಪೀಸ್‌ ಕ್ರಾಪ್‌ ಟಾಪ್‌ ಯೋಗ ಸೆಟ್‌ ಓಕೆ. ನಮಗೆ ಎಕ್ಸ್‌ಪೋಸ್‌ ಬೇಡ ಎನ್ನುವವರು ಟ್ಯಾಂಕ್‌ ಟಾಪ್‌ ಅಥವಾ ಬ್ರಾಲೆಟ್‌ ಮೇಲೆ ಕ್ರಿಸ್‌ ಕ್ರಾಸ್‌ ಟೀ ಶರ್ಟ್ ಧರಿಸಬಹುದು.

ಪ್ಲಂಪಿಯಾಗಿರುವವರಿಗೆ ಶಾರ್ಟ್ ಕುರ್ತಾ- ಪ್ಯಾಂಟ್‌

ದಪ್ಪಗಿರುವವರು ಆದಷ್ಟೂ ಲಾಂಗ್‌ ಟೀ ಶರ್ಟ್, ಪ್ಲಸ್‌ ಸೈಝ್‌ ಟಾಪ್‌ ಅಥವಾ ಶಾರ್ಟ್ ಕುರ್ತಾಗಳನ್ನು ಪ್ಯಾಂಟ್‌ ಮೇಲೆ ಧರಿಸಬಹುದು.

ಟ್ರೆಡಿಷನಲ್‌ ಇರುವವರಿಗೆ ಮಿಕ್ಸ್‌ ಮ್ಯಾಚ್‌

ವೆಸ್ಟರ್ನ್ ಔಟ್‌ಫಿಟ್ಸ್‌ ಬೇಡ! ಎನ್ನುವವರು ತಮ್ಮವಾರ್ಡ್ರೋಬ್‌ನಲ್ಲಿರುವ ಧೋತಿ ಪ್ಯಾಂಟ್‌, ಸ್ಟ್ರೇಟ್‌ ಸಲ್ವಾರ್‌ ಪ್ಯಾಂಟ್‌ಗಳ ಮೇಲೆ ಕೊಂಚ ಫಿಟ್ಟಿಂಗ್‌ ಇರುವಂತಹ ಕುರ್ತಾ ಧರಿಸಬಹುದು.

ಜೆನ್‌ ಜಿ ಚಾಯ್ಸ್‌

ಇನ್ನು, ಈ ಜನರೇಷನ್‌ನ ಚಾಯ್ಸ್‌ ಕಂಪ್ಲೀಟ್‌ ಬದಲಾಗಿದೆ. ಹಾಗಾಗಿ ಇವರಿಗೆ ಹೊಂದುವಂತಹ ಟ್ರೆಂಡಿಯಾಗಿರುವ ಟ್ಯಾಂಕ್‌ ಟಾಪ್ಸ್‌, ಕ್ರಿಸ್‌ ಕ್ರಾಸ್‌ ಬ್ರಾಲೆಟ್‌, ಹಾಲ್ಟರ್‌ ನೆಕ್‌ ಕ್ರಾಪ್‌ ಟಾಪ್‌, ಹಾರೆಮ್‌ ಪ್ಯಾಂಟ್ಸ್‌, 2 ಪೀಸ್‌ ಸೆಟ್‌, ಟೈಟ್‌ ಹಾಗೂ ಬ್ರಿಥೆಬಲ್‌ ಸ್ಕಿನ್‌ ಟೈಟ್ ಪ್ಯಾಂಟ್‌ಗಳನ್ನು ಧರಿಸಬಹುದು.

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Yoga Day 2023: ವಿಧಾನಸೌಧದ ಎದುರು ಯೋಗ ಪ್ರದರ್ಶನ

Exit mobile version