Site icon Vistara News

Reationship: ನಿಮ್ಮ ಹುಡುಗನಲ್ಲಿ ಈ 10 ಗುಣಗಳಿದ್ದರೆ, ಕಣ್ಮುಚ್ಚಿ ಮದುವೆಯಾಗಿಬಿಡಿ!

relationship

ಪ್ರೀತಿಸಿಯಾಗಿದೆ. ಆದರೆ, ಬಹಳ ಸಾರಿ ಪ್ರೀತಿಯಲ್ಲಿದ್ದಾಗ ನಮ್ಮನ್ನು ಪ್ರೀತಿಸಿದವರ ನಿಜವಾದ ಗುಣಗಳು ಗೊತ್ತೇ ಆಗುವುದಿಲ್ಲ. ಪ್ರೀತಿಯಲ್ಲಿದ್ದಾಗ ಎಲ್ಲವೂ ಚಂದವೇ ಕಾಣಿಸುತ್ತದೆ. ಅಥವಾ ಸುಮ್ಮನೆ ಆಕರ್ಷಣೆಯನ್ನು ಪ್ರೀತಿಯೆಡೆಗೆ ಕೊಂಡೊಯ್ಯುವ ಹಂತದಲ್ಲಿದ್ದಾಗ, ಮುಂದುವರಿಯಲೋ ಬೇಡವೋ ಎಂಬ ಗೊಂದಲಗಳಿರುತ್ತದೆ. ಆದರೆ, ಜೀವನದಲ್ಲಿ ಜೊತೆಯಾಗಿರಬೇಕೆಂಬ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳುವ ಹೊತ್ತಿಗೆ, ಯಾರೇ ಆಗಿರಲಿ, ತಮ್ಮ ಹುಡುಗನ ಕೆಲವು ಗುಣಗಳನ್ನಾದರೂ ಅರಿತಿರಬೇಕು. ನಿಮ್ಮ ಹುಡುಗ ಈ ಹತ್ತು ಗುಣಗಳನ್ನೇನಾದರೂ ಹೊಂದಿದ್ದಾನೆ ಅಂದರೆ, ಖಂಡಿತ ನೀವು ಆತನನ್ನು ಕಣ್ಮುಚ್ಚಿ ಮದುವೆಯಾಗಬಹುದು.

೧. ನಿಮ್ಮ ಹುಡುಗ ನೀವು ಬೆಳಗ್ಗೆ ಹಾಸಿಗೆಯಿಂದ ಕಣ್ಬಿಡುವ ಹೊತ್ತಿನಲ್ಲಿ ಕೈಲೊಂದು ಚಹಾ ಹಿಡಿದು ನಿಂತಿದ್ದರೆ ಎಷ್ಟು ಖುಷಿಯಾಗಬಹುದು ಅಲ್ಲವೇ! ಇಂಥದ್ದೊಂದು ಗಳಿಗೆ ಯಾರಿಗೆ ಬೇಡ ಹೇಳಿ. ನಿಮ್ಮ ಹುಡುಗ ಅಪರೂಪಕ್ಕೊಮ್ಮೆಯಾದರೂ ಹೀಗೆ ಮಾಡುವ ಮನಸ್ಸುಳ್ಳವನಾಗಿದ್ದರೆ ಕಣ್ಮುಚ್ಚಿ ಮದುವೆಯಾಗಬಹುದು.

೨. ನೀವು ಹೇಳದೆಯೂ, ನಿಮ್ಮ ಮುಖ ನೋಡಿಯೇ ನೀವ್ಯಾವುದೋ ವಿಚಾರಕ್ಕೆ ಬೇಸರ ಮಾಡಿಕೊಂಡಿದ್ದೀರಿ ಎಂದು ಅವನಿಗೆ ಅರ್ಥವಾದರೆ, ಹಾಗೂ ನಿಮ್ಮ ಮೇಲೆ ಕಾಳಜಿ ತೋರಿದರೆ ಆತನಿಗೆ ನಿಜವಾಗಿಯೂ ನಿಮ್ಮ ಮೇಲೆ ಪ್ರೀತಿ ಇದೆ ಎಂದರ್ಥ. ಅಂಥವನನ್ನು ಧಾರಾಳವಾಗಿ ಸ್ವಂತ ಮಾಡಿಕೊಳ್ಳಿ.

೩. ದೈಹಿಕವಾಗಿ ಪ್ರೀತಿಸುವುದು ಎಲ್ಲರೂ ಮಾಡಬಹುದಾದ ವಿಚಾರವೇ ಇರಬಹುದು. ಆದರೆ ನಿಮ್ಮ ಹುಡುಗ ಭಾವನಾತ್ಮಕ ಮನಸ್ಸಿನವನಾ ಗಮನಿಸಿ.

೪. ಇಬ್ಬರಿಗೂ ಒಂದೇ ದೃಷ್ಟಿಕೋನ ಇದೆಯಾ ಎಂಬುದನ್ನು ಯೋಚಿಸಿ. ಬದುಕಿನ ಬಗ್ಗೆ, ಕನಸುಗಳ ಬಗ್ಗೆ, ವಿಚಾರಗಳ ಬಗ್ಗೆ ಇಬ್ಬರ ದೃಷ್ಟಿಕೋನ ಒಂದೇ ಆಗಿದ್ದಲ್ಲಿ, ಅಥವಾ ಬಹುತೇಕ ಹೊಂದಿಕೆಯಾಗುತ್ತಿದ್ದಲ್ಲಿ ಬದುಕಿನಲ್ಲಿ ಒಬ್ಬರಿಗೊಬ್ಬರು ನಿರಾಸೆ ಮಾಡಿಕೊಳ್ಳುವುದಿಲ್ಲ.

೫. ಎಲ್ಲಿಗೆ ಹೋಗುತ್ತಿದ್ದರೂ ಆತನ ಜೊತೆಗೇ ನೀವು ಹೋಗಲು ಇಚ್ಛಿಸುತ್ತೀರೆಂದಾದಲ್ಲಿ, ಆತನ ಜೊತೆಗೆ ಎಂತಹ ಜಾಗಕ್ಕೆ ಹೋಗುವುದಾದರೂ ಕಂಫರ್ಟ್‌ ಫೀಲ್‌ ಅನುಭವಿಸುತ್ತೀರೆಂದಾದಲ್ಲಿ ಆತ ನಿಮ್ಮವನೇ.

೬. ನೀವು ನಿಮ್ಮ ಆಸಕ್ತಿಯ ವಿಚಾರಗಳನ್ನು, ನಿಮ್ಮ ಕನಸುಗಳನ್ನು, ನಿಮ್ಮ ಜೀವನದ ಗುರಿಗಳನ್ನು, ಮಹತ್ವಾಕಾಂಕ್ಷೆಗಳನ್ನು ನಿಮ್ಮ ಬೇಸರ ಹತಾಶೆಗಳನ್ನು ಆತನ ಜೊತೆಗೆ ನಿರಾಳವಾಗಿ ಹಂಚಿಕೊಳ್ಳುವ ವಾತಾವರಣ ನಿಮ್ಮಿಬ್ಬರ ನಡುವೆ ಇದ್ದರೆ, ಅದಕ್ಕೆ ಆತ ನಿಮಗೆ ಬೇಕಾದ ಸಮಯ ನೀಡುತ್ತಿದ್ದರೆ ಆತ ಒಳ್ಳೆಯ ಆಯ್ಕೆಯೇ.

ಇದನ್ನೂ ಓದಿ: ಪ್ರೀತಿಯಲ್ಲಿ ಬೀಳೋರಿಗೆ ೮ ಗುಟ್ಟುಗಳು!

೭. ಬದುಕಿನ ಗುರಿಗಳೇನೇ ಇರಲಿ. ಕೆಲಸ, ಗಡಿಬಿಡಿ, ಒತ್ತಡಗಳೇನೇ ಇರಲಿ. ಆತನ ಜೊತೆಗೆ ನೀವು ಬೇಕಾಬಿಟ್ಟಿ ಹೇಗೆ ಬೇಕೋ ಹಾಗೆ ವರ್ತಿಸಲು ಸಾಧ್ಯವಿದೆ ಎಂದಾದಲ್ಲಿ, ಮಕ್ಕಳಂತೆ ತುಂಟತನ ಮಾಡಿಕೊಂಡು ಕಾಲೆಳೆಯುತ್ತಾ ತಮಾಷೆ ಮಾಡಬಹುದಾದಲ್ಲಿ, ಅದನ್ನು ಆತ ಅಷ್ಟೇ ತಮಾಷೆಯಾಗಿಯೇ ತೆಗೆದುಕೊಳ್ಳುತ್ತಾನೆ ಎಂದಾದಲ್ಲಿ ನಿಮ್ಮ ನಡುವೆ ಆರೋಗ್ಯಕರ ಸಂಬಂಧ ಇದೆ ಎಂದರ್ಥ. ಇಂತಹ ಜೋಡಿ ನೀವಾಗಿದ್ದರೆ ಅದು ನಿಮ್ಮ ಅದೃಷ್ಟವೇ ಸರಿ.

೮. ನೀವು ಆತನ ಭೇಟಿಯಾಗಿ ಒಂದೆರಡು ಗಂಟೆಯಷ್ಟೇ ಕಳೆದಿದ್ದರೂ ನೀವವನನ್ನು ಮಿಸ್‌ ಮಾಡಿಕೊಳ್ಳುತ್ತೀರೆಂದಾದಲ್ಲಿ ನೀವು ನಿಜವಾಗಿಯೂ ಪ್ರೀತಿಸುತ್ತಿದ್ದೀರಿ ಎಂದರ್ಥ. ಹಾಗಾಗಿ ಇಂಥ ಸಂದರ್ಭ ಪ್ರೀತಿಗೆ ಮೋಸ ಮಾಡಬೇಡಿ.

೯. ಕುಟುಂಬವಾಗಿ ನಿರ್ವಹಣೆಯ ವಿಚಾರ ಬಂದಾಗ ಅಂತಿಮವಾಗಿ ಆಗಬೇಕಿದ್ದೇನು ಎಂಬುದರ ಬಗ್ಗೆ ಸ್ಪಷ್ಟ ಕಲ್ಪನೆಯಿದೆಯಾ? ಆ ಬಗ್ಗೆ ಆತನ ಜೊತೆಗೆ ಮನಬಿಚ್ಚಿ ಮಾತಾಡಬಲ್ಲಿರಾ? ಹಾಗಿದ್ದಲ್ಲಿ ನಿಮ್ಮ ಜವಾಬ್ಧಾರಿಗಳ ಬಗ್ಗೆ ನಿಮಗೆ ಅರಿವಿದೆ ಹಾಗೂ ಅದಕ್ಕೆ ಆತನ ಸಹಾಯವೂ ಇದೆ ಎಂಬುದು ಅರಿವಾಗುತ್ತದೆ. ಇಬ್ಬರ ನಡುವೆ ಇಗೋ ಇಂತಹ ವಿಚಾರಕ್ಕೆ ಅಡ್ಡ ಬರದಿದ್ದರೆ ಅದು ಉತ್ತಮ ಸಂಬಂಧವಾದೀತು.

೧೦. ಆತನ ಜೊತೆಗೆ ಭವಿಷ್ಯದಲ್ಲಿ ಫ್ಯಾಮಿಲಿ, ಮಕ್ಕಳು ಎಂದೆಲ್ಲ ಕಲ್ಪನೆ ಮಾಡಿಕೊಳ್ಳಬಲ್ಲಿರಿ ಎಂದರೆ ಮುಂದುವರಿಯಿರಿ. ಹೀಗೆ ಕಲ್ಪಿಸಿಕೊಳ್ಳುವುದು ಎಂದರೆ, ನೀವು ನಿಜಕ್ಕೂ ಆತನ ಜೊತೆಗೆ ಮಾನಸಿಕವಾಗಿ ತುಂಬ ಹತ್ತಿರವಾಗಿದ್ದೀರಿ ಎಂದೇ ಅರ್ಥ. ಹಾಗಿದ್ದಲ್ಲಿ ಮಾತ್ರ ಆತನನ್ನು ನಿಮ್ಮ ಮಗುವಿನ ತಂದೆಯ ಸ್ಥಾನದಲ್ಲಿಟ್ಟು ನೋಡಲು ನಿಮ್ಮಿಂದ ಸಾಧ್ಯವಾಗುತ್ತದೆ.

ಇದನ್ನೂ ಓದಿ: ಪ್ರೇಯಸಿಗಾಗಿ ಲಿಂಗವನ್ನೇ ಬದಲಿಸುತ್ತಿರುವ ಉತ್ತರ ಪ್ರದೇಶದ ಮಹಿಳೆ

Exit mobile version