Site icon Vistara News

Zebra Strips Print Fashion: ಮತ್ತೆ ಮರಳಿದ ಇಲ್ಯೂಷನ್‌ ಕ್ರಿಯೇಟ್‌ ಮಾಡುವ ಆಕರ್ಷಕ ಜೀಬ್ರಾ ಪ್ರಿಂಟ್ಸ್ ಫ್ಯಾಷನ್‌

Zebra Strips Print Fashion

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಜೀಬ್ರಾ ಸ್ಟ್ರೈಪ್ಸ್‌ ಫ್ಯಾಷನ್‌ (Zebra Strips Print Fashion) ಇದೀಗ ಫ್ಯಾಷನ್‌ಲೋಕಕ್ಕೆ ಮರಳಿದೆ. ಹೌದು, ಒಂದು ಕಾಲದಲ್ಲಿ ಸಖತ್‌ ಹಿಟ್‌ ಫ್ಯಾಷನ್‌ ಲಿಸ್ಟ್‌ನಲ್ಲಿದ್ದ ಸ್ಟ್ರೈಪ್ಸ್‌ ಅದರಲ್ಲೂ ಜೀಬ್ರಾ ಪ್ರಿಂಟ್‌ ಎಂದು ಕರೆಸಿಕೊಳ್ಳುವ ಈ ಪ್ರಿಂಟ್ಸ್‌ನ ಔಟ್‌ಫಿಟ್‌ಗಳು ಸಾಕಷ್ಟು ಟ್ರೆಂಡಿಯಾಗಿದ್ದವು. ನಯಾ ವಿನ್ಯಾಸದಲ್ಲಿ ಹೊಸ ಲುಕ್‌ ನೀಡುವ ಇವು ಸೆಲೆಬ್ರೆಟಿಗಳ ಫೇವರಿಟ್ ವಾರ್ಡ್‌ರೋಬ್‌ನಲ್ಲಿ ಸ್ಥಾನ ಗಳಿಸಿದ್ದವು. ಇದೀಗ ಮತ್ತೊಮ್ಮೆ ಫ್ಯಾಷನ್‌ಗೆ ಮರಳಿದ್ದು ಹೊಸ ವಿನ್ಯಾಸದ ಔಟ್‌ಫಿಟ್‌ಗಳಲ್ಲಿ ಕಾಣಿಸಿಕೊಂಡಿವೆ. ಉದಾಹರಣೆಗೆ., ವೀಕೆಂಡ್‌ನಲ್ಲಿ ನಡೆದ ಸಮಾರಂಭದಲ್ಲಿ ಬಾಲಿವುಡ್‌ನ ನಟಿ ಶಿಲ್ಪಾ ಶೆಟ್ಟಿ ಧರಿಸಿದ್ದ ಜೀಬ್ರಾ ಔಟ್‌ಫಿಟ್‌.

ಶಿಲ್ಪಾ ಶೆಟ್ಟಿ ಧರಿಸಿದ ಆಕರ್ಷಕ ಸ್ಟ್ರೈಪ್ಸ್‌ ಔಟ್‌ಫಿಟ್‌

ಸ್ಟೈಲಿಶ್‌ ಐಕಾನ್ ಆಫ್‌ ದಿ ಡಿಕೇಡ್‌ ಆವಾರ್ಡ್ ಪಡೆದ ನಟಿ ಶಿಲ್ಪಾ ಶೆಟ್ಟಿ, ಈ ಕಾರ್ಯಕ್ರಮದಲ್ಲಿ ಸ್ಟ್ರೈಪ್ಸ್‌ ಪ್ರಿಂಟೆಡ್‌ ಟು ಪೀಸ್‌ ಡ್ರೆಸ್‌ ಧರಿಸಿದ್ದರು. ಕ್ರಾಪ್‌ ಸ್ಟ್ರೈಪ್ಸ್‌ ಪ್ರಿಂಟ್‌ನ ಕ್ರಾಪ್‌ ಟಾಪ್‌ ಜೊತೆಗೆ ಕೋ ಆರ್ಡ್ ಸೆಟ್‌ನಂತೆ ಕಾಣುವ ಮೆರ್‌ಮೈಡ್‌ ಶೇಪ್‌ನ ಲಾಂಗ್‌ ಸ್ಕರ್ಟ್‌ನಲ್ಲಿ ಮನಮೋಹಕವಾಗಿ ಕಾಣಿಸಿಕೊಂಡರು. ಅಂದಹಾಗೆ, ಈ ಎರಡೂ ಕೂಡ ಡಿಫರೆಂಟ್‌ ಸ್ಟ್ರೈಪ್ಸ್‌ ಪ್ರಿಂಟ್‌ ಹೊಂದಿದ್ದವು. ಆದರೂ ನೋಡಲು ಸಖತ್ತಾಗಿ ಕಾಣಿಸುತ್ತಿತ್ತು ಎಂದು ಶಿಲ್ಪಾ ಶೆಟ್ಟಿಯ ಔಟ್‌ಫಿಟ್‌ಗೆ ಫ್ಯಾಷನ್‌ ವಿಮರ್ಶಕರು ಫುಲ್‌ ಮಾರ್ಕ್ಸ್‌ ನೀಡಿದ್ದಾರೆ. ಇನ್ನು ಈ ಔಟ್‌ಫಿಟ್‌ಗೆ ಗೋಲ್ಡ್‌ ಬಿಗ್‌ ಜಂಕ್‌ ಆಕ್ಸೆಸರೀಸ್‌ ಮ್ಯಾಚ್‌ ಮಾಡಿರುವುದು ಅವರಿಗೆ ಕಂಪ್ಲೀಟ್‌ ಡಿಫರೆಂಟ್‌ ಲುಕ್‌ ನೀಡಿತ್ತು ಎಂಬುದು ಸ್ಟೈಲಿಸ್ಟ್‌ಗಳ ಅಭಿಪ್ರಾಯ.

ಟ್ರೆಂಡ್‌ನಲ್ಲಿರುವ ಬಗೆಬಗೆಯ ಸ್ಟ್ರೈಪ್ಸ್‌ ಪ್ರಿಂಟೆಡ್‌ ಔಟ್‌ಫಿಟ್ಸ್

ಫ್ಯಾಷನ್‌ನಲ್ಲೂ ನಾನಾ ಬಗೆಯ ಸ್ಟ್ರೈಪ್ಸ್‌ ಪ್ರಿಂಟ್ಸ್ ಕಾಣಬಹುದು. ಬಂಗಾಲಿ ಸ್ಟ್ರೈಪ್ಸ್‌, ಹೇರ್‌ಲೈನ್‌, ಚಾಕ್‌, ಡಬಲ್‌, ಶ್ಯಾಡೋ, ರಿಜೇನ್ಸಿ ಸೇರಿದಂತೆ ಲೆಕ್ಕವಿಲ್ಲದಷ್ಟು ಬಗೆಯವು ಬಗೆಬಗೆಯ ಔಟ್‌ಫಿಟ್‌ಗಳಲ್ಲಿ ಇಂದು ಲಭ್ಯ. ಆದರೆ ತಕ್ಷಣಕ್ಕೆ ಇವೆಲ್ಲವೂ ನೋಡಲು ಒಂದೇ ಬಗೆಯದ್ದಾಗಿ ಕಾಣುತ್ತವೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಆಯಾ ವ್ಯಕ್ತಿಯ ಪರ್ಸನಾಲಿಟಿಗೆ ತಕ್ಕಂತೆ ಈ ಸ್ಟ್ರೈಪ್ಸ್‌ ಪ್ರಿಂಟ್‌ನ ಉಡುಪನ್ನು ಆಯ್ಕೆ ಮಾಡಿಕೊಂಡಾಗ ಮಾತ್ರ ಪರ್ಫೆಕ್ಟ್‌ ಲುಕ್‌ ನಿಮ್ಮದಾಗುವುದು ಎನ್ನುತ್ತಾರೆ.

ಇಲ್ಯೂಷನ್‌ ಕ್ರಿಯೇಟ್‌ ಮಾಡುವ ಜೀಬ್ರಾ ಸ್ಟ್ರೈಪ್ಸ್‌ ಔಟ್‌ಫಿಟ್ಸ್ ಆಯ್ಕೆ

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Star Fashion: ರೇಷ್ಮೆ ಸೀರೆಗೆ ಪ್ರಯೋಗಾತ್ಮಕ ಹಾಲ್ಟರ್ ನೆಕ್ ಬ್ಲೌಸ್ ಫ್ಯಾಷನ್; ಟ್ರೆಂಡಿಯಾಗಿಸಿದ ನಟಿ ಸಪ್ತಮಿ ಗೌಡ

Exit mobile version