ಬೆಂಗಳೂರು: ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ -1ರ ಫಲಿತಾಂಶವು (2nd PUC Result) ಈಗಾಗಲೇ ಪ್ರಕಟವಾಗಿದೆ. ಕೆಲವರು ಅನುತ್ತೀರ್ಣರಾಗಿದ್ದರೆ, ಮತ್ತೆ ಕೆಲವರಿಗೆ ಅಂಕ ಕಡಿಮೆ ಬಂದಿದೆ ಎಂಬ ಅಸಮಾಧಾನ. ಹೀಗಾಗಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ 2 ನಡೆಯಲಿದ್ದು, ಇದರ ಅಂತಿಮ ವೇಳಾಪಟ್ಟಿಯನ್ನು ಪ್ರಕಟ ಮಾಡಲಾಗಿದೆ. ಏಪ್ರಿಲ್ 29ರಿಂದ ಮೇ 16ರವರೆಗೆ 2ನೇ ಪರೀಕ್ಷೆಯನ್ನು (2nd PUC Exam) ನಡೆಸಲಾಗುವುದು. ಇದೇ ವೇಳೆ ಉತ್ತರ ಪತ್ರಿಕೆ ಸ್ಕ್ಯಾನ್ಡ್ ಪ್ರತಿ ಪಡೆಯಲು ಅರ್ಜಿ ಸಲ್ಲಿಸಲು ಮಂಗಳವಾರ (ಏಪ್ರಿಲ್ 16) ಕೊನೇ ದಿನವಾಗಿದೆ.
2ನೇ ವಾರ್ಷಿಕ ಪರೀಕ್ಷೆ ವೇಳಾಪಟ್ಟಿ ಇಂತಿದೆ:
- ಏಪ್ರಿಲ್ 29ರಂದು ಕನ್ನಡ/ಅರೇಬಿಕ್, 30ರಂದು ಇತಿಹಾಸ/ಭೌತಶಾಸ್ತ್ರ
- ಮೇ 2ರಂದು ಇಂಗ್ಲಿಷ್, 3ರಂದು ರಾಜ್ಯಶಾಸ್ತ್ರ, ಸಂಖ್ಯಾ ಶಾಸ್ತ್ರ, 4ರಂದು ಭೂಗೋಳ ಶಾಸ್ತ್ರ, ಮನಃ ಶಾಸ್ತ್ರ, ರಸಾಯನ ಶಾಸ್ತ್ರ, ಗೃಹ ವಿಜ್ಞಾನ, ಮೂಲಗಣಿತ
- 9ರಂದು ತರ್ಕ ಶಾಸ್ತ್ರ, ವ್ಯವಹಾರ ಅಧ್ಯಯನ, ಗಣಿತ, ಶಿಕ್ಷಣ ಶಾಸ್ತ್ರ
- 11ರಂದು ಸಮಾಜಶಾಸ್ತ್ರ, ಜೀವಶಾಸ್ತ್ರ, ಭೂಗರ್ಭ ಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ, ಗಣಿಕ ವಿಜ್ಞಾನ
- 13ರಂದು ಅರ್ಥಶಾಸ್ತ್ರ, 14ರಂದು ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, 15ರಂದು ಹಿಂದಿ
- 16ರಂದು ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್
ವಾರ್ಷಿಕ ಪರೀಕ್ಷೆ 1ರಲ್ಲಿ ನಿರೀಕ್ಷಿತ ಫಲಿತಾಂಶ ಪಡೆಯಲು ಆಗದ ಹಾಗೂ ಅನುತ್ತೀರ್ಣರಾದ ವಿದ್ಯಾರ್ಥಿಗಳು ಈ ಪರೀಕ್ಷೆಯನ್ನು ಬರೆಯಬಹುದಾಗಿದೆ.
ಉತ್ತರ ಪತ್ರಿಕೆ ಡೌನ್ಲೋಡ್, ಮರು ಮೌಲ್ಯಮಾಪನ, ಮರು ಎಣಿಕೆ ದಿನಾಂಕ ಫಿಕ್ಸ್
ವಿದ್ಯಾರ್ಥಿಗಳಿಗೆ ಉತ್ತರ ಪತ್ರಿಕೆ ಪ್ರತಿ ಪಡೆಯಲು ಅರ್ಜಿ ಸಲ್ಲಿಕೆ, ಡೌನ್‌ಲೋಡ್ ಮಾಡಿಕೊಳ್ಳಲು ಹಾಗೂ ಮರು ಮೌಲ್ಯಮಾಪನ ಹಾಗೂ ಮರು ಅಂಕ ಎಣಿಕೆಗೆ ಅರ್ಜಿ ಸಲ್ಲಿಸಲು ಕಾಲಾವಕಾಶವನ್ನು ಕಲ್ಪಿಸಲಾಗಿದೆ.
ಉತ್ತರ ಪತ್ರಿಕೆ ಸ್ಕ್ಯಾನ್ಡ್ ಪ್ರತಿಗಾಗಿ ಅರ್ಜಿ ಸಲ್ಲಿಸಲು ಏಪ್ರಿಲ್ 10ರಿಂದ ಏಪ್ರಿಲ್ 16ರವರೆಗೆ ಅವಕಾಶವನ್ನು ಕಲ್ಪಿಸಲಾಗಿದೆ. ಉತ್ತರ ಪತ್ರಿಕೆ ಸ್ಕ್ಯಾನ್ಡ್ ಪ್ರತಿ ಡೌನ್‌ಲೋಡ್ ಮಾಡಿಕೊಳ್ಳಲು ಏಪ್ರಿಲ್ 14ರಿಂದ ಏಪ್ರಿಲ್ 19ರವರೆಗೆ ಅವಕಾಶ ಕಲ್ಪಿಸಲಾಗಿದೆ. ಮರು ಮೌಲ್ಯಮಾಪನಕ್ಕಾಗಿ ಹಾಗೂ ಮರು ಅಂಕ ಎಣಿಕೆಗಾಗಿ ಅರ್ಜಿ ಸಲ್ಲಿಸಲು ಏಪ್ರಿಲ್ 14ರಿಂದ ಏಪ್ರಿಲ್ 20ರವರೆಗೆ ಅವಕಾಶ ಕಲ್ಪಿಸಲಾಗಿದೆ.
ಸ್ಕ್ಯಾನ್ಡ್ ಪ್ರತಿ ಪಡೆಯಲು ಪ್ರತಿ ವಿಷಯಕ್ಕೆ 530 ರೂಪಾಯಿ ಶುಲ್ಕವನ್ನು ವಿಧಿಸಲಾಗಿದೆ. ಮರು ಮೌಲ್ಯಮಾಪನದ ಶುಲ್ಕ ಪ್ರತಿ ವಿಷಯಕ್ಕೆ 1670 ರೂಪಾಯಿ ಆಗಿರುತ್ತದೆ.
ಉತ್ತರ ಪತ್ರಿಕೆಗಳ ಸ್ಯಾನ್ಸ್ ಪ್ರತಿ ಪಡೆಯಲು ಅರ್ಜಿ ಸಲ್ಲಿಸುವ ವಿಧಾನ
- ಮಂಡಳಿಯ ವೆಬ್‌ಸೈಟ್ https://kseab.karnataka.gov.in ರಲ್ಲಿನ ಮುಖಪುಟ (HOME PAGE) ದಲ್ಲಿ Application for Scanned copies, Re- valuation/Re-totalling ಎಂದು ಇರುತ್ತದೆ.
- ಅಲ್ಲಿ Link ಅನ್ನು ಕ್ಲಿಕ್ ಮಾಡಿದರೆ Calender of Events ಪುಟ ತೆರೆಯುತ್ತದೆ. ಇದರಲ್ಲಿ “How to Apply ಅನ್ನು ಕಡ್ಡಾಯವಾಗಿ ಓದಿ ತಿಳಿದುಕೊಳ್ಳುವುದು.
- 2024ರ ದ್ವಿತೀಯ ಪಿಯುಸಿ ಪರೀಕ್ಷೆ-1ರ ನೋಂದಣಿ ಸಂಖ್ಯೆ (Register Number) ಯನ್ನು ಪ್ರವೇಶ ಪತ್ರದಲ್ಲಿರುವಂತೆ ನಮೂದಿಸಬೇಕು. ತಕ್ಷಣವೇ ವಿದ್ಯಾರ್ಥಿಗಳ ಮಾಹಿತಿ ಕಾಣುತ್ತದೆ.
- Scanned copy ಪಡೆಯಲು ಇಚ್ಚಿಸಿದ ವಿಷಯ/ ವಿಷಯಗಳನ್ನು ಒಂದೇ ಬಾರಿಗೆ ಆಯ್ಕೆ ಮಾಡಿಕೊಂಡು ವಿದ್ಯಾರ್ಥಿಯ/ಪೋಷಕರ ನಿಖರವಾದ ಮೊಬೈಲ್ ಸಂಖ್ಯೆ, ತಮ್ಮ ಖಾಸಗಿ ಇ-ಮೇಲ್ ಐಡಿ ಹಾಗೂ ಸ್ವ-ವಿಳಾಸವನ್ನು ಮಾತ್ರ ನಮೂದಿಸಬೇಕು. ನಂತರ Submit ಬಟನ್ ಕ್ಲಿಕ್ ಮಾಡಿದ ಕೂಡಲೇ ಚಲನ್ ಸಂಖ್ಯೆಯು Auto-Generate ಆಗುತ್ತದೆ.
- “Make payment” ಬಟನ್ ಕ್ಲಿಕ್ ಮಾಡಿದ ನಂತರ “Cash payment” ಅಥವಾ “Online payment” ನಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕು.
Cash payment ಆಯ್ಕೆ ಮಾಡಿಕೊಂಡರೆ?
- UNION BANK OF INDIA (CORPORATION BANK), BANGALORE-ONE, KARNATAKA-ONE, GRAMA-ONE ಇವುಗಳಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಂಡು ‘ Generate challan’ ಬಟನ್ ಕ್ಲಿಕ್ ಮಾಡಬೇಕು.
- ಚಲನ್ನಲ್ಲಿ ತಾವು ದಾಖಲಿಸಿದ ಮಾಹಿತಿ ಕಾಣಿಸುತ್ತದೆ. ನಂತರ ಚಲನ್ ಪ್ರಿಂಟ್ ತೆಗೆದುಕೊಳ್ಳುವುದು.
- ಆಯ್ಕೆ ಮಾಡಿದ ಚಲನ್ ಪ್ರಿಂಟ್ ತೆಗೆದುಕೊಂಡು, ನಂತರ ಚಲನ್ ಮುಖಾಂತರ ಹಣವನ್ನು ಮಂಡಲಿಯು ನಿಗದಿಪಡಿಸಿದ ದಿನಾಂಕದೊಳಗೆ ಸಂದಾಯ ಮಾಡುವುದು. ಮಂಡಲಿಯು ನಿಗದಿಪಡಿಸಿರುವ ಕೊನೆಯ ದಿನಾಂಕದ ನಂತರ ಸಂದಾಯ ಮಾಡಲಾಗುವ ಚಲನ್/ಆನ್ಲೈನ್ ಪಾವತಿಗಳನ್ನು ಕಡ್ಡಾಯವಾಗಿ ಪರಿಗಣಿಸಲಾಗುವುದಿಲ್ಲ ಎಂದು ಈ ಮೂಲಕ ಸ್ಪಷ್ಟಪಡಿಸಿದೆ.
- Cash payment ಮುಖಾಂತರ ಹಣ ಸಂದಾಯ ಮಾಡಿದ 5 ಗಂಟೆಗಳ ಒಳಗೆ ತಾವು ನಮೂದಿಸಿದ ಮೊಬೈಲ್ ಸಂಖ್ಯೆಗೆ ಎಸ್ಎಂಎಸ್ ಸಂದೇಶ ಬರುತ್ತದೆ. ಎಸ್.ಎಂ.ಎಸ್. ಬಾರದಿದ್ದಲ್ಲಿ ಸಂಬಂಧಪಟ್ಟ ಬ್ಯಾಂಕ್ ಅನ್ನು ಸಂಪರ್ಕಿಸುವುದು.
Online payment ಆಯ್ಕೆ ಮಾಡಿಕೊಂಡರೆ?
- Karnataka-one ಬಟನ್ ಕ್ಲಿಕ್ ಮಾಡುವುದು,
- ನೀವು ದಾಖಲಿಸಿದ ಮಾಹಿತಿ ಕಾಣಿಸುತ್ತದೆ.
- “pay now” ಬಟನ್ ಕ್ಲಿಕ್ ಮಾಡುವುದು.
- Karnataka-one a continue for payment ಆಯ್ಕೆ ಮಾಡುವುದು.
- ಇದರಲ್ಲಿ “Terms and conditions” ಅನ್ನು ಕಡ್ಡಾಯವಾಗಿ ಓದಿ “check box” ಮೇಲೆ ಕ್ಲಿಕ್ ಮಾಡುವುದು
- continue for payment ಆಯ್ಕೆ ಮಾಡುವುದು.
- ನಂತರ “pay now” ಕ್ಲಿಕ್ ಮಾಡುವುದು.
- Processing ಆಗುವವರೆಗೆ “Back button”/”Close button” ಅಥವಾ ” “Refresh button”ಗಳನ್ನು ಒತ್ತಬೇಡಿ.
- “Online payment” ಮುಖಾಂತರ ಹಣ ಸಂದಾಯ ಆದ ನಂತರ ನೀವು ನಮೂದಿಸಿದ ಮೊಬೈಲ್ ಸಂಖ್ಯೆಗೆ ಎಸ್ಎಂಎಸ್ ಸಂದೇಶ ಬರುತ್ತದೆ.
- SMS ಸಂದೇಶ ಬಾರದಿದ್ದಲ್ಲಿ ಹಣ ಸಂದಾಯಿಸಿದ Karnataka-one ಅನ್ನು ಕೂಡಲೇ ಸಂಪರ್ಕಿಸಿ.
ಇದನ್ನೂ ಓದಿ: CET 2024: ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್; ಸಿಇಟಿಗೆ ಹೆಚ್ಚು ಅಂಕಗಳ ಪಟ್ಟಿ ಪರಿಗಣನೆ
6. ಸ್ಕ್ಯಾನ್ಡ್ ಪ್ರತಿಗೆ (Scanned copy) ಅಪ್ಲೈ ಮಾಡಿದ ನಂತರ Challan Generate ಮಾಡಿಕೊಳ್ಳಬೇಕು. ವಿದ್ಯಾರ್ಥಿಯು ಅದೇ ಚಲನ್ ಸಂಖ್ಯೆಯನ್ನು ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಉಪಯೋಗಿಸುವಂತಿಲ್ಲ. ಮರುಮೌಲ್ಯಮಾಪನಕ್ಕೆ ಪ್ರತ್ಯೇಕ Challan Generate ಮಾಡಿಕೊಳ್ಳಬೇಕು.
7. ಸ್ಕ್ಯಾನ್ಡ್ ಪ್ರತಿಗೆ ಮತ್ತು ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವಾಗ ವಿದ್ಯಾರ್ಥಿಗಳು/ ಪೋಷಕರು ಅವರ ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸತಕ್ಕದ್ದು, ಮಂಡಲಿಯು ಆದೇ ಮೊಬೈಲ್ ಸಂಖ್ಯೆಗೆ OTP (One Time Password) ಕಳುಹಿಸುತ್ತದೆ. ಇದಲ್ಲದೆ ಸದರಿ ಮೊಬೈಲ್ ಸಂಖ್ಯೆಯು ಈ ಪ್ರಕ್ರಿಯೆ ಮುಕ್ತಾಯವಾಗುವವರೆಗೆ ಚಾಲ್ತಿಯಲ್ಲಿರತಕ್ಕದ್ದು.
8. ವಿದ್ಯಾರ್ಥಿಯ ಪ್ರತಿ ಮತ್ತು ಬ್ಯಾಂಕ್ ಪ್ರತಿಯನ್ನೊಳಗೊಂಡ ಎರಡು ಭಾಗಗಳಿರುವ ಚಲನ್ ಡೌನ್‌ಲೋಡ್ ಮಾಡಿಕೊಂಡು ನಿಗದಿಪಡಿಸಿರುವ ಶುಲ್ಕವನ್ನು ಆಯ್ಕೆ ಮಾಡಿಕೊಂಡಿರುವ ಬ್ಯಾಂಕ್ ಮುಖಾಂತರ ಪಾವತಿ ಮಾಡಿದ ನಂತರ Challan ಸಂಖ್ಯೆಯನ್ನು ಮುಂದಿನ ಎಲ್ಲ ಪ್ರಕ್ರಿಯೆಗಳಿಗೂ ಬಳಸಿಕೊಳ್ಳಬೇಕಾಗಿರುವುದರಿಂದ ಅಭ್ಯರ್ಥಿಗಳು ಈ ಸಂಖ್ಯೆಯನ್ನು ನೆನಪಿನಲ್ಲಿಟ್ಟುಕೊಳ್ಳುವುದು.
9. ಸ್ಕ್ಯಾನ್ಡ್ ಉತ್ತರ ಪತ್ರಿಕೆಯನ್ನು ಮಂಡಳಿ ವೆಬ್‌ಸೈಟ್‌ನಲ್ಲಿ UPLOAD ಮಾಡಿದ ಕೂಡಲೇ ವಿದ್ಯಾರ್ಥಿಯು ನೀಡಿರುವ ಮೊಬೈಲ್ ಸಂಖ್ಯೆಗೆ ಸಂದೇಶ ರವಾನೆಯಾಗುತ್ತದೆ.
10. UPLOAD ಮಾಡಲಾದ scanned ಉತ್ತರ ಪತ್ರಿಕೆಗಳನ್ನು ಮಂಡಳಿಯ ಜಾಲತಾಣದಲ್ಲಿ ನೀಡಲಾಗಿರುವ ಲಿಂಕ್ ಮುಖಾಂತರವೇ ಡೌನ್‌ಲೋಡ್ ಮಾಡಿಕೊಳ್ಳುವುದು.
11. ಸಂದೇಶ ಸ್ವೀಕರಿಸಿದ ವಿದ್ಯಾರ್ಥಿಗಳು ಈ ಮೊದಲೇ ನೀಡಲಾದ ಚಲನ್ ಸಂಖ್ಯೆಯನ್ನು ಬಳಸಿ Answer paper scanned copyಯನ್ನು ದಿನಾಂಕ: 14/04/2024 ರಿಂದ 19/04/2024 ರೊಳಗೆ ಡೌನ್‌ಲೋಡ್ ಮಾಡಿಕೊಳ್ಳಬಹುದು.
12. ಸ್ಕ್ಯಾನ್ಡ್ ಪ್ರತಿಯನ್ನು ಡೌನ್ಲೋಡ್ ಮಾಡಿಕೊಳ್ಳಲು ಅನುಸರಿಸಬೇಕಾದ ಕ್ರಮಗಳು.
- ಸ್ಕ್ಯಾನ್ಡ್ ಪ್ರತಿಗಾಗಿ ಶುಲ್ಕ ಪಾವತಿಸಿರುವ ಚಲನ್ ಸಂಖ್ಯೆಯನ್ನು ನಮೂದಿಸಿ, Submit ಮಾಡುವುದು.
- Submit ಮಾಡಿದ ನಂತರ ನೀವು ಸ್ಕ್ಯಾನ್ಡ್ ಪ್ರತಿಗೆ ಅಪ್ಲೈ ಮಾಡುವಾಗ ನೀಡಿರುವ ಮೊಬೈಲ್ ಸಂಖ್ಯೆಗೆ ಒಟಿಪಿ ಕಳುಹಿಸಲಾಗುವುದು.
- ನಂತರ ವಿದ್ಯಾರ್ಥಿಯ ನೋಂದಣಿ ಸಂಖ್ಯೆ ಮತ್ತು ಶುಲ್ಕ ಪಾವತಿಸಿರುವ ವಿಷಯಗಳು ಕಾಣಿಸುತ್ತವೆ. ತಾವು ಇಚ್ಚಿಸಿದ ಭಾಷೆ/ವಿಷಯವನ್ನು (Subject) ಆಯ್ಕೆ ಮಾಡಿಕೊಳ್ಳಬೇಕು.
- ಸ್ಕ್ಯಾನ್ಡ್ ಪ್ರತಿಗೆ ಅಪ್ಲೈ ಮಾಡುವಾಗ ಚಾಲನೆಯಲ್ಲಿರುವ ನಿಮ್ಮ ಮೊಬೈಲ್ ಸಂಖ್ಯೆಯನ್ನು ಮಾತ್ರ ಉಪಯೋಗಿಸತಕ್ಕದ್ದು.