2nd PUC Exam: ದ್ವಿತೀಯ ಪಿಯುಸಿ; ವಾರ್ಷಿಕ ಪರೀಕ್ಷೆಯ ಉತ್ತರ ಪತ್ರಿಕೆ ಸ್ಕ್ಯಾನ್ಡ್ ಪ್ರತಿ ಪಡೆಯಲು ನಾಳೆಯೇ ಕೊನೇ ದಿನ! - Vistara News

Lok Sabha Election 2024

2nd PUC Exam: ದ್ವಿತೀಯ ಪಿಯುಸಿ; ವಾರ್ಷಿಕ ಪರೀಕ್ಷೆಯ ಉತ್ತರ ಪತ್ರಿಕೆ ಸ್ಕ್ಯಾನ್ಡ್ ಪ್ರತಿ ಪಡೆಯಲು ನಾಳೆಯೇ ಕೊನೇ ದಿನ!

2nd PUC Exam: ಉತ್ತರ ಪತ್ರಿಕೆ ಸ್ಕ್ಯಾನ್ಡ್ ಪ್ರತಿಗಾಗಿ ಅರ್ಜಿ‌ ಸಲ್ಲಿಸಲು ಏಪ್ರಿಲ್ 10ರಿಂದ ಏಪ್ರಿಲ್ 16ರವರೆಗೆ ಅವಕಾಶವನ್ನು ಕಲ್ಪಿಸಲಾಗಿದೆ. ಉತ್ತರ ಪತ್ರಿಕೆ ಸ್ಕ್ಯಾನ್ಡ್ ಪ್ರತಿ ಡೌನ್‌ಲೋಡ್ ಮಾಡಿಕೊಳ್ಳಲು ಏಪ್ರಿಲ್ 14ರಿಂದ ಏಪ್ರಿಲ್ 19ರವರೆಗೆ ಅವಕಾಶ ಕಲ್ಪಿಸಲಾಗಿದೆ. ಮರು ಮೌಲ್ಯಮಾಪನಕ್ಕಾಗಿ ಹಾಗೂ ಮರು ಅಂಕ ಎಣಿಕೆಗಾಗಿ ಅರ್ಜಿ ಸಲ್ಲಿಸಲು ಏಪ್ರಿಲ್ 14ರಿಂದ ಏಪ್ರಿಲ್ 20ರವರೆಗೆ ಅವಕಾಶ ಕಲ್ಪಿಸಲಾಗಿದೆ. ಸ್ಕ್ಯಾನ್ಡ್ ಪ್ರತಿ ಪಡೆಯಲು ಪ್ರತಿ ವಿಷಯಕ್ಕೆ 530 ರೂಪಾಯಿ ಶುಲ್ಕವನ್ನು ವಿಧಿಸಲಾಗಿದೆ. ಮರು ಮೌಲ್ಯಮಾಪನದ ಶುಲ್ಕ ಪ್ರತಿ ವಿಷಯಕ್ಕೆ 1670 ರೂಪಾಯಿ ಆಗಿರುತ್ತದೆ.

VISTARANEWS.COM


on

2nd PUC Exam Tomorrow last day to get scanned copy of answer sheet
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ -1ರ ಫಲಿತಾಂಶವು (2nd PUC Result) ಈಗಾಗಲೇ ಪ್ರಕಟವಾಗಿದೆ. ಕೆಲವರು ಅನುತ್ತೀರ್ಣರಾಗಿದ್ದರೆ, ಮತ್ತೆ ಕೆಲವರಿಗೆ ಅಂಕ ಕಡಿಮೆ ಬಂದಿದೆ ಎಂಬ ಅಸಮಾಧಾನ. ಹೀಗಾಗಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ 2 ನಡೆಯಲಿದ್ದು, ಇದರ ಅಂತಿಮ ವೇಳಾಪಟ್ಟಿಯನ್ನು ಪ್ರಕಟ ಮಾಡಲಾಗಿದೆ. ಏಪ್ರಿಲ್ 29ರಿಂದ ಮೇ 16ರವರೆಗೆ 2ನೇ ಪರೀಕ್ಷೆಯನ್ನು (2nd PUC Exam) ನಡೆಸಲಾಗುವುದು. ಇದೇ ವೇಳೆ ಉತ್ತರ ಪತ್ರಿಕೆ ಸ್ಕ್ಯಾನ್ಡ್ ಪ್ರತಿ ಪಡೆಯಲು ಅರ್ಜಿ ಸಲ್ಲಿಸಲು ಮಂಗಳವಾರ (ಏಪ್ರಿಲ್‌ 16) ಕೊನೇ ದಿನವಾಗಿದೆ.

2ನೇ ವಾರ್ಷಿಕ ಪರೀಕ್ಷೆ ವೇಳಾಪಟ್ಟಿ ಇಂತಿದೆ:

  • ಏಪ್ರಿಲ್ 29ರಂದು ಕನ್ನಡ/ಅರೇಬಿಕ್, 30ರಂದು ಇತಿಹಾಸ/ಭೌತಶಾಸ್ತ್ರ
  • ಮೇ 2ರಂದು ಇಂಗ್ಲಿಷ್, 3ರಂದು ರಾಜ್ಯಶಾಸ್ತ್ರ, ಸಂಖ್ಯಾ ಶಾಸ್ತ್ರ, 4ರಂದು ಭೂಗೋಳ ಶಾಸ್ತ್ರ, ಮನಃ ಶಾಸ್ತ್ರ, ರಸಾಯನ ಶಾಸ್ತ್ರ, ಗೃಹ ವಿಜ್ಞಾನ, ಮೂಲಗಣಿತ
  • 9ರಂದು ತರ್ಕ ಶಾಸ್ತ್ರ, ವ್ಯವಹಾರ ಅಧ್ಯಯನ, ಗಣಿತ, ಶಿಕ್ಷಣ ಶಾಸ್ತ್ರ
  • 11ರಂದು ಸಮಾಜಶಾಸ್ತ್ರ, ಜೀವಶಾಸ್ತ್ರ, ಭೂಗರ್ಭ ಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ, ಗಣಿಕ ವಿಜ್ಞಾನ
  • 13ರಂದು ಅರ್ಥಶಾಸ್ತ್ರ, 14ರಂದು ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, 15ರಂದು ಹಿಂದಿ
  • 16ರಂದು ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್

ವಾರ್ಷಿಕ ಪರೀಕ್ಷೆ 1ರಲ್ಲಿ ನಿರೀಕ್ಷಿತ ಫಲಿತಾಂಶ ಪಡೆಯಲು ಆಗದ ಹಾಗೂ ಅನುತ್ತೀರ್ಣರಾದ ವಿದ್ಯಾರ್ಥಿಗಳು ಈ ಪರೀಕ್ಷೆಯನ್ನು ಬರೆಯಬಹುದಾಗಿದೆ.

ಉತ್ತರ ಪತ್ರಿಕೆ ಡೌನ್ಲೋಡ್, ಮರು ಮೌಲ್ಯಮಾಪನ, ಮರು ಎಣಿಕೆ ದಿನಾಂಕ ಫಿಕ್ಸ್

ವಿದ್ಯಾರ್ಥಿಗಳಿಗೆ ಉತ್ತರ ಪತ್ರಿಕೆ ಪ್ರತಿ ಪಡೆಯಲು ಅರ್ಜಿ ಸಲ್ಲಿಕೆ, ಡೌನ್‌ಲೋಡ್‌ ಮಾಡಿಕೊಳ್ಳಲು ಹಾಗೂ ಮರು ಮೌಲ್ಯಮಾಪನ ಹಾಗೂ ಮರು ಅಂಕ ಎಣಿಕೆಗೆ ಅರ್ಜಿ ಸಲ್ಲಿಸಲು ಕಾಲಾವಕಾಶವನ್ನು ಕಲ್ಪಿಸಲಾಗಿದೆ.

ಉತ್ತರ ಪತ್ರಿಕೆ ಸ್ಕ್ಯಾನ್ಡ್ ಪ್ರತಿಗಾಗಿ ಅರ್ಜಿ‌ ಸಲ್ಲಿಸಲು ಏಪ್ರಿಲ್ 10ರಿಂದ ಏಪ್ರಿಲ್ 16ರವರೆಗೆ ಅವಕಾಶವನ್ನು ಕಲ್ಪಿಸಲಾಗಿದೆ. ಉತ್ತರ ಪತ್ರಿಕೆ ಸ್ಕ್ಯಾನ್ಡ್ ಪ್ರತಿ ಡೌನ್‌ಲೋಡ್ ಮಾಡಿಕೊಳ್ಳಲು ಏಪ್ರಿಲ್ 14ರಿಂದ ಏಪ್ರಿಲ್ 19ರವರೆಗೆ ಅವಕಾಶ ಕಲ್ಪಿಸಲಾಗಿದೆ. ಮರು ಮೌಲ್ಯಮಾಪನಕ್ಕಾಗಿ ಹಾಗೂ ಮರು ಅಂಕ ಎಣಿಕೆಗಾಗಿ ಅರ್ಜಿ ಸಲ್ಲಿಸಲು ಏಪ್ರಿಲ್ 14ರಿಂದ ಏಪ್ರಿಲ್ 20ರವರೆಗೆ ಅವಕಾಶ ಕಲ್ಪಿಸಲಾಗಿದೆ.

ಸ್ಕ್ಯಾನ್ಡ್ ಪ್ರತಿ ಪಡೆಯಲು ಪ್ರತಿ ವಿಷಯಕ್ಕೆ 530 ರೂಪಾಯಿ ಶುಲ್ಕವನ್ನು ವಿಧಿಸಲಾಗಿದೆ. ಮರು ಮೌಲ್ಯಮಾಪನದ ಶುಲ್ಕ ಪ್ರತಿ ವಿಷಯಕ್ಕೆ 1670 ರೂಪಾಯಿ ಆಗಿರುತ್ತದೆ.

ಉತ್ತರ ಪತ್ರಿಕೆಗಳ ಸ್ಯಾನ್ಸ್ ಪ್ರತಿ ಪಡೆಯಲು ಅರ್ಜಿ ಸಲ್ಲಿಸುವ ವಿಧಾನ

  1. ಮಂಡಳಿಯ ವೆಬ್‌ಸೈಟ್‌ https://kseab.karnataka.gov.in ರಲ್ಲಿನ ಮುಖಪುಟ (HOME PAGE) ದಲ್ಲಿ Application for Scanned copies, Re- valuation/Re-totalling ಎಂದು ಇರುತ್ತದೆ.
  2. ಅಲ್ಲಿ Link ಅನ್ನು ಕ್ಲಿಕ್ ಮಾಡಿದರೆ Calender of Events ಪುಟ ತೆರೆಯುತ್ತದೆ. ಇದರಲ್ಲಿ “How to Apply ಅನ್ನು ಕಡ್ಡಾಯವಾಗಿ ಓದಿ ತಿಳಿದುಕೊಳ್ಳುವುದು.
  3. 2024ರ ದ್ವಿತೀಯ ಪಿಯುಸಿ ಪರೀಕ್ಷೆ-1ರ ನೋಂದಣಿ ಸಂಖ್ಯೆ (Register Number) ಯನ್ನು ಪ್ರವೇಶ ಪತ್ರದಲ್ಲಿರುವಂತೆ ನಮೂದಿಸಬೇಕು. ತಕ್ಷಣವೇ ವಿದ್ಯಾರ್ಥಿಗಳ ಮಾಹಿತಿ ಕಾಣುತ್ತದೆ.
  4. Scanned copy ಪಡೆಯಲು ಇಚ್ಚಿಸಿದ ವಿಷಯ/ ವಿಷಯಗಳನ್ನು ಒಂದೇ ಬಾರಿಗೆ ಆಯ್ಕೆ ಮಾಡಿಕೊಂಡು ವಿದ್ಯಾರ್ಥಿಯ/ಪೋಷಕರ ನಿಖರವಾದ ಮೊಬೈಲ್ ಸಂಖ್ಯೆ, ತಮ್ಮ ಖಾಸಗಿ ಇ-ಮೇಲ್ ಐಡಿ ಹಾಗೂ ಸ್ವ-ವಿಳಾಸವನ್ನು ಮಾತ್ರ ನಮೂದಿಸಬೇಕು. ನಂತರ Submit ಬಟನ್ ಕ್ಲಿಕ್ ಮಾಡಿದ ಕೂಡಲೇ ಚಲನ್ ಸಂಖ್ಯೆಯು Auto-Generate ಆಗುತ್ತದೆ.
  5. “Make payment” ಬಟನ್‌ ಕ್ಲಿಕ್‌ ಮಾಡಿದ ನಂತರ “Cash payment” ಅಥವಾ “Online payment” ನಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕು.

Cash payment ಆಯ್ಕೆ ಮಾಡಿಕೊಂಡರೆ?

  • UNION BANK OF INDIA (CORPORATION BANK), BANGALORE-ONE, KARNATAKA-ONE, GRAMA-ONE ಇವುಗಳಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಂಡು ‘ Generate challan’ ಬಟನ್ ಕ್ಲಿಕ್ ಮಾಡಬೇಕು.
  • ಚಲನ್‌ನಲ್ಲಿ ತಾವು ದಾಖಲಿಸಿದ ಮಾಹಿತಿ ಕಾಣಿಸುತ್ತದೆ. ನಂತರ ಚಲನ್ ಪ್ರಿಂಟ್ ತೆಗೆದುಕೊಳ್ಳುವುದು.
  • ಆಯ್ಕೆ ಮಾಡಿದ ಚಲನ್ ಪ್ರಿಂಟ್ ತೆಗೆದುಕೊಂಡು, ನಂತರ ಚಲನ್ ಮುಖಾಂತರ ಹಣವನ್ನು ಮಂಡಲಿಯು ನಿಗದಿಪಡಿಸಿದ ದಿನಾಂಕದೊಳಗೆ ಸಂದಾಯ ಮಾಡುವುದು. ಮಂಡಲಿಯು ನಿಗದಿಪಡಿಸಿರುವ ಕೊನೆಯ ದಿನಾಂಕದ ನಂತರ ಸಂದಾಯ ಮಾಡಲಾಗುವ ಚಲನ್/ಆನ್‌ಲೈನ್ ಪಾವತಿಗಳನ್ನು ಕಡ್ಡಾಯವಾಗಿ ಪರಿಗಣಿಸಲಾಗುವುದಿಲ್ಲ ಎಂದು ಈ ಮೂಲಕ ಸ್ಪಷ್ಟಪಡಿಸಿದೆ.
  • Cash payment ಮುಖಾಂತರ ಹಣ ಸಂದಾಯ ಮಾಡಿದ 5 ಗಂಟೆಗಳ ಒಳಗೆ ತಾವು ನಮೂದಿಸಿದ ಮೊಬೈಲ್ ಸಂಖ್ಯೆಗೆ ಎಸ್‌ಎಂಎಸ್ ಸಂದೇಶ ಬರುತ್ತದೆ. ಎಸ್.ಎಂ.ಎಸ್. ಬಾರದಿದ್ದಲ್ಲಿ ಸಂಬಂಧಪಟ್ಟ ಬ್ಯಾಂಕ್‌ ಅನ್ನು ಸಂಪರ್ಕಿಸುವುದು.

Online payment ಆಯ್ಕೆ ಮಾಡಿಕೊಂಡರೆ?

  • Karnataka-one ಬಟನ್ ಕ್ಲಿಕ್ ಮಾಡುವುದು,
  • ನೀವು ದಾಖಲಿಸಿದ ಮಾಹಿತಿ ಕಾಣಿಸುತ್ತದೆ.
  • “pay now” ಬಟನ್ ಕ್ಲಿಕ್ ಮಾಡುವುದು.
  • Karnataka-one a continue for payment ಆಯ್ಕೆ ಮಾಡುವುದು.
  • ಇದರಲ್ಲಿ “Terms and conditions” ಅನ್ನು ಕಡ್ಡಾಯವಾಗಿ ಓದಿ “check box” ಮೇಲೆ ಕ್ಲಿಕ್‌ ಮಾಡುವುದು
  • continue for payment ಆಯ್ಕೆ ಮಾಡುವುದು.
  • ನಂತರ “pay now” ಕ್ಲಿಕ್ ಮಾಡುವುದು.
  • Processing ಆಗುವವರೆಗೆ “Back button”/”Close button” ಅಥವಾ ” “Refresh button”ಗಳನ್ನು ಒತ್ತಬೇಡಿ.
  • “Online payment” ಮುಖಾಂತರ ಹಣ ಸಂದಾಯ ಆದ ನಂತರ ನೀವು ನಮೂದಿಸಿದ ಮೊಬೈಲ್ ಸಂಖ್ಯೆಗೆ ಎಸ್‌ಎಂಎಸ್ ಸಂದೇಶ ಬರುತ್ತದೆ.
  • SMS ಸಂದೇಶ ಬಾರದಿದ್ದಲ್ಲಿ ಹಣ ಸಂದಾಯಿಸಿದ Karnataka-one ಅನ್ನು ಕೂಡಲೇ ಸಂಪರ್ಕಿಸಿ.

ಇದನ್ನೂ ಓದಿ: CET 2024: ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್‌; ಸಿಇಟಿಗೆ ಹೆಚ್ಚು ಅಂಕಗಳ ಪಟ್ಟಿ ಪರಿಗಣನೆ

6. ಸ್ಕ್ಯಾನ್ಡ್‌ ಪ್ರತಿಗೆ (Scanned copy) ಅಪ್ಲೈ ಮಾಡಿದ ನಂತರ Challan Generate ಮಾಡಿಕೊಳ್ಳಬೇಕು. ವಿದ್ಯಾರ್ಥಿಯು ಅದೇ ಚಲನ್ ಸಂಖ್ಯೆಯನ್ನು ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಉಪಯೋಗಿಸುವಂತಿಲ್ಲ. ಮರುಮೌಲ್ಯಮಾಪನಕ್ಕೆ ಪ್ರತ್ಯೇಕ Challan Generate ಮಾಡಿಕೊಳ್ಳಬೇಕು.

7. ಸ್ಕ್ಯಾನ್ಡ್‌ ಪ್ರತಿಗೆ ಮತ್ತು ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವಾಗ ವಿದ್ಯಾರ್ಥಿಗಳು/ ಪೋಷಕರು ಅವರ ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸತಕ್ಕದ್ದು, ಮಂಡಲಿಯು ಆದೇ ಮೊಬೈಲ್ ಸಂಖ್ಯೆಗೆ OTP (One Time Password) ಕಳುಹಿಸುತ್ತದೆ. ಇದಲ್ಲದೆ ಸದರಿ ಮೊಬೈಲ್ ಸಂಖ್ಯೆಯು ಈ ಪ್ರಕ್ರಿಯೆ ಮುಕ್ತಾಯವಾಗುವವರೆಗೆ ಚಾಲ್ತಿಯಲ್ಲಿರತಕ್ಕದ್ದು.

8. ವಿದ್ಯಾರ್ಥಿಯ ಪ್ರತಿ ಮತ್ತು ಬ್ಯಾಂಕ್ ಪ್ರತಿಯನ್ನೊಳಗೊಂಡ ಎರಡು ಭಾಗಗಳಿರುವ ಚಲನ್ ಡೌನ್‌ಲೋಡ್ ಮಾಡಿಕೊಂಡು ನಿಗದಿಪಡಿಸಿರುವ ಶುಲ್ಕವನ್ನು ಆಯ್ಕೆ ಮಾಡಿಕೊಂಡಿರುವ ಬ್ಯಾಂಕ್ ಮುಖಾಂತರ ಪಾವತಿ ಮಾಡಿದ ನಂತರ Challan ಸಂಖ್ಯೆಯನ್ನು ಮುಂದಿನ ಎಲ್ಲ ಪ್ರಕ್ರಿಯೆಗಳಿಗೂ ಬಳಸಿಕೊಳ್ಳಬೇಕಾಗಿರುವುದರಿಂದ ಅಭ್ಯರ್ಥಿಗಳು ಈ ಸಂಖ್ಯೆಯನ್ನು ನೆನಪಿನಲ್ಲಿಟ್ಟುಕೊಳ್ಳುವುದು.

9. ಸ್ಕ್ಯಾನ್ಡ್‌ ಉತ್ತರ ಪತ್ರಿಕೆಯನ್ನು ಮಂಡಳಿ ವೆಬ್‌ಸೈಟ್‌ನಲ್ಲಿ UPLOAD ಮಾಡಿದ ಕೂಡಲೇ ವಿದ್ಯಾರ್ಥಿಯು ನೀಡಿರುವ ಮೊಬೈಲ್ ಸಂಖ್ಯೆಗೆ ಸಂದೇಶ ರವಾನೆಯಾಗುತ್ತದೆ.

10. UPLOAD ಮಾಡಲಾದ scanned ಉತ್ತರ ಪತ್ರಿಕೆಗಳನ್ನು ಮಂಡಳಿಯ ಜಾಲತಾಣದಲ್ಲಿ ನೀಡಲಾಗಿರುವ ಲಿಂಕ್ ಮುಖಾಂತರವೇ ಡೌನ್‌ಲೋಡ್ ಮಾಡಿಕೊಳ್ಳುವುದು.

11. ಸಂದೇಶ ಸ್ವೀಕರಿಸಿದ ವಿದ್ಯಾರ್ಥಿಗಳು ಈ ಮೊದಲೇ ನೀಡಲಾದ ಚಲನ್ ಸಂಖ್ಯೆಯನ್ನು ಬಳಸಿ Answer paper scanned copyಯನ್ನು ದಿನಾಂಕ: 14/04/2024 ರಿಂದ 19/04/2024 ರೊಳಗೆ ಡೌನ್‌ಲೋಡ್ ಮಾಡಿಕೊಳ್ಳಬಹುದು.

12. ಸ್ಕ್ಯಾನ್ಡ್‌ ಪ್ರತಿಯನ್ನು ಡೌನ್ಲೋಡ್‌ ಮಾಡಿಕೊಳ್ಳಲು ಅನುಸರಿಸಬೇಕಾದ ಕ್ರಮಗಳು.

  • ಸ್ಕ್ಯಾನ್ಡ್‌ ಪ್ರತಿಗಾಗಿ ಶುಲ್ಕ ಪಾವತಿಸಿರುವ ಚಲನ್‌ ಸಂಖ್ಯೆಯನ್ನು ನಮೂದಿಸಿ, Submit ಮಾಡುವುದು.
  • Submit ಮಾಡಿದ ನಂತರ ನೀವು ಸ್ಕ್ಯಾನ್ಡ್‌ ಪ್ರತಿಗೆ ಅಪ್ಲೈ ಮಾಡುವಾಗ ನೀಡಿರುವ ಮೊಬೈಲ್ ಸಂಖ್ಯೆಗೆ ಒಟಿಪಿ ಕಳುಹಿಸಲಾಗುವುದು.
  • ನಂತರ ವಿದ್ಯಾರ್ಥಿಯ ನೋಂದಣಿ ಸಂಖ್ಯೆ ಮತ್ತು ಶುಲ್ಕ ಪಾವತಿಸಿರುವ ವಿಷಯಗಳು ಕಾಣಿಸುತ್ತವೆ. ತಾವು ಇಚ್ಚಿಸಿದ ಭಾಷೆ/ವಿಷಯವನ್ನು (Subject) ಆಯ್ಕೆ ಮಾಡಿಕೊಳ್ಳಬೇಕು.
  • ಸ್ಕ್ಯಾನ್ಡ್‌ ಪ್ರತಿಗೆ ಅಪ್ಲೈ ಮಾಡುವಾಗ ಚಾಲನೆಯಲ್ಲಿರುವ ನಿಮ್ಮ ಮೊಬೈಲ್ ಸಂಖ್ಯೆಯನ್ನು ಮಾತ್ರ ಉಪಯೋಗಿಸತಕ್ಕದ್ದು.
ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

3ನೇ ಹಂತದಲ್ಲಿ ಕಣಕ್ಕಿಳಿದ 1,352 ಅಭ್ಯರ್ಥಿಗಳ ಪೈಕಿ 244 ಜನರ ವಿರುದ್ಧ ಕ್ರಿಮಿನಲ್‌ ಕೇಸ್!

Lok Sabha Election 2024: ಮೂರನೇ ಹಂತದಲ್ಲಿ 1,352 ಅಭ್ಯರ್ಥಿಗಳು ಕಣಕ್ಕಿಳಿದಿದ್ದು, ಇವರಲ್ಲಿ ಶೇ.18ರಷ್ಟು ಅಂದರೆ 244 ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್‌ ಕೇಸ್‌ ದಾಖಲಾಗಿವೆ. 172 ಅಭ್ಯರ್ಥಿಗಳ ವಿರುದ್ಧ ಗಂಭೀರ ಕ್ರಿಮಿನಲ್‌ ಕೇಸ್‌ ದಾಖಲಾಗಿವೆ. ಅತ್ಯಾಚಾರ ಸೇರಿ ಮಹಿಳೆಯರ ಮೇಲೆ ದೌರ್ಜನ್ಯಕ್ಕೆ ಕುರಿತಂತೆ 38 ಜನರ ವಿರುದ್ಧ ಕೇಸ್‌ ದಾಖಲಾಗಿದೆ. ದ್ವೇಷ ಭಾಷಣಕ್ಕೆ ಕುರಿತಂತೆ 17 ಅಭ್ಯರ್ಥಿಗಳ ವಿರುದ್ಧ ಪ್ರಕರಣ ದಾಖಲಾಗಿವೆ ಎಂದು ಎಡಿಆರ್‌ ವರದಿ ತಿಳಿಸಿದೆ.

VISTARANEWS.COM


on

Lok Sabha Election
Koo

ನವದೆಹಲಿ: ದೇಶಾದ್ಯಂತ ಬೇಸಿಗೆಯ ಬಿಸಿಲಿನಷ್ಟೇ ಲೋಕಸಭೆ ಚುನಾವಣೆ (Lok Sabha Election 2024) ಕಾವು ಕೂಡ ಜೋರಾಗಿದೆ. ರಾಜಕೀಯ ನಾಯಕರ ಅಬ್ಬರದ ಸಮಾವೇಶಗಳು, ಪ್ರಚಾರದ ಭರಾಟೆ, ತೀಕ್ಷ್ಣ ಹೇಳಿಕೆಗಳು, ಪ್ರತಿಸ್ಪರ್ಧಿಗಳ ವಿರುದ್ಧ ಮಾಡುವ ಆರೋಪಗಳು ಸುದ್ದಿಯಾಗುತ್ತಿವೆ. ಇನ್ನು ಮೇ 7ರಂದು ಮೂರನೇ ಹಂತದ ಮತದಾನ ನಡೆಯಲಿದ್ದು, ಇದಕ್ಕಾಗಿ ಅಭ್ಯರ್ಥಿಗಳು, ನಾಯಕರು ಇನ್ನಿಲ್ಲದ ಪ್ರಚಾರದಲ್ಲಿ ತೊಡಗಿದ್ದಾರೆ. ಇದರ ಬೆನ್ನಲ್ಲೇ, ಮೂರನೇ ಹಂತದಲ್ಲಿ 1,352 ಅಭ್ಯರ್ಥಿಗಳು ಕಣಕ್ಕಿಳಿದಿದ್ದು, ಇವರಲ್ಲಿ ಶೇ.18ರಷ್ಟು ಅಂದರೆ 244 ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್‌ ಕೇಸ್‌ (Criminal Case) ದಾಖಲಾಗಿವೆ ಎಂದು ತಿಳಿದುಬಂದಿದೆ.

ನ್ಯಾಷನಲ್‌ ಎಲೆಕ್ಷನ್‌ ವಾಚ್‌ ಹಾಗೂ ಅಸೋಸಿಯೇಷನ್‌ ಫಾರ್‌ ಡೆಮಾಕ್ರಟಿಕ್‌ ರಿಫಾರ್ಮ್ಸ್‌ (ADR) ಬಿಡುಗಡೆ ಮಾಡಿರುವ ವರದಿ ಪ್ರಕಾರ, ಮೂರನೇ ಹಂತದ 244 ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್‌ ಕೇಸ್‌ ದಾಖಲಾಗಿವೆ ಎಂದು ತಿಳಿದುಬಂದಿದೆ. 172 ಅಭ್ಯರ್ಥಿಗಳ ವಿರುದ್ಧ ಗಂಭೀರ ಕ್ರಿಮಿನಲ್‌ ಕೇಸ್‌ ದಾಖಲಾಗಿವೆ. ಅತ್ಯಾಚಾರ ಸೇರಿ ಮಹಿಳೆಯರ ಮೇಲೆ ದೌರ್ಜನ್ಯಕ್ಕೆ ಕುರಿತಂತೆ 38 ಜನರ ವಿರುದ್ಧ ಕೇಸ್‌ ದಾಖಲಾಗಿದೆ. ದ್ವೇಷ ಭಾಷಣಕ್ಕೆ ಕುರಿತಂತೆ 17 ಅಭ್ಯರ್ಥಿಗಳ ವಿರುದ್ಧ ಪ್ರಕರಣ ದಾಖಲಾಗಿವೆ. ಅಭ್ಯರ್ಥಿಗಳು ಚುನಾವಣೆ ಆಯೋಗಕ್ಕೆ ನೀಡಿರುವ ಮಾಹಿತಿ ಆಧರಿಸಿ ವರದಿ ತಯಾರಿಸಲಾಗಿದೆ.

Lok Sabha Election-2024

ಬಿಜೆಪಿಯಿಂದ ಸ್ಪರ್ಧಿಸಿದ 82 ಅಭ್ಯರ್ಥಿಗಳಲ್ಲಿ 22 ಮಂದಿ ವಿರುದ್ಧ ಕ್ರಿಮಿನಲ್‌ ಕೇಸ್‌ ಇವೆ. ಇನ್ನು ಕಾಂಗ್ರೆಸ್‌ನ 68 ಅಭ್ಯರ್ಥಿಗಳ ಪೈಕಿ 26, ಆರ್‌ಜೆಡಿಯ ಮೂರಕ್ಕೆ ಮೂವರ ವಿರುದ್ಧವೂ ಕ್ರಿಮಿನಲ್‌ ಕೇಸ್‌ ದಾಖಲಾಗಿವೆ. ಶಿವಸೇನೆ (ಉದ್ಧವ್‌ ಬಾಳಾಸಾಹೇಬ್‌ ಠಾಕ್ರೆ) ಶೇ.80, ಎನ್‌ಸಿಪಿ (ಶರದ್‌ ಪವಾರ್)‌ ಶೇ.67, ಸಮಾಜವಾದಿ ಪಾರ್ಟಿ ಶೇ.50, ಜೆಡಿಯು ಶೇ.33 ಹಾಗೂ ತೃಣಮೂಲ ಕಾಂಗ್ರೆಸ್‌ನ ಶೇ.17ರಷ್ಟು ಅಭ್ಯರ್ಥಿಗಳು ಕ್ರಿಮಿನಲ್‌ ಕೇಸ್‌ ಹೊಂದಿದ್ದಾರೆ ಎಂಬುದು ವರದಿ ಮೂಲಕ ಬಹಿರಂಗವಾಗಿದೆ.

ಇವರ ಆಸ್ತಿ-ಪಾಸ್ತಿ ಎಷ್ಟು?

ಮೂರನೇ ಹಂತದಲ್ಲಿ 1,352 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದ್ದು, ಇವರಲ್ಲಿ 292 ಅಭ್ಯರ್ಥಿಗಳು ಕೋಟ್ಯಧೀಶರಾಗಿದ್ದಾರೆ. ಇವರಲ್ಲಿ ಬಿಜೆಪಿಯ 77, ಕಾಂಗ್ರೆಸ್‌ನ 60 ಅಭ್ಯರ್ಥಿಗಳು ಕೋಟ್ಯಧೀಶರಾಗಿದ್ದಾರೆ. ಗೋವಾದ ಪಲ್ಲವಿ ಶ್ರೀನಿವಾಸ್‌ ಡೆಂಪೊ ಅವರ ಆಸ್ತಿಯ ಮೌಲ್ಯವು 1,361 ಕೋಟಿ ರೂ. ಆಗಿದ್ದು, ಇವರೇ ಶ್ರೀಮಂತ ಅಭ್ಯರ್ಥಿ ಎನಿಸಿದ್ದಾರೆ. ಇನ್ನು ಮಧ್ಯಪ್ರದೇಶದ ಜ್ಯೋತಿರಾದಿತ್ಯ ಸಿಂಧಿಯಾ ಅವರ ಆಸ್ತಿಯ ಮೌಲ್ಯವು 424 ಕೋಟಿ ರೂ. ಆಗಿದ್ದು, ಎರಡನೇ ಶ್ರೀಮಂತ ಅಭ್ಯರ್ಥಿ ಎನಿಸಿದ್ದಾರೆ. ಮಹಾರಾಷ್ಟ್ರದ ಛತ್ರಪತಿ ಶಾಹು ಶಹಾಜಿ ಅವರು ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದು, ಇವರ ಆಸ್ತಿ ಮೌಲ್ಯ 342 ಕೋಟಿ ರೂ. ಆಗಿದೆ. ಇವರು ಮೂರನೇ ಶ್ರೀಮಂತ ಅಭ್ಯರ್ಥಿ ಆಗಿದ್ದಾರೆ.

ಇದನ್ನೂ ಓದಿ: Narendra Modi: ತಾಕತ್ತಿದ್ದವರು 370ನೇ ವಿಧಿ ಜಾರಿಗೆ ತರಲಿ; ಪ್ರತಿಪಕ್ಷಗಳಿಗೆ ಮೋದಿ ಸವಾಲು!

Continue Reading

ದೇಶ

Narendra Modi: ತಾಕತ್ತಿದ್ದವರು 370ನೇ ವಿಧಿ ಜಾರಿಗೆ ತರಲಿ; ಪ್ರತಿಪಕ್ಷಗಳಿಗೆ ಮೋದಿ ಸವಾಲು!

Narendra Modi: ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ 370ನೇ ವಿಧಿಯು ರಾಜ್ಯಗಳ ಪಟ್ಟಿಯಲ್ಲಿ ಬರುವುದಿಲ್ಲ. ಇದು ರಾಜ್ಯಗಳಿಗೆ ಸಂಬಂಧಿಸಿದ ವಿಷಯವಲ್ಲ. ಹಾಗಾಗಿ, ಯಾವುದೇ ರಾಜ್ಯ ಸರ್ಕಾರಗಳು ಸಿಎಎ ಜಾರಿಯನ್ನು ತಡೆಯುವ ಹಾಗೂ 370ನೇ ವಿಧಿಯನ್ನು ಮತ್ತೆ ಜಾರಿಗೆ ತರುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇಲ್ಲ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

VISTARANEWS.COM


on

Narendra Modi
Koo

ನವದೆಹಲಿ: ಲೋಕಸಭೆ ಚುನಾವಣೆ (Lok Sabha Election 2024) ಕಾವು ದಿನೇದಿನೆ ಜಾಸ್ತಿಯಾಗುತ್ತಿದೆ. ರಾಜಕಾರಣಿಗಳ ಹೇಳಿಕೆಗಳು, ಅವರು ಮಾತನಾಡುವ ವಿಷಯಗಳು ಇನ್ನಷ್ಟು ಕಾವು ಪಡೆದುಕೊಳ್ಳುತ್ತಿವೆ. “ನಾವು ಅಧಿಕಾರಕ್ಕೆ ಬಂದರೆ ಕಾಶ್ಮೀರದಲ್ಲಿ 370ನೇ ವಿಧಿ ಮತ್ತೆ ಜಾರಿಗೆ ತರುತ್ತೇವೆ. ಪೌರತ್ವ ತಿದ್ದುಪಡಿ ಕಾಯ್ದೆ (CAA) ಜಾರಿಯನ್ನು ತಡೆಯುತ್ತೇವೆ” ಎಂದು ಪ್ರತಿಪಕ್ಷಗಳು ಹೇಳುತ್ತಿವೆ. ಇದರ ಬೆನ್ನಲ್ಲೇ, ಪ್ರತಿಪಕ್ಷಗಳಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಸವಾಲು ಹಾಕಿದ್ದಾರೆ. “ತಾಕತ್ತಿದ್ದವರು 370ನೇ ವಿಧಿಯನ್ನು ಮತ್ತೆ ಜಾರಿಗೆ ತರಲಿ. ತಾಕತ್ತಿದ್ದವರು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ತಡೆಯಲಿ” ಎಂದು ನ್ಯೂಸ್‌ 18ಗೆ ನೀಡಿದ ಸಂದರ್ಶನದ ವೇಳೆ ನರೇಂದ್ರ ಮೋದಿ ಹೇಳಿದ್ದಾರೆ.

“ಪಶ್ಚಿಮ ಬಂಗಾಳದಲ್ಲಿ ಸಿಎಎ ಜಾರಿಯಾಗಲು ಬಿಡುವುದಿಲ್ಲ. ಜಮ್ಮು-ಕಾಶ್ಮೀರದಲ್ಲಿ 370ನೇ ವಿಧಿ ಮತ್ತೆ ಜಾರಿಗೆ ತರಲಾಗುವುದು” ಎಂಬುದಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿರುವ ಕುರಿತು ಸಂದರ್ಶನದ ವೇಳೆ ಪ್ರಶ್ನೆಗೆ ನರೇಂದ್ರ ಮೋದಿ ಉತ್ತರಿಸಿದರು. “ನಾನು ಕಾಂಗ್ರೆಸ್‌ ಸೇರಿ ಯಾವುದೇ ಪ್ರತಿಪಕ್ಷಗಳಿಗೆ ಸವಾಲು ಹಾಕುತ್ತೇನೆ. ತಾಕತ್ತಿದ್ದವರು 370ನೇ ವಿಧಿಯನ್ನು ಜಾರಿಗೆ ತರಲಿ. ಹಾಗೆಯೇ, ಸಿಎಎ ಜಾರಿಯನ್ನು ಯಾರಿಗೂ ತಡೆಯಲು ಆಗುವುದಿಲ್ಲ” ಎಂದು ಹೇಳಿದರು.

“ಯಾರು ಸಂವಿಧಾನವನ್ನು ಸರಿಯಾಗಿ ಓದಿರುತ್ತಾರೋ, ಯಾರು ಒಕ್ಕೂಟ ವ್ಯವಸ್ಥೆಯನ್ನು ಸರಿಯಾಗಿ ಅರ್ಥ ಮಾಡಿಕೊಂಡಿರುತ್ತಾರೋ, ಅವರು ಇಂತಹ ಹೇಳಿಕೆ ನೀಡುವುದಿಲ್ಲ. ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ 370ನೇ ವಿಧಿಯು ರಾಜ್ಯಗಳಿಗೆ ಸಂಬಂಧಿಸಿದ ವಿಷಯವಲ್ಲ. ರಾಜ್ಯಗಳ ಪಟ್ಟಿಯಲ್ಲಿ ಇವು ಬರುವುದಿಲ್ಲ. ನರೇಂದ್ರ ಮೋದಿ ಕೂಡ ಯಾವುದೇ ರಾಜ್ಯದ ಮುಖ್ಯಮಂತ್ರಿಯಾಗಿದ್ದರೂ, ಇಂತಹ ನಿರ್ಧಾರ ತೆಗೆದುಕೊಳ್ಳಲು ಬರುವುದಿಲ್ಲ. ಇದು ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದ ವಿಷಯವಾಗಿದೆ” ಎಂದು ತಿಳಿಸಿದರು.

“ಯಾವುದೇ ರಾಜ್ಯಗಳಿಗೆ 370ನೇ ವಿಧಿ ಮರು ಜಾರಿಗೊಳಿಸಲು ಆಗುವುದಿಲ್ಲ. ಕಾಂಗ್ರೆಸ್‌ ಸೇರಿ, ಯಾವುದೇ ಪಕ್ಷಗಳಿಗೆ ನಾನು ಸವಾಲು ಹಾಕುತ್ತೇನೆ. ತಾಕತ್ತಿದ್ದರೆ, 370ನೇ ವಿಧಿಯನ್ನು ಮತ್ತೆ ಜಾರಿಗೊಳಿಸುತ್ತೇವೆ ಎಂದು ಘೋಷಿಸಲಿ ನೋಡೋಣ. ಡಾ.ಬಿ.ಆರ್‌.ಅಂಬೇಡ್ಕರ್‌ ಅವರು ಹೆಸರು ಹೇಳಿಕೊಂಡು ನಮ್ಮ ವಿರುದ್ಧ ಟೀಕೆ ಮಾಡುತ್ತಾರೆ. ಆದರೆ, ಸ್ವಾತಂತ್ರ್ಯದ ಬಳಿಕ ಅಂಬೇಡ್ಕರ್‌ ಅವರು ರಚಿಸಿದ ಸಂವಿಧಾನವು ಜಮ್ಮು-ಕಾಶ್ಮೀರದಲ್ಲಿ ಅನ್ವಯವಾಗಿರಲಿಲ್ಲ. 370ನೇ ವಿಧಿ ರದ್ದುಗೊಳಿಸಿ, ನಾವು ಅಂಬೇಡ್ಕರ್‌ ಸಂವಿಧಾನವು ಜಮ್ಮು-ಕಾಶ್ಮೀರದಲ್ಲೂ ಜಾರಿಯಾಗುವಂತೆ ಮಾಡಿದ್ದೇವೆ” ಎಂದು ತಿಳಿಸಿದರು.

ಇದನ್ನೂ ಓದಿ: PM Narendra Modi: ಶಿರಸಿಗೆ ಬಂದಾಗ ಮೋದಿ ಭೇಟಿ ಮಾಡಿದ ನಾಲ್ವರು ವಿಶೇಷ ವ್ಯಕ್ತಿಗಳಿವರು! ಏನಿವರ ಸಾಧನೆ?

Continue Reading

Lok Sabha Election 2024

Lok Sabha Election: ಒಂದೇ ಒಂದು ಕುಟುಂಬಕ್ಕಾಗಿ ಪ್ರತ್ಯೇಕ ಮತಗಟ್ಟೆ! ಹೀಗೂ ಉಂಟು!

Lok Sabha Election 2024: ಒಂದೇ ಕುಟುಂಬದ ಐದು ಮಂದಿಗಾಗಿ ಲೇಹ್ ಜಿಲ್ಲೆಯ ವಾಶಿ ಎಂಬ ಹಳ್ಳಿಯಲ್ಲಿಚುನಾವಣಾ ಅಧಿಕಾರಿಗಳು ಮತದಾನ ಕೇಂದ್ರವನ್ನು ಸ್ಥಾಪಿಸಿದ್ದಾರೆ. ಚುನಾವಣಾ ಆಯೋಗದ ಪ್ರಯತ್ನಗಳ ಭಾಗವಾಗಿ ಶೇ. 100ರಷ್ಟು ಮತದಾನವಾಗಬೇಕು ಎನ್ನುವ ಉದ್ದೇಶದಿಂದ ಚುನಾವಣಾ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬ ಅರ್ಹ ನಾಗರಿಕನೂ ಪಾಲ್ಗೊಳ್ಳಬೇಕು. ಇದಕ್ಕಾಗಿ ದೂರದೂರದ ಸ್ಥಳಗಳಲ್ಲೂ, ಅತ್ಯಲ್ಪ ಮತದಾರರು ಇರುವಲ್ಲೂ ಎಲ್ಲರಿಗೂ ಅನುಕೂಲವಾಗಬೇಕು ಎನ್ನುವ ಉದ್ದೇಶದಿಂದ ಮತದಾನ ಕೇಂದ್ರವನ್ನು ತೆರೆಯಲಾಗಿದೆ.

VISTARANEWS.COM


on

By

Lok Sabha Election-2024
Koo

ಶ್ರೀನಗರ: ಲೋಕಸಭಾ ಚುನಾವಣೆ 2024 (Lok Sabha Election-2024) ಹಲವು ವಿಶೇಷಗಳಿಗೆ ಸಾಕ್ಷಿಯಾಗಿದೆ. ಇದರಲ್ಲಿ ಕೇವಲ ಐದು ಮಂದಿ ಮತದಾರರಿಗಾಗಿ (voters) ಮತದಾನ ಕೇಂದ್ರವನ್ನು (voting booth) ತೆರೆದಿರುವುದು ಕೂಡ ಒಂದು. ಕೇಂದ್ರಾಡಳಿತ ಪ್ರದೇಶವಾದ ಲಡಾಖ್ ನ (Ladakh) ಲೇಹ್ (Leh) ಜಿಲ್ಲೆಯ ವಾಶಿ (Washi ) ಎಂಬ ದೂರದ ಹಳ್ಳಿಯಲ್ಲಿ ಒಂದು ಕುಟುಂಬದ ಐದು ಸದಸ್ಯರಿಗೆ ಚುನಾವಣಾ ಅಧಿಕಾರಿಗಳು ಮತದಾನ ಕೇಂದ್ರವನ್ನು ಸ್ಥಾಪಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಲಡಾಖ್ ನ ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ಯತೀಂದ್ರ ಎಂ. ಮರಾಲ್ಕರ್, ಲೇಹ್‌ನಿಂದ ಸುಮಾರು 170 ಕಿ.ಮೀ. ದೂರದಲ್ಲಿರುವ ನುಬ್ರಾದ ವಾಶಿ ಎಂಬ ದೂರದ ಹಳ್ಳಿಯಲ್ಲಿ ಟೆಂಟ್ ಅಡಿಯಲ್ಲಿ ಮತದಾನ ಕೇಂದ್ರವನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.

ಚುನಾವಣಾ ಆಯೋಗದ ಪ್ರಯತ್ನಗಳ ಭಾಗವಾಗಿ ಶೇ. 100ರಷ್ಟು ಮತದಾನವಾಗಬೇಕು ಎನ್ನುವ ಉದ್ದೇಶದಿಂದ ಚುನಾವಣಾ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬ ಅರ್ಹ ನಾಗರಿಕನೂ ಪಾಲ್ಗೊಳ್ಳಬೇಕು. ಇದಕ್ಕಾಗಿ ದೂರದೂರದ ಸ್ಥಳಗಳಲ್ಲೂ, ಅತ್ಯಲ್ಪ ಮತದಾರರು ಇರುವಲ್ಲೂ ಎಲ್ಲರಿಗೂ ಅನುಕೂಲವಾಗಬೇಕು ಎನ್ನುವ ಉದ್ದೇಶದಿಂದ ಮತದಾನ ಕೇಂದ್ರವನ್ನು ತೆರೆಯಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: Lok Sabha Election 2024: ಎಲೆಕ್ಷನ್‌ ಹೊತ್ತಲ್ಲೇ ಕಾಂಗ್ರೆಸ್‌ಗೆ ಬಿಗ್‌ ಶಾಕ್! ಕನ್ಹಯ್ಯ ಕುಮಾರ್‌ಗೆ ಸ್ವಪಕ್ಷದಲ್ಲೇ ವಿರೋಧ

ಮೇ 20ರಂದು ಮತದಾನ

ಲಡಾಖ್ ಲೋಕಸಭಾ ಸ್ಥಾನಕ್ಕೆ ಮೇ 20ರಂದು 5ನೇ ಹಂತದಲ್ಲಿ ಮತದಾನ ನಡೆಯಲಿದೆ. ಆರ್ಟಿಕಲ್ 370 ಅನ್ನು ರದ್ದುಗೊಳಿಸಿದ ಅನಂತರ ಮತ್ತು ಜಮ್ಮು ಮತ್ತು ಕಾಶ್ಮೀರದ ರಾಜ್ಯವನ್ನು ಎರಡು ಯುಟಿಗಳಾಗಿ ವಿಭಜಿಸಿದಬಳಿಕ ಶೀತ ಮರುಭೂಮಿ ಪ್ರದೇಶದಲ್ಲಿ ಮೊದಲ ಬಾರಿಗೆ ಮತದಾನ ನಡೆಯಲಿದೆ.


ಐವರು ಮತದಾರರು

ಒಂದೇ ಕುಟುಂಬದ ಐವರು ಗ್ರಾಮದಲ್ಲಿ ಮತ ಚಲಾಯಿಸಲು ಅರ್ಹರಾಗಿದ್ದು, ಟೆಂಟ್‌ ಹಾಕಿದ ಮತಗಟ್ಟೆ ಅವರ ಮನೆ ಬಾಗಿಲಿಗೆ ಬಂದಿದೆ ಎಂದು ಮಾರಲ್ಕರ್ ಹೇಳಿದರು.

ಕುಟುಂಬವು ಆರು ಸದಸ್ಯರನ್ನು ಒಳಗೊಂಡಿದೆ ಮತ್ತು ಅವರಲ್ಲಿ ಇಬ್ಬರು ಪುರುಷರು ಮತ್ತು ಮೂವರು ಮಹಿಳೆಯರು ಮತ ಚಲಾಯಿಸಲು ಅರ್ಹರಾಗಿದ್ದಾರೆ. ಕುಟುಂಬದ ಮುಖ್ಯಸ್ಥ ರೈತನಾಗಿದ್ದಾನೆ.

ಲಡಾಖ್ ನಲ್ಲಿ 1,82,571 ಮತದಾರರು

ಲಡಾಖ್ ಯುಟಿಯು ಎರಡು ಜಿಲ್ಲೆಗಳನ್ನು ಒಳಗೊಂಡಿದೆ. ಮುಸ್ಲಿಂ ಪ್ರಾಬಲ್ಯದ ಕಾರ್ಗಿಲ್ ಮತ್ತು ಬೌದ್ಧ ಪ್ರಾಬಲ್ಯದ ಲೇಹ್. 91,703 ಪುರುಷರು ಮತ್ತು 90868 ಮಹಿಳೆಯರು ಸೇರಿದಂತೆ ಒಟ್ಟು 1,82,571 ಮತದಾರರು ಇಲ್ಲಿ ಮತ ಚಲಾಯಿಸಲು ಅರ್ಹರಾಗಿದ್ದಾರೆ.

577 ಮತಗಟ್ಟೆಗಳು

ಚುನಾವಣಾ ಆಯೋಗವು ಯುಟಿಯಾದ್ಯಂತ 577 ಮತಗಟ್ಟೆಗಳನ್ನು ಸ್ಥಾಪಿಸಿದೆ. ಇದರಲ್ಲಿ 33 ನಗರ ಮತ್ತು 544 ಗ್ರಾಮೀಣ ಪ್ರದೇಶಗಳಲ್ಲಿ ಸೇರಿವೆ. ಲಡಾಖ್‌ನಲ್ಲಿ ಕೆಲವು ಮತಗಟ್ಟೆಗಳ ದುರ್ಗಮತೆಯನ್ನು ಗಮನದಲ್ಲಿಟ್ಟುಕೊಂಡು ದೂರದ ಹಳ್ಳಿಗಳಿಗೆ ಚುನಾವಣಾ ಸಾಮಗ್ರಿಗಳು ಮತ್ತು ಸಿಬ್ಬಂದಿಯನ್ನು ವಿಮಾನದಲ್ಲಿ ರವಾನಿಸಲಾಗುತ್ತದೆ.

Continue Reading

Lok Sabha Election 2024

PM Narendra Modi: ಶಿರಸಿಗೆ ಬಂದಾಗ ಮೋದಿ ಭೇಟಿ ಮಾಡಿದ ನಾಲ್ವರು ವಿಶೇಷ ವ್ಯಕ್ತಿಗಳಿವರು! ಏನಿವರ ಸಾಧನೆ?

PM Narendra Modi: ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಆಗಮಿಸಿ ಪ್ರಚಾರ ನಡೆಸಿದ್ದಾರೆ. ಇದೇ ವೇಳೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಗೂ ಬಂದಿದ್ದಾರೆ. ಮೋದಿ ಶಿರಸಿಗೆ ಬಂದು ಪ್ರಚಾರ ಮಾಡಿ ಹೋದರು ಎಂಬುದಷ್ಟೇ ಹೊರ ಪ್ರಪಂಚಕ್ಕೆ ಗೊತ್ತು. ಆದರೆ, ಅವರು ಇದೇ ವೇಳೆ ನಾಲ್ವರು ವಿಶೇಷ ವ್ಯಕ್ತಿಗಳನ್ನು ಭೇಟಿ ಮಾಡಿದ್ದಾರೆ. ಅವರ ಬಗ್ಗೆ ತಿಳಿದು ಹೆಮ್ಮೆ ಪಟ್ಟಿದ್ದಾರೆ.

VISTARANEWS.COM


on

PM Narendra Modi met four special people in Sirsi visit
Koo

ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಕರ್ನಾಟಕವು 2ನೇ ಹಂತದ ಮತದಾನಕ್ಕೆ ಸಜ್ಜಾಗುತ್ತಿದೆ. ರಾಜಕೀಯ ಪಕ್ಷಗಳ ನಾಯಕರು ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ. ಇತ್ತ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ರಾಜ್ಯಕ್ಕೆ ಆಗಮಿಸಿ ಪ್ರಚಾರ ನಡೆಸಿದ್ದಾರೆ. ಇದೇ ವೇಳೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಗೂ ಬಂದಿದ್ದಾರೆ. ಮೋದಿ ಶಿರಸಿಗೆ ಬಂದು ಪ್ರಚಾರ ಮಾಡಿ ಹೋದರು ಎಂಬುದಷ್ಟೇ ಹೊರ ಪ್ರಪಂಚಕ್ಕೆ ಗೊತ್ತು. ಆದರೆ, ಅವರು ಇದೇ ವೇಳೆ ನಾಲ್ವರು ವಿಶೇಷ ವ್ಯಕ್ತಿಗಳನ್ನು ಭೇಟಿ ಮಾಡಿದ್ದಾರೆ. ಅವರ ಬಗ್ಗೆ ತಿಳಿದು ಹೆಮ್ಮೆ ಪಟ್ಟಿದ್ದಾರೆ.

ಇವರಲ್ಲಿ ಒಬ್ಬರು ವೃತ್ತಿಯಲ್ಲಿ ಮರ ಕಡಿಯುವವರಾದರೂ ಅಯೋಧ್ಯೆಯ ಕರಸೇವಕರಾಗಿದ್ದಾರೆ. ಇನ್ನೊಬ್ಬರು ನಿವೃತ್ತ ಪೌರ ಕಾರ್ಮಿಕ ಮಹಿಳೆಯಾಗಿದ್ದಾರೆ. ಮತ್ತೊಬ್ಬರು ಕಾಡು ಹಣ್ಣುಗಳನ್ನು ಮಾರಿ ತಮ್ಮ ಜೀವನವನ್ನು ಕಟ್ಟಿಕೊಂಡಿದ್ದಾರೆ. ಮಗದೊಬ್ಬರು ಕ್ಷೌರಿಕರಾಗಿದ್ದು, ಬಿಜೆಪಿಯ ಹಾಗೂ ಪ್ರಧಾನಿ ನರೇಂದ್ರ ಮೋದಿಯ ಪಕ್ಕಾ ಅಭಿಮಾನಿಯಾಗಿದ್ದಾರೆ.

PM Narendra Modi met four special people in Sirsi visit

ಹಾಗಾದರೆ ಯಾರಿವರು?

ಲಕ್ಷ್ಮಣ್ ನಾಯ್ಕ ದೊಂಬೆ, ಸಿದ್ದಾಪುರ: ಲಕ್ಷ್ಮಣ್‌ ನಾಯ್ಕ ಅವರು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದವರಾಗಿದ್ದಾರೆ. ಇವರು ಅಯೋಧ್ಯೆಯ ಕರಸೇವಕರೂ ಆಗಿದ್ದವರು. ಲಕ್ಷ್ಮಣ ಅವರು ಅಯೋಧ್ಯಾ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಅಲ್ಲದೆ, ಬ್ರಹ್ಮಚಾರಿಯಾಗಿಯೇ ಉಳಿದಿದ್ದಾರೆ. ಲಕ್ಷ್ಮಣ ಅವರು ಶ್ರೀರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಮಂದಿರವನ್ನು ನಿರ್ಮಿಸುವವರೆಗೂ ಕ್ಷೌರ ಮಾಡಿಸುವುದಿಲ್ಲ ಎನ್ನುವ ವ್ರತವನ್ನು ಕೈಗೊಂಡಿದ್ದರು.

PM Narendra Modi met four special people in Sirsi visit

ರಾಧಾ ಹರಿಜನ: ಇವರು ಶಿರಸಿಯ ನಿವೃತ್ತ ಪೌರ ಕಾರ್ಮಿಕರಾಗಿದ್ದಾರೆ. ಸ್ವಚ್ಛತಾ ಕಾರ್ಯಕರ್ತೆಯಾಗಿ ದಣಿವರಿಯದೆ ಕೆಲಸ ಮಾಡಿದವರು ಇವರಾಗಿದ್ದಾರೆ. ತನ್ನ ಪ್ರಾಮಾಣಿಕ ಕೆಲಸಕ್ಕೆ ಹೆಸರುವಾಸಿಯಾಗಿರುವ ಇವರನ್ನು ಪ್ರಧಾನಿ ನರೇಂದ್ರ ಮೋದಿ ಭೇಟಿಯಾಗಿದ್ದಾರೆ.

PM Narendra Modi met four special people in Sirsi visit

ಮೋಹಿನಿ ಗೌಡ: ಇವರು ಹಾಲಕ್ಕಿ ಪಂಗಡಕ್ಕೆ ಸೇರಿದವರಾಗಿದ್ದಾರೆ. ಇವರು ಜೀವನಕ್ಕಾಗಿ ಅಂಕೋಲಾ ಬಸ್ ನಿಲ್ದಾಣದಲ್ಲಿ ಕಾಡು ಹಣ್ಣುಗಳನ್ನು ಮಾರಾಟ ಮಾಡುತ್ತಾರೆ. ಸ್ವಚ್ಛ ಭಾರತ್ ಸ್ವಯಂಸೇವಕಿಯಾಗಿ ತೊಡಗಿಸಿಕೊಂಡಿದ್ದಾರೆ. ಅವರು ಬಿಡುವಿದ್ದಾಗಲೆಲ್ಲಾ ಬಸ್ ನಿಲ್ದಾಣವನ್ನು ಸ್ವಚ್ಛಗೊಳಿಸುತ್ತಾರೆ.

PM Narendra Modi met four special people in Sirsi visit

ನಾಗೇಶ್‌ ಮಹಾಲೆ: ಇವರು ಒಬ್ಬ ಕ್ಷೌರಿಕರಾಗಿದ್ದಾರೆ. ನಾಗೇಶ್‌ ಅಂಕೋಲಾದಲ್ಲಿ 4 ಆಸನ ಸಾಮರ್ಥ್ಯವುಳ್ಳ ಸಲೂನ್‌ವೊಂದನ್ನು ಹೊಂದಿದ್ದಾರೆ. ಇವರು ಬಿಜೆಪಿಯ ಕಟ್ಟಾ ಬೆಂಬಲಿಗ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ಜಿ ಅವರ ಅಭಿಮಾನಿ. ಅವರ ಕೈಯಲ್ಲಿ ಮೋದಿ ಜಿ ಟ್ಯಾಟೂ ಇದೆ. ಬಿಜೆಪಿ ಚುನಾವಣೆಯಲ್ಲಿ ಗೆದ್ದಾಗ, ಅವರು ಇಡೀ ದಿನ ಉಚಿತವಾಗಿ ಕ್ಷೌರ ಮಾಡುತ್ತಾರೆ.

ಇದನ್ನೂ ಓದಿ: PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

ಮೋದಿ ಭೇಟಿಯಾಗಿದ್ದು ಎಲ್ಲಿ?

ವಿಶೇಷ ವಿಮಾನದ ಮೂಲಕ ಶಿರಸಿಗೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಲು ಈ ನಾಲ್ವರು ವಿಶೇಷ ಸಾಧಕರನ್ನು ಪ್ರಧಾನಿ ನರೇಂದ್ರ ಅವರಿಗೆ ಪರಿಚಯ ಮಾಡಿಕೊಡಲಾಯಿತು. ಇದೇ ವೇಳೆ ಮೋದಿ ಸಹ ಅವರ ಬಗ್ಗೆ ಮಾಹಿತಿಯನ್ನು ಪಡೆದುಕೊಂಡು ಮೆಚ್ಚುಗೆ ವ್ಯಕ್ತಪಡಿಸಿದರು.

Continue Reading
Advertisement
Pakistan Inflation
ವಿದೇಶ4 hours ago

Pakistan Inflation: ಪಾಕಿಸ್ತಾನ ಮತ್ತಷ್ಟು ದಿವಾಳಿ; ಲೀಟರ್‌ ಪೆಟ್ರೋಲ್‌ಗೆ 290 ರೂ., ಕೆ.ಜಿ ಹಿಟ್ಟಿಗೆ 800 ರೂ.

Honnavar News
ಉತ್ತರ ಕನ್ನಡ4 hours ago

Honnavar News: ಮಕ್ಕಳಿಗೆ ಉತ್ತಮ ಶಿಕ್ಷಣದ ಜತೆಗೆ ಸಂಸ್ಕಾರವೂ ಬೇಕು: ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ

Sadhguru Jaggi Vasudev
ಬೆಂಗಳೂರು4 hours ago

Sadhguru Jaggi Vasudev: ಮೆದುಳಿನ ಶಸ್ತ್ರಚಿಕಿತ್ಸೆಯ ತಿಂಗಳ ಬಳಿಕ ಕಾಂಬೋಡಿಯಾಗೆ ಸದ್ಗುರು ಪ್ರವಾಸ

Justin Trudeau
ದೇಶ4 hours ago

Justin Trudeau: ಕೆನಡಾ ಪ್ರಧಾನಿ ಕಾರ್ಯಕ್ರಮದಲ್ಲಿ ಖಲಿಸ್ತಾನ ಪರ ಘೋಷಣೆ; ಭಾರತ ಸಮನ್ಸ್!

M P Rudramba
ಕರ್ನಾಟಕ5 hours ago

M P Rudramba: ಮಾಜಿ ಡಿಸಿಎಂ ದಿವಂಗತ ಎಂ.ಪಿ. ಪ್ರಕಾಶ್ ಧರ್ಮ ಪತ್ನಿ ರುದ್ರಾಂಬಾ ನಿಧನ

KKR vs DC
ಕ್ರೀಡೆ5 hours ago

KKR vs DC: ಡೆಲ್ಲಿಗೆ ನೀರು ಕುಡಿಸಿದ ಸಾಲ್ಟ್​; ಪಂತ್​ ಪಡೆಯ ಪ್ಲೇ ಆಫ್ ಹಾದಿ ದುರ್ಗಮ

Patanjali
ದೇಶ5 hours ago

Patanjali: ಪತಂಜಲಿಯ 14 ಉತ್ಪನ್ನಗಳ ಲೈಸೆನ್ಸ್‌ ರದ್ದು, ಬಾಬಾ ರಾಮದೇವ್‌ ವಿರುದ್ಧ ಬಿತ್ತು ಕೇಸ್

Murder Case
ಕರ್ನಾಟಕ5 hours ago

Murder Case: ಹೆಂಡ್ತಿ ಬಿಟ್ಟು ಹೋಗುತ್ತಾಳೆಂದು ಕತ್ತು ಸೀಳಿ ಕೊಂದ ಪತಿರಾಯ!

CM Siddaramaiah inaugurated by prajadhwani lok sabha election campaign meeting at kushtagi
ಕೊಪ್ಪಳ5 hours ago

Lok Sabha Election 2024: ನಾಯಕತ್ವ ಕೊರತೆ ಇರುವುದು ಬಿಜೆಪಿಗೆ ಎಂದ ಸಿದ್ದರಾಮಯ್ಯ

DCM D K Shivakumar Latest statement in Belagavi
ಪ್ರಮುಖ ಸುದ್ದಿ5 hours ago

DK Shivakumar: ಪ್ರಜ್ವಲ್‌ ರೇವಣ್ಣ ಪ್ರಕರಣದ ಬಗ್ಗೆ ಬಿಜೆಪಿ ನಿಲುವೇನು; ಶಿವಕುಮಾರ್ ಪ್ರಶ್ನೆ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

PM Narendra modi in Bagalakote and Attack on Congress
Lok Sabha Election 202415 hours ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 202416 hours ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ23 hours ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Narendra Modi
Lok Sabha Election 20241 day ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20242 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20242 days ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20242 days ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
Latest2 days ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ದಿನದ ಮಟ್ಟಿಗೆ ಖರ್ಚು ಹೆಚ್ಚು

Lok sabha election 2024
Lok Sabha Election 20242 days ago

Lok Sabha Election 2024 : ಮೊಬೈಲ್ ನಿಷೇಧದ ನಡುವೆಯೂ ವೋಟ್‌ ಹಾಕಿದ ವಿಡಿಯೊ ಮಾಡಿದ ಪುಂಡರು

ಟ್ರೆಂಡಿಂಗ್‌