ಬೆಳಗಾವಿ: ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ (Karnataka Congress Government) ಬಂತೋ ಆಗ ಇಡೀ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ ಮಾಡಿದೆ. ಅಲ್ಲದೆ, ಕರ್ನಾಟಕದಲ್ಲಿ ಹೆಣ್ಣು ಮಗಳ ಕೊಲೆಯಾಗುತ್ತದೆ, ಜೈನ ಮುನಿಯ ಹತ್ಯೆಯಾಗುತ್ತದೆ, ಬಾಂಬ್ ಸ್ಫೋಟವಾಗುತ್ತದೆ. ಆದರೆ, ಈ ಸರ್ಕಾರ ತುಷ್ಟೀಕರಣದಲ್ಲಿ ತೊಡಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಬೆಳಗಾವಿಯಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ (CM Siddaramaiah) ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಬೆಳಗಾವಿ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಬೆಂಗಳೂರಿನಲ್ಲಿ ಬಾಂಬ್ ಸ್ಫೋಟ ನಡೆದರೂ ಸಹ ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಸಂಪೂರ್ಣವಾಗಿ ಹಾಳಾಗಿದೆ. ಇದೇ ಬೆಳಗಾವಿಯ ವಂಟಮೂರಿಯ ಬಡ ದಲಿತ ಮಹಿಳೆ ಮೇಲೆ ಆದ ದೌರ್ಜನ್ಯ, ಜೈನ ಮುನಿ ಕೊಲೆ ಪ್ರಕರಣಗಳು ನಡೆದಿವೆ. ಇನ್ನು ಹುಬ್ಬಳ್ಳಿಯಲ್ಲಿ ನಮ್ಮ ಹೆಣ್ಣು ಮಗಳ ವಿರುದ್ಧ ನಡೆದ ಕೊಲೆ ಪ್ರಕರಣ ಏನನ್ನು ಹೇಳುತ್ತದೆ? ಆ ಹೆಣ್ಣು ಮಗಳ ಪೋಷಕರು ಕಠಿಣ ಕ್ರಮಕ್ಕೆ ಆಗ್ರಹಿಸಿದರೂ ಕಾಂಗ್ರೆಸ್ ಸರ್ಕಾರ ತುಷ್ಟೀಕರಣ ಮಾಡಲು ಹೊರಟಿದೆ ಎಂದು ಕಿಡಿಕಾರಿದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಬಂತೋ ಆಗ ಇಡೀ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಇದೇ ಬೆಳಗಾವಿಯ ವಂಟಮೂರಿಯ ಬಡ ದಲಿತ ಮಹಿಳೆ ಮೇಲೆ ಆದ ದೌರ್ಜನ್ಯ, ಜೈನ ಮುನಿ ಕೊಲೆ ಕೃತ್ಯ ಎಂಥದ್ದು? ಹುಬ್ಬಳ್ಳಿಯಲ್ಲಿ ನಮ್ಮ ಹೆಣ್ಣು ಮಗಳ ವಿರುದ್ಧ ನಡೆದ ಕೊಲೆ ಪ್ರಕರಣ ಏನನ್ನು ಹೇಳುತ್ತದೆ? ಆ ಹುಡುಗಿಯ ಪೋಷಕರು ಕಠಿಣ ಕ್ರಮಕ್ಕೆ ಆಗ್ರಹಿಸಿದರೂ ಕಾಂಗ್ರೆಸ್ ಸರ್ಕಾರ ತುಷ್ಟೀಕರಣ ಕಾರಣದಿಂದ ಸೂಕ್ತ ಕ್ರಮ ವಹಿಸಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಕಿಡಿಕಾರಿದರು.
Live : ಬೆಳಗಾವಿಯಲ್ಲಿ ವಿಜಯ ಸಂಕಲ್ಪ ಸಮಾವೇಶವನ್ನುದ್ದೇಶಿಸಿ ಪ್ರಧಾನಿ ಶ್ರೀ @narendramodi#PhirEkBaarModiSarkar #AbkiBaar400Paar #ಮತ್ತೊಮ್ಮೆಮೋದಿಸರ್ಕಾರ https://t.co/Pi0NPfRFg6
— BJP Karnataka (@BJP4Karnataka) April 28, 2024
ನಿಮ್ಮ ನರೇಂದ್ರ ಮೋದಿ ಬದುಕಿರುವವರೆಗೂ ಕಾಂಗ್ರೆಸ್ ದುಷ್ಟ ನೀತಿಯನ್ನು ಕೈಗೊಳ್ಳಲು ಬಿಡುವುದಿಲ್ಲ. ನಿಮ್ಮ ಮಂಗಳ ಸೂತ್ರವನ್ನು ರಕ್ಷಣೆ ಮಾಡುವ ಹೊಣೆಯೂ ನಮ್ಮದು ಎಂದು ನರೇಂದ್ರ ಮೋದಿ ಭರವಸೆ ನೀಡಿದರು.
ಕಾಂಗ್ರೆಸ್‌ನಿಂದ ತುಷ್ಟೀಕರಣ ರಾಜಕಾರಣ
ಸುಲ್ತಾನರು, ನವಾಬರು ಹಲವಾರು ಜನರನ್ನು ಅತ್ಯಾಚಾರ ಮಾಡಿದರು. ಆದರೆ, ಅದರ ಬಗ್ಗೆ ಯಾಕೆ ಮಾತನಾಡುತ್ತಿಲ್ಲ. ಇದರ ಬಗ್ಗೆ ಮಾತನಾಡಲು ಧೈರ್ಯವೂ ಅವರಿಗೆ ಇಲ್ಲ. ರಾಜ ಮಹಾರಾಜರ ಸಾಧನೆ ಬಗ್ಗೆ ಕಾಂಗ್ರೆಸ್ ಮಾತನಾಡಲ್ಲ. ಸುಲ್ತಾನರ ದುರಾಡಳಿತದ ಬಗ್ಗೆ ಬಾಯಿ ಬಿಡುವುದಿಲ್ಲ. ಗಾಯಕ್‌ವಾಡ್ ಮಹಾರಾಜರು ಇಲ್ಲದಿದ್ದರೆ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ವಿದೇಶ ವ್ಯಾಸಂಗ ಆಗುತ್ತಿತ್ತಾ? ಮಹಾರಾಣಿ ಅಹಲ್ಯಾ ಬಾಯಿ ಇಲ್ಲದಿದ್ದರೆ ದೇಶಗಳಲ್ಲಿ ದೇವಸ್ಥಾನ, ಮಂದಿರಗಳ ನಿರ್ಮಾಣ ಆಗುತ್ತಿತ್ತಾ? ಅಲ್ಲದೆ, ಶಿವಾಜಿ ಮಹಾರಾಜರು, ಕಿತ್ತೂರು ರಾಣಿ ಚೆನ್ನಮ್ಮ ಅವರನ್ನು ಅವಮಾನ ಮಾಡುತ್ತಾ ಬರಲಾಗಿದೆ. ಇಂಡಿ ಅಲೆಯನ್ಸ್ ಅನ್ನು ಮೆಚ್ಚಿಸಲು ಕಾಂಗ್ರೆಸ್ ಏನೆಲ್ಲ ಮಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಶ್ನೆ ಮಾಡಿದರು.
ಕೊರೊನಾ ಕಾಲದಲ್ಲಿ ಕಾಂಗ್ರೆಸ್ ನಡೆದುಕೊಂಡ ರೀತಿ ಎಲ್ಲರಿಗೂ ಗೊತ್ತಿದೆ. ಕೊರೊನಾ ವ್ಯಾಕ್ಸಿನ್ ಕಂಡು ಹಿಡಿದರೆ ಅದನ್ನೂ ವಿರೋಧ ಮಾಡಿದರು. ಇದು ಬಿಜೆಪಿ ವ್ಯಾಕ್ಸಿನ್ ಎಂದು ದೂರಿತು. ಇನ್ನು ಇವಿಎಂ ವಿಚಾರದಲ್ಲಿ ಕಳೆದ 2 ದಿನಗಳ ಹಿಂದೆ ಕಾಂಗ್ರೆಸ್‌ಗೆ ಸುಪ್ರೀಂ ಕೋರ್ಟ್‌ನಲ್ಲಿ ತರಾಟೆಗೆ ತೆಗೆದುಕೊಳ್ಳಲಾಗಿದೆ. ಇನ್ನು ಕಾಂಗ್ರೆಸ್ ಉದ್ದೇಶ ಏನೆಂದರೆ ದೇಶಕ್ಕೆ ನಷ್ಟವಾಗುವ ರೀತಿ ಜನರನ್ನು ಎತ್ತಿಕಟ್ಟುವ ಕೆಲಸವಾಗಿದೆ. ಆದರೆ, ಬಿಜೆಪಿಯು ದೇಶದ ನಾಗರಿಕರಿಗೋಸ್ಕರ ಸರಳ ಜೀವನಕ್ಕಾಗಿ ಸಾಕಷ್ಟು ಕೆಲಸವನ್ನು ಮಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಸಮಾಜಘಾತುಕ ಸಂಘಟನೆಗಳನ್ನು ಬಿಜೆಪಿ ಬ್ಯಾನ್ ಮಾಡಿದೆ. ಆದರೆ, ಕಾಂಗ್ರೆಸ್ ವೋಟ್ ಬ್ಯಾಂಕ್ ರಾಜಕಾರಣ ಮಾಡಲು ಅವರ ಜತೆಯೇ ಕೈಜೋಡಿಸುತ್ತದೆ. ಕೇರಳದ ವಯನಾಡಿನಲ್ಲಿ ಒಂದು ಕ್ಷೇತ್ರವನ್ನು ಗೆಲ್ಲಲು ಏನೆಲ್ಲ ಮಾಡಲಾಗಿದೆ? ಇಂಥ ಸಂಘಟನೆಗಳ ಜತೆ ಕಾಂಗ್ರೆಸ್ ಕೈಜೋಡಿಸಿದೆ. ಅವರಿಗೆ ಶರಣಾಗತಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆಕ್ರೋಶ ಹೊರಹಾಕಿದರು.
ಇದು ರೈತರ ವಿರೋಧಿ ಸರ್ಕಾರ
ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದಾಗ ರೈತರನ್ನು ಕಡೆಗಣಿಸಿದೆ. ನಮ್ಮ ಸರ್ಕಾರ ಕಿಸಾನ್ ಸಮ್ಮಾನ್ ಯೋಜನೆ ಅಡಿ ರೈತರಿಗೆ ವರ್ಷಕ್ಕೆ ನೀಡುತ್ತಿರುವ 10 ಸಾವಿರ ರೂಪಾಯಿ ಜತೆಗೆ ಈ ಹಿಂದೆ ಬಿಜೆಪಿ ಸರ್ಕಾರವು 4 ಸಾವಿರ ರೂಪಾಯಿ ಸೇರಿಸಿ ಕೊಡುತ್ತಿತ್ತು. ಕಾಂಗ್ರೆಸ್ ಮತ ಕೇಳುವಾಗ ಇದರ ಬಗ್ಗೆ ಏನೂ ಹೇಳಲಿಲ್ಲ. ಯಾವಾಗ ಮತ ಬಂದು ಗೆದ್ದರೂ ಆ ನಾಲ್ಕು ಸಾವಿರ ರೂಪಾಯಿಯನ್ನು ನಿಲ್ಲಿಸಿಬಿಟ್ಟರು. ಇದು ರೈತ ವಿರೋಧಿ ಸರ್ಕಾರವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: PM Narendra Modi: ಮೋದಿ ಕಾರ್ಯಕ್ರಮ ವಿಫಲಗೊಳಿಸಲು ರಾಜ್ಯ ಸರ್ಕಾರ ಸೂಚಿಸಿದೆಯೇ? ಪೊಲೀಸರಿಗೆ ಕಾಗೇರಿ ಪ್ರಶ್ನೆ
ನಿಮ್ಮ ಆಸ್ತಿ ಮೇಲೆ ಕಣ್ಣಿಟ್ಟ ಸರ್ಕಾರ
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಿಮ್ಮ ಆಸ್ತಿಯಲ್ಲವೂ ಅನ್ಯರ ಪಾಲಾಗುತ್ತದೆ. ನೀವು ಮಾಡಿಟ್ಟ ಮನೆ, ಆಸ್ತಿ, ಚಿನ್ನ ಎಲ್ಲವೂ ಅನ್ಯರ ಪಾಲಾಗಿದೆ. ಕಾಂಗ್ರೆಸ್ ಹೇಳುವ ಮಾತು ಕೇಳಿದರೆ ನಿಮ್ಮ ನಿದ್ದೆ ಗೆಡುತ್ತದೆ. ಅವರು ದಿಲ್ಲಿಯಲ್ಲಿ ಆಡಳಿತಕ್ಕೆ ಬಂದರೆ ನಿಮ್ಮ ಆಸ್ತಿಯನ್ನು ವಶಕ್ಕೆ ಪಡೆಯುತ್ತದೆ. ನೀವು ನಿಮ್ಮ ಮಕ್ಕಳಿಗಾಗಿ ಪೈಸೆ ಪೈಸೆ ಕೂಡಿಟ್ಟು ಮಾಡಿದ ಆಸ್ತಿಯಲ್ಲಿ ಶೇಕಡಾ 55 ಪರ್ಸೆಂಟ್ ಅನ್ನು ಕಾಂಗ್ರೆಸ್ ವಶಕ್ಕೆ ಪಡೆಯಲಿದೆ. ಈ ಮೂಲಕ ನಿಮ್ಮ ಆಸ್ತಿಯು ನಿಮ್ಮ ಮಕ್ಕಳಿಗೆ ಸಿಗುವುದಿಲ್ಲ. ಹೀಗಾಗಿ ನಿಮ್ಮ ಆಸ್ತಿಯ ಬಹುದೊಡ್ಡ ಪಾಲು ಕಾಂಗ್ರೆಸ್ ಸರ್ಕಾರದ್ದಾಗುತ್ತದೆ ಎಂದು ಕಾಂಗ್ರೆಸ್ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ನೇರ ವಾಗ್ದಾಳಿ ನಡೆಸಿದರು.