ಬೆಳಗಾವಿ: ಎಲ್ಲಿಯವರೆಗೆ ನಿಮ್ಮ ನರೇಂದ್ರ ಮೋದಿ (PM Narendra Modi) ಬದುಕಿರುತ್ತಾರೋ ಅಲ್ಲಿಯವರೆಗೂ ಕಾಂಗ್ರೆಸ್ ಕುಕೃತ್ಯಕ್ಕೆ ಅವಕಾಶ ಕೊಡಲ್ಲ. ನಿಮ್ಮ ಮಂಗಳಸೂತ್ರ, ನಿಮ್ಮ ಸಂಪತ್ತನ್ನು ಲೂಟಿ ಮಾಡಲು ಅವಕಾಶ ಕೊಡಲ್ಲ. ಪೂರ್ವಜರ ಆಸ್ತಿಗಳಿಗೆ ತೆರಿಗೆ (Tax on ancestral properties) ಹಾಕುತ್ತೇವೆ, ಕಾನೂನು ತರುತ್ತೇವೆ ಎಂದು ಕಾಂಗ್ರೆಸ್‌ನವರು ಹೇಳುತ್ತಿದ್ದಾರೆ. ಕಾಂಗ್ರೆಸ್ ಹೇಳುವ ಮಾತು ಕೇಳಿದರೆ ನಿಮ್ಮ ನಿದ್ದೆ ಕೆಡುತ್ತದೆ. ನಿಮ್ಮ ವಂಶಸ್ಥರು ಮಾಡಿರುವ ಆಸ್ತಿಯನ್ನು ಈ ಕಾಂಗ್ರೆಸಿಗರು ವಾಪಸ್ ಪಡೆಯುತ್ತಾರಂತೆ. ನೀವು ಕೂಡಿಟ್ಟಿರೋ ಆಸ್ತಿಯನ್ನು ನಿಮ್ಮ ಮಕ್ಕಳಿಗೆ ಕೊಡಲು ಆಗುವುದಿಲ್ಲ. ನಿಮ್ಮ ಆಸ್ತಿಗೆ ಶೇಕಡಾ 55ರಷ್ಟು ತೆರಿಗೆ ವಿಧಿಸಿ ಆಸ್ತಿಯನ್ನು ಹೊಡೆಯುವುದಕ್ಕೆ ಸಂಚು ರೂಪಿಸಲಾಗುತ್ತಿದೆ ಎಂದು ಎಂದು ಪ್ರಧಾನಿ ನರೇಂದ್ರ ಮೋದಿ ಬೆಳಗಾವಿಯಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.
ಬೆಳಗಾವಿ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ವೋಟ್ ಬ್ಯಾಂಕ್ ಭದ್ರ ಮಾಡಿಕೊಳ್ಳಲು ಕಾಂಗ್ರೆಸ್‌ನಿಂದ ದೊಡ್ಡ ಷಡ್ಯಂತ್ರ ನಡೆಯುತ್ತಿದೆ. ಆ ರೀತಿ ಆಗಲು ನೀವು ಬಿಡುತ್ತೀರಾ ಎಂದು ಕರ್ನಾಟಕದ ಎಲ್ಲ ಜನರಿಗೆ ನಾನು ಕೇಳುತ್ತಿದ್ದೇನೆ. ಆ ರೀತಿಯ ಕಾನೂನು ತರಲು ಹೊರಟಿರುವ ಕಾಂಗ್ರೆಸ್‌ಗೆ ಅಧಿಕಾರ ಕೊಡುತ್ತೀರಾ? ಇಂಥ ಕಾಂಗ್ರೆಸಿಗರನ್ನು ಹುಡುಕಿ ಹುಡುಕಿ ದೂರ ಇಡಿ ಎಂದು ಮನವಿ ಮಾಡಿದರು.
ಇಷ್ಟೆಲ್ಲ ಅನ್ಯಾಯ ಮಾಡುವ ಕಾಂಗ್ರೆಸ್‌ಗೆ ಜನ ಪಾಠ ಕಲಿಸಬೇಕಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಆಸ್ತಿ ಎಕ್ಸ್‌ರೇ ಮಾಡುತ್ತಾರಂತೆ, ಮಹಿಳೆಯರ ಬಳಿ ಸ್ತ್ರೀಧನ ಎಷ್ಟಿದೆ, ಚಿನ್ನ ಎಷ್ಟಿದೆ ಅಂತಲೂ ಎಕ್ಸ್‌ರೇ ಮಾಡಲಾಗುತ್ತದೆ. ಈ ರೀತಿಯ ಕಾಂಗ್ರೆಸ್ ನಿಮಗೆ ಬೇಕಾ? ನಿಮ್ಮ ಸಂಪತ್ತಿನ ಮೇಲೆ ಕಣ್ಣಿಟ್ಟಿರುವ ಕಾಂಗೆಸ್ ಅಧಿಕಾರ ಬೇಕಾ? ಎಲ್ಲರ ಆಸ್ತಿಯನ್ನು ಮರು ಹಂಚಿಕೆ ಮಾಡುತ್ತಾರಂತೆ, ನಿಮ್ಮ ಮಂಗಳ ಸೂತ್ರಕ್ಕೆ ಯಾರೋ ಕೈ ಹಾಕಲು ಅವಕಾಶ ಕೊಡುತ್ತೀರಾ? ನಿಮ್ಮ ಆಸ್ತಿಪಾಸ್ತಿಗೆ, ನಿಮ್ಮ ಚಿನ್ನಾಭರಣ ಲೂಟಿಗೆ ಅವಕಾಶ ಕೊಡುತ್ತೀರಾ? ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಶ್ನೆ ಮಾಡಿದರು.
ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಹೆಣ್ಣು ಮಕ್ಕಳ ಹತ್ಯೆ
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ (Karnataka Congress Government) ಬಂತೋ ಆಗ ಇಡೀ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ ಮಾಡಿದೆ. ಅಲ್ಲದೆ, ಕರ್ನಾಟಕದಲ್ಲಿ ಹೆಣ್ಣು ಮಗಳ ಕೊಲೆಯಾಗುತ್ತದೆ, ಜೈನ ಮುನಿಯ ಹತ್ಯೆಯಾಗುತ್ತದೆ, ಬಾಂಬ್ ಸ್ಫೋಟವಾಗುತ್ತದೆ. ಆದರೆ, ಈ ಸರ್ಕಾರ ತುಷ್ಟೀಕರಣದಲ್ಲಿ ತೊಡಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ವಿರುದ್ಧ ನೇರ ವಾಗ್ದಾಳಿ ನಡೆಸಿದರು.
ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣ ನಡೆದರೂ ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಸಂಪೂರ್ಣವಾಗಿ ಹಾಳಾಗಿದೆ. ಇದೇ ಬೆಳಗಾವಿಯ ವಂಟಮೂರಿಯ ಬಡ ದಲಿತ ಮಹಿಳೆ ಮೇಲೆ ಆದ ದೌರ್ಜನ್ಯ, ಜೈನ ಮುನಿ ಕೊಲೆ ಪ್ರಕರಣಗಳು ನಡೆದಿವೆ. ಇನ್ನು ಹುಬ್ಬಳ್ಳಿಯಲ್ಲಿ ನಮ್ಮ ಹೆಣ್ಣು ಮಗಳ ವಿರುದ್ಧ ನಡೆದ ಕೊಲೆ ಪ್ರಕರಣ ಏನನ್ನು ಹೇಳುತ್ತದೆ? ಆ ಹೆಣ್ಣು ಮಗಳ ಪೋಷಕರು ಕಠಿಣ ಕ್ರಮಕ್ಕೆ ಆಗ್ರಹಿಸಿದರೂ ಕಾಂಗ್ರೆಸ್ ಸರ್ಕಾರ ತುಷ್ಟೀಕರಣ ಮಾಡಲು ಹೊರಟಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕಿಡಿಕಾರಿದರು.
ಬೆಳಗಾವಿ ದಲಿತ ಮಹಿಳೆ ಬೆತ್ತಲೆ ಪ್ರಕರಣ ಪ್ರಸ್ತಾಪ
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಬಂತೋ ಆಗ ಇಡೀ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಇದೇ ಬೆಳಗಾವಿಯ ವಂಟಮೂರಿಯ ಬಡ ದಲಿತ ಮಹಿಳೆಯನ್ನು ಬೆತ್ತಲೆ ಮಾಡಿ ದೌರ್ಜನ್ಯ ಎಸೆಗಲಾಗಿದೆ, ಜೈನ ಮುನಿ ಕೊಲೆ ಕೃತ್ಯ ಎಂಥದ್ದು? ಹುಬ್ಬಳ್ಳಿಯಲ್ಲಿ ನಮ್ಮ ಹೆಣ್ಣು ಮಗಳ ವಿರುದ್ಧ ನಡೆದ ಕೊಲೆ ಪ್ರಕರಣ ಏನನ್ನು ಹೇಳುತ್ತದೆ? ಆ ಹುಡುಗಿಯ ಪೋಷಕರು ಕಠಿಣ ಕ್ರಮಕ್ಕೆ ಆಗ್ರಹಿಸಿದರೂ ಕಾಂಗ್ರೆಸ್ ಸರ್ಕಾರ ತುಷ್ಟೀಕರಣ ಕಾರಣದಿಂದ ಸೂಕ್ತ ಕ್ರಮ ವಹಿಸಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಕಿಡಿಕಾರಿದರು.
Live : ಬೆಳಗಾವಿಯಲ್ಲಿ ವಿಜಯ ಸಂಕಲ್ಪ ಸಮಾವೇಶವನ್ನುದ್ದೇಶಿಸಿ ಪ್ರಧಾನಿ ಶ್ರೀ @narendramodi#PhirEkBaarModiSarkar #AbkiBaar400Paar #ಮತ್ತೊಮ್ಮೆಮೋದಿಸರ್ಕಾರ https://t.co/Pi0NPfRFg6
— BJP Karnataka (@BJP4Karnataka) April 28, 2024
ನಿಮ್ಮ ನರೇಂದ್ರ ಮೋದಿ ಬದುಕಿರುವವರೆಗೂ ಕಾಂಗ್ರೆಸ್ ದುಷ್ಟ ನೀತಿಯನ್ನು ಕೈಗೊಳ್ಳಲು ಬಿಡುವುದಿಲ್ಲ. ನಿಮ್ಮ ಮಂಗಳ ಸೂತ್ರವನ್ನು ರಕ್ಷಣೆ ಮಾಡುವ ಹೊಣೆಯೂ ನಮ್ಮದು ಎಂದು ನರೇಂದ್ರ ಮೋದಿ ಭರವಸೆ ನೀಡಿದರು.
ಕಾಂಗ್ರೆಸ್‌ನಿಂದ ತುಷ್ಟೀಕರಣ ರಾಜಕಾರಣ
ಸುಲ್ತಾನರು, ನವಾಬರು ಹಲವಾರು ಜನರನ್ನು ಅತ್ಯಾಚಾರ ಮಾಡಿದರು. ಆದರೆ, ಅದರ ಬಗ್ಗೆ ಯಾಕೆ ಮಾತನಾಡುತ್ತಿಲ್ಲ. ಇದರ ಬಗ್ಗೆ ಮಾತನಾಡಲು ಧೈರ್ಯವೂ ಅವರಿಗೆ ಇಲ್ಲ. ರಾಜ ಮಹಾರಾಜರ ಸಾಧನೆ ಬಗ್ಗೆ ಕಾಂಗ್ರೆಸ್ ಮಾತನಾಡಲ್ಲ. ಸುಲ್ತಾನರ ದುರಾಡಳಿತದ ಬಗ್ಗೆ ಬಾಯಿ ಬಿಡುವುದಿಲ್ಲ. ಗಾಯಕ್‌ವಾಡ್ ಮಹಾರಾಜರು ಇಲ್ಲದಿದ್ದರೆ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ವಿದೇಶ ವ್ಯಾಸಂಗ ಆಗುತ್ತಿತ್ತಾ? ಮಹಾರಾಣಿ ಅಹಲ್ಯಾ ಬಾಯಿ ಇಲ್ಲದಿದ್ದರೆ ದೇಶಗಳಲ್ಲಿ ದೇವಸ್ಥಾನ, ಮಂದಿರಗಳ ನಿರ್ಮಾಣ ಆಗುತ್ತಿತ್ತಾ? ಅಲ್ಲದೆ, ಶಿವಾಜಿ ಮಹಾರಾಜರು, ಕಿತ್ತೂರು ರಾಣಿ ಚೆನ್ನಮ್ಮ ಅವರನ್ನು ಅವಮಾನ ಮಾಡುತ್ತಾ ಬರಲಾಗಿದೆ. ಇಂಡಿ ಅಲೆಯನ್ಸ್ ಅನ್ನು ಮೆಚ್ಚಿಸಲು ಕಾಂಗ್ರೆಸ್ ಏನೆಲ್ಲ ಮಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಶ್ನೆ ಮಾಡಿದರು.
ಕೊರೊನಾ ಕಾಲದಲ್ಲಿ ಕಾಂಗ್ರೆಸ್ ನಡೆದುಕೊಂಡ ರೀತಿ ಎಲ್ಲರಿಗೂ ಗೊತ್ತಿದೆ. ಕೊರೊನಾ ವ್ಯಾಕ್ಸಿನ್ ಕಂಡು ಹಿಡಿದರೆ ಅದನ್ನೂ ವಿರೋಧ ಮಾಡಿದರು. ಇದು ಬಿಜೆಪಿ ವ್ಯಾಕ್ಸಿನ್ ಎಂದು ದೂರಿತು. ಇನ್ನು ಇವಿಎಂ ವಿಚಾರದಲ್ಲಿ ಕಳೆದ 2 ದಿನಗಳ ಹಿಂದೆ ಕಾಂಗ್ರೆಸ್‌ಗೆ ಸುಪ್ರೀಂ ಕೋರ್ಟ್‌ನಲ್ಲಿ ತರಾಟೆಗೆ ತೆಗೆದುಕೊಳ್ಳಲಾಗಿದೆ. ಇನ್ನು ಕಾಂಗ್ರೆಸ್ ಉದ್ದೇಶ ಏನೆಂದರೆ ದೇಶಕ್ಕೆ ನಷ್ಟವಾಗುವ ರೀತಿ ಜನರನ್ನು ಎತ್ತಿಕಟ್ಟುವ ಕೆಲಸವಾಗಿದೆ. ಆದರೆ, ಬಿಜೆಪಿಯು ದೇಶದ ನಾಗರಿಕರಿಗೋಸ್ಕರ ಸರಳ ಜೀವನಕ್ಕಾಗಿ ಸಾಕಷ್ಟು ಕೆಲಸವನ್ನು ಮಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಸಮಾಜಘಾತುಕ ಸಂಘಟನೆಗಳನ್ನು ಬಿಜೆಪಿ ಬ್ಯಾನ್ ಮಾಡಿದೆ. ಆದರೆ, ಕಾಂಗ್ರೆಸ್ ವೋಟ್ ಬ್ಯಾಂಕ್ ರಾಜಕಾರಣ ಮಾಡಲು ಅವರ ಜತೆಯೇ ಕೈಜೋಡಿಸುತ್ತದೆ. ಕೇರಳದ ವಯನಾಡಿನಲ್ಲಿ ಒಂದು ಕ್ಷೇತ್ರವನ್ನು ಗೆಲ್ಲಲು ಏನೆಲ್ಲ ಮಾಡಲಾಗಿದೆ? ಇಂಥ ಮತಾಂಧ ಸಂಘಟನೆಗಳ ಜತೆ ಕಾಂಗ್ರೆಸ್ ಕೈಜೋಡಿಸಿದೆ. ಅವರಿಗೆ ಶರಣಾಗತಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆಕ್ರೋಶ ಹೊರಹಾಕಿದರು.
ಇದನ್ನೂ ಓದಿ: PM Narendra Modi: ಮೋದಿ ಕಾರ್ಯಕ್ರಮ ವಿಫಲಗೊಳಿಸಲು ರಾಜ್ಯ ಸರ್ಕಾರ ಸೂಚಿಸಿದೆಯೇ? ಪೊಲೀಸರಿಗೆ ಕಾಗೇರಿ ಪ್ರಶ್ನೆ
ಇದು ರೈತರ ವಿರೋಧಿ ಸರ್ಕಾರ
ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದಾಗ ರೈತರನ್ನು ಕಡೆಗಣಿಸಿದೆ. ನಮ್ಮ ಸರ್ಕಾರ ಕಿಸಾನ್ ಸಮ್ಮಾನ್ ಯೋಜನೆ ಅಡಿ ರೈತರಿಗೆ ವರ್ಷಕ್ಕೆ ನೀಡುತ್ತಿರುವ 10 ಸಾವಿರ ರೂಪಾಯಿ ಜತೆಗೆ ಈ ಹಿಂದೆ ಬಿಜೆಪಿ ಸರ್ಕಾರವು 4 ಸಾವಿರ ರೂಪಾಯಿ ಸೇರಿಸಿ ಕೊಡುತ್ತಿತ್ತು. ಕಾಂಗ್ರೆಸ್ ಮತ ಕೇಳುವಾಗ ಇದರ ಬಗ್ಗೆ ಏನೂ ಹೇಳಲಿಲ್ಲ. ಯಾವಾಗ ಮತ ಬಂದು ಗೆದ್ದರೂ ಆ ನಾಲ್ಕು ಸಾವಿರ ರೂಪಾಯಿಯನ್ನು ನಿಲ್ಲಿಸಿಬಿಟ್ಟರು. ಇದು ರೈತ ವಿರೋಧಿ ಸರ್ಕಾರವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದರು.
ಕಿತ್ತೂರು ರಾಣಿ ಚೆನ್ನಮ್ಮ ಆದರ್ಶಗಳ ಪ್ರೇರಣೆಯೊಂದಿಗೆ ಬಿಜೆಪಿ ಆಡಳಿತವು ನಡೆಯುತ್ತಿದೆ. ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆ ಇದೆ, ಮಕ್ಕಳು ಅಲ್ಲಿ ಓದುತ್ತಿದ್ದಾರೆ. ನಿಮ್ಮ ಕನಸುಗಳೇ ಮೋದಿ ಸಂಕಲ್ಪ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.