ಬೆಂಗಳೂರು: ಪ್ರಸಕ್ತ ಸಾಲಿನ ಲೋಕಸಭಾ ಚುನಾವಣೆಯಲ್ಲಿ (Lok Sabha Election 2024) ಹೆಚ್ಚಿನ ಸೀಟುಗಳನ್ನು ಗೆಲ್ಲಲು ಕಾಂಗ್ರೆಸ್ (Congress Karnataka) ರಣತಂತ್ರ ಹೆಣೆಯುತ್ತಿದೆ. ಈಗಾಗಲೇ 20 ಕ್ಷೇತ್ರಗಳನ್ನು ಗೆಲ್ಲಲು ಟಾರ್ಗೆಟ್ ಹಾಕಿಕೊಂಡಿದೆ. ಈ ನಿಟ್ಟಿನಲ್ಲಿ ಏನೆಲ್ಲ ಸಾಧ್ಯವೋ ಅದೆಲ್ಲವನ್ನೂ ಮಾಡಲಾಗುತ್ತಿದೆ. ಇದಕ್ಕಾಗಿ ಬೇರೆ ಪಕ್ಷಗಳ ನಾಯಕರನ್ನು ಸೆಳೆಯಲಾಗುತ್ತಿದೆ. ಆಪರೇಷನ್ ಜತೆಗೆ ಕೋ ಆಪರೇಷನ್ ಪಾಲಿಟಿಕ್ಸ್ (Co operation politics) ಮಾಡಲು ಮುಂದಾಗಿದೆ.
ಬೆಂಗಳೂರು ಮೂರು ಲೋಕಸಭಾ ಕ್ಷೇತ್ರಗಳನ್ನು ಡಿಕೆ ಬ್ರದರ್ಸ್ ಈಗ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಹೀಗಾಗಿ ಸವಾಲು ಬೆನ್ನಟ್ಟಿದ ಡಿ.ಕೆ. ಶಿವಕುಮಾರ್ ಮತ್ತು ಡಿ.ಕೆ. ಸುರೇಶ್ ಅವರು ಆಪರೇಷನ್ ಮತ್ತು ಕೋಆಪರೇಷನ್ ಪಾಲಿಟಿಕ್ಸ್‌ಗೆ ಚಾಲನೆ ನೀಡಿದ್ದಾರೆ. ಈ ಮೂಲಕ ಬೆಂಗಳೂರು ಕೇಂದ್ರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ದಕ್ಷಿಣ ಹಾಗೂ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರಗಳನ್ನು ಗೆದ್ದುಕೊಳ್ಳಲು ಪ್ಲ್ಯಾನ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Lok Sabha Election 2024: ಕೋಲಾರ ಟಿಕೆಟ್ ಮಿಸ್; ಸಿಟ್ಟೆದ್ದು ದೆಹಲಿಗೆ ದೌಡಾಯಿಸಿದ ಮುನಿಸ್ವಾಮಿ!
ಏನಿದು ಡಿಕೆಶಿ ಆಪರೇಷನ್- ಕೋಆಪರೇಷನ್ ಪಾಲಿಟಿಕ್ಸ್?
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಈಗ ಜೆಡಿಎಸ್ – ಬಿಜೆಪಿಯಲ್ಲಿ ಕೆಲವರಿಗೆ ಅಸಮಾಧಾನ ಉಂಟಾಗಿದೆ. ಹೀಗಾಗಿ ಈ ಅಸಮಾಧಾನಿತ ಸ್ಥಳೀಯ ನಾಯಕರನ್ನು ಆಪರೇಷನ್ ಹಸ್ತ ಮಾಡುವುದು. ಜೆಡಿಎಸ್- ಬಿಜೆಪಿ ಪರಿಷತ್ ಸದಸ್ಯರು, ಶಾಸಕರಿಗೆ ಗಾಳ ಹಾಕುವ ಪ್ಲ್ಯಾನ್ ಮಾಡಿಕೊಳ್ಳಲಾಗಿದೆ. ಒಂದು ವೇಳೆ ಅವರು ಕಾಂಗ್ರೆಸ್ ಸೇರಲು ಒಪ್ಪುತ್ತಿಲ್ಲವೇ? ಸರಿ, ನಮಗೆ ಕೋಆಪರೇಷನ್ ನೀಡಿ ಎಂದು ಕೇಳುವ ಬಗ್ಗೆ ತಂತ್ರ ರೂಪಿಸಿದ್ದಾರೆ. ನೀವು ನಿಮ್ಮ ಪಕ್ಷದಲ್ಲಿಯೇ ಇರಿ. ಆದರೆ, ನಿಮ್ಮ ಸಹಕಾರ ನಮಗೆ ಕೊಡಿ ಎಂದು ಕೇಳಲು ಮುಂದಾಗಿದ್ದಾರೆ ಎನ್ನಲಾಗಿದೆ.
ರಾಮನಗರ, ಬೆಂಗಳೂರು ಭಾಗದ ಸ್ಥಳೀಯ ಮಟ್ಟದ ಮುಖಂಡರನ್ನು ಕಾಂಗ್ರೆಸ್ ಸೇರ್ಪಡೆ ಮಾಡಿಕೊಳ್ಳುತ್ತಿರುವ ಡಿ.ಕೆ. ಶಿವಕುಮಾರ್ ಈಗ ಶಾಸಕ ಎಸ್.ಟಿ. ಸೋಮಶೇಖರ್ ಸೇರಿದಂತೆ ಅನ್ಯ ಪಕ್ಷಗಳ ನಾಯಕರ ಸಹಕಾರ ಕೇಳಲು ಮುಂದಾಗಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿಗಳಿಗೆ ಗೆಲುವಿನ 10 ಸೂತ್ರ ಬೋಧಿಸಿದ ಡಿಕೆಶಿ, ಸಿದ್ದರಾಮಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಮತ್ತು ಕೆಪಿಸಿಸಿ ಅಧ್ಯಕ್ಷರಾದ ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ಅವರ ನೇತೃತ್ವದಲ್ಲಿ ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ಸಂಜೆ ಲೋಕಸಭಾ ಚುನಾವಣೆ ಸಂಬಂಧದ ಸಿದ್ಧತೆಗಳನ್ನು ತೀವ್ರಗೊಳಿಸುವ ಸಂಬಂಧ ಸಚಿವರು, ಹಿರಿಯ ಶಾಸಕರು ಮತ್ತು ಸಂಭಾವ್ಯ ಅಭ್ಯರ್ಥಿಗಳ ಸಭೆ ನಡೆಸಿದರು. ಮತ್ತು ಕೆಲವು ಕಿವಿ ಮಾತುಗಳನ್ನು ಹೇಳಿದರು. ಪ್ರತ್ಯೇಕವಾಗಿ ಒಂದೊಂದೇ ಕ್ಷೇತ್ರದ ಅಭ್ಯರ್ಥಿ ಹಾಗೂ ಉಸ್ತುವಾರಿ ಸಚಿವರ ಜತೆಗೆ ಮಾತುಕತೆ ನಡೆಸಿದ್ದು ವಿಶೇಷವಾಗಿತ್ತು.
Lok Sabha Election 2024 : ಸಿಎಂ, ಡಿಸಿಎಂ ಅವರು ಹೇಳಿರುವ ಕಿವಿ ಮಾತುಗಳು
- ಲೋಕಸಭೆಯಲ್ಲಿ 20 ಸ್ಥಾನಗಳನ್ನು ಗೆಲ್ಲುತ್ತೇವೆ. ಜನರ ನಡುವೆ ಗಟ್ಟಿಯಾಗಿ ನಿಂತು ಸಮರ್ಥವಾಗಿ ಚುನಾವಣೆ ಎದುರಿಸಿ ಗೆದ್ದು ಬನ್ನಿ
- ವಿಧಾನಸಭೆಯಲ್ಲಿ 136 ಸ್ಥಾನ ಗೆಲ್ಲುತ್ತೇವೆ ಎಂದು ಯಾರೂ ಹೇಳಿರಲಿಲ್ಲ. ಲೋಕಸಭೆಯಲ್ಲೂ ನಮಗೆ 20 ಸ್ಥಾನದವರೆಗೂ ಖಚಿತವಾಗಿ ಗೆಲ್ಲುವ ಅವಕಾಶಗಳಿವೆ.
- ನಮ್ಮ ಗ್ಯಾರಂಟಿಗಳ ಬಗ್ಗೆ ನಾಡಿನ ಜನತೆಗೆ, ನಮ್ಮ ಹೆಣ್ಣು ಮಕ್ಕಳಿಗೆ, ತಾಯಂದರಿಗೆ ಧನ್ಯತೆ ಇದೆ. ಅವರಲ್ಲಿ ಕೈ ಮುಗಿದು ಮತ ಕೇಳಿ.
- ಕಾರ್ಯಕರ್ತರನ್ನು, ಸ್ಥಳೀಯ ಮುಖಂಡರನ್ನು ಮಾತನಾಡಿಸಿ, ಪ್ರತಿಯೊಬ್ಬರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಿ. ಪ್ರತಿಷ್ಠೆ ಬೇಡ
- ಎಲ್ಲ ರೀತಿಯ ಅಧಿಕಾರ ದುರುಪಯೋಗ ಮಾಡಿ ನಮಗೆ ತೊಂದರೆ ಕೊಡುತ್ತಾರೆ. ನಾವು ಎದೆಗಾರಿಕೆಯಿಂದ ಎದುರಿಸಿ ಜನರಿಂದ ಶಕ್ತಿ ಪಡೆದುಕೊಳ್ಳಬೇಕು
- ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ. ವೈಜ್ಞಾನಿಕವಾಗಿ ಪ್ರಚಾರ ಮಾಡಿ ಅರ್ಥಪೂರ್ಣವಾಗಿ ಚುನಾವಣೆ ನಡೆಸೋಣ
- ಕ್ಷೇತ್ರದಲ್ಲಿ ಅಸಮಾಧಾನಿತ ಮುಖಂಡರು ಇದ್ದರೆ ಹೋಗಿ ಮನವೊಲಿಕೆ ಮಾಡಿ. ಯಾವುದೇ ಪ್ರತಿಷ್ಠೆ ಇಟ್ಟುಕೊಳ್ಳಬೇಡಿ.
- ಕ್ರಿಯಾಶೀಲ ಕಾರ್ಯಕರ್ತರನ್ನು ಭೇಟಿ ಮಾಡಿ. ಆ ಮೂಲಕ ಪ್ರತಿಯೊಬ್ಬರನ್ನು ತಲುಪುವ ಕೆಲಸ ಮಾಡಿ
- ಪ್ರಚಾರದ ಸಂದರ್ಭದಲ್ಲಿ ಆ ಭಾಗದ ಪ್ರಮುಖ ನಾಯಕರ ನಿವಾಸಕ್ಕೆ ಭೇಟಿ ನೀಡಿ. ಚುನಾವಣಾ ಸಂದರ್ಭದಲ್ಲಿ ಒಗ್ಗಟ್ಟು ಬಹಳ ಮುಖ್ಯ. ಎಲ್ಲರನ್ನೂ ಜತೆಗೆ ತೆಗೆದುಕೊಂಡು ಹೋಗಿ.
ಇದನ್ನೂ ಓದಿ: CM Siddaramaiah: ಕೇಂದ್ರದ ವಿರುದ್ಧ ಸುಪ್ರೀಂ ಮೊರೆ ಹೋಗಿದ್ದು ಏಕೆ? ಸಿದ್ದರಾಮಯ್ಯ ಕೊಟ್ಟ ಕಾರಣವಿದು!
- ರೋಡ್ ಶೋ ಮಾಡುವಾಗ ಸಮನ್ವಯ ಬಹಳ ಮುಖ್ಯ ಆಯೋಜನೆ ಮಾಡುವಾಗ ಎಚ್ಚರಿಕೆ ಪ್ಲ್ಯಾನ್ ಮಾಡಿ