Lok Sabha Election 2024: ಕಾಂಗ್ರೆಸ್‌ನಲ್ಲೀಗ 'ಕೋ ಆಪರೇಷನ್' ಪಾಲಿಟಿಕ್ಸ್‌! ಇದು ಡಿಕೆಶಿ ಮಾಸ್ಟರ್‌ ಸ್ಟ್ರೋಕ್ - Vistara News

Lok Sabha Election 2024

Lok Sabha Election 2024: ಕಾಂಗ್ರೆಸ್‌ನಲ್ಲೀಗ ‘ಕೋ ಆಪರೇಷನ್’ ಪಾಲಿಟಿಕ್ಸ್‌! ಇದು ಡಿಕೆಶಿ ಮಾಸ್ಟರ್‌ ಸ್ಟ್ರೋಕ್

Lok Sabha Election 2024: ಬೆಂಗಳೂರು ಮೂರು ಲೋಕಸಭಾ ಕ್ಷೇತ್ರಗಳನ್ನು ಡಿಕೆ ಬ್ರದರ್ಸ್ ಈಗ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಹೀಗಾಗಿ ಸವಾಲು ಬೆನ್ನಟ್ಟಿದ ಡಿ.ಕೆ. ಶಿವಕುಮಾರ್‌ ಮತ್ತು ಡಿ.ಕೆ. ಸುರೇಶ್‌ ಅವರು ಆಪರೇಷನ್ ಮತ್ತು ಕೋಆಪರೇಷನ್ ಪಾಲಿಟಿಕ್ಸ್‌ಗೆ ಚಾಲನೆ ನೀಡಿದ್ದಾರೆ.

VISTARANEWS.COM


on

DK Shivakumar
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಪ್ರಸಕ್ತ ಸಾಲಿನ ಲೋಕಸಭಾ ಚುನಾವಣೆಯಲ್ಲಿ (Lok Sabha Election 2024) ಹೆಚ್ಚಿನ ಸೀಟುಗಳನ್ನು ಗೆಲ್ಲಲು ಕಾಂಗ್ರೆಸ್‌ (Congress Karnataka) ರಣತಂತ್ರ ಹೆಣೆಯುತ್ತಿದೆ. ಈಗಾಗಲೇ 20 ಕ್ಷೇತ್ರಗಳನ್ನು ಗೆಲ್ಲಲು ಟಾರ್ಗೆಟ್‌ ಹಾಕಿಕೊಂಡಿದೆ. ಈ ನಿಟ್ಟಿನಲ್ಲಿ ಏನೆಲ್ಲ ಸಾಧ್ಯವೋ ಅದೆಲ್ಲವನ್ನೂ ಮಾಡಲಾಗುತ್ತಿದೆ. ಇದಕ್ಕಾಗಿ ಬೇರೆ ಪಕ್ಷಗಳ ನಾಯಕರನ್ನು ಸೆಳೆಯಲಾಗುತ್ತಿದೆ. ಆಪರೇಷನ್ ಜತೆಗೆ ಕೋ ಆಪರೇಷನ್ ಪಾಲಿಟಿಕ್ಸ್‌ (Co operation politics) ಮಾಡಲು ಮುಂದಾಗಿದೆ.

ಬೆಂಗಳೂರು ಮೂರು ಲೋಕಸಭಾ ಕ್ಷೇತ್ರಗಳನ್ನು ಡಿಕೆ ಬ್ರದರ್ಸ್ ಈಗ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಹೀಗಾಗಿ ಸವಾಲು ಬೆನ್ನಟ್ಟಿದ ಡಿ.ಕೆ. ಶಿವಕುಮಾರ್‌ ಮತ್ತು ಡಿ.ಕೆ. ಸುರೇಶ್‌ ಅವರು ಆಪರೇಷನ್ ಮತ್ತು ಕೋಆಪರೇಷನ್ ಪಾಲಿಟಿಕ್ಸ್‌ಗೆ ಚಾಲನೆ ನೀಡಿದ್ದಾರೆ. ಈ ಮೂಲಕ ಬೆಂಗಳೂರು ಕೇಂದ್ರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ದಕ್ಷಿಣ ಹಾಗೂ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರಗಳನ್ನು ಗೆದ್ದುಕೊಳ್ಳಲು ಪ್ಲ್ಯಾನ್‌ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Lok Sabha Election 2024: ಕೋಲಾರ ಟಿಕೆಟ್‌ ಮಿಸ್‌; ಸಿಟ್ಟೆದ್ದು ದೆಹಲಿಗೆ ದೌಡಾಯಿಸಿದ ಮುನಿಸ್ವಾಮಿ!

ಏನಿದು ಡಿಕೆಶಿ ಆಪರೇಷನ್- ಕೋಆಪರೇಷನ್ ಪಾಲಿಟಿಕ್ಸ್?

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಈಗ ಜೆಡಿಎಸ್ – ಬಿಜೆಪಿಯಲ್ಲಿ ಕೆಲವರಿಗೆ ಅಸಮಾಧಾನ ಉಂಟಾಗಿದೆ. ಹೀಗಾಗಿ ಈ ಅಸಮಾಧಾನಿತ ಸ್ಥಳೀಯ ನಾಯಕರನ್ನು ಆಪರೇಷನ್ ಹಸ್ತ ಮಾಡುವುದು. ಜೆಡಿಎಸ್- ಬಿಜೆಪಿ ಪರಿಷತ್ ಸದಸ್ಯರು, ಶಾಸಕರಿಗೆ ಗಾಳ ಹಾಕುವ ಪ್ಲ್ಯಾನ್‌ ಮಾಡಿಕೊಳ್ಳಲಾಗಿದೆ. ಒಂದು ವೇಳೆ ಅವರು ಕಾಂಗ್ರೆಸ್‌ ಸೇರಲು ಒಪ್ಪುತ್ತಿಲ್ಲವೇ? ಸರಿ, ನಮಗೆ ಕೋಆಪರೇಷನ್ ನೀಡಿ ಎಂದು ಕೇಳುವ ಬಗ್ಗೆ ತಂತ್ರ ರೂಪಿಸಿದ್ದಾರೆ. ನೀವು ನಿಮ್ಮ ಪಕ್ಷದಲ್ಲಿಯೇ ಇರಿ. ಆದರೆ, ನಿಮ್ಮ ಸಹಕಾರ ನಮಗೆ ಕೊಡಿ ಎಂದು ಕೇಳಲು ಮುಂದಾಗಿದ್ದಾರೆ ಎನ್ನಲಾಗಿದೆ.

ರಾಮನಗರ, ಬೆಂಗಳೂರು ಭಾಗದ ಸ್ಥಳೀಯ ಮಟ್ಟದ ಮುಖಂಡರನ್ನು ಕಾಂಗ್ರೆಸ್ ಸೇರ್ಪಡೆ ಮಾಡಿಕೊಳ್ಳುತ್ತಿರುವ ಡಿ.ಕೆ. ಶಿವಕುಮಾರ್‌ ಈಗ ಶಾಸಕ ಎಸ್.ಟಿ. ಸೋಮಶೇಖರ್ ಸೇರಿದಂತೆ ಅನ್ಯ ಪಕ್ಷಗಳ ನಾಯಕರ ಸಹಕಾರ ಕೇಳಲು ಮುಂದಾಗಿದ್ದಾರೆ.

ಕಾಂಗ್ರೆಸ್‌ ಅಭ್ಯರ್ಥಿಗಳಿಗೆ ಗೆಲುವಿನ 10 ಸೂತ್ರ ಬೋಧಿಸಿದ ಡಿಕೆಶಿ, ಸಿದ್ದರಾಮಯ್ಯ

ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಮತ್ತು ಕೆಪಿಸಿಸಿ ಅಧ್ಯಕ್ಷರಾದ ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ಅವರ ನೇತೃತ್ವದಲ್ಲಿ ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ಸಂಜೆ ಲೋಕಸಭಾ ಚುನಾವಣೆ ಸಂಬಂಧದ ಸಿದ್ಧತೆಗಳನ್ನು ತೀವ್ರಗೊಳಿಸುವ ಸಂಬಂಧ ಸಚಿವರು, ಹಿರಿಯ ಶಾಸಕರು ಮತ್ತು ಸಂಭಾವ್ಯ ಅಭ್ಯರ್ಥಿಗಳ ಸಭೆ ನಡೆಸಿದರು. ಮತ್ತು ಕೆಲವು ಕಿವಿ ಮಾತುಗಳನ್ನು ಹೇಳಿದರು. ಪ್ರತ್ಯೇಕವಾಗಿ ಒಂದೊಂದೇ ಕ್ಷೇತ್ರದ ಅಭ್ಯರ್ಥಿ ಹಾಗೂ ಉಸ್ತುವಾರಿ ಸಚಿವರ ಜತೆಗೆ ಮಾತುಕತೆ ನಡೆಸಿದ್ದು ವಿಶೇಷವಾಗಿತ್ತು.

Lok Sabha Election 2024 : ಸಿಎಂ, ಡಿಸಿಎಂ ಅವರು ಹೇಳಿರುವ ಕಿವಿ ಮಾತುಗಳು

  1. ಲೋಕಸಭೆಯಲ್ಲಿ 20 ಸ್ಥಾನಗಳನ್ನು ಗೆಲ್ಲುತ್ತೇವೆ. ಜನರ ನಡುವೆ ಗಟ್ಟಿಯಾಗಿ ನಿಂತು ಸಮರ್ಥವಾಗಿ ಚುನಾವಣೆ ಎದುರಿಸಿ ಗೆದ್ದು ಬನ್ನಿ
  2. ವಿಧಾನಸಭೆಯಲ್ಲಿ 136 ಸ್ಥಾನ ಗೆಲ್ಲುತ್ತೇವೆ ಎಂದು ಯಾರೂ ಹೇಳಿರಲಿಲ್ಲ. ಲೋಕಸಭೆಯಲ್ಲೂ ನಮಗೆ 20 ಸ್ಥಾನದವರೆಗೂ ಖಚಿತವಾಗಿ ಗೆಲ್ಲುವ ಅವಕಾಶಗಳಿವೆ.
  3. ನಮ್ಮ ಗ್ಯಾರಂಟಿಗಳ ಬಗ್ಗೆ ನಾಡಿನ ಜನತೆಗೆ, ನಮ್ಮ ಹೆಣ್ಣು ಮಕ್ಕಳಿಗೆ, ತಾಯಂದರಿಗೆ ಧನ್ಯತೆ ಇದೆ. ಅವರಲ್ಲಿ ಕೈ ಮುಗಿದು ಮತ ಕೇಳಿ.
  4. ಕಾರ್ಯಕರ್ತರನ್ನು, ಸ್ಥಳೀಯ ಮುಖಂಡರನ್ನು ಮಾತನಾಡಿಸಿ, ಪ್ರತಿಯೊಬ್ಬರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಿ. ಪ್ರತಿಷ್ಠೆ ಬೇಡ
  5. ಎಲ್ಲ ರೀತಿಯ ಅಧಿಕಾರ ದುರುಪಯೋಗ ಮಾಡಿ ನಮಗೆ ತೊಂದರೆ ಕೊಡುತ್ತಾರೆ. ನಾವು ಎದೆಗಾರಿಕೆಯಿಂದ ಎದುರಿಸಿ ಜನರಿಂದ ಶಕ್ತಿ ಪಡೆದುಕೊಳ್ಳಬೇಕು
  6. ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ. ವೈಜ್ಞಾನಿಕವಾಗಿ ಪ್ರಚಾರ ಮಾಡಿ ಅರ್ಥಪೂರ್ಣವಾಗಿ ಚುನಾವಣೆ ನಡೆಸೋಣ
  7. ಕ್ಷೇತ್ರದಲ್ಲಿ ಅಸಮಾಧಾನಿತ ಮುಖಂಡರು ಇದ್ದರೆ ಹೋಗಿ ಮನವೊಲಿಕೆ ಮಾಡಿ. ಯಾವುದೇ ಪ್ರತಿಷ್ಠೆ ಇಟ್ಟುಕೊಳ್ಳಬೇಡಿ.
  8. ಕ್ರಿಯಾಶೀಲ ಕಾರ್ಯಕರ್ತರನ್ನು ಭೇಟಿ ಮಾಡಿ. ಆ ಮೂಲಕ ಪ್ರತಿಯೊಬ್ಬರನ್ನು ತಲುಪುವ ಕೆಲಸ ಮಾಡಿ
  • ಪ್ರಚಾರದ ಸಂದರ್ಭದಲ್ಲಿ ಆ ಭಾಗದ ಪ್ರಮುಖ ನಾಯಕರ ನಿವಾಸಕ್ಕೆ ಭೇಟಿ ನೀಡಿ. ಚುನಾವಣಾ ಸಂದರ್ಭದಲ್ಲಿ ಒಗ್ಗಟ್ಟು ಬಹಳ ಮುಖ್ಯ. ಎಲ್ಲರನ್ನೂ ಜತೆಗೆ ತೆಗೆದುಕೊಂಡು ಹೋಗಿ.

ಇದನ್ನೂ ಓದಿ: CM Siddaramaiah: ಕೇಂದ್ರದ ವಿರುದ್ಧ ಸುಪ್ರೀಂ ಮೊರೆ ಹೋಗಿದ್ದು ಏಕೆ? ಸಿದ್ದರಾಮಯ್ಯ ಕೊಟ್ಟ ಕಾರಣವಿದು!

  • ರೋಡ್ ಶೋ ಮಾಡುವಾಗ ಸಮನ್ವಯ ಬಹಳ ಮುಖ್ಯ ಆಯೋಜನೆ ಮಾಡುವಾಗ ಎಚ್ಚರಿಕೆ ಪ್ಲ್ಯಾನ್ ಮಾಡಿ
ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Lok Sabha Election 2024: ಎರಡು ಹಂತದ ಚುನಾವಣೆ ವೇಳೆ ಶೇ.84ರಷ್ಟು ಕ್ಷೇತ್ರಗಳಲ್ಲಿ ಮತದಾನ ಕುಸಿತ; ಎಫೆಕ್ಟ್ ಏನು?

Lok Sabha Election 2024: ಮಂಗಳವಾರ ಬಿಡುಗಡೆಯಾದ ECI ಅಂಕಿಅಂಶಗಳ ಪ್ರಕಾರ, ಹಂತ 1ರಲ್ಲಿ 66.14%ರಷ್ಟು ಮತದಾನವಾಗಿದ್ದು, 2ನೇ ಹಂತದಲ್ಲಿ 66.71% ರಷ್ಟು ಮತದಾನವಾಗಿದೆ. 2019ರಲ್ಲಿ, ಈ ಹಂತಗಳ ಅಂಕಿಅಂಶಗಳು ಕ್ರಮವಾಗಿ 69.4% ಮತ್ತು 69.6% ಆಗಿದ್ದವು. ಒಟ್ಟು ಮತ ಎಣಿಕೆಗೆ ಅಂಚೆ ಮತಪತ್ರಗಳನ್ನು ಸೇರಿಸಿದ ನಂತರವೇ ಅಂತಿಮ ಮತದಾನದ ಪ್ರಮಾಣ ಲಭ್ಯವಾಗಲಿದೆ ಎಂದು ಚುನಾವಣಾ ಸಂಸ್ಥೆ ತಿಳಿಸಿದೆ.

VISTARANEWS.COM


on

lok sabha election 2024 voting
Koo

ಹೊಸದಿಲ್ಲಿ: ಲೋಕಸಭೆ ಚುನಾವಣೆ (Lok Sabha Election 2024) ಮೊದಲ ಹಂತದ (first phase voting) ಹನ್ನೊಂದು ದಿನಗಳ ನಂತರ ಮತ್ತು ಎರಡನೇ ಹಂತದ (second phase voting) ನಾಲ್ಕು ದಿನಗಳ ನಂತರ, ಭಾರತೀಯ ಚುನಾವಣಾ ಆಯೋಗ (Election commission of India – ECI) ಮಂಗಳವಾರ ಅಧಿಕೃತವಾಗಿ ಮತದಾನ ಮಾಹಿತಿಯನ್ನು (Voting data) ಬಿಡುಗಡೆ ಮಾಡಿದೆ. ಶೇ.84ರಷ್ಟು ಲೋಕಸಭೆ ಕ್ಷೇತ್ರಗಳಲ್ಲಿ ಮತದಾನ ಕುಸಿತವಾಗಿರುವುದು ಕಂಡುಬಂದಿದೆ.

ಮಂಗಳವಾರ ಬಿಡುಗಡೆಯಾದ ECI ಅಂಕಿಅಂಶಗಳ ಪ್ರಕಾರ, ಹಂತ 1ರಲ್ಲಿ 66.14%ರಷ್ಟು ಮತದಾನವಾಗಿದ್ದು, 2ನೇ ಹಂತದಲ್ಲಿ 66.71% ರಷ್ಟು ಮತದಾನವಾಗಿದೆ. 2019ರಲ್ಲಿ, ಈ ಹಂತಗಳ ಅಂಕಿಅಂಶಗಳು ಕ್ರಮವಾಗಿ 69.4% ಮತ್ತು 69.6% ಆಗಿದ್ದವು. ಒಟ್ಟು ಮತ ಎಣಿಕೆಗೆ ಅಂಚೆ ಮತಪತ್ರಗಳನ್ನು ಸೇರಿಸಿದ ನಂತರವೇ ಅಂತಿಮ ಮತದಾನದ ಪ್ರಮಾಣ ಲಭ್ಯವಾಗಲಿದೆ ಎಂದು ಚುನಾವಣಾ ಸಂಸ್ಥೆ ತಿಳಿಸಿದೆ.

ಅಂಕಿಅಂಶಗಳ ಪ್ರಕಾರ 102 ಕ್ಷೇತ್ರಗಳಲ್ಲಿ 1ನೇ ಹಂತದಲ್ಲಿ ಮತದಾನ ಮಾಡಲು ಅರ್ಹತೆ ಪಡೆದ 16.63 ಕೋಟಿ ಜನರಲ್ಲಿ ಸುಮಾರು 11.0 ಕೋಟಿ ಜನರು ಮತ ಚಲಾಯಿಸಿದ್ದಾರೆ. ಆದರೆ ಹಂತ 2ರಲ್ಲಿ 88 ಕ್ಷೇತ್ರಗಳಲ್ಲಿ ಮತ ಚಲಾಯಿಸಲು ಅರ್ಹತೆ ಪಡೆದ 15.88 ಕೋಟಿ ಜನರಲ್ಲಿ ಸುಮಾರು 10.6 ಕೋಟಿ ಜನರು ಮತ ಚಲಾಯಿಸಿದ್ದಾರೆ.

2019ರ ಲೋಕಸಭೆ ಚುನಾವಣೆಯೊಂದಿಗೆ ಮತದಾನದ ಹೋಲಿಕೆ ಸಾಧ್ಯವಿರುವ 176 ಸ್ಥಾನಗಳಲ್ಲಿ 148ರಲ್ಲಿ ವಿವಿಧ ಹಂತದ ಕುಸಿತವನ್ನು ಗಮನಿಸಲಾಗಿದೆ ಎಂದು ಡೇಟಾ ತೋರಿಸಿದೆ. ಉಳಿದವು ಡಿಲಿಮಿಟೇಶನ್‌ಗೆ ಒಳಗಾಗಿವೆ. 2019ರ ಲೋಕಸಭಾ ಚುನಾವಣೆಯ ನಂತರ 12 ಕ್ಷೇತ್ರಗಳಿಗೆ (ಅಸ್ಸಾಂನಲ್ಲಿ 10 ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಎರಡು) ಹೋಲಿಕೆ ಸಾಧ್ಯವಿಲ್ಲ. ಇವು ಕ್ಷೇತ್ರ ಮರುಹಂಚಿಕೆಗೆ ಒಳಗಾಗಿವೆ. ಔಟರ್ ಮಣಿಪುರ ಪಿಸಿಯ ಹೋಲಿಕೆ ಸಾಧ್ಯವಿಲ್ಲ. ಏಕೆಂದರೆ ಅದು ಎರಡೂ ಹಂತಗಳಲ್ಲಿ ಭಾಗಶಃ ಮತದಾನ ಕಂಡಿದೆ.

ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಂಬಂಧಿಸಿದಂತೆ, 2019ರೊಂದಿಗೆ ಹೋಲಿಕೆ ಸಾಧ್ಯವಿರುವ ಮೊದಲ ಹಂತದಲ್ಲಿ ಮತದಾನ ಮಾಡಿದ 19 ರಾಜ್ಯಗಳು ಮತ್ತು ಯುಟಿಗಳಲ್ಲಿ, 16 ಕುಸಿತವನ್ನು ಕಂಡಿದೆ. ಎರಡನೇ ಹಂತದಲ್ಲಿ 11 ಪ್ರಾಂತ್ಯಗಳಲ್ಲಿ ಎಂಟರಲ್ಲಿ ಮತದಾನವು ಕುಸಿದಿದೆ. ಖಚಿತವಾಗಿ ಹೇಳುವುದಾದರೆ, ಅಂಚೆ ಮತಪತ್ರಗಳನ್ನು ಎಣಿಸಿದಾಗ ಮತದಾನದಲ್ಲಿ ಸಣ್ಣ ಇಳಿಕೆಯನ್ನು ಸರಿದೂಗಿಸಬಹುದು. 2024ರ ಮತದಾನದ ಸಂಖ್ಯೆಯಲ್ಲಿ ಇದನ್ನು ಇನ್ನೂ ಸೇರಿಸಿಲ್ಲ.

2019ರಲ್ಲಿ ಹಿಂದುಳಿದಿರುವ 148 ಕ್ಷೇತ್ರಗಳಲ್ಲಿ, 124 ಶೇಕಡಾ ಕ್ಷೇತ್ರಗಳಲ್ಲಿ ಎರಡು ಅಂಕಗಳಿಗಿಂತ ಹೆಚ್ಚು ಕುಸಿತ ದಾಖಲಿಸಿದೆ. ಈ 124 ಸ್ಥಾನಗಳಲ್ಲಿ, 57 ಕಡೆ ಶೇಕಡಾ ಐದಕ್ಕಿಂತ ಅಧಿಕ ಮತ್ತು 7 ಕಡೆ ಶೇಕಡಾ 10ಕ್ಕಿಂತ ಹೆಚ್ಚಿನ ಶೇಕಡಾವಾರು ಅಂಕಗಳ ಮತದಾನದ ಕುಸಿತವನ್ನು ದಾಖಲಿಸಿದೆ.

ಮತದಾನದಲ್ಲಿ ಅತಿ ಹೆಚ್ಚು ಕುಸಿತ ಕಂಡ ಏಳು ಸ್ಥಾನಗಳೆಂದರೆ: ನಾಗಾಲ್ಯಾಂಡ್ (2019ಕ್ಕೆ ಹೋಲಿಸಿದರೆ ಶೇಕಡಾ 25.2 ಕುಸಿತ); ಮಧ್ಯಪ್ರದೇಶದಲ್ಲಿ ಸಿಧಿ (ಶೇಕಡಾ 13); ಉತ್ತರ ಪ್ರದೇಶದ ಮಥುರಾ (ಶೇಕಡಾ 11.6); ಮಧ್ಯಪ್ರದೇಶದ ಖಜುರಾಹೊ (ಶೇ. 11.31), ಮಧ್ಯಪ್ರದೇಶದ ರೇವಾ (ಶೇ. 10.9); ಕೇರಳದ ಪತ್ತನಂತಿಟ್ಟ (ಶೇಕಡಾ 10.9 ಅಂಕಗಳು); ಮತ್ತು ಮಧ್ಯಪ್ರದೇಶದ ಶಾಧೋಲ್ (10.1 ಶೇಕಡಾ ಅಂಕಗಳು).

ಮೊದಲ ಸುತ್ತಿನ ಮತದಾನದಲ್ಲಿ 66.22% ಪುರುಷ ಮತದಾರರು ತಮ್ಮ ಹಕ್ಕು ಚಲಾಯಿಸಿದರೆ, 66.07% ಮಹಿಳಾ ಮತದಾರರು ಮತದಾನ ಮಾಡಿದರು. 31.32% ಅರ್ಹ ತೃತೀಯ ಲಿಂಗಿ ಮತದಾರರು ಮತ ಚಲಾಯಿಸಿದ್ದಾರೆ ಎಂದು ಡೇಟಾ ತೋರಿಸಿದೆ. ಎರಡನೇ ಹಂತದಲ್ಲಿ, 66.99% ಅರ್ಹ ಪುರುಷ ಮತದಾರರು ಮತ ಚಲಾಯಿಸಿದರೆ, ಈ ಅಂಕಿ ಅಂಶವು ಮಹಿಳಾ ಮತದಾರರಿಗೆ 66.42% ಆಗಿತ್ತು. ಸುಮಾರು 24% ತೃತೀಯ ಲಿಂಗಿಗಳು ಮತ ಚಲಾಯಿಸಿದರು. 85 ವರ್ಷಕ್ಕಿಂತ ಮೇಲ್ಪಟ್ಟ ಜನರು ಅಥವಾ ಅಂಗವಿಕಲರ ಬಗ್ಗೆ ಡೇಟಾವನ್ನು ಇಸಿ ಬಿಡುಗಡೆ ಮಾಡಿ. ಇವರು ಮನೆಯಿಂದ ಮತದಾನ ಮಾಡಿದ್ದಾರೆ.

ಇದನ್ನೂ ಓದಿ: Lok Sabha Election 2024: ಈ ಲೋಕಸಭಾ ಚುನಾವಣೆ ಭಾರತದ ಸುವರ್ಣ ಯುಗಕ್ಕೆ ನಾಂದಿ: ಪ್ರಲ್ಹಾದ್‌ ಜೋಶಿ

Continue Reading

ಪ್ರಮುಖ ಸುದ್ದಿ

Narendra Modi : ನಾನು ಬದುಕಿರುವವರೆಗೂ ಮುಸ್ಲಿಮರಿಗೆ ಧರ್ಮದ ಆಧಾರದ ಮೀಸಲಾತಿ ಇಲ್ಲ ಎಂದ ಮೋದಿ

Narendra Modi: ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ವಿರುದ್ಧ ಪರೋಕ್ಷ ದಾಳಿ ನಡೆಸಿದ ಮೋದಿ, ರಾಜ್ಯದಲ್ಲಿ ಡಬಲ್ ಆರ್ (ಆರ್​ಆರ್​ಆರ್​​) ತೆರಿಗೆ ಮೂಲಕ ಸಂಗ್ರಹಿಸಿದ ಹಣವನ್ನು ದೆಹಲಿಗೆ ಹರಿಸಲಾಗುತ್ತಿದೆ ಎಂದು ಆರೋಪಿಸಿದರು. ಜಾಗತಿಕ ಮೆಚ್ಚುಗೆ ಪಡೆದ ಬ್ಲಾಕ್ಬಸ್ಟರ್ ತೆಲುಗು ಚಿತ್ರ ‘ಆರ್​ಆರ್​​ಆರ್​ ಅನ್ನು ಉಲ್ಲೇಖಿಸಿ ಅವರು ಈ ಹೇಳಿಕೆ ನೀಡಿದ್ದಾರೆ.

VISTARANEWS.COM


on

Narendra modi
Koo

ನವದೆಹಲಿ: ನಾನು ಬದುಕಿರುವವರೆಗೂ ಎಸ್ಸಿ, ಎಸ್ಟಿ ಮತ್ತು ಒಬಿಸಿಗಳಿಗೆ ಸಿಗುತ್ತಿರುವ ಮೀಸಲಾತಿಯ ಪಾಲನ್ನು ಧರ್ಮದ ಆಧಾರದಲ್ಲಿ ಮುಸ್ಲಿಮರಿಗೆ ಕೊಡಲು ಅವಕಾಶ ನೀಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಮಂಗಳವಾರ ಹೇಳಿದ್ದಾರೆ. ತೆಲಂಗಾಣದ ಮೇದಕ್ ಜಿಲ್ಲೆಯಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ, ಕಾಂಗ್ರೆಸ್​ ಧರ್ಮದ ಆಧಾರದಲ್ಲಿ ಮೀಸಲಾತಿ ನೀಡುವುದನ್ನು ಪ್ರೇರೇಪಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು. ಅಲ್ಲದೆ, ತಮ್ಮ ಮೂರನೇ ಅವಧಿಯಲ್ಲಿ ಸಂವಿಧಾನದ 75 ನೇ ವರ್ಷವನ್ನು ಅತ್ಯಂತ ಸಂಭ್ರಮದಿಂದ ಆಚರಿಸುತ್ತನೆ ಎಂದು ಹೇಳಿದ್ದಾರೆ.

ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ವಿರುದ್ಧ ಪರೋಕ್ಷ ದಾಳಿ ನಡೆಸಿದ ಮೋದಿ, ರಾಜ್ಯದಲ್ಲಿ ಡಬಲ್ ಆರ್ (ಆರ್​ಆರ್​ಆರ್​​) ತೆರಿಗೆ ಮೂಲಕ ಸಂಗ್ರಹಿಸಿದ ಹಣವನ್ನು ದೆಹಲಿಗೆ ಹರಿಸಲಾಗುತ್ತಿದೆ ಎಂದು ಆರೋಪಿಸಿದರು. ಜಾಗತಿಕ ಮೆಚ್ಚುಗೆ ಪಡೆದ ಬ್ಲಾಕ್ಬಸ್ಟರ್ ತೆಲುಗು ಚಿತ್ರ ‘ಆರ್​ಆರ್​​ಆರ್​ ಅನ್ನು ಉಲ್ಲೇಖಿಸಿ ಅವರು ಈ ಹೇಳಿಕೆ ನೀಡಿದ್ದಾರೆ.

ನಕಲಿ ವೀಡಿಯೊ ಪ್ರಕರಣದ ಬಗ್ಗೆ ಕಾಂಗ್ರೆಸ್ ಪಕ್ಷವನ್ನು ಗುರಿಯಾಗಿಸಿಕೊಂಡ ಅವರು, ಜನರನ್ನು ದಾರಿತಪ್ಪಿಸಲು ಮತ್ತು ಸಮಾಜದಲ್ಲಿ ಉದ್ವಿಗ್ನತೆಯನ್ನು ಸೃಷ್ಟಿಸಲು ಕಾಂಗ್ರೆಸ್​ ಈ ರೀತಿ ಮಾಡುತ್ತದೆ ಎಂದು ಹೇಳಿದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜನರ ಸಂಪತ್ತಿನ ಶೇಕಡಾ 55 ರಷ್ಟು ಆನುವಂಶಿಕ ತೆರಿಗೆಯನ್ನು ವಿಧಿಸುತ್ತದೆ ಎಂದು ಆರೋಪಿಸಿದ ಮೋದಿ, ಇಡೀ ಜಗತ್ತು ಆರ್ಥಿಕವಾಗಿ ಪ್ರಗತಿ ಹೊಂದುತ್ತಿರುವಾಗ ಹಿಂದಿನ ಯುಪಿಎ ಸರ್ಕಾರದ ಅಡಿಯಲ್ಲಿ ಭಾರತವು ನೀತಿ ನಿಷ್ಕ್ರಿಯತೆಯಿಂದ ಬಳಲುತ್ತಿತ್ತು ಎಂದು ಹೇಳಿದರು.

ಇದನ್ನೂ ಓದಿ: Fact Check : ಕರ್ನಾಟಕದವರು ಪಾಪಿಗಳು ಅಂಥ ಹೇಳಿದ್ರಾ ಮೋದಿ; ಕಾಂಗ್ರೆಸ್ ಮಾಡಿದ ಪೋಸ್ಟ್​ ಸುಳ್ಳಾ? ಇಲ್ಲಿದೆ ನಿಜಾಂಶ

“ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಅವರು ಆನುವಂಶಿಕ ತೆರಿಗೆಯನ್ನು ತರುತ್ತಾರೆ. ಪಿತ್ರಾರ್ಜಿತ ಆಸ್ತಿಯ ಮೇಲೆ (ಪೋಷಕರಿಂದ ಪಡೆದ) ಅರ್ಧಕ್ಕಿಂತ ಹೆಚ್ಚು ತೆರಿಗೆ ಸಂಗ್ರಹಿಸಲು ಕಾಂಗ್ರೆಸ್ ಯೋಜಿಸುತ್ತಿದೆ” ಎಂದು ಅವರು ಹೇಳಿದ್ದಾರೆ.

ಸುಳ್ಳು ಭರವಸೆ

ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕಾಂಗ್ರೆಸ್ ಅಧಿಕಾರದಲ್ಲಿದ್ದಾಗಲೆಲ್ಲಾ ಅದು ಐದು ರಾಜಕೀಯ ಅಜೆಂಡಾಗಳನ್ನು ಹೊಂದಿತ್ತು. ಮೊದಲನೆಯದು, ಸುಳ್ಳು ಭರವಸೆಗಳು; ಎರಡನೆಯದು, ವೋಟ್ ಬ್ಯಾಂಕ್ ರಾಜಕಾರಣ, ಮೂರನೆಯದು, ಮಾಫಿಯಾ ಮತ್ತು ಅಪರಾಧಿಗಳನ್ನು ಬೆಂಬಲಿಸುವುದು, ನಾಲ್ಕನೆಯದು ವಂಶಪಾರಂಪರ್ಯ ರಾಜಕಾರಣ ಮತ್ತು ಐದನೆಯದು ಭ್ರಷ್ಟಾಚಾರ.ಮೊದಲು ತೆಲಂಗಾಣವನ್ನು ಲೂಟಿ ಮಾಡಿದ್ದು ಬಿಆರ್​ಎಸ್​್. ಈಗ ಕಾಂಗ್ರೆಸ್ ಎಂದು ಮೋದಿ ಆರೋಪಿಸಿದರು.

Continue Reading

Lok Sabha Election 2024

Lok Sabha Election: ಕಳೆದ ಬಾರಿಗೆ ಹೋಲಿಸಿದರೆ ಮೊದಲೆರಡು ಹಂತಗಳ ಮತದಾನದ ಪ್ರಮಾಣದಲ್ಲಿ ಕುಸಿತ; ಇಲ್ಲಿದೆ ಅಂಕಿ-ಅಂಶ

Lok Sabha Election: ಲೋಕಸಭಾ ಚುನಾವಣೆಯ ಎರಡು ಹಂತಗಳ ಮತದಾನ ಯಶಸ್ವಿಯಾಗಿ ಮುಗಿದಿದೆ. ಈ ಎರಡು ಹಂತಗಳಲ್ಲಿ ಎಷ್ಟು ಪ್ರಮಾಣದಲ್ಲಿ ಮತದಾನ ನಡೆದಿದೆ ಎನ್ನುವ ಅಂತಿಮ ಅಂಕಿ-ಅಂಶವನ್ನು ಚುನಾವಣಾ ಆಯೋಗ ಬಿಡುಗಡೆ ಮಾಡಿದೆ. ಮೊದಲ ಹಂತದಲ್ಲಿ ಶೇ. 66.14ರಷ್ಟು ಮಂದಿ ತಮ್ಮ ಹಕ್ಕು ಚಲಾಯಿಸಿದ್ದರೆ, ಎರಡನೇ ಹಂತದಲ್ಲಿ ಶೇ. 66.71ರಷ್ಟು ಮತದಾನವಾಗಿದೆ. 2019ಕ್ಕೆ ಹೋಲಿಸಿದರೆ ಮತದಾನದ ಪ್ರಮಾಣ ಕುಸಿದಿದೆ. ಕಳೆದ ಬಾರಿ ಮೊದಲ ಮತ್ತು ಎರಡನೇ ಹಂತಗಳಲ್ಲಿ ಕ್ರಮವಾಗಿ ಶೇ. 69.43 ಮತ್ತು ಶೇ. 69.17ರಷ್ಟು ಮತದಾನವಾಗಿತ್ತು.

VISTARANEWS.COM


on

Lok Sabha Election
Koo

ನವದೆಹಲಿ: ಲೋಕಸಭಾ ಚುನಾವಣೆ (Lok Sabha Election)ಯ ಎರಡು ಹಂತಗಳ ಮತದಾನ ಯಶಸ್ವಿಯಾಗಿ ಮುಗಿದಿದೆ. ಇನ್ನು 5 ಹಂತಗಳ ಮತದಾನ ಬಾಕಿ ಇದೆ. ಈ ಮಧ್ಯೆ ಚುನಾವಣಾ ಆಯೋಗ (Election Commission) ಎರಡೂ ಹಂತಗಳಲ್ಲಿ ನಡೆದ ಒಟ್ಟು ಮತದಾನದ ನಿಖಿರ ಅಂಕಿ ಅಂಶವನ್ನು ಮಂಗಳವಾರ ಬಿಡುಗಡೆ ಮಾಡಿದೆ. ಈ 18ನೇ ಲೋಕಸಭಾ ಚುನಾವಣೆಯ ಮೊದಲ ಹಂತದಲ್ಲಿ ಶೇ. 66.14ರಷ್ಟು ಮಂದಿ ತಮ್ಮ ಹಕ್ಕು ಚಲಾಯಿಸಿದ್ದರೆ, ಎರಡನೇ ಹಂತದಲ್ಲಿ ಶೇ. 66.71ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಮೊದಲ ಹಂತದಲ್ಲಿ ಏಪ್ರಿಲ್ 19ರಂದು 102 ಕ್ಷೇತ್ರಗಳಿಗೆ ಮತದಾನ ನಡೆದಿದ್ದು, ಎರಡನೇ ಹಂತದಲ್ಲಿ ಏಪ್ರಿಲ್ 26ರಂದು ಕರ್ನಾಟಕದ 14 ಕ್ಷೇತ್ರ ಸೇರಿ ಒಟ್ಟು 88 ಕ್ಷೇತ್ರಗಳಲ್ಲಿ ಮತದಾನ ಮುಗಿದಿದೆ. 2019ರ ಚುನಾವಣೆಗೆ ಹೋಲಿಸಿದರೆ ಈ ಚುನಾವಣೆಯ ಎರಡು ಹಂತಗಳಲ್ಲಿ ಮತದಾನದ ಪ್ರಮಾಣವು ಕುಸಿತ ಕಂಡಿದೆ. 2019ರಲ್ಲಿ ಮೊದಲ ಮತ್ತು ಎರಡನೇ ಹಂತಗಳಲ್ಲಿ ಕ್ರಮವಾಗಿ ಶೇ. 69.43 ಮತ್ತು ಶೇ. 69.17ರಷ್ಟು ಮತದಾನವಾಗಿತ್ತು.

ಅತ್ಯಧಿಕ ಎಲ್ಲಿ?

ಮೊದಲ ಹಂತದಲ್ಲಿ ಲಕ್ಷದ್ವೀಪದಲ್ಲಿ ಅತೀ ಹೆಚ್ಚು ಮತದಾನ ನಡೆದಿತ್ತು. ಇಲ್ಲಿ ಶೇ. 84.1 ಮಂದಿ ತಮ್ಮ ಹಕ್ಕು ಚಲಾಯಿಸಿದ್ದರು. ಅದೇ ರೀತಿ ಅತೀ ಕಡಿಮೆ ಬಿಹಾರದಲ್ಲಿ ದಾಖಲಾಗಿತ್ತು. ಇಲ್ಲಿ ಕೇವಲ ಶೇ. 49.26ರಷ್ಟು ಮತದಾನವಾಗಿತ್ತು. ಏಪ್ರಿಲ್‌ 19ರಂದು 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾನ ಆಯೋಜಿಸಲಾಗಿತ್ತು.

ಇನ್ನು ಎರಡನೇ ಹಂತದಲ್ಲಿ ಮಣಿಪುರದಲ್ಲಿ ಅಧಿಕ ಪ್ರಮಾಣದಲ್ಲಿ ಅಂದರೆ ಶೇ. 84.85 ಮತ ಚಲಾವಣೆಯಾದರೆ ಅತೀ ಕಡಿಮೆ ಉತ್ತರ ಪ್ರದೇಶದಲ್ಲಿ ದಾಖಲಾಗಿದೆ. ಇಲ್ಲಿ ಶೇ. 55.19 ಮಂದಿ ಮಾತ್ರ ವೋಟು ಹಾಕಿದ್ದಾರೆ. ಎರಡನೇ ಹಂತದಲ್ಲಿ ಒಟ್ಟು 88 ಕ್ಷೇತ್ರಗಳಲ್ಲಿ ಮತದಾನ ನಡೆದಿತ್ತು. ಈ ವೇಳೆ 13 ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು.

ಇದನ್ನೂ ಓದಿ: Lok Sabha Election 2024: ಬಿಜೆಪಿ ಅಭ್ಯರ್ಥಿಗಳಿಗೆ ಪತ್ರ ಬರೆದ ಮೋದಿ; ಕಾಂಗ್ರೆಸ್‌ನ ತುಷ್ಟೀಕರಣ ನೀತಿಯ ಬಗ್ಗೆ ಅರಿವು ಮೂಡಿಸಲು ಕರೆ

ಕರ್ನಾಟಕದಲ್ಲಿ ದಾಖಲೆಯ ಮತದಾನ

ಕರ್ನಾಟಕದ 14 ಕ್ಷೇತ್ರಗಳಲ್ಲಿ ಸಂಜೆ 6 ಗಂಟೆವರೆಗೆ ಒಟ್ಟು ಶೇ. 69.23 ಮತದಾನ ದಾಖಲಾಗಿತ್ತು. ಮಂಡ್ಯ ಕ್ಷೇತ್ರದಲ್ಲಿ ಅತಿಹೆಚ್ಚು ಮತದಾನವಾಗಿದ್ದು, ಬೆಂಗಳೂರು ಸೆಂಟ್ರಲ್‌ ಕ್ಷೇತ್ರದಲ್ಲಿ ಅತಿ ಕಡಿಮೆ ಮತದಾನ ದಾಖಲಾಗಿತ್ತು. ಮಂಡ್ಯ ಕ್ಷೇತ್ರದಲ್ಲಿ ಅತಿ ಹೆಚ್ಚು ಅಂದರೆ ಶೇ.81.48 ಮತದಾನವಾಗಿದ್ದು, ಬೆಂಗಳೂರು ಸೆಂಟ್ರಲ್‌ ಕ್ಷೇತ್ರದಲ್ಲಿ ಅತಿ ಕಡಿಮೆ ಅಂದರೆ 52.81 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು. ಇನ್ನು ಮೊದಲ ಹಂತದಲ್ಲಿ ಒಟ್ಟು 2,88,08,182 ಮತದಾರರು ಮತ ಚಲಾಯಿಸಿದ್ದು, 14 ಕ್ಷೇತ್ರಗಳಲ್ಲಿ 118 ಪಕ್ಷೇತರ ಅಭ್ಯರ್ಥಿಗಳು ಸೇರಿ 247 ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ. ಇದರಲ್ಲಿ 226 ಪುರುಷ, 21 ಮಹಿಳಾ ಅಭ್ಯರ್ಥಿಗಳಿದ್ದಾರೆ. ಮೂರನೇ ಹಂತದಲ್ಲಿ ಅಂದರೆ ಮೇ 7ರಂದು ಕರ್ನಾಟಕದ ಉಳಿದ 14 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.

Continue Reading

Lok Sabha Election 2024

Election Commission: ಜಮ್ಮು & ಕಾಶ್ಮೀರದ ಅನಂತ್‌ನಾಗ್‌-ರಾಜೌರಿ ಕ್ಷೇತ್ರದ ಮತದಾನ ಮುಂದೂಡಿಕೆ; ಹೊಸ ವೇಳಾಪಟ್ಟಿ ಇಂತಿದೆ

Election Commission: ಲೋಕಸಭಾ ಚುನಾವಣೆಯ ಮೂರನೇ ಹಂತದ ಮತದಾನ ಮೇ 7ರಂದು ನಡೆಯಲಿದೆ. ಈ ಮಧ್ಯೆ ಮಂಗಳವಾರ ಚುನಾವಣಾ ಆಯೋಗ ಜಮ್ಮು ಮತ್ತು ಕಾಶ್ಮೀರದ ಅನಂತ್‌ನಾಗ್‌-ರಾಜೌರಿ ಲೋಕಸಭಾ ಕ್ಷೇತ್ರದ ಮತದಾನವನ್ನು ಮೇ 7ರಿಂದ ಮೇ 25ಕ್ಕೆ ಮುಂದೂಡಿದೆ. “ವಿವಿಧ ಲಾಜಿಸ್ಟಿಕ್ಸ್, ಸಂವಹನ ಮತ್ತು ಸಂಪರ್ಕದ ನೈಸರ್ಗಿಕ ಅಡೆತಡೆಯಿಂದಾಗಿ ಚುನಾವಣಾ ದಿನಾಂಕಗಳನ್ನು ಬದಲಾಯಿಸಿದ್ದೇವೆʼʼ ಎಂದು ಆಯೋಗ ತಿಳಿಸಿದೆ.

VISTARANEWS.COM


on

Election Commission
Koo

ನವದೆಹಲಿ: ಲೋಕಸಭಾ ಚುನಾವಣೆ (Lok Sabha Election 2024)ಯ ಎರಡು ಹಂತದ ಮತದಾನ ಈಗಾಗಲೇ ಮುಗಿದಿದೆ. ಮೇ 7ರಂದು ಮೂರನೇ ಹಂತದ ಮತದಾನ ನಡೆಯಲಿದೆ. ಈ ಮಧ್ಯೆ ಮಂಗಳವಾರ ಚುನಾವಣಾ ಆಯೋಗ (Election Commission) ಜಮ್ಮು ಮತ್ತು ಕಾಶ್ಮೀರದ ಅನಂತ್‌ನಾಗ್‌-ರಾಜೌರಿ ಲೋಕಸಭಾ ಕ್ಷೇತ್ರದ ಮತದಾನವನ್ನು ಮೇ 7ರಿಂದ ಮೇ 25ಕ್ಕೆ ಮುಂದೂಡಿದೆ.

ಚುನಾವಣಾ ಆಯೋಗವು ತನ್ನ ಅಧಿಸೂಚನೆಯಲ್ಲಿ, “ವಿವಿಧ ಲಾಜಿಸ್ಟಿಕ್ಸ್, ಸಂವಹನ ಮತ್ತು ಸಂಪರ್ಕದ ನೈಸರ್ಗಿಕ ಅಡೆತಡೆಯಿಂದಾಗಿ ಚುನಾವಣಾ ದಿನಾಂಕಗಳನ್ನು ಬದಲಾಯಿಸಲು ವಿವಿಧ ರಾಜಕೀಯ ಪಕ್ಷಗಳು ಮನವಿ ಸಲ್ಲಿಸಿದ್ದವು. ಈ ಎಲ್ಲ ಸಮಸ್ಯೆಗಳು ಪ್ರಚಾರಕ್ಕೆ ಅಡ್ಡಿಯಾಗುವುದರಿಂದ ಅಭ್ಯರ್ಥಿಗಳಿಗೆ ತೊಂದರೆಯಾಗುತ್ತದೆ ಎನ್ನುವುದನ್ನು ಮನಗಂಡಿದ್ದೇವೆ. ಇದು ಮತದಾನ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎನ್ನುವ ಕಾರಣಕ್ಕೆ ದಿನಾಂಕ ಮುಂದೂಡಲಾಗಿದೆ” ಎಂದು ಹೇಳಿದೆ.

ಮೂರರ ಬದಲು ಆರನೇ ಹಂತದಲ್ಲಿ ಮತದಾನ

ʼʼಈ ಹಿಂದೆ ಅನಂತ್‌ನಾಗ್‌-ರಾಜೌರಿ ಲೋಕಸಭಾ ಕ್ಷೇತ್ರಕ್ಕೆ ಮೂರನೇ ಹಂತದಲ್ಲಿ ಅಂದರೆ ಮೇ 7ರಂದು ಮತದಾನ ನಡೆಸಲು ತೀರ್ಮಾನಿಸಲಾಗಿತ್ತು. ಅದರ ಬದಲು ಇದೀಗ ಆರನೇ ಹಂತದಲ್ಲಿ ಅಂದರೆ ಮೇ 25ಕ್ಕೆ ಮುಂದೂಡಲಾಗಿದೆʼʼ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದಕ್ಷಿಣ ಕಾಶ್ಮೀರದ ಕೆಲವು ಭಾಗಗಳು ಮತ್ತು ಜಮ್ಮು ಪ್ರದೇಶದ ಪೂಂಚ್ ಮತ್ತು ರಾಜೌರಿ ಪ್ರದೇಶಗಳನ್ನು ಒಳಗೊಂಡಿರುವ ಈ ಪ್ರದೇಶಗಳ ರಸ್ತೆ ಪರಿಸ್ಥಿತಿ, ಹವಾಮಾನ ಮತ್ತು ಇಲ್ಲಿನ ಪ್ರವೇಶದ ಬಗ್ಗೆ ವಿವರವಾದ ವರದಿಯನ್ನು ತಕ್ಷಣ ಸಲ್ಲಿಸುವಂತೆ ಚುನಾವಣಾ ಆಯೋಗವು ಜಮ್ಮು ಮತ್ತು ಕಾಶ್ಮೀರ ಆಡಳಿತವನ್ನು ಕೇಳಿದೆ.

ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿಗಳಾದ ಒಮರ್ ಅಬ್ದುಲ್ಲಾ (National Conference) ಮತ್ತು ಮೆಹಬೂಬಾ ಮುಫ್ತಿ (PDP) ಕಳೆದ ವಾರ ಚುನಾವಣೆಯನ್ನು ಮುಂದೂಡದಂತೆ ಚುನಾವಣಾ ಆಯೋಗವನ್ನು ಆಗ್ರಹಿಸಿದ್ದರು. “ಮುಂದೂಡುವ ಬೇಡಿಕೆ ಎಲ್ಲ ಪಕ್ಷಗಳಿಂದ ಬಂದಿಲ್ಲ. ವಿಶೇಷ ಎಂದರೆ ಚುನಾವಣಾ ಆಯೋಗಕ್ಕೆ ಪತ್ರ ಬರೆದ ಕೆಲವರು ಸ್ಪರ್ಧಿಸುತ್ತಿಲ್ಲ” ಎಂದು ಅಬ್ದುಲ್ಲಾ ತಿಳಿಸಿದ್ದಾರೆ.

ನ್ಯಾಷನಲ್ ಕಾನ್ಫರೆನ್ಸ್ ಅಭ್ಯರ್ಥಿ ಮಿಯಾನ್ ಅಲ್ತಾಫ್ ವಿರುದ್ಧ ಅನಂತ್‌ನಾಗ್-ರಾಜೌರಿಯಿಂದ ಸ್ಪರ್ಧಿಸುತ್ತಿರುವ ಮೆಹಬೂಬಾ ಮುಫ್ತಿ, “ಎಲ್ಲರೂ ನನ್ನ ವಿರುದ್ಧ ಗುಂಪುಗೂಡಿದ್ದಾರೆ. ಯಾಕೆಂದರೆ ಅವರು ನನ್ನನ್ನು ಸಂಸತ್ತಿನಲ್ಲಿ ನೋಡಲು ಬಯಸುವುದಿಲ್ಲ. ಜನರು, ಧಾರ್ಮಿಕ ಮತ್ತು ಪಕ್ಷಾತೀತವಾಗಿ ನನ್ನ ಬೆಂಬಲಕ್ಕೆ ಬರುತ್ತಿದ್ದಾರೆ. ಆದ್ದರಿಂದ ಅವರು ಚುನಾವಣೆಗಳನ್ನು ಮುಂದೂಡಲು ಮತ್ತು ತಿರುಚಲು ಚುನಾವಣಾ ಆಯೋಗವನ್ನು ಬಳಸುತ್ತಿದ್ದಾರೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: Narendra Modi: ತಾಕತ್ತಿದ್ದವರು 370ನೇ ವಿಧಿ ಜಾರಿಗೆ ತರಲಿ; ಪ್ರತಿಪಕ್ಷಗಳಿಗೆ ಮೋದಿ ಸವಾಲು!

ಮೇ 7ರಂದು ಮೂರನೇ ಹಂತದಲ್ಲಿ ಒಟ್ಟು 1,352 ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. ಈ ಪೈಕಿ ಶೇ. 18ರಷ್ಟು ಅಂದರೆ 244 ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್‌ ಕೇಸ್‌ ದಾಖಲಾಗಿವೆ ಎಂದು ತಿಳಿದುಬಂದಿದೆ. ನ್ಯಾಷನಲ್‌ ಎಲೆಕ್ಷನ್‌ ವಾಚ್‌ ಹಾಗೂ ಅಸೋಸಿಯೇಷನ್‌ ಫಾರ್‌ ಡೆಮಾಕ್ರಟಿಕ್‌ ರಿಫಾರ್ಮ್ಸ್‌ (ADR) ಬಿಡುಗಡೆ ಮಾಡಿರುವ ವರದಿ ಪ್ರಕಾರ, ಮೂರನೇ ಹಂತದ 244 ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್‌ ಕೇಸ್‌ ದಾಖಲಾಗಿವೆ ಎಂದು ತಿಳಿದುಬಂದಿದೆ. 172 ಅಭ್ಯರ್ಥಿಗಳ ವಿರುದ್ಧ ಗಂಭೀರ ಕ್ರಿಮಿನಲ್‌ ಕೇಸ್‌ ದಾಖಲಾಗಿವೆ. ಅತ್ಯಾಚಾರ ಸೇರಿ ಮಹಿಳೆಯರ ಮೇಲೆ ದೌರ್ಜನ್ಯಕ್ಕೆ ಕುರಿತಂತೆ 38 ಜನರ ವಿರುದ್ಧ ಕೇಸ್‌ ದಾಖಲಾಗಿದೆ. ದ್ವೇಷ ಭಾಷಣಕ್ಕೆ ಕುರಿತಂತೆ 17 ಅಭ್ಯರ್ಥಿಗಳ ವಿರುದ್ಧ ಪ್ರಕರಣ ದಾಖಲಾಗಿವೆ. ಅಭ್ಯರ್ಥಿಗಳು ಚುನಾವಣೆ ಆಯೋಗಕ್ಕೆ ನೀಡಿರುವ ಮಾಹಿತಿ ಆಧರಿಸಿ ವರದಿ ತಯಾರಿಸಲಾಗಿದೆ.

Continue Reading
Advertisement
Heat Wave
ದೇಶ21 mins ago

Heat Wave: ಬಿಸಿಲಿನ ಬೇಗೆಗೆ ಹೈರಾಣಾದ ದೇಶ; ಹಲವು ಭಾಗಗಳಲ್ಲಿ ಏಪ್ರಿಲ್‌ನಲ್ಲಿ ಗರಿಷ್ಠ ತಾಪಮಾನ ದಾಖಲು

SS Rajamouli Announces Baahubali Crown of Blood Animated Series
ಟಾಲಿವುಡ್23 mins ago

SS Rajamouli: ʻಬಾಹುಬಲಿ: ಕ್ರೌನ್ ಆಫ್ ಬ್ಲಡ್ʼ ಸಿರೀಸ್‌ ಅನೌನ್ಸ್‌ ಮಾಡಿದ ರಾಜಮೌಳಿ!

Viral video
ವೈರಲ್ ನ್ಯೂಸ್31 mins ago

Viral Video: ಕತ್ತಿಯಿಂದ ಐವರ ಮೇಲೆ ಡೆಡ್ಲಿ ಅಟ್ಯಾಕ್‌; ದಾಳಿಕೋರನ ಅರೆಸ್ಟ್‌ ವಿಡಿಯೋ ಫುಲ್‌ ವೈರಲ್‌

lok sabha election 2024 voting
ಪ್ರಮುಖ ಸುದ್ದಿ45 mins ago

Lok Sabha Election 2024: ಎರಡು ಹಂತದ ಚುನಾವಣೆ ವೇಳೆ ಶೇ.84ರಷ್ಟು ಕ್ಷೇತ್ರಗಳಲ್ಲಿ ಮತದಾನ ಕುಸಿತ; ಎಫೆಕ್ಟ್ ಏನು?

Aamir Khan on collaborating with SRK, Salman Khan
ಸಿನಿಮಾ51 mins ago

Aamir Khan: ಬಿಗ್ ಸ್ಕ್ರೀನ್ ಮೇಲೆ ಮೂವರು ಖಾನ್​ಗಳು ಕಾಣೋದು ಕನ್‌ಫರ್ಮ್‌! ಸಿನಿಮಾ ಯಾವಾಗ ಶುರು?

Godrej Group
ದೇಶ2 hours ago

Godrej Group: ಶತಮಾನದ ಇತಿಹಾಸ ಹೊಂದಿರುವ ಗೋದ್ರೇಜ್‌ ಗ್ರೂಪ್‌ ಇಬ್ಬಾಗ; ಎರಡು ಕುಟುಂಬಗಳಲ್ಲಿ ಆಡಳಿತ ವಿಭಜನೆ

assault case finger cut basavanagudi
ಕ್ರೈಂ2 hours ago

Assault Case: ನನ್ನ ಪ್ರೇಯಸಿಗೆ ಮೆಸೇಜ್ ಮಾಡ್ತೀಯಾ ಎಂದು ಬೆರಳು ಕಟ್!

rajamarga column t20 world cup team
ಅಂಕಣ2 hours ago

ರಾಜಮಾರ್ಗ ಅಂಕಣ: ಟಿ20 ವಿಶ್ವಕಪ್- ಆಯ್ಕೆ ಮಂಡಳಿ ನಿರ್ಧಾರ ಸರಿ ಇದೆಯೇ?

physical abuse bangalore crime
ಕ್ರೈಂ2 hours ago

Physical Abuse: ನಡುಬೀದಿಯಲ್ಲಿ ಲೈಂಗಿಕ ಕಿರುಕುಳ, ಹೆಂಡತಿಯನ್ನು ಕಳಿಸುವಂತೆ ಗಂಡನಿಗೆ ಬೆದರಿಕೆ

Summer Tips
ಆರೋಗ್ಯ2 hours ago

Summer Tips: ಬಿಸಿಲಿನ ಆಘಾತದಿಂದ ತಪ್ಪಿಸಿಕೊಳ್ಳಲು ಹೀಗೆ ಮಾಡಿ…

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for April 30 2024
ಭವಿಷ್ಯ1 day ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20242 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20242 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Narendra Modi
Lok Sabha Election 20243 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20243 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20243 days ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20243 days ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
Latest3 days ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

Dina Bhavishya
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ದಿನದ ಮಟ್ಟಿಗೆ ಖರ್ಚು ಹೆಚ್ಚು

ಟ್ರೆಂಡಿಂಗ್‌