ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ (Bangalore Rural Lok Sabha constituency) ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ (DK Suresh) ಅವರು ನಾಮಪತ್ರ ಸಲ್ಲಿಸಿದ್ದು, ಒಟ್ಟು ಆಸ್ತಿ ಮೌಲ್ಯ 598 ಕೋಟಿ ರೂಪಾಯಿ ಎಂದು ಘೋಷಿಸಿದ್ದಾರೆ. ಇವರ ಹೆಸರಲ್ಲಿ ಒಟ್ಟು 207 ಕೋಟಿ ರೂಪಾಯಿ ಸಾಲವಿದ್ದು, ಕಳೆದ 5 ವರ್ಷದಲ್ಲಿ 259.19 ಕೋಟಿ ರೂಪಾಯಿಯಷ್ಟು ಆಸ್ತಿ ಮೌಲ್ಯವು ಹೆಚ್ಚಳಗೊಂಡಿದೆ.
ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ನಾಮಪತ್ರ ಸಲ್ಲಿಕೆ ವೇಳೆ ನೀಡಿದ್ದ ಅಫಿಡವಿಟ್‌ನಲ್ಲಿ ಆಸ್ತಿ ವಿವರವನ್ನು ಘೋಷಿಸಿಕೊಂಡಿದ್ದಾರೆ. ಇದರಂತೆ ಡಿ.ಕೆ. ಸುರೇಶ್ ಅವರ ಒಟ್ಟು ಆಸ್ತಿ ಮೌಲ್ಯ 593 ಕೋಟಿ ರೂಪಾಯಿ ಆಗಿದೆ.
207 ಕೋಟಿ ರೂಪಾಯಿ ಸಾಲದಲ್ಲಿರುವ ಡಿಕೆಸು
ಡಿ.ಕೆ. ಸುರೇಶ್ ಹೆಸರಿನಲ್ಲಿ ಒಟ್ಟು 207 ಕೋಟಿ ರೂಪಾಯಿ ಸಾಲ ಇದೆ ಎಂದು ಅಫಿಡವಿಟ್‌ನಲ್ಲಿ ತೋರಿಸಲಾಗಿದೆ. ಇಷ್ಟಾದರೂ ಇದರಲ್ಲಿ ತಾಯಿ ಗೌರಮ್ಮ, ಅಣ್ಣ ಡಿ.ಕೆ. ಶಿವಕುಮಾರ್, ಅಣ್ಣನ ಮಕ್ಕಳಾದ ಐಶ್ವರ್ಯ ಹಾಗೂ ಮಗ ಆಕಾಶ್ ಕೆಂಪೇಗೌಡ ಅವರಿಗೂ ಸಾಲವನ್ನು ನೀಡಿದ್ದಾರೆ.
ಕುಟುಂಬದವರಿಗೆ ನೀಡಿದ ಸಾಲು ಎಷ್ಟು?
- ತಾಯಿ ಗೌರಮ್ಮಗೆ ನಾಲ್ಕೂ ಮುಕ್ಕಾಲು ಕೋಟಿ ರೂಪಾಯಿ ಸಾಲ
- ಅಣ್ಣ ಡಿಕೆ ಶಿವಕುಮಾರ್ಗೆ 30 ಕೋಟಿ ರೂಪಾಯಿ ಸಾಲ ಕೊಟ್ಟಿರುವ ಸುರೇಶ್
- ಅಣ್ಣನ ಮಗಳು ಐಶ್ವರ್ಯಾಗೆ 8 ಕೋಟಿ ರೂಪಾಯಿ ಸಾಲ ನೀಡಿರುವ ಸುರೇಶ್
- ಡಿಕೆಶಿ ಮಗ ಆಕಾಶ್ ಕೆಂಪೇಗೌಡಗೆ 1 ಕೋಟಿ ರೂಪಾಯಿ ಸಾಲವನ್ನು ಡಿ.ಕೆ. ಸುರೇಶ್ ನೀಡಿದ್ದಾರೆ
ಡಿ.ಕೆ. ಸುರೇಶ್ ಬಳಿ ಇದೆ ಒಂದೂ ಕಾಲು ಕೆಜಿ ಚಿನ್ನ!
ಚರಾಸ್ತಿ 106.71 ಕೋಟಿ ರೂಪಾಯಿ, ಸ್ಥಿರಾಸ್ತಿ 486.33 ಕೋಟಿ ರೂಪಾಯಿ, ಒಂದೂ ಕಾಲು ಕೆಜಿ ಚಿನ್ನ, ಸುಮಾರು 5 ಕೆಜಿ ಬೆಳ್ಳಿಯನ್ನು ಹೊಂದಿದ್ದಾರೆ.
ರಾಮನಗರ ಜಿಲ್ಲಾಧಿಕಾರಿಗೆ ಸಂಸದ ಡಿ.ಕೆ. ಸುರೇಶ್ ಸಲ್ಲಿಸಿರುವ ಅಫಿಡವಿಟ್ ಪ್ರತಿ ಇಲ್ಲಿದೆ. ಪೂರ್ಣ ವಿವರ ಓದಲು ಡೌನ್ಲೋಡ್ ಆಯ್ಕೆ ಮೇಲೆ ಕ್ಲಿಕ್ ಮಾಡಿ.
ಇವರ ಬಳಿ ಸ್ವಂತ ಕಾರೂ ಇಲ್ಲ!
ತಮ್ಮ ಬಳಿ ಸ್ವಂತ ಕಾರು ಸಹ ಇಲ್ಲ ಎಂಬ ಮಾಹಿತಿಯನ್ನು ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಹೇಳಿದ್ದಾರೆ. 70 ಲಕ್ಷ ರೂಪಾಯಿ ಮೌಲ್ಯದ ಪೀಠೋಪಕರಣವನ್ನು ಸುರೇಶ್ ಹೊಂದಿದ್ದಾರೆ.
5 ವರ್ಷಗಳಲ್ಲಿ 259.19 ಕೋಟಿ ರೂ. ಹೆಚ್ಚಳ
2019ರಲ್ಲಿ ಸುರೇಶ್ ಆಸ್ತಿ ಮೌಲ್ಯ 333.86 ಕೋಟಿ ರೂಪಾಯಿ ಆಗಿತ್ತು. 5 ವರ್ಷಗಳಲ್ಲಿ 259.19 ಕೋಟಿ ರೂಪಾಯಿಯಷ್ಟು ಆಸ್ತಿ ಮೌಲ್ಯ ಹೆಚ್ಚಳವಾಗಿದೆ. ಈ ವೇಳೆ ಲುಲು ಮಾಲ್‌ಗೆ 3 ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿರುವುದಾಗಿ ಡಿ.ಕೆ. ಸುರೇಶ್ ಉಲ್ಲೇಖಿಸಿದ್ದಾರೆ. ಇನ್ನು ಅವರು ದ್ವಿತೀಯ ಪಿಯುಸಿವರೆಗೆ ವಿದ್ಯಾಭ್ಯಾಸ ಮಾಡಿದ್ದಾಗಿ ತಿಳಿಸಿದ್ದಾರೆ.