Site icon Vistara News

Lok Sabha Election 2024: ಮೆಟ್ರೋದಲ್ಲಿ ಮತಯಾಚಿಸಿದ ಡಾ. ಸಿ.ಎನ್.‌ ಮಂಜುನಾಥ್!

Lok Sabha Election 2024 Dr CN Manjunath seeks votes in Metro

ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಮತದಾರರನ್ನು ಸೆಳೆಯಲು ನಾನಾ ತಂತ್ರಗಳನ್ನು ಮಾಡಲಾಗುತ್ತಿದೆ. ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಹೊಸ ಹೊಸ ಮಾದರಿಯನ್ನು ಅನುಸರಿಸುತ್ತಲೇ ಬರುತ್ತಿದ್ದಾರೆ. ಈಗ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ (Bangalore Rural Lok Sabha constituency) ಬಿಜೆಪಿ ಅಭ್ಯರ್ಥಿ ಡಾ. ಸಿ.ಎನ್. ಮಂಜುನಾಥ್ (Dr CN Manjunath) ಅವರು “ನಮ್ಮ ಮೆಟ್ರೋ” (Namma Metro) ಒಳಗೆ ಮತಯಾಚನೆ ಮಾಡಿದ್ದಾರೆ.

ಈಗಾಗಲೇ ಚುನಾವಣೆಯ ಪ್ರಚಾರದ ಅಖಾಡಕ್ಕೆ ಧುಮುಕಿರುವ ಡಾ. ಸಿ.ಎನ್. ಮಂಜುನಾಥ್ ಅವರು ಗಲ್ಲಿ ಗಲ್ಲಿ ಪ್ರಚಾರವನ್ನು ನಡೆಸುತ್ತಿದ್ದಾರೆ. ಈಗ ಮಂಜುನಾಥ್‌ ಅವರು ಬೆಂಗಳೂರಿನ ಜೆಪಿ ನಗರದ ಮೆಟ್ರೋದಲ್ಲಿ ಪ್ರಯಾಣ ಬೆಳೆಸಿ, ಅಲ್ಲಿಯೇ ಮತಯಾಚನೆ ಮಾಡಿದ್ದಾರೆ.

ಇದನ್ನೂ ಓದಿ: Lok Sabha Election 2024: ಗನ್‌ ಇಟ್ಟುಕೊಂಡು ಬಂದು ಸಿಎಂಗೆ ಹಾರ ಹಾಕಿದ ವ್ಯಕ್ತಿ! ಭದ್ರತಾ ವೈಫಲ್ಯ?

ದೊಡ್ಡಕಲ್ಲಸಂದ್ರದ ಬಳಿ ಡಾ. ಮಂಜುನಾಥ್ ಅವರಿಂದ ಮತಯಾಚನೆ ನಡೆಸಲಾಗಿದೆ. ಅವರಿಗೆ ಸ್ಥಳೀಯ ಶಾಸಕರಾದ ಸಿ.ಕೆ. ರಾಮಮೂರ್ತಿ ಹಾಗೂ ಎಂ. ಕೃಷ್ಣಪ್ಪ ಸಾಥ್ ನೀಡಿದ್ದಾರೆ.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಡಾ. ಸಿ.ಎನ್. ಮಂಜುನಾಥ್, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ 8 ವಿಧಾನಸಭೆ ಕ್ಷೇತ್ರಗಳಲ್ಲೂ ಉತ್ತಮ ವಾತಾವರಣ ಇದೆ. ನನಗೆ ಗೊತ್ತಿರುವವರು, ಆತ್ಮೀಯ‌ರು ಎಲ್ಲರೂ ನನ್ನ ಪರವಾಗಿ ಸ್ವಯಂ ಪ್ರೇರಣೆಯಿಂದ ಪ್ರಚಾರ ಮಾಡುತ್ತಿದ್ದಾರೆ. ನನ್ನ ಕ್ಷೇತ್ರದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ಜನರು ಆಶೀರ್ವಾದ ಮಾಡುವ ಮೂಡ್‌ನಲ್ಲಿದ್ದಾರೆ. ಎಲ್ಲವೂ ಒಳ್ಳೆಯದಾಗುತ್ತದೆ. ನಾನು ಹೆಚ್ಚು ಜನರ ಜತೆ ಸಂಪರ್ಕ ಇರುವವನು. ಈಗ ಅಂತಲ್ಲ. ವೃತ್ತಿ ಜೀವನದ ಉದ್ದಕ್ಕೂ ಜನಸಾಮಾನ್ಯರ‌ ಜತೆ ಇದ್ದೇನೆ. ಜನರ ಒಡನಾಟದಲ್ಲೇ ಇದ್ದೇನೆ. ಆಸ್ಪತ್ರೆಯಲ್ಲೇ ನನ್ನದು ಜನತಾ ದರ್ಶನ ನಡೆಯುತ್ತಿತ್ತು ಎಂದು ಹೇಳಿದರು.

ಇದನ್ನೂ ಓದಿ: Lok Sabha Election 2024: ಏಪ್ರಿಲ್‌ 14ರಂದು ಮಂಗಳೂರಿಗೆ ಮೋದಿ; ದಾಖಲೆ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗಿ!

ರಾಮನಗರಕ್ಕೆ ಪ್ರಧಾನಿ ಮೋದಿ ಬರಬಹುದು

ರಾಮನಗರದಲ್ಲಿ ಆಪರೇಷನ್ ಹಸ್ತ ನಡೆಸುತ್ತಿರುವುದರ ಬಗ್ಗೆ ಪ್ರತಿಕ್ರಿಯೆ ನೀಡಿದ ಡಾ. ಸಿ.ಎನ್. ಮಂಜುನಾಥ್, ಆಪರೇಷನ್ ಮಾಡುವುದು, ಬಿಡುವುದು ಅವರಿಗೆ ಬಿಟ್ಟಿದ್ದಾಗಿದೆ. ಆದರೆ ಅಂತಿಮವಾಗಿ ಜನರು ತೀರ್ಮಾನ ಮಾಡ್ತಾರೆ. ನಮ್ಮ ಶಕ್ತಿಯೇ ಜನ ಶಕ್ತಿ, ಮತದಾರರೇ ನಮಗೆ ಶಕ್ತಿ. ನಾವು ಕನಕಪುರಕ್ಕೆ ಏಪ್ರಿಲ್‌ 15 ಹಾಗೂ 22ಕ್ಕೆ‌ ಹೋಗುತ್ತಿದ್ದೇವೆ. ಇನ್ನು ಮಾಜಿ ಪ್ರಧಾನಿ, ಜೆಡಿಎಸ್‌ ವರಿಷ್ಠರಾದ ಎಚ್.ಡಿ. ದೇವೇಗೌಡ ಅವರು ಏಪ್ರಿಲ್ 17ರಂದು ಕನಕಪುರದಲ್ಲಿ ಬಹಿರಂಗ ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಅವರು ಏಪ್ರಿಲ್‌ 14ಕ್ಕೆ ಬೆಂಗಳೂರಿಗೆ ಬರುತ್ತಿದ್ದಾರೆ. ಅವರು ರಾಮನಗರಕ್ಕೆ ಬರಬಹುದು. ಈಗಾಗಲೇ ಕೇಂದ್ರ ಗೃಹ ಅಮಿತ್ ಶಾ (Amit Shah) ಬಂದು ಹೋಗಿದ್ದಾರೆ ಎಂದು ಹೇಳಿದರು.

Exit mobile version