Site icon Vistara News

Lok Sabha Election 2024: ನಾಳೆ ರಾಜ್ಯಕ್ಕೆ ರಾಹುಲ್‌ ಗಾಂಧಿ, ಪವನ್‌ ಕಲ್ಯಾಣ್‌ ಎಂಟ್ರಿ

Lok Sabha Election 2024 Rahul Gandhi and Pawan Kalyan to visit Karnataka April 17

ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಪ್ರಚಾರದ ಭರಾಟೆ ಜೋರಾಗಿಯೇ ನಡೆಯುತ್ತಿದೆ. ಆಯಾ ಪಕ್ಷಗಳ ಅಭ್ಯರ್ಥಿಗಳ ಪರವಾಗಿ ಸ್ಟಾರ್‌ ನಾಯಕರು, ಸಿನಿಮಾ ಹೀರೋಗಳು ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬುಧವಾರ (ಏಪ್ರಿಲ್‌ 17) ಕರ್ನಾಟಕಕ್ಕೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಹಾಗೂ ಆಂಧ್ರಪ್ರದೇಶದ ಜನಸೇನಾ ಪಕ್ಷದ ನಾಯಕ, ಖ್ಯಾತ ನಟ ಪವನ್ ಕಲ್ಯಾಣ್‌ (Pavan Kalyan) ಎಂಟ್ರಿ ಕೊಡಲಿದ್ದಾರೆ.

ರಾಜ್ಯದಲ್ಲಿ ಚುನಾವಣಾ ಕಾವು ದಿನೇ ದಿನೆ ಏರತೊಡಗಿದ್ದು, ಒಂದು ಹಂತದ ಪ್ರಚಾರ ಕಾರ್ಯಗಳು ಮುಗಿಯುತ್ತಾ ಬಂದಿದೆ. ಮತದಾನಕ್ಕೆ ಇನ್ನು ಕೆಲವೇ ದಿನ ಇದೆ ಎಂಬ ಹೊತ್ತಿನಲ್ಲಿ ರಾಹುಲ್‌ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ರಾಹುಲ್‌ ಗಾಂಧಿ ಮೊದಲು ಮಂಡ್ಯಕ್ಕೆ ಆಗಮಿಸಲಿದ್ದು, ಪಕ್ಷ ಅಭ್ಯರ್ಥಿ ಸ್ಟಾರ್‌ ಚಂದ್ರು ಪರ ಪ್ರಚಾರ ನಡೆಸಲಿದ್ದಾರೆ. ಬಳಿಕ ಕೋಲಾರಕ್ಕೆ ತೆರಳಿ ಪ್ರಚಾರ ನಡೆಸಲಿದ್ದಾರೆ.

ಟಕ್ಕರ್‌ ಕೊಡಲು ರಾಗಾ ರೆಡಿ?

ದೇಶಾದ್ಯಂತ ನಡೆಸುತ್ತಿರುವ ನ್ಯಾಯಯಾತ್ರೆಯಲ್ಲಿ ಬ್ಯುಸಿಯಾಗಿದ್ದ ರಾಹುಲ್‌ ಗಾಂಧಿ ಬುಧವಾರ ರಾಜ್ಯಕ್ಕೆ ಆಗಮಿಸಿ ನೇರವಾಗಿ ಮಂಡ್ಯಕ್ಕೆ ಬರಲಿದ್ದಾರೆ. ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸಮಾವೇಶದಲ್ಲಿ ಭಾಗಿಯಾಗಲಿದ್ದು, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಕ್ಷೇತ್ರದಲ್ಲಿ ರಾಹುಲ್ ಗಾಂಧಿ ರಣಕಹಳೆ ಊದಲಿದ್ದಾರೆ. ಎನ್‌ಡಿಎ ಅಭ್ಯರ್ಥಿಗೆ ಅಲ್ಲಿಂದಲೇ ಸಂದೇಶ ರವಾನೆ ಮಾಡಲಿದ್ದಾರೆ. ಮಧ್ಯಾಹ್ನ 3 ಗಂಟೆ ಬಳಿಕ ಕೋಲಾರಕ್ಕೆ ಆಗಮಿಸಲಿದ್ದು, ಅಲ್ಲಿ ಪಕ್ಷದ ಅಭ್ಯರ್ಥಿ ಪರ ಪ್ರಚಾರ ನಡೆಸಲಿದ್ದಾರೆ.

ಇದನ್ನೂ ಓದಿ: Lok Sabha Election 2024: ಡಿಕೆಶಿ – ಎಚ್‌ಡಿಕೆ ವೈಯಕ್ತಿಕ ಕಾದಾಟಕ್ಕೆ ಇದೇ ಕಾರಣ! ಏನಿದು ಇನ್‌ಸೈಡ್‌ ಕಹಾನಿ?

ಬೆಂಗಳೂರಿನಲ್ಲಿ ಪವನ್‌ ಕಲ್ಯಾಣ್‌ ಹವಾ!

ಇತ್ತ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಸಂಸದ ತೇಜಸ್ವಿ ಸೂರ್ಯ ಹಾಗೂ ಚಿಕ್ಕಬಳ್ಳಾಪುರ, ರಾಯಚೂರು, ಬಳ್ಳಾರಿ ಲೋಕಸಭಾ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪವನ್‌ ಕಲ್ಯಾಣ್‌ ಪ್ರಚಾರಕ್ಕೆ ಆಗಮಿಸಲಿದ್ದಾರೆ. ಅವರ ಸಿನಿಮಾ ಸ್ಟೈಲ್‌ ಡೈಲಾಗ್‌ಗಳು ಎಷ್ಟು ಜನರನ್ನು ಮುಟ್ಟಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಆಂಧ್ರಪ್ರದೇಶದ ಜನಸೇನಾ ಪಕ್ಷದ ನಾಯಕ ಪವನ್ ಕಲ್ಯಾಣ್‌ ಅವರಿಗೆ ಕರ್ನಾಟಕದಲ್ಲಿ ಅವರದ್ದೇ ಆದ ಫ್ಯಾನ್‌ ಫಾಲೋವರ್ಸ್‌ ಇದ್ದಾರೆ. ಪ್ರಚಾರ ಕಾರ್ಯವನ್ನು ನಡೆಸಿದ್ದು, ಕರ್ನಾಟಕದ ನಾಲ್ಕು ಕ್ಷೇತ್ರಗಳಲ್ಲಿ ಪ್ರಚಾರ ಮಾಡಲಿದ್ದಾರೆ. ತೆಲುಗು ಭಾಷಿಕರು ಹೆಚ್ಚಾಗಿ ಇರುವ ಕ್ಷೇತ್ರಗಳಲ್ಲಿ ಇವರನ್ನು ಕರೆತರಲಾಗುತ್ತಿದೆ. ಮಾಸ್ ಡೈಲಾಗ್ ಮೂಲಕ ಹುಚ್ಚೆಬ್ಬಿಸುವ ಪವನ್ ಕಲ್ಯಾಣ್ ಅವರ ಎಂಟ್ರಿಯಿಂದ ರಾಜ್ಯದ ರಾಜಕೀಯ ಅಖಾಡ ರಂಗೇರಿದೆ. ಆಂಧ್ರ ಪ್ರದೇಶದಲ್ಲಿ ಜಗನ್ ಮೋಹನ್ ರೆಡ್ಡಿ ವಿರುದ್ಧ ತೆಲುಗು ಸಿನಿಮಾ ಸ್ಟೈಲ್‌ನಲ್ಲಿ ರಾಜಕಾರಣ ಮಾಡುತ್ತಾ ಬಂದಿದ್ದಾರೆ.

Exit mobile version