Site icon Vistara News

Modi in Karnataka: ಲೂಟಿ ಮಾಡಿ ಖಾಲಿ ಚೆಂಬು ಕೊಟ್ಟಿದ್ದು ಕಾಂಗ್ರೆಸ್‌; ಆ ಚೆಂಬನ್ನು ಅಕ್ಷಯ ಪಾತ್ರ ಮಾಡಿದ್ದು ಮೋದಿ: ಎಚ್‌.ಡಿ. ದೇವೇಗೌಡ ಗುಡುಗು

Modi in Karnataka HD Deve Gowda attack on Congess

ಚಿಕ್ಕಬಳ್ಳಾಪುರ: ಈ ದೇಶದಲ್ಲಿ 60 ವರ್ಷಗಳ ಕಾಲ ಆಡಳಿತವನ್ನು ನಡೆಸಿ ಸಂಪತ್ತನ್ನು ಲೂಟಿ ಮಾಡಿ 2014ರಲ್ಲಿ ಖಾಲಿ ಚೆಂಬನ್ನು ನರೇಂದ್ರ ಮೋದಿ ಅವರಿಗೆ ಕೊಟ್ಟಿದ್ದು ಇದೇ ಕಾಂಗ್ರೆಸ್‌ ಆಗಿದೆ. ಆದರೆ, ಆ ಖಾಲಿ ಚೆಂಬನ್ನು ಅಕ್ಷಯ ಪಾತ್ರೆ ಮಾಡಿದವರು ಪ್ರಧಾನಿ ಮೋದಿ (PM Narendra Modi) ಎಂದು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ (HD Devegowda) ಗುಡುಗಿದರು. ಪ್ರಧಾನಿ ನರೇಂದ್ರ ಮೋದಿ (Modi in Karnataka) ಅವರ ಚಿಕ್ಕಬಳ್ಳಾಪುರ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಚಿಕ್ಕಬಳ್ಳಾಪುರದಲ್ಲಿ ಶನಿವಾರ (ಏಪ್ರಿಲ್‌ 20) ಏರ್ಪಡಿಸಲಾಗಿದ್ದ ಬೃಹತ್‌ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಜತೆ ವೇದಿಕೆ ಹಂಚಿಕೊಂಡು ಮಾತನಾಡಿದ ಎಚ್.ಡಿ. ದೇವೇಗೌಡ, ಈ ಹಿಂದೆ ಯುಪಿಎ ಸರ್ಕಾರ ಇದ್ದಾಗ ಕೋಲ್, 2ಜಿ ಸ್ಪೆಕ್ಟ್ರಂ ಸೇರಿದಂತೆ ಎಷ್ಟು ಭ್ರಷ್ಟಾಚಾರ ಮಾಡಿದ್ದಾರೆ. ಈ ನಾಡಿನ ಸಂಪತ್ತನ್ನು ಲೂಟಿ ಹೊಡೆದಿದ್ದಾರೆ. ಆ ಬರಿಯ ಚೆಂಬನ್ನು ಯಾರ ಕೈಗೆ ಕೊಟ್ಟಿದ್ದಾರೆ? ಈ ಕಾಂಗ್ರೆಸ್‌ನವರು ಯಾರಿಗೆ ಕೊಟ್ಟರು? ಸಿಎಂ ಸಿದ್ದರಾಮಯ್ಯ, ಡಿಸಿಎಂ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ರಾಜ್ಯವನ್ನು ಲೂಟಿ ಮಾಡಿದ್ದಾರೆ. ಈಗ ಪ್ರಧಾನಿ ನರೇಂದ್ರ ಮೋದಿ ಅವರಿಗೆ 2014ರಲ್ಲಿ ಬರಿ ಚೆಂಬನ್ನು ಕೊಡುತ್ತಾರೆ. ಆ ಖಾಲಿ ಚೆಂಬನ್ನು ಪಡೆದ ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ 10 ವರ್ಷದಿಂದ ಅಕ್ಷಯ ಪಾತ್ರೆಯನ್ನು ಮಾಡಿದರು. ಈ ದೇಶದ ಬಡವರು, ಹಿಂದುಳಿದ ವರ್ಗದವರು, ಮಹಿಳೆಯರು ಹಾಗೂ ಸಣ್ಣ ಸಣ್ಣ ಸಮಾಜದವರನ್ನು ಮೇಲಕ್ಕೆ ಎತ್ತುವ ಕೆಲಸವನ್ನು ಮಾಡಿದ ಮಹಾನ್‌ ಭಾವ ಯಾರೆಂದರೆ ಅದು ನರೇಂದ್ರ ಮೋದಿ ಎಂದು ಎಚ್.ಡಿ. ದೇವೇಗೌಡ ಹೇಳಿದರು.

ಇಂಥ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಮಾತನಾಡುತ್ತೀರಾ? ಇದು ಕ್ಷುಲ್ಲಕ ರಾಜಕಾರಣ ಅಲ್ಲವೇ? ನಾಚಿಕೆಯಾಗಬೇಕು ನಿಮಗೆ. ಈ ದೇಶಕ್ಕೆ ಸುಮಾರು 34 ಪ್ರೋಗ್ರಾಂಗಳನ್ನು ಕೊಟ್ಟಿದ್ದಾರೆ. ಬಡವರಿಗೋಸ್ಕರ, ನಿರೋದ್ಯೋಗವನ್ನು ಬಗೆಹರಿಸಲು ಸೇರಿದಂತೆ ಎಷ್ಟು ಕಾರ್ಯಕ್ರಮಗಳು ಇವೆ? ಸಿಎಂ ಸಿದ್ದರಾಮಯ್ಯ ಮತ್ತು ಅವರ ಭಾಷಣದಲ್ಲಿ ಏನು ಹೇಳುತ್ತಾರೆ? ಅವರ ಬಗ್ಗೆ, ಅವರ ಭಾಷಣದ ಬಗ್ಗೆ ವ್ಯಾಖ್ಯಾನ ಮಾಡಲು ನಾನು ಹೋಗುವುದಿಲ್ಲ ಎಚ್.ಡಿ. ದೇವೇಗೌಡ ಹೇಳಿದರು.

ಮೋದಿ ಕಾರ್ಯಕ್ರಮದ ಲೈವ್‌ ಅಪ್ಡೇಟ್‌ ಇಲ್ಲಿದೆ

ಚಿಕ್ಕಬಳ್ಳಾಪುರದಲ್ಲಿ ನನ್ನ ನಿಜವಾದ ಕಾರ್ಯಕರ್ತರು ಇದ್ದರೆ ನಿಮ್ಮ ವೋಟನ್ನು ಚಿಕ್ಕಬಳ್ಳಾಪುರ ಲೋಕಸಭಾ ಅಭ್ಯರ್ಥಿ ಡಾ. ಕೆ. ಸುಧಾಕರ್‌ ಅವರಿಗೆ ನೀಡಿ. ನಾವು ನಮ್ಮ ಗುರಿಯನ್ನು ಮುಟ್ಟಲು, ದೇಶದಲ್ಲಿ 400ಕ್ಕೂ ಹೆಚ್ಚು ಸ್ಥಾನವನ್ನು ಪಡೆಯಲು, ರಾಜ್ಯದಲ್ಲಿ 28ಕ್ಕೆ 28 ಸ್ಥಾನಗಳನ್ನು ಗೆಲ್ಲಲು ನಮ್ಮ ಕಾಣಿಕೆ ಇದಾಗಬೇಕು ಎಂದು ಎಚ್.ಡಿ. ದೇವೇಗೌಡ ಮನವಿ ಮಾಡಿದರು.

ಇದನ್ನೂ ಓದಿ: ‌CM Siddaramaiah: ಸಿಎಂ ಸಿದ್ದರಾಮಯ್ಯ ಬಳಿ ಗನ್‌ ತಂದಿದ್ದ ಕೇಸ್;‌ ನಾಲ್ವರು ಪೊಲೀಸರು ಸಸ್ಪೆಂಡ್

ಈಗ 25 ಗ್ಯಾರಂಟಿಯನ್ನು ಕೊಡುತ್ತೇನೆ ಎಂದು ಹೇಳುತ್ತಿದ್ದಾರೆ.

ಈ ದೇಶದಲ್ಲಿ 60 ವರ್ಷ ಆಡಳಿತ ನಡೆಸಿ, ಈ ಹತ್ತು ವರ್ಷದಲ್ಲಿ ವಿರೋಧಿ ಪಕ್ಷದ ಸ್ಥಾನವನ್ನು ಪಡೆಯಲು ಯೋಗ್ಯತೆ ಇಲ್ಲದ ಈ ಕಾಂಗ್ರೆಸ್‌ ಪಕ್ಷವು 400 ಸೀಟುಗಳನ್ನು ಗೆಲ್ಲುತ್ತದೆಯಾ? ಈಗ ಕೋಲಾರ ಹಾಗೂ ಚಿಕ್ಕಬಳ್ಳಾಪುರದಲ್ಲಿ ಈ ಇಬ್ಬರು (ಡಾ. ಕೆ. ಸುಧಾಕರ್‌ ಮತ್ತು ಮಲ್ಲೇಶ್‌ ಬಾಬು) ಅಭ್ಯರ್ಥಿಗಳನ್ನು ಗೆಲ್ಲಿಸಿ. 28 ಕ್ಷೇತ್ರಗಳನ್ನು ಗೆದ್ದುಕೊಂಡು ನಾವೆಲ್ಲರೂ ಹೋಗಿ ಕಾವೇರಿ ನೀರು ಸೇರಿದಂತೆ ರಾಜ್ಯದ ಇನ್ನಿತರ ಸಮಸ್ಯೆಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರ ಮುಂದೆ ಹೋಗಿ ಕೇಳಲು ಅನುವು ಮಾಡಿಕೊಡಬೇಕು ಎಂದು ಎಚ್.ಡಿ. ದೇವೇಗೌಡ ಮನವಿ ಮಾಡಿದರು.

Exit mobile version