ಬೆಂಗಳೂರು: ಲೋಕಸಭಾ ಚುನಾವಣೆಯ (Lok Sabha Election 2024) ಕಾವೇರುತ್ತಿರುವ ಹೊತ್ತಿನಲ್ಲಿ ಜನರಲ್ಲಿ ಮತದಾನ ಜಾಗೃತಿ ಮೂಡಿಸಲು ಮತ್ತು ಜನರ ನಾಡಿಮಿಡಿತ ಅರಿಯಲು ವಿಸ್ತಾರ ನ್ಯೂಸ್ (Vistara News) ಆರಂಭಿಸಿರುವ ಅತ್ಯಂತ ವಿನೂತನ ಹಾಗೂ ಮೊಟ್ಟಮೊದಲ ಪೋಲಿಂಗ್ ಬೂತ್‌ಗೆ (Vistara news polling booth) ಹೃದಯವಂತ ವೈದ್ಯರಾದ ಡಾ. ಸಿ.ಎನ್. ಮಂಜುನಾಥ್ (Dr CN Manjunath) ಅವರು ಸೋಮವಾರ ಬೆಳಗ್ಗೆ ಚಾಲನೆ ನೀಡಿದರು. ಇದರ ಭಾಗವಾಗಿ ಮೊಟ್ಟ ಮೊದಲ ಕ್ಷೇತ್ರವನ್ನಾಗಿ ಮಂಡ್ಯ ಲೋಕಸಭಾ ಕಣವನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಇದಕ್ಕೆ ಕರೆಗಳ ಮಹಾಪೂರವೇ ಹರಿದುಬಂದಿದ್ದು, ಆ ಜಿಲ್ಲೆಯ ಮತದಾರರು ಭವಿಷ್ಯ ಬರೆದಿದ್ದಾರೆ. ತಮ್ಮ ನೆಚ್ಚಿನ ಸಂಸದರು ಈ ಪಕ್ಷದವರೇ ಆಗಬೇಕು ಎಂದು ಹೇಳಿದ್ದಾರೆ. ಅಲ್ಲದೆ, ಈ ಕರೆಗಳ ಅನುಸಾರ ಜೆಡಿಎಸ್ ನಂ. 1 ಸ್ಥಾನದಲ್ಲಿ ಇರಲಿದ್ದು, ಬಿಜೆಪಿ ಮೈತ್ರಿಯು ಮತ್ತಷ್ಟು ಬಲಪಡಿಸಲಿದೆ ಎನ್ನಲಾಗಿದೆ.
ವಿಸ್ತಾರ ಪೋಲಿಂಗ್ ಬೂತ್‌ಗೆ ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಒಟ್ಟು 18,970 ಕರೆಗಳು ಬಂದಿವೆ. ಒಟ್ಟು 5100 ಕರೆಗಳನ್ನು ಸ್ವೀಕಾರ ಮಾಡಲಾಗಿದೆ. ಇಲ್ಲಿ ಲಭ್ಯವಾದ ಮಾಹಿತಿಯನ್ನು ನೋಡುವುದಾದರೆ ಮಂಡ್ಯದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವೆ ನೇರಾ ನೇರಾ ಫೈಟ್ ಇದೆ. ಹೆಚ್ಚಿನ ಮತದಾರರು ಜೆಡಿಎಸ್ ಕಡೆ ಒಲವು ತೋರಿದರೆ, ಮತ್ತೆ ಹಲವರು ಕಾಂಗ್ರೆಸ್ ತಮ್ಮ ನೆಚ್ಚಿನ ಪಕ್ಷ ಎಂದು ಹೇಳಿದ್ದಾರೆ. ಮೂರನೇ ಸ್ಥಾನದಲ್ಲಿ ಬಿಜೆಪಿ ಇದೆ. ಹೀಗಾಗಿ ಜೆಡಿಎಸ್-ಬಿಜೆಪಿ ಮೈತ್ರಿಯಿಂದ ಕಾಂಗ್ರೆಸ್‌ಗೆ ಹೊಡೆತ ಬೀಳಬಹುದೇ ಎಂಬ ಅನುಮಾನವೂ ಮೂಡಿದೆ.
ಕಾಂಗ್ರೆಸ್ 2ನೇ ಅತಿ ದೊಡ್ಡ ಪಕ್ಷ
ವಿಸ್ತಾರ ಪೋಲಿಂಗ್ ಬೂತ್‌ನಲ್ಲಿ ಮಂಡ್ಯದಲ್ಲಿ ಜೆಡಿಎಸ್ ಪಕ್ಷಕ್ಕೆ ಹೆಚ್ಚು ಮತಗಳು ಬಂದಿದ್ದರೆ, 2ನೇ ಅತಿದೊಡ್ಡ ಪಕ್ಷವಾಗಿ ಕಾಂಗ್ರೆಸ್ ಹೊರಹೊಮ್ಮಿದೆ. ಆದರೆ, ಈ ಕ್ಷೇತ್ರದಲ್ಲೇ ಸ್ಪರ್ಧೆ ಮಾಡುವುದಾಗಿ ಹೇಳುತ್ತಾ ಬಂದಿರುವ ಸುಮಲತಾ ಅಂಬರೀಶ್ ಅವರು ಬಿಜೆಪಿಯಿಂದ ಟಿಕೆಟ್ ಬಯಸಿದ್ದಾರೆ. ಒಂದು ವೇಳೆ ಈ ಕ್ಷೇತ್ರ ಜೆಡಿಎಸ್ ಪಾಲಾಗಿ ಅವರು ಪಕ್ಷೇತರವಾಗಿ ಸ್ಪರ್ಧೆ ಮಾಡುವ ನಿರ್ಧಾರ ತೆಗೆದುಕೊಂಡರೆ ಅವರಿಗೆ ಗೆಲುವು ಕಷ್ಟ ಎಂಬ ಅಂಶ ತಿಳಿದುಬಂದಿದೆ. ಆದರೆ, ಜೆಡಿಎಸ್ ಇಲ್ಲಿ ಸ್ಪರ್ಧೆ ಮಾಡಿದರೆ ಬಿಜೆಪಿಯ ಮತಗಳೂ ಒಟ್ಟಾದಲ್ಲಿ ದಳಪಡೆಗೆ ಗೆಲುವು ಸುಲಭ ಎನ್ನಲಾಗಿದೆ. ಹೀಗಾಗಿ ಕಾಂಗ್ರೆಸ್ ಇಲ್ಲಿ ಗೆಲ್ಲಬೇಕಾದರೆ ಟಫ್ ಫೈಟ್ ಮಾಡಲೇಬೇಕಿದೆ.
ಮಂಡ್ಯ ಕ್ಷೇತ್ರದಲ್ಲಿ ಗೆಲುವಿನ ಬಾವುಟ ಹಾರಿಸುತ್ತಾ ಜೆಡಿಎಸ್?
ವಿಸ್ತಾರ ಪೋಲಿಂಗ್ ಬೂತ್‌ನಲ್ಲಿ ಜೆಡಿಎಸ್ 2,100 ಮತಗಳನ್ನು ಪಡೆದುಕೊಂಡಿದೆ. ಕಾಂಗ್ರೆಸ್ ಪಕ್ಷಕ್ಕೆ 1,820 ಮತಗಳನ್ನು ಮತದಾರ ನೀಡಿದ್ದಾನೆ. ಅದೇ ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿಗೆ ಒಟ್ಟು 703 ಮತಗಳು ಬಂದಿವೆ. ಅದೇ ಸಂಸದೆ ಸುಮಲತಾ ಅಂಬರೀಶ್‌ಗೆ 444 ಮತಗಳು ಬಿದ್ದರೆ, ಇತರರು ಪಡೆದ ಮತಗಳು 33 ಆಗಿದೆ.
ಶೇಕಡಾವಾರು ಫಲಿತಾಂಶ
ವಿಸ್ತಾರ ಪೋಲಿಂಗ್ ಬೂತ್‌ನಲ್ಲಿ ಬಂದಿರುವ ಮತಗಳನ್ನು ಶೇಕಡಾವಾರು ಲೆಕ್ಕಾಚಾರ ಹಾಕಿದರೆ ಜೆಡಿಎಸ್ ಪಕ್ಷಕ್ಕೆ ಅತಿಹೆಚ್ಚು ಶೇಕಡಾ ಮತಗಳು ಬಂದಿರುವುದು ಗೊತ್ತಾಗುತ್ತದೆ.
- ಜೆಡಿಎಸ್ – 2100 (ಶೇ. 41)
- ಕಾಂಗ್ರೆಸ್ – 1820 (ಶೇ.35.69)
- ಬಿಜೆಪಿ – 703 (ಶೇ. 13.76)
- ಸುಮಲತಾ – 444 (ಶೇ.8.71)
- ಇತರರು – 43 (ಶೇ.0.84)
ಏನಿದು ಪೋಲಿಂಗ್ ಬೂತ್?
ಬೆಂಗಳೂರಿನಲ್ಲಿರುವ ವಿಸ್ತಾರ ನ್ಯೂಸ್ ಮುಖ್ಯ ಕಚೇರಿಯಲ್ಲಿ ತೆರೆಯಲಾಗಿರುವ ಪೋಲಿಂಗ್ ಬೂತ್‌ಗೆ ಸಾರ್ವಜನಿಕರು ನಿಗದಿತ ಸಮಯದಲ್ಲಿ ಪೋನ್ ಮಾಡುವ ಮೂಲಕ ತಮ್ಮ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಯಾರಾಗಬೇಕು, ಯಾವ ಪಕ್ಷ ಈ ಬಾರಿ ಗೆಲ್ಲಬೇಕು ಎಂದು ತಿಳಿಸಬಹುದು.
ಪೋಲಿಂಗ್ ಬೂತ್‌ನಲ್ಲಿ ಮಾಹಿತಿ ಸಂಗ್ರಹ ಹೇಗೆ?
ವಿಸ್ತಾರ ನ್ಯೂಸ್ ಪೋಲಿಂಗ್ ಬೂತ್‌ಗೆ ಒಂದೇ ದೂರವಾಣಿ ಸಂಖ್ಯೆಯನ್ನು ನೀಡಲಾಗಿದೆ. ಆದರೆ, ಈ ಒಂದೇ ದೂರವಾಣಿ ಸಂಖ್ಯೆ ಸುಮಾರು 20ಕ್ಕೂ ಅಧಿಕ ಫೋನ್‌ಗಳಿಗೆ ಕನೆಕ್ಟ್ ಆಗುತ್ತದೆ. ಏಕಕಾಲದಲ್ಲಿ 20ಕ್ಕೂ ಅಧಿಕ ಮಂದಿ ಕರೆಯನ್ನು ಸ್ವೀಕರಿಸಿ ಮಾಹಿತಿಯನ್ನು ಸಂಗ್ರಹ ಮಾಡಲಾಗುತ್ತದೆ. ಯಾರು ಅಭ್ಯರ್ಥಿಯಾಗಬೇಕು? ಯಾರು ಗೆಲ್ಲಬೇಕು? ಯಾರಿಗೆ ಮತ ಎಂಬಿತ್ಯಾದಿ ಮಾಹಿತಿಗಳನ್ನು ಈ ವೇಳೆ ದಾಖಲಿಸಿಕೊಳ್ಳಲಾಗುತ್ತದೆ. ಬಳಿಕ ಅವುಗಳನ್ನು ಸಮೀಕರಿಸಿ ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ.
ಇದನ್ನೂ ಓದಿ: Vistara News Polling Booth : ವಿಸ್ತಾರ ನ್ಯೂಸ್ ಪೋಲಿಂಗ್ ಬೂತ್: ವಿನೂತನ ಪ್ರಯೋಗಕ್ಕೆ ಡಾ. ಮಂಜುನಾಥ್ ಚಾಲನೆ
ನಿರಂತರ ಫೋನ್ ಕಾಲ್‌ಗಳ ದಾಖಲೆ
ಬೆಳಗ್ಗೆ 9 ಗಂಟೆಗೆ ವಿಸ್ತಾರ ನ್ಯೂಸ್ ಪೋಲಿಂಗ್ ಬೂತ್ ತೆರೆದುಕೊಳ್ಳುತಿದ್ದಂತೆಯೇ ಕರೆಗಳ ಸುರಿಮಳೆಯೇ ಬಂದಿವೆ. ಮೊದಲ 15 ನಿಮಿಷದಲ್ಲೇ 500ಕ್ಕೂ ಹೆಚ್ಚು ಕರೆಗಳನ್ನು ಸ್ವೀಕರಿಸಲಾಗಿದೆ. ಸ್ವೀಕರಿಸಲಾಗದೆ ಮಿಸ್ ಕಾಲ್ ಆದ ಕರೆಗಳ ಸಂಖ್ಯೆ 300೦ಕ್ಕಿಂತಲೂ ಹೆಚ್ಚಾಗಿತ್ತು.
ನೀವು ಕರೆ ಮಾಡಬೇಕಾದ ದೂರವಾಣಿ ಸಂಖ್ಯೆ: 080-69554488