Site icon Vistara News

ವಿಸ್ತಾರ Money Guide | Tax saving options | ಹೊಸ ವರ್ಷ ತೆರಿಗೆ ಉಳಿತಾಯಕ್ಕೆ 10 ಉತ್ತಮ ಆಯ್ಕೆಗಳು

tax

ಹೊಸ ವರ್ಷ ನಿಮ್ಮ ಆದಾಯ ತೆರಿಗೆಯಲ್ಲಿ ಹೇಗೆ ಉಳಿತಾಯ ಮಾಡಬಹುದು ಎಂದು ಯೋಚಿಸುತ್ತಿದ್ದೀರಾ? ಹಾಗಿದ್ದರೆ ನೀವು ಈ ಲೇಖನ ಓದಲೇಬೇಕು. (Tax saving options) ಆದಾಯ, ಸುರಕ್ಷತೆ, ಪಾರದರ್ಶಕತೆ, ಸುಲಭ ಹೂಡಿಕೆಯ ದೃಷ್ಟಿಯಿಂದ ಉತ್ತಮ ಎನ್ನಿಸುವ 10 ಆಯ್ಕೆಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ.

ಎನ್‌ಪಿಎಸ್, ಯುಲಿಪ್ಸ್‌, ಇಎಲ್‌ಎಸ್‌ಎಸ್‌ ಫಂಡ್ಸ್‌, ಸೀನಿಯರ್‌ ಸಿಟಿಜನ್ಸ್‌ ಸೇವಿಂಗ್‌ ಸ್ಕೀಮ್‌, ರಿಟೈರ್‌ಮೆಂಟ್‌ ಫಂಡ್‌, ಪಿಪಿಎಫ್‌, ಸುಕನ್ಯಾ ಯೋಜನಾ, ಎನ್‌ಎಸ್‌ಸಿ, ಟ್ಯಾಕ್ಸ್‌ ಸೇವಿಂಗ್‌ ಎಫ್‌ಡಿ, ಜೀವ ವಿಮೆ ಪಾಲಿಸಿಗಳು ತೆರಿಗೆ ಉಳಿತಾಯಕ್ಕೆ 10 ಉತ್ತಮ ಆಯ್ಕೆಗಳಾಗಿವೆ. ಈಗ ಮತ್ತಷ್ಟು ವಿವರ ಪಡೆಯೋಣ.

ಎನ್‌ಪಿಎಸ್:‌

ಕಳೆದ 5 ವರ್ಷಗಳಲ್ಲಿ ಆದಾಯ-8-11%, ಲಾಕ್‌ ಇನ್:‌ ನಿವೃತ್ತಿಯಾಗುವ ತನಕ.

ಎನ್‌ಪಿಎಸ್‌ (ನ್ಯಾಶನಲ್‌ ಪೆನ್ಷನ್‌ ಸಿಸ್ಟಮ್)‌ 2023ರಲ್ಲಿ ತೆರಿಗೆ ಉಳಿತಾಯಕ್ಕೆ ಅತ್ಯಂತ ನೆಚ್ಚಿನ ಯೋಜನೆ ಎನ್ನಿಸಿದೆ. 2023ರಲ್ಲಿ ಈಕ್ವಿಟಿಗಿಂತಲೂ ಎನ್‌ಪಿಎಸ್‌ ಹೆಚ್ಚು ಆದಾಯ ಕೊಡಬಹುದು ಎಂದು ನಿರೀಕ್ಷಿಸಲಾಗಿದೆ. (ಈಕ್ವಿಟಿಯಲ್ಲಿ ಷೇರು, ಮ್ಯೂಚುಯಲ್‌ ಫಂಡ್‌ ಇರುತ್ತದೆ)

ಮೂರು ವಿಧಗಳಲ್ಲಿ ತೆರಿಗೆ ಉಳಿತಾಯ: ಎನ್‌ಪಿಎಸ್‌ನಲ್ಲಿ ಹೂಡಿಕೆಯಿಂದ ಮೂರು ವಿಧಗಳಲ್ಲಿ ತೆರಿಗೆ ಉಳಿತಾಯ ಮಾಡಬಹುದು. ಮೊದಲನೆಯದಾಗಿ 1.50 ಲಕ್ಷ ರೂ. ತನಕ ಹೂಡಿಕೆಗೆ ಆದಾಯ ತೆರಿಗೆಗೆ ಸೆಕ್ಷನ್‌ 80 ಸಿ ಅಡಿಯಲ್ಲಿ ತೆರಿಗೆ ಉಳಿತಾಯದ ಅನುಕೂಲ ಪಡೆಯಬಹುದು. ಎರಡನೆಯದಾಗಿ ಸೆಕ್ಷನ್‌ 80 ಸಿಸಿಡಿ (1ಬಿ) ಅಡಿಯಲ್ಲಿ 50,000 ರೂ. ತನಕ ತೆರಿಗೆ ಉಳಿತಾಯ ಮಾಡಬಹುದು. ಮೂರನೆಯದಾಗಿ ವೇತನದಾರರು ಮೂಲ ವೇತನದ 10% ಮೊತ್ತವನ್ನು ಎನ್‌ಪಿಎಸ್‌ನಲ್ಲಿ ಹೂಡಿದರೆ ಅದಕ್ಕೆ ತೆರಿಗೆ ಇರುವುದಿಲ್ಲ.

ಯುಲಿಪ್‌ :

ಕಳೆದ 5 ವರ್ಷಗಳಲ್ಲಿ ಆದಾಯ-8-9%, ಲಾಕ್‌ ಇನ್:‌ ಕನಿಷ್ಠ 5 ವರ್ಷ

ಈ 2023ರಲ್ಲಿ ಯುಲಿಪ್‌ಗಳೂ ಎನ್‌ಪಿಎಸ್‌ ಮಾದರಿಯಲ್ಲಿ ಉತ್ತಮ ಆದಾಯ ನೀಡುವ ಸಾಧ್ಯತೆ ಇದೆ. ಯುಲಿಪ್‌ಗಳು ಎನ್‌ಪಿಎಸ್‌ಗಿಂತಲೂ ಫ್ಲೆಕ್ಸಿಬಲ್‌ ಆಗಿವೆ. ಲಾಕ್‌ ಇನ್‌ ಅವಧಿ ಐದು ವರ್ಷ ಮಾತ್ರ.

ಇಎಲ್‌ಎಸ್‌ಎಸ್‌ ಫಂಡ್ಸ್:

‌ಕಳೆದ 5 ವರ್ಷಗಳಲ್ಲಿ ಆದಾಯ-10.01%, ಲಾಕ್‌ ಇನ್:‌ ಕನಿಷ್ಠ 3 ವರ್ಷ

ಇಎಲ್‌ಎಸ್‌ಎಸ್‌ ಫಂಡ್‌ಗಳು ಅತ್ಯಲ್ಪ ವೆಚ್ಚದ ಹೂಡಿಕೆ ಯೋಜನೆಗಳು. ಆದರೆ ಮಾರುಕಟ್ಟೆಯ ಏರಿಳಿತಗಳ ಹಿನ್ನೆಲೆಯಲ್ಲಿ ಸಿಪ್‌ (ವ್ಯವಸ್ಥಿತ ಹೂಡಿಕೆ ಯೋಜನೆ) ಮೂಲಕ ಹೂಡಿಕೆ ಮಾಡುವುದು ಸುರಕ್ಷಿತ. ದೀರ್ಘಕಾಲೀನ ದೃಷ್ಟಿಯಿಂದ ಉತ್ತಮ ಆದಾಯ ನೀಡುತ್ತವೆ. ಚೆನ್ನಾಗಿ ಕಾರ್ಯನಿರ್ವಹಿಸುತ್ತಿರುವ ಇಎಲ್‌ಎಸ್‌ಎಸ್‌ ಫಂಡ್‌ಗಳು: Canara Robeco Equity Tax Saver

Mirae Asset Tax Saver

DSP Tax saver

IDFC Tax Asvantage

ICICI Pru LT Equity

ಸೀನಿಯರ್‌ ಸಿಟಿಜನ್ಸ್‌ ಸೇವಿಂಗ್‌ ಸ್ಕೀಮ್ ‌(SCSS)

ಬಡ್ಡಿ ಆದಾಯ (ಜನವರಿ-ಮಾರ್ಚ್‌ 2023 ) : 8 %, ಲಾಕ್‌ ಇನ್:‌ ಕನಿಷ್ಠ 5 ವರ್ಷ

60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಇದು ಉತ್ತಮ ಹೂಡಿಕೆಯ ಆಯ್ಕೆ. ಇತ್ತೀಚೆಗೆ ಇದರ ಬಡ್ಡಿ ದರ ಏರಿಕೆಯಾಗಿದೆ. ಈ ಯೋಜನೆಯಲ್ಲಿ 50,000 ರೂ. ತನಕ ಬಡ್ಡಿ ಆದಾಯ ತೆರಿಗೆ ಮುಕ್ತ. ಪಿಪಿಎಫ್‌ಗಿಂತ ಹೆಚ್ಚಿನ ಆದಾಯವನ್ನು ನೀಡುತ್ತದೆ. ಹೀಗಿದ್ದರೂ ಇದರಲ್ಲಿ ವೈಐಕ್ತಿಕವಾಗಿ ಗರಿಷ್ಠ 15 ಲಕ್ಷ ರೂ. ಹೂಡಬಹುದು.

ರಿಟೈರ್‌ಮೆಂಟ್‌ ಮ್ಯೂಚುಯಲ್‌ ಫಂಡ್ಸ್‌ :

ಕಳೆದ ಮೂರು ವರ್ಷಗಳಲ್ಲಿ ಆದಾಯ :7-13%, ಲಾಕ್‌ ಇನ್‌ ಅವಧಿ :5 ವರ್ಷಗಳು

ರಿಟೈರ್‌ಮೆಂಟ್‌ ಮ್ಯೂಚುಯಲ್‌ ಫಂಡ್ಸ್‌ನಲ್ಲಿ ಸೆಕ್ಷನ್‌ 80 ಸಿ ಅಡಿಯಲ್ಲಿ ತೆರಿಗೆ ಉಳಿತಾಯ ಮಾಡಬಹುದು. ಇದರದಲ್ಲಿ ರಿಸ್ಕ್‌ ಕಡಿಮೆ. ದೀರ್ಘಕಾಲೀನ ಹೂಡಿಕೆಗೆ ಪ್ರಶಸ್ತ. ಲಾಕ್‌ ಇನ್‌ ಅವಧಿ ದೀರ್ಘವಲ್ಲ.

ಉತ್ತಮ ರಿಟೈರ್‌ಮೆಂಟ್‌ ಮ್ಯೂಚುಯಲ್‌ ಫಂಡ್‌ಗಳು:

Frankiln India Pension

UTI Retairement Benefit Pension

Nippon India Retirement Income

HDFC Retirement Savings

Tata retirement Savings Fund

ಸಾರ್ವಜನಿಕ ಭವಿಷ್ಯನಿಧಿ (ಪಬ್ಲಿಕ್‌ ಪ್ರಾವಿಡೆಂಟ್‌ ಫಂಡ್-‌ಪಿಪಿಎಫ್):

ಬಡ್ಡಿ ದರ: 7.1 (ಜನವರಿ-ಮಾರ್ಚ್ 2023)‌, ಲಾಕ್‌ ಇನ್‌ ಅವಧಿ: 15 ವರ್ಷಗಳು

ಸುಕನ್ಯಾ ಸಮೃದ್ಧಿ ಯೋಜನೆ:

ಬಡ್ಡಿ ದರ: 7.6% (ಜನವರಿ-ಮಾರ್ಚ್‌ 2023), ಲಾಕ್‌ ಇನ್‌ ಅವಧಿ: ಮಗುವಿಗೆ 18 ವರ್ಷ ಆಗುವ ತನಕ.

ಪಿಂಚಣಿ ನಿಧಿಗಳು:

ಕಳೆದ 5 ವರ್ಷಗಳಲ್ಲಿ ಆದಾಯ: 7-8%, ಲಾಕ್‌ ಇನ್‌ ಅವಧಿ: ನಿವೃತ್ತಿಯಾಗುವ ತನಕ

ಎನ್‌ಎಸ್‌ಸಿ, ಟ್ಯಾಕ್ಸ್‌ ಸೇವಿಂಗ್‌ ಎಫ್‌ಡಿಗಳು:

ಬಡ್ಡಿ ದರ: 7-7.6%, ಲಾಕ್‌ ಇನ್‌ ಅವಧಿ: 5 ವರ್ಷಗಳು

ಜೀವ ವಿಮೆ ಪಾಲಿಸಿಗಳು:

ಆದಾಯ: 5-6%, ಲಾಕ್‌ ಇನ್‌ ಅವಧಿ: ಕನಿಷ್ಠ 5 ವರ್ಷ. ತೆರಿಗೆ ಉಳಿತಾಯ ಯೋಜನೆಗಳ ದೃಷ್ಟಿಯಿಂದ ಜೀವ ವಿಮೆ ಪಾಲಿಸಿಗಳು ಕೊನೆಯ ಸ್ಥಾನದಲ್ಲಿವೆ.

Exit mobile version