ಮ್ಯೂಚುವಲ್ ಫಂಡ್‌ಗಳಲ್ಲಿ (Mutual fund investment) ಪ್ರತಿ ತಿಂಗಳು 5,000 ರೂ.ಗಳಂತೆ ಹೂಡಿಕೆ ಮಾಡಿ 12 ಕೋಟಿ ರೂ. ಗಳಿಸಲು ಎಷ್ಟು ವರ್ಷ ಬೇಕು? ಇದು ನಿಜಕ್ಕೂ ಸಾಧ್ಯವೇ? ಎನ್ನುತ್ತೀರಾ? ಹಣಕಾಸು ತಜ್ಞರು ಈ ಪ್ರಶ್ನೆಗೆ ಏನೆನ್ನುತ್ತಾರೆ ಎಂದು ಈಗ ನೋಡೋಣ.
ಹಣಕಾಸು ತಜ್ಞರ ಪ್ರಕಾರ ಮ್ಯೂಚುವಲ್ ಫಂಡ್‌ಗಳಲ್ಲಿ ಪ್ರತಿ ತಿಂಗಳು 5,000 ರೂ.ಗಳಂತೆ ಹೂಡಿಕೆ ಮಾಡಿ 12 ಕೋಟಿ ರೂ.ಗಳ ಭಾರಿ ನಿಧಿಯನ್ನು ಗಳಿಸಲು ಸಾಧ್ಯವಿದೆ. ಆದರೆ ಇಲ್ಲಿ ಹಲವು ವಿಷಯಗಳನ್ನು ಗಮನಿಸಬೇಕಾಗುತ್ತದೆ. ಮೊದಲನೆಯದಾಗಿ ಇದಕ್ಕಾಗಿ ನೀವು 46 ವರ್ಷಗಳ ಕಾಲ ಸುದೀರ್ಘ ಹೂಡಿಕೆ ಮಾಡಬೇಕಾಗುತ್ತದೆ.
ಇದನ್ನೂ ಓದಿ: SIP : ಮ್ಯೂಚುವಲ್ ಫಂಡ್ ಮೂಲಕ ಮೊದಲ ಬಾರಿಗೆ ಮಾರ್ಚ್‌ನಲ್ಲಿ 14,000 ಕೋಟಿ ರೂ. ಸಿಪ್ ಹೂಡಿಕೆಯ ಪ್ರವಾಹ
ಎರಡನೆಯದಾಗಿ ಈ 46 ವರ್ಷಗಳಲ್ಲಿ ಹಣದುಬ್ಬರ ಪರಿಣಾಮ ಹಣದ ಮೌಲ್ಯ ಇಳಿಕೆಯಾದೀತು. ಆದ್ದರಿಂದ ಅವಾಸ್ತವಿಕವಾದ ನಿರೀಕ್ಷೆಗಳನ್ನು ಇಟ್ಟುಕೊಂಡು ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವುದು ಸಮಂಜಸವಲ್ಲ. ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವುದು ಎಂದರೆ ಜಾಕ್ ಪಾಟ್ ಲಾಟರಿ ಗೆಲ್ಲುವುದಲ್ಲ.
ಹೀಗಿದ್ದರೂ, ಈ ಹಿಂದಿನ ದಾಖಲೆಗಳನ್ನು ಪರಿಶೀಲಿಸಿದರೆ ( historical data) ಈಕ್ವಿಟಿ ಮ್ಯೂಚುವಲ್ ಫಂಡ್‌ಗಳು ಎರಡಂಕಿಯ ಪ್ರತಿಫಲವನ್ನು ನೀಡಿವೆ. ಆದ್ದರಿಂದ ದೀರ್ಘಕಾಲೀನ ಹೂಡಿಕೆ ನಿಮ್ಮ ಅಗತ್ಯಗಳನ್ನು ಪೂರೈಸಬಹುದು. ಈ ನಡುವೆ ಕೆಲ ವರ್ಷ ನಿಮಗೆ ನಷ್ಟವೂ ಆಗಬಹುದು. ಒಟ್ಟಾರೆ ಹಣದುಬ್ಬರವನ್ನು ಎದುರಿಸಲು ಸೂಕ್ತವಾದೀತು. ಆದರೆ ನಿಮ್ಮ ಬೇಡಿಕೆಯನ್ನು ಆಧರಿಸಿ ಹೂಡಿಕೆಗೆ ಸಂಬಂಧಿಸಿ ಹಣಕಾಸು ಸಲಹೆಗಾರರ ಸಲಹೆ ಪಡೆದು ಹೂಡಿಕೆ ಮಾಡುವುದು ಸೂಕ್ತ ಎನ್ನುತ್ತಾರೆ ತಜ್ಞರು.
ಮ್ಯೂಚುವಲ್ ಫಂಡ್ ಹೂಡಿಕೆಯನ್ನು ಸಲಹೆಗಾರರ ಸಲಹೆ ಪಡೆದು ನಿಧಾನವಾಗಿ ಹೂಡಿಕೆ ಆರಂಭಿಸುವುದು ಹಾಗೂ ಕ್ರಮೇಣ ಹೂಡಿಕೆಯನ್ನು ಹೆಚ್ಚಿಸುವುದು ಉತ್ತಮ ವಿಧಾನ. ದೀರ್ಘಕಾಲೀನವಾಗಿ ಅದು ಸಂಪತ್ತನ್ನು ಸೃಷ್ಟಿಸುತ್ತದೆ. ಆನ್‌ಲೈನ್ ಮೂಲಕ ಸಲಹೆ ಪಡೆಯುವದಕ್ಕಿಂತ ಮುಖತಃ ಭೇಟಿಯಾಗಿ ಸಲಹೆ ಪಡೆಯುವುದು ಉತ್ತಮ ಎನುತ್ತಾರೆ ತಜ್ಞರು.
ವೈವಿಧ್ಯಮಯ ಹೂಡಿಕೆ: ಮ್ಯೂಚುವಲ್ ಫಂಡ್‌ಗಳಲ್ಲೂ multiple asset class ಅನ್ನು ಆಯ್ಕೆ ಮಾಡಿಕೊಳ್ಳಬೇಕು. ಇದು ಉತ್ತಮ ಆದಾಯ ನೀಡಬಲ್ಲುದು.
ಮ್ಯೂಚುವಲ್ ಫಂಡ್ ಉದ್ದಿಮೆಗೆ ಕಳೆದ ಮಾರ್ಚ್‌ನಲ್ಲಿ ಮೊಟ್ಟ ಮೊದಲ ಬಾರಿಗೆ 14,000 ಕೋಟಿ ರೂ. ಹೂಡಿಕೆಯ ಪ್ರವಾಹವೇ ಕಳೆದ ಮಾರ್ಚ್‌ನಲ್ಲಿ ಸಿಪ್ ಮೂಲಕ (systematic investment plan) ಹರಿದು ಬಂದಿದೆ. ಕಾರ್ಪೊರೇಟ್ ಬಾಂಡ್ ಯೋಜನೆಗಳಲ್ಲಿ ಕೂಡ ಹೂಡಿಕೆಯ ಪ್ರಮಾಣದಲ್ಲಿ ಏರಿಕೆ ದಾಖಲಾಗಿತ್ತು. ರಿಟೇಲ್ ಹೂಡಿಕೆದಾರರು ಮಾರ್ಚ್‌ನಲ್ಲಿ 14,276 ಕೋಟಿ ರೂ. ಮೊತ್ತದ ಹೂಡಿಕೆಯನ್ನು ಸಿಪ್ ಮೂಲಕ (ವ್ಯವಸ್ಥಿತ ಹೂಡಿಕೆ ಯೋಜನೆ) ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿದ್ದಾರೆ.
ಕಳೆದ ಜನವರಿಯಲ್ಲಿ 14,276 ಕೋಟಿ ರೂ. ಹೂಡಿಕೆಯು ಸಿಪ್ ಮೂಲಕ ಹರಿದು ಬಂದಿತ್ತು ಎಂದು ಕೈಗಾರಿಕಾ ಮಂಡಳಿ ಎಎಂಎಫ್‌ಐ ಅಂಕಿ ಅಂಶಗಳು ತಿಳಿಸಿದೆ. ಮಾರ್ಚ್‌ನಲ್ಲಿ 22 ಲಕ್ಷ ಹೊಸ ಸಿಪ್‌ಗಳು ನೋಂದಣಿಯಾಗಿತ್ತು. ಒಟ್ಟು 6.4 ಕೋಟಿ ಅಕೌಂಟ್‌ಗಳು ಇವೆ. 2020ರ ಮಾರ್ಚ್‌ನಲ್ಲಿ 3 ಕೋಟಿ ಇದ್ದ ಅಕೌಂಟ್‌ಗಳು ಈಗ ಇಮ್ಮಡಿಯಾಗಿದೆ.
ಎಎಂಎಫ್‌ಐ ಮುಖ್ಯಸ್ಥ ಎನ್‌ಎಸ್ ವೆಂಕಟೇಶ್ ಪ್ರಕಾರ, ಕೋವಿಡ್ ಬಿಕ್ಕಟ್ಟಿನ ಬಳಿಕ ಜಾಗತಿಕ ಆರ್ಥಿಕ ಹಿಂಜರಿತದ ಹೊರತಾಗಿಯೂ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆಯ ಹರಿವು ಹೆಚ್ಚಳವಾಗಿದೆ. 2022-23ರಲ್ಲಿ 2 ಲಕ್ಷ ಕೋಟಿ ರೂ.ಗೂ ಹೆಚ್ಚು ಹೂಡಿಕೆ ಮ್ಯೂಚುವಲ್ ಫಂಡ್ ವಲಯಕ್ಕೆ ಹರಿದು ಬಂದಿದೆ. ಕಾರ್ಪೊರೇಟ್ ಬಾಂಡ್ ವಲಯಕ್ಕೆ 15600 ಕೋಟಿ ರೂ. ಹರಿದು ಬಂದಿದೆ