ನೀವು ಹೊಸ ಕಾರು ಖರೀದಿಸಿದ್ದೀರಾ? ಹಾಗೂ ಕಾರಿನ ಸಾಲವನ್ನು ಸುಲಭವಾಗಿ ಹೇಗೆ ಮರು ಪಾವತಿಸಿ ನಿಶ್ಚಿಂತೆಯಿಂದ ಇರಬಹುದು ಎಂದು ಆಲೋಚಿಸುತ್ತಿದ್ದೀರಾ? ಈ ಲೇಖನವನ್ನು ತಪ್ಪದೆ ಓದಿ. ಏಕೆಂದರೆ ಅನೇಕ ಗ್ರಾಹಕರಿಗೆ ಇಎಂಐ (EMI) ಬರಲು ಶುರುವಾದಾಗ, (ವಿಸ್ತಾರ Money Guide) ಸಾಲ ತೀರಿಸುವುದು ತಲೆನೋವಾಗಿ ಪರಿಣಮಿಸುತ್ತದೆ. ಇಲ್ಲಿದೆ ಇದಕ್ಕೆ ಪರಿಹಾರ ಸೂತ್ರ.
ಡೌನ್ಪೇಮೆಂಟ್ ಹೆಚ್ಚಳ: ನೀವು ವೇತನದಾರರಾಗಿದ್ದರೆ, ಸಂಬಳವನ್ನೇ ಆದಾಯ ಮೂಲವಾಗಿ ನೆಚ್ಚಿಕೊಂಡಿದ್ದರೆ, ಡೌನ್ಪೇಮೆಂಟ್ ಅನ್ನು ಹೆಚ್ಚು ಕೊಡುವುದು ಉತ್ತಮ. ಇದರಿಂದ ಇಎಂಐ ಕಡಿಮೆಯಾಗುತ್ತದೆ. ಇದು ನಿಮ್ಮ ಮಾಸಿಕ ಬಜೆಟ್ ಮೇಲೆ ಹೆಚ್ಚಿನ ಬೀರುವ ಪರಿಣಾಮ ಸೀಮಿತವಾಗಿರುತ್ತದೆ. ಸೀಮಿತ ಅವಧಿಯ ಸಾಲದಿಂದ ಒಟ್ಟಾರೆ ಬಡ್ಡಿಯ ವೆಚ್ಚವನ್ನೂ ಇಳಿಸುತ್ತೆ.
ಹೆಚ್ಚುವರಿ ಇಎಂಐ ಪಾವತಿಸಿ: ವೇತನದಾರರು ತಮ್ಮ ಇಎಂಐನಲ್ಲಿ ಹೆಚ್ಚುವರಿ ಮೊತ್ತವನ್ನು ಪಾವತಿಸುವ ಮೂಲಕ ಸಾಲವನ್ನು ಬೇಗ ತೀರಿಸಬಹುದು. ಉದಾಹರಣೆಗೆ ಇಎಂಐನಲ್ಲಿ 1000 ರೂ. ಹೆಚ್ಚಿಸಿದರೆ ವಾರ್ಷಿಕ ಒಟ್ಟು 12,000 ಹೆಚ್ಚು ನೀಡಿದಂತಾಗುತ್ತದೆ. ಇದರಿಂದ ಒಟ್ಟಾರೆ ನೀಡಬೇಕಾದ ಬಡ್ಡಿಯ ವೆಚ್ಚ ಕಡಿಮೆಯಾಗುತ್ತದೆ.
ಅಫರ್ಡಬಲ್ ಕಾರಿನ ಆಯ್ಕೆ: ನಿಮ್ಮ ನೆರೆಮನೆಯವರ ದುಬಾರಿ ಕಾರನ್ನು ಹೋಲಿಸಿಕೊಂಡು, ಅದೇ ಕಾರು ಬೇಕು ಎಂದು ಲೆಕ್ಕಾಚಾರ ಹಾಕಿಕೊಳ್ಳದಿರುವುದು ಸೂಕ್ತ. ನಿಮ್ಮ ಅಗತ್ಯ ಮತ್ತು ಬಜೆಟ್ ಅನ್ನು ಗಮನಿಸಿ ಆಯ್ಕೆ ಮಾಡಿಕೊಳ್ಳಿ.
ಅವಧಿಗೆ ಮುನ್ನ ಮರು ಪಾವತಿ: ಸಾಧ್ಯವಾದಷ್ಟು ಬೇಗ ಸಾಲ ಮರು ಪಾವತಿಗೆ ಆದ್ಯತೆ ನೀಡಿ. ಹೀಗಿದ್ದರೂ 30% ಆದಾಯ ತೆರಿಗೆ ಶ್ರೇಣಿಯಲ್ಲಿ ಇರುವವರು ಪ್ರಿ-ಪೇಮೆಂಟ್ ಮಾಡದಿರುವುದು ಸೂಕ್ತ. ಏಕೆಂದರೆ ಅವರು ತೆರಿಗೆ ಹೊರೆ ಇಳಿಸಲು ಕಾರು ಸಾಲವನ್ನು ಬಳಸಬಹುದು. ಇಂಟರೆಸ್ಟ್ ಎಕ್ಸ್ಪೆನ್ಸ್ ಕ್ಲೇಮ್ ಮಾಡಬಹುದು.
ನೀವು ಎಲೆಕ್ಟ್ರಿಕ್ ಕಾರು ಖರೀದಿಸುವುದಿದ್ದರೆ ಕೆಲವು ತೆರಿಗೆ ಅನುಕೂಲ ಪಡೆಯಬಹುದು. ಇದರಿಂದ ನಿಮ್ಮ ಬಡ್ಡಿ ದರ 6% ಕ್ಕಿಂತ ಕಡಿಮೆಯಾಗುತ್ತದೆ.