ಏನಿದು ಪೆನ್ನಿ ಸ್ಟಾಕ್ಸ್?
ಷೇರು ಮಾರುಕಟ್ಟೆಯಲ್ಲಿ ವ್ಯವಹಾರ ಮಾಡುವವರಿಗೆ ಪೆನ್ನಿ ಸ್ಟಾಕ್ಗಳು ಅಂದರೆ ಪರಿಚಿತವಾಗಿರುತ್ತವೆ. ಅತಿ ಕಡಿಮೆ ಬೆಲೆಗೆ ಸಿಗುವ ಷೇರುಗಳಿವು. ಈ ಕಂಪನಿಗಳ ಷೇರು ಮಾರುಕಟ್ಟೆ ಬಂಡವಾಳ ಮೌಲ್ಯ, ಬಿಸಿನೆಸ್ ಮಾದರಿಗಳು ಕೂಡ ದುರ್ಬಲವಾಗಿರುತ್ತವೆ. ಹೀಗಿದ್ದರೂ, ಕೆಲವು ಪೆನ್ನಿ ಸ್ಟಾಕ್ಗಳು ಹೂಡಿಕೆದಾರರಿಗೆ ಕ್ಷಿಪ್ರವಾಗಿ ಭರ್ಜರಿ ಆದಾಯ ತಂದುಕೊಡಬಲ್ಲುದು. ಹೂಡಿಕೆದಾರರಿಗೆ ಅವರ ಹೂಡಿಕೆಯ ಹಲವಾರು ಪಟ್ಟು ಲಾಭ ಕೊಡುವ ಷೇರುಗಳನ್ನು ಮಲ್ಟಿಬ್ಯಾಗರ್ ಸ್ಟಾಕ್ಸ್ ಎನ್ನುತ್ತಾರೆ. ಈ ವರ್ಷ ಅತ್ಯಲ್ಪ ಅವಧಿಯಲ್ಲಿ ಮಲ್ಟಿ ಬ್ಯಾಗರ್ ಸ್ಟಾಕ್ಸ್ಗಳಾದ ಪೆನ್ನಿ ಸ್ಟಾಕ್ಸ್ಗಳ ಬಗ್ಗೆ ತಿಳಿದುಕೊಳ್ಳೋಣ.
ಹೇಮಾಂಗ್ ರಿಸೋರ್ಸ್ ಲಿಮಿಟೆಡ್ (Hemang Resources Ltd) ಕಲ್ಲಿದ್ದಲು ವ್ಯಾಪಾರ ಹಾಗೂ ನಿರ್ಮಾಣ ವಲಯದ ಕಂಪನಿ. ಈ ಕಂಪನಿಯ ಷೇರು ದರ 2022ರಲ್ಲಿ 20 ಪಟ್ಟು ವೃದ್ಧಿಸಿದೆ. ಈ ವರ್ಷದ ಆರಂಭದಲ್ಲಿ 3 ರೂ.ಗಳಿದ್ದ ಷೇರು ದರ ಈಗ 70 ರೂ.ಗೆ ಏರಿಕೆಯಾಗಿದೆ. ಕಂಪನಿಯು ಆಮದು ಮಾಡಿದ ಹಾಗೂ ಇಲ್ಲಿಯೇ ತೆಗೆದ ಕಲ್ಲಿದ್ದಲನ್ನು ಮಾರಾಟ ಮಾಡುತ್ತದೆ. ನಿರ್ಮಾಣ, ಲಾಜಿಸ್ಟಿಕ್ಸ್ ವಲಯದಲ್ಲೂ ತೊಡಗಿಸಿಕೊಂಡಿದೆ.
ಕೈಸರ್ ಕಾರ್ಪೊರೇಷನ್: (Kaiser Corporation) ಕೈಸರ್ ಕಾರ್ಪೊರೇಷನ್ ಪ್ರಿಂಟಿಂಗ್ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ಸಣ್ಣ ಮತ್ತು ಮಧ್ಯಮ ಕಾರ್ಪೊರೇಟ್ ಲೇಬಲ್ಸ್ ಮತ್ತು ಕಾರ್ಟೂನ್ ಮುದ್ರಣದಲ್ಲಿ ತೊಡಗಿಸಿಕೊಂಡಿದೆ. 2022ರ ಜನವರಿಯಲ್ಲಿ 3 ರೂ. ಆಸುಪಾಸಿನಲ್ಲಿದ್ದ ಷೇರು ದರ ಈಗ 52 ರೂ. ಆಸುಪಾಸಿನಲ್ಲಿದೆ.
ಅಲೈಯನ್ಸ್ ಇಂಟಿಗ್ರೇಟೆಡ್ ಮೆಟಾಲಿಕ್ಸ್ (Alliance Integrated Metaliks) ಈ ಕಂಪನಿಯ ಷೇರು ದರ ಜನವರಿ 3ರಂದು 2 ರೂ. ಇತ್ತು. ಈಗ ೪೨ ರೂ.ಗೆ ಏರಿದೆ.
ಸೋನಾಲ್ ಅಡೇಸಿವ್ ಲಿಮಿಟೆಡ್ (Sonal Adhesives ltd) ಈ ಕಂಪನಿ ನಾನಾ ವಿಧದ ಅಡೇಸಿವ್ ಟೇಪ್ಗಳನ್ನು ಉತ್ಪಾದಿಸುತ್ತದೆ. ಈ ವರ್ಷ ಆರಂಭದಲ್ಲಿ 10 ರೂ.ಗಳಲ್ಲಿದ್ದ ಕಂಪನಿಯ ಷೇರು ದರ ಈಗ 102 ರೂ.ಗೆ ಏರಿದೆ.
ಕೆಬಿಎಸ್ ಇಂಡಿಯಾ ಲಿಮಿಟೆಡ್ (KBS India Ltd) ಈ ಕಂಪನಿಯ ಷೇರು ದರ 2022ರ ಆರಂಭದಲ್ಲಿ 10 ರೂ. ಇತ್ತು. ಈಗ ೧೦೬ ರೂ.ಗೆ ಏರಿಕೆಯಾಗಿದೆ.
ಷೇರು | ಜನವರಿ 2022ರಲ್ಲಿ ದರ | 2022ರ ಡಿಸೆಂಬರ್ನಲ್ಲಿ ದರ |
ಕೈಸರ್ ಕಾರ್ಪೊರೇಷನ್ | 3 ರೂ. | 52 ರೂ. |
ಅಲೈಯನ್ಸ್ ಇಂಟಿಗ್ರೇಟೆಡ್ ಮೆಟಾಲಿಕ್ಸ್ | 2 ರೂ. | 42 ರೂ. |
ಹೇಮಾಂಗ್ ರಿಸೋರ್ಸಸ್ | 3 ರೂ. | 70 ರೂ. |
ಸೋನಾಲ್ ಅಡೇಸಿವ್ | 10 ರೂ. | 102 ರೂ. |
ಕೆಬಿಎಸ್ ಇಂಡಿಯಾ | 10 ರೂ. | 106 ರೂ. |