ಈಗಿನ ದಿನಗಳಲ್ಲಿ ಆಧಾರ್ ಕಾರ್ಡ್ ನಾನಾ ಉದ್ದೇಶಗಳಿಗೆ ಗುರುತಿನ ಚೀಟಿಯಾಗಿ ಬಳಕೆಯಾಗುತ್ತದೆ. ಸರ್ಕಾರಿ ಯೋಜನೆಗಳು, ಸಬ್ಸಿಡಿ, ಬ್ಯಾಂಕ್ ಖಾತೆ ತೆರೆಯಲು, ಪಾಸ್ ಪೋರ್ಟ್ ಮಾಡಿಸಲು ಅಗತ್ಯ. ವಯಸ್ಕರಿಗೆ ಮುಖ್ಯವಾಗಿ ಬೇಕಿದ್ದರೂ, ಈಗ ಶಾಲಾ ಮಕ್ಕಳಿಗೂ ಆಧಾರ್ ಕಾರ್ಡ್ ( miner Aadhaar card ) ಮಾಡಿಸಬಹುದು. ಶಾಲೆಗಳಲ್ಲೂ ಆಧಾರ್ ಕಾರ್ಡ್ ಕೇಳುತ್ತಾರೆ. ಹಾಗಾದರೆ (Aadhaar card) ಅಪ್ರಾಪ್ತರಿಗೆ ಅಥವಾ ಸಣ್ಣ ವಯಸ್ಸಿನ ಮಕ್ಕಳಿಗೆ ಆಧಾರ್ ಕಾರ್ಡ್ ಮಾಡಿಸುವುದಿದ್ದರೆ ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ Step -by-step ವಿವರ.
ಆಧಾರ್ ಕಾರ್ಡ್ 12 ಅಂಕಿಗಳ ವಿಶಿಷ್ಟ ಗುರುತಿನ ಚೀಟಿಯಾಗಿದ್ದು (12 digit unique identification number) ಭಾರತ ಸರ್ಕಾರ ತನ್ನ ನಾಗರಿಕರಿಗೆ ನೀಡುತ್ತದೆ. ಅಪ್ರಾಪ್ತರಿಗೆ ಆಧಾರ್ ಕಾರ್ಡ್ ಮಾಡಿಸಲು ಅರ್ಜಿ ಸಲ್ಲಿಸುವ ವಿಧಾನ ಇಂತಿದೆ.
step 1: ಅಗತ್ಯವಿರುವ ದಾಖಲೆಗಳನ್ನು ಸಂಗ್ರಹಿಸಿ:
ಅಪ್ರಾಪ್ತರಿಗೆ ಆಧಾರ್ ಕಾರ್ಡ್ ಮಾಡಿಸಲು ಕೆಳಕಂಡ ದಾಖಲೆಗಳು ಅಗತ್ಯ:
- ಮಗುವಿನ ಜನನ ಪ್ರಮಾಣ ಪತ್ರ
- ಪೋಷಕರ ಆಧಾರ್ ಕಾರಡ್ ಅಥವಾ ಇತರ ಸರ್ಕಾರಿ ಐಡಿ ಪ್ರೂಫ್
- ಪೋಷಕರ ವಿಳಾಸದ ದೃಢೀಕರಣ ದಾಖಲೆ ( ವಿದುತ್ ಬಿಲ್, ನೀರಿನ ಬಿಲ್, ಟೆಲಿಫೋನ್ ಬಿಲ್, ಗ್ಯಾಸ್ ಬಿಲ್)
- ಮಗುವಿನ ಪಾಸ್ ಪೋರ್ಟ್ ಗಾತ್ರದ ಫೋಟೊ
step 2: ಸಮೀಪದ ಆಧಾರ್ ಎನ್‌ರೋಲ್ ಮೆಂಟ್ ಸೆಂಟರ್ ಪತ್ತೆ ಹಚ್ಚಿ:
ಎಲ್ಲ ದಾಖಲೆಗಳನ್ನು ಸಂಗ್ರಹಿಸಿದ ಬಳಿಕ ನೀವು ನಿಮಗೆ ಸಮೀಪದ ಆಧಾರ್ ಎನ್‌ರೋಲ್‌ಮೆಂಟ್ ಸೆಂಟರ್ (Aadhaar enrolment Centre) ಪತ್ತೆ ಹಚ್ಚಬೇಕು. UIDAI ವೆಬ್‌ಸೈಟ್ https://uidai.gov.in ಮೂಲಕ ಸಮೀಪದ ಆಧಾರ್ ಎನ್ ರೋಲ್ ಮೆಂಟ್ ಸೆಂಟರ್ ಅನ್ನು ಪತ್ತೆ ಹಚ್ಚಬಹುದು.
step 3:
ಎನ್‌ರೋಲ್‌ಮೆಂಟ್ ಸೆಂಟರ್ ಪತ್ತೆ ಹಚ್ಚಿದ ಬಳಿಕ ಮಗುವಿನಿಂದಿಗೆ ತೆರಳಿ. ಅಗತ್ಯ ದಾಖಲೆಗಳು ಜತೆಗಿರಲಿ. ಮಗುವಿನ ಹೆಸರು, ಜನ್ಮ ದಿನ, ವಿಳಾಸ ಕೇಳುತ್ತಾರೆ. ಮಗು ಅನಿವಾಸಿ ಭಾರತೀಯ (ಎನ್‌ಆರ್‌ಐ) ಆಗಿದ್ದರೆ ಮಗುವಿನ ಭಾರತೀಯ ಪಾಸ ಪೋರ್ಟ್ ಅವಶ್ಯಕ.
step 4:
ಎನ್‌ರೋಲ್‌ಮೆಂಟ್ ಫಾರ್ಮ್ ಭರ್ತಿಗೊಳಿಸಿದ ಬಳಿಕ ಮಗುವಿನ ಭಾವಚಿತ್ರ ತೆಗೆದುಕೊಳ್ಳುತ್ತಾರೆ. ಬೆರಳಚ್ಚು, ನೇತ್ರದ ಸ್ಕ್ಯಾನ್ ತೆಗೆದುಕೊಳ್ಳುತ್ತಾರೆ. 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಗುವಿನ ನೇತ್ರದ ಸ್ಕ್ಯಾನ್ ಮಾಡುವುದಿಲ್ಲ. ಐದು ವರ್ಷದ ಬಳಿಕ ಅಪ್ ಡೇಟ್ ಮಾಡಬೇಕಾಗುತ್ತದೆ.
step 5:
ಬಯೊಮೆಟ್ರಿಕ್ ಡೇಟಾ ಸಂಗ್ರಹಿಸಿದ ಬಳಿಕ acknowledgement slip ನೀಡುತ್ತಾರೆ.
step 6:
ಎನ್‌ರೋಲ್‌ಮೆಂಟ್ ಪ್ರಕ್ರಿಯೆ ಪೂರ್ಣವಾದ ಬಳಿಕ ಆಧಾರ್ ಕಾರ್ಡ್ ಪಡೆಯಲು ಕಾಯಬೇಕಾಗುತ್ತದೆ. ಅರ್ಜಿಯಲ್ಲಿ ನಮೂದಿಸಿದ ವಿಳಾಸಕ್ಕೆ ಆಧಾರ್ ಕಾರ್ಡ್ ಅನ್ನು ಕಳಿಸುತ್ತಾರೆ. ಎನ್‌ರೋಲ್‌ಮೆಂಟ್ ಆದ 90 ದಿನಗಳೊಳಗೆ ಸಾಮಾನ್ಯವಾಗಿ ಆಧಾರ್ ಕಾರ್ಡ್ ಸಿಗುತ್ತದೆ.
ಭಾರತದಲ್ಲಿ ಅಪ್ರಾಪ್ತರಿಗೆ ಆಧಾರ್ ಕಾರ್ಡ್ ಮಾಡಿಸುವ ಪ್ರಕ್ರಿಯೆ ಸರಳವಾಗಿದ್ದು, ಅಗತ್ಯ ದಾಖಲೆಗಳೊಂದಿಗೆ ಸಮೀಪದ ಆಧಾರ್ ಎನ್‌ರೋಲ್‌ಮೆಂಟ್ ಸೆಂಟರ್‌ಗೆ ತೆರಳಿ ಅರ್ಜಿ ಸಲ್ಲಿಸಬಹುದು.