ನವ ದೆಹಲಿ: ಕೇಂದ್ರ ಸರ್ಕಾರ 10 ವರ್ಷಕ್ಕೂ ಹಳೆಯ ಆಧಾರ್ ಕಾರ್ಡ್‌ಗಳನ್ನು ಪರಿಷ್ಕರಣೆ ಅಥವಾ ಅಪ್‌ಡೇಟ್ ಮಾಡಲು ನಿಗದಿಪಡಿಸಿದ್ದ ಜೂನ್ 14ರ ಗಡುವನ್ನು 2023ರ ಸೆಪ್ಟೆಂಬರ್ 14 ತನಕ ಮುಂದೂಡಿದೆ. (Aadhaar Card Update) ಈ ಡೆಡ್‌ಲೈನ್ ಒಳಗೆ ಆಧಾರ್ ಕಾರ್ಡ್‌ನಲ್ಲಿ ನಿಮ್ಮ ವಿಳಾಸ, ಹೆಸರು ಮತ್ತು ಇತರ ಮಾಹಿತಿಗಳನ್ನು ಅಪ್ ಡೇಟ್ ಮಾಡುವುದು ಕಡ್ಡಾಯವಾಗಿದೆ.
ಹತ್ತು ವರ್ಷ ಹಳೆಯ ಆಧಾರ್ ಕಾರ್ಡ್ ಅನ್ನು ಪರಿಷ್ಕರಣೆ ಮಾಡಲು ಮರೆಯದಿರಿ ಎಂದು ಸರ್ಕಾರ ಜನತೆಗೆ ಮನವಿ ಮಾಡಿದೆ. ಸಾಮಾನ್ಯವಾಗಿ ಆಧಾರ್ ಅಪ್ ಡೇಟ್ ಮಾಡಲು 50 ರೂ ಶುಲ್ಕ ತಗಲುತ್ತದೆ. ಆದರೆ ಆಧಾರ್‌ನ ಅಧಿಕೃತ ವೆಬ್‌ಸೈಟ್ ಮೂಲಕ ಅಪ್ ಡೇಟ್ ಮಾಡಿದರೆ ಉಚಿತವಾಗುತ್ತದೆ. https://myaadhaar.uidai.gov.in
ಆನ್‌ಲೈನ್‌ನಲ್ಲಿ ಆಧಾರ್ ಅಪ್‌ಡೇಟ್ ಮಾಡಲು ಈ ಸ್ಟೆಪ್ಸ್ ಫಾಲೋ ಮಾಡಿ….
- ಮೊದಲಿಗೆ UIDAI ಜಾಲತಾಣದಲ್ಲಿ (https://myaadhaar.uidai.gov.in) Aadhaar Self Service (ಆಧಾರ್ ಸೆಲ್ಪ್ ಸರ್ವಿಸ್) ಪೋರ್ಟಲ್ಗೆ ಭೇಟಿ ನೀಡಿ.
- ಡಾಕ್ಯುಮೆಂಟ್ ಅಪ್‌ಡೇಟ್ (Document Update)ಮೇಲೆ ಕ್ಲಿಕ್ ಮಾಡಿ ಮತ್ತು ಈಗಿರುವ ದಾಖಲೆ, ಮಾಹಿತಿಯನ್ನು ಖಚಿತಪಡಿಸಿ.
- ಡ್ರಾಪ್-ಡೌನ್ ಪಟ್ಟಿಯನ್ನು ಬಳಸಿ, ಪರಿಶೀಲನೆಗಾಗಿ ಮೂಲ ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಆಯ್ಕೆಮಾಡಿ ಮತ್ತು ಅಪ್ಲೋಡ್ ಮಾಡಿ.
- ಈ ವೇಳೆ ನೀಡಲಾಗುವ ಸರ್ವೀಸ್ ರಿಕ್ವೆಸ್ಟ್ ನಂಬರ್ ನೋಟ್ ಮಾಡಿಟ್ಟುಕೊಳ್ಳಿ. ಇದರಿಂದ ಅಪ್‌ಡೇಟ್ ಪ್ರೊಸೆಸಿಂಗ್ ಟ್ರ್ಯಾಕ್ ಮಾಡಲು ಸಾಧ್ಯವಾಗುತ್ತದೆ.
- ಇಷ್ಟಾದರೆ, ನಿಮ್ಮ ಆನ್ಲೈನ್ ಆಧಾರ್ ಅಪ್‌ಡೇಟ್ ಪ್ರಕ್ರಿಯೆ ಪೂರ್ಣವಾಗುತ್ತದೆ.
ಇದನ್ನೂ ಓದಿ: Inflation rate: ಹಣದುಬ್ಬರದಿಂದ ಉದ್ಯಮಿಗಳು ಹೇಗೆ ಪ್ರಯೋಜನ ಪಡೆಯುತ್ತಾರೆ? ವೀಕ್ಷಿಸಿ ವಿಸ್ತಾರ ಮನಿ ಪ್ಲಸ್