Site icon Vistara News

Air ticket price | ಏರ್‌ ಟಿಕೆಟ್‌ ದರ ನಿಗದಿಯ ಮಿತಿ ಇಂದಿನಿಂದ ರದ್ದು, ವಿಮಾನಯಾನ ಅಗ್ಗ ನಿರೀಕ್ಷೆ

airline

ನವ ದೆಹಲಿ: ಕೇಂದ್ರ ಸರ್ಕಾರ ದೇಶೀಯ ಏರ್‌ ಟಿಕೆಟ್‌ ದರಗಳ ಮೇಲೆ ಎರಡು ವರ್ಷಗಳ ಹಿಂದೆ ವಿಧಿಸಿದ್ದ ದರ ನಿಗದಿಯ ಮಿತಿಯನ್ನು ಇಂದಿನಿಂದ ರದ್ದುಪಡಿಸಿದೆ. (Air ticket price) ಏರ್‌ಲೈನ್‌ಗಳು ದರ ನಿಗದಿಯ ಸ್ವಾತಂತ್ರ್ಯವನ್ನು ಇದೀಗ ಗಳಿಸಿವೆ.

ಪ್ರತಿ ನಿತ್ಯ ವಿಮಾನಯಾನಕ್ಕೆ ಇರುವ ಬೇಡಿಕೆ, ವೈಮಾನಿಕ ಇಂಧನದ ದರವನ್ನು ಗಮನದಲ್ಲಿ ಇಟ್ಟುಕೊಂಡು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದತ್ಯ ಸಿಂಧ್ಯಾ ತಿಳಿಸಿದ್ದಾರೆ. ಕೇಂದ್ರ ಸರ್ಕಾರ ಕೋವಿಡ್‌ ಬಿಕ್ಕಟ್ಟಿನ ಸಂದರ್ಭ ಎರಡು ತಿಂಗಳಿನ ಲಾಕ್‌ ಡೌನ್‌ ಬಳಿಕ ೨೦೨೦ರ ಮೇ ೨೫ರಿಂದ ಏರ್‌ ಟಿಕೆಟ್‌ಗಳಿಗೆ ದರ ನಿಗದಿಯ ಮಿತಿಯನ್ನು ವಿಧಿಸಿತ್ತು. ಅದರ ಪ್ರಕಾರ ೪೦ ನಿಮಿಷಕ್ಕಿಂತ ಕಡಿಮೆ ಅವಧಿಯ ವಿಮಾನ ಹಾರಾಟದಲ್ಲಿ ೨,೯೦೦ ರೂ.ಗಿಂತ ಕಡಿಮೆ ಹಾಗೀ ೮,೮೦೦ ರೂ.ಗಿಂತ ಹೆಚ್ಚಿನ ದರವನ್ನು ವಿಧಿಸುವಂತಿರಲಿಲ್ಲ. ಆದರೆ ದೀರ್ಘಕಾಲ ಇಂಥ ಮಿತಿಯನ್ನು ವಿಧಿಸುವುದರಿಂದ ಏರ್‌ಲೈನ್‌ಗಳಿಗೆ ನಷ್ಟವಾಗುತ್ತದೆ. ಮಾರುಕಟ್ಟೆಯ ಸ್ಪರ್ಧಾತ್ಮಕತೆಯ ಅನುಕೂಲ ಏರ್‌ಲೈನ್‌ಗಳಿಗೆ ಮತ್ತು ಪ್ರಯಾಣಿಕರಿಗೆ ಸಿಗುವುದಿಲ್ಲ. ಹೀಗಾಗಿ ದರ ನಿಗದಿಯ ಮಿತಿ ರದ್ದತಿಯನ್ನು ಸಾರ್ವತ್ರಿಕವಾಗಿ ಸ್ವಾಗತಿಸಲಾಗಿದೆ.

ರಷ್ಯಾ-ಉಕ್ರೇನ್‌ ಸಂಘರ್ಷದ ಪರಿಣಾಮ ದಾಖಲೆಯ ಮಟ್ಟಕ್ಕೆ ಏರಿದ್ದ ಎಟಿಎಫ್‌ ದರದಲ್ಲಿ ಇತ್ತೀಚೆಗೆ ದರ ಇಳಿಕೆಯ ಪ್ರವೃತ್ತಿ ಕಂಡು ಬಂದಿದೆ.

ಇದನ್ನು ಓದಿ: ವಿಸ್ತಾರ Explainer |‌ ಏರ್‌ ಟಿಕೆಟ್‌ ದರದ ಮಿತಿ ತೆಗೆದರೆ ಬೆಲೆಗಳು ಇಳಿಯುವುದು ಹೇಗೆ?

Exit mobile version