ಕ್ರೆಡಿಟ್ ಕಾರ್ಡ್‌ದಾರರಿಗೆ (Credit Card ) ಯುಪಿಐ (Unified Payment Interface) ಮೂಲಕ ಸರಕು ಮತ್ತು ಸೇವೆಗಳ ಖರೀದಿಯಲ್ಲಿ ಪೇಮೆಂಟ್ ಮಾಡಲು ನ್ಯಾಶನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಅನುಮತಿ ನೀಡಿದೆ.
ಹಣಕಾಸು ತಂತ್ರಜ್ಞಾನ ಕಂಪನಿ ರೇಜೊರ್‌ಪೇ ಈ ಸಂಬಂಧ ಎನ್‌ಪಿಸಿಐ ಜತೆ ಪಾಲುದಾರಿಕೆ ವಹಿಸಿದೆ. ಈ ಹಿನ್ನೆಲೆಯಲ್ಲಿ ರೋಜರ್ ಪೇ ಪೇಮೆಂಟ್ ಗೇಟ್‌ವೇ ಇದೀಗ ತನ್ನ ಮರ್ಚೆಂಟ್‌ಗಳಿಗೆ ರುಪೇ ಕ್ರೆಡಿಟ್‌ಕಾರ್ಡ್ ಮೂಲಕ ಯುಪಿಐ ಪೇಮೆಂಟ್ ಅನ್ನು ಸ್ವೀಕರಿಸಲು ಅನುಮತಿ ನೀಡಿದೆ. ರೋಜೊರ್‌ಪೇ ಈ ಸಂಬಂಧ ಎಕ್ಸಿಸ್ ಬ್ಯಾಂಕ್ ಜತೆಗೆ ಪಾಲುದಾರಿಕೆ ಒಪ್ಪಂದ ಮಾಡಿಕೊಂಡಿದೆ. ವ್ಯಾಪಾರಿಗಳು, ವರ್ತಕರು ಈಗ ರೋಜರ್ ಪೇ ಮತ್ತು ಯುಪಿಐ ಸಿಸ್ಟಮ್‌ನಲ್ಲಿ ರುಪೇ ಕ್ರೆಡಿಟ್ ಕಾರ್ಡ್ ಮೂಲಕ ಪೇಮೆಂಟ್ ಅನ್ನು ಸ್ವೀಕರಿಸುತ್ತಾರೆ.
ಯುಪಿಐ ಜತೆಗೆ ಕ್ರೆಡಿಟ್ ಕಾರ್ಡ್ ಲಿಂಕ್ ಮಾಡುವುದು ಹೇಗೆ?
ಯುಪಿಐ ಜತೆಗೆ ಕ್ರೆಡಿಟ್ ಕಾರ್ಡ್ ಲಿಂಕ್ ಮಾಡುವುದರಿಂದ ಹಲವು ಪ್ರಯೋಜನ ಪಡೆಯಬಹುದು. ಮುಖ್ಯವಾಗಿ ನೀವು ಎಲ್ಲಿಗೆ ಹೋಗುವಾಗಲೂ ಅದನ್ನು ತೆಗೆದುಕೊಂಡು ಹೋಗುವ ಅಗತ್ಯ ಇರುವುದಿಲ್ಲ. ಯುಪಿಐ ಮೂಲಕ ಕ್ರೆಡಿಟ್ ಕಾರ್ಡ್ ಪೇಮೆಂಟ್‌ಗಳು ಸರಳ ಮತ್ತು ಅನುಕೂಲಕರವಾಗುತ್ತದೆ. ಈ ಪೇಮೆಂಟ್ ಮಾಡುವಾಗ ನೀವು ಡೆಬಿಟ್ ಕಾರ್ಡ್ ಆಯ್ಕೆಯ ಬದಲು ಕ್ರೆಡಿಟ್ ಕಾರ್ಡ್ ಅನ್ನು ಆಯ್ಕೆ ಮಾಡಬೇಕಾಗುತ್ತದೆ. ಯುಪಿಐ ಜತೆ ಕ್ರೆಡಿಟ್ ಕಾರ್ಡ್ ಲಿಂಕ್ ಮಾಡುವುದು ಹೀಗೆ:
1. ಮೊದಲು UPI ಆ್ಯಪ್ ಅನ್ನು ತೆರೆಯಿರಿ.
2. ಬಳಿಕ Add Card ಆಯ್ಕೆಯನ್ನು ಮಾಡಿ.
3. ನಿಮ್ಮ ಕ್ರೆಡಿಟ್ ಕಾರ್ಡ್ ಮಾಹಿತಿಯನ್ನು ಭರ್ತಿಗೊಳಿಸಿ.
4. ಒಟಿಪಿ ಪ್ರಕ್ರಿಯೆ ಪೂರ್ಣಗೊಳಿಸಿ.
5. ನಿಮ್ಮ ಕಾರ್ಡ್ ಅನ್ನು ವ್ಯಾಲಿಡೇಟ್ ಮಾಡಿ.
6. ಆಗ ನೀವು ಪೇಮೆಂಟ್ ಯುಪಿಐನಲ್ಲಿ ಕ್ರೆಡಿಟ್ ಕಾರ್ಡ್ ಆಯ್ಕೆಯನ್ನು ಕಾಣಬಹುದು.