Site icon Vistara News

Credit card dues : ಕ್ರೆಡಿಟ್‌ ಕಾರ್ಡ್‌ ಬಾಕಿ 2 ಲಕ್ಷ ಕೋಟಿ ರೂ.ಗೆ ಏರಿಕೆ, ಕಾರಣವೇನು?

credit cards

ದೇಶದಲ್ಲಿ ಮೊದಲ ಬಾರಿಗೆ ಕ್ರೆಡಿಟ್‌ ಕಾರ್ಡ್‌ಗಳಲ್ಲಿ ಮರು ಪಾವತಿಯಾಗದಿರುವ ಸಾಲದ ಬಾಕಿಯ ಮೊತ್ತ ಏಪ್ರಿಲ್‌ನಲ್ಲಿ 2 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. ( Credit card dues ) ಬ್ಯಾಂಕ್‌ಗಳು ದೇಶದಲ್ಲಿ ವಿತರಿಸಿರುವ ಒಟ್ಟು ಸಾಲದಲ್ಲಿ 30% ಕ್ರೆಡಿಟ್‌ ಕಾರ್ಡ್‌ ಸಾಲಗಳಾಗಿವೆ. ಕ್ರೆಡಿಟ್‌ ಕಾರ್ಡ್‌ ಬಾಕಿ ಮೊತ್ತ ಎರಡು ಲಕ್ಷ ಕೋಟಿ ರೂ.ಗೆ ಏರಿಕೆ ಆಗಿರುವುದಕ್ಕೆ ಕಳವಳ ವ್ಯಕ್ತಪಡಿಸಬೇಕಿಲ್ಲ ಎಂದು ಆರ್‌ಬಿಐ ತಿಳಿಸಿದೆ.

ಆರ್‌ಬಿಐ ಪ್ರಕಾರ ಕ್ರೆಡಿಟ್‌ ಕಾರ್ಡ್‌ ಬ್ಯಾಲೆನ್ಸ್‌ 2023ರ ಏಪ್ರಿಲ್‌ನಲ್ಲಿ 2,00,258 ಕೋಟಿ ರೂ.ಗೆ ವೃದ್ಧಿಸಿದೆ. 2022ರ ಏಪ್ರಿಲ್‌ಗೆ ಹೋಲಿಸಿದರೆ 7% ಏರಿಕೆಯಾಗಿದೆ. ಹಾಗಂತ ಇದು ಸಾಲ ತೀರಿಸಲು ಸಾಧ್ಯವಾಗದೆ ಉಂಟಾಗಿರುವ ಪರಿಣಾಮವಲ್ಲ, ಕ್ರೆಡಿಟ್‌ ಕಾರ್ಡ್‌ ಬಳಕೆ ಹೆಚ್ಚಿರುವುದು ಹಾಗೂ ಹಣದುಬ್ಬರ ಕಾರಣ ಎಂದು ವರದಿಯಾಗಿದೆ. ಕಳೆದೊಂದು ವರ್ಷದಿಂದ ಗ್ರಾಹಕರು ಕ್ರೆಡಿಟ್‌ ಕಾರ್ಡ್‌ ಮೂಲಕ ಹೆಚ್ಚಿನ ಖರ್ಚು ವೆಚ್ಚಗಳನ್ನು ಮಾಡುತ್ತಿದ್ದಾರೆ ಎಂದು ಎಕ್ಸಿಸ್‌ ಬ್ಯಾಂಕ್‌ನ ಅಧ್ಯಕ್ಷ ಸಂಜೀವ್‌ ಮೋಘೆ ತಿಳಿಸಿದ್ದಾರೆ.

ಕ್ರೆಡಿಟ್‌ ಕಾರ್ಡ್‌ಗಳಿಗೆ ಸಂಬಂಧಿಸಿದ 8 ಸಾಮಾನ್ಯ ಶುಲ್ಕಗಳು:

ಕ್ರೆಡಿಟ್‌ ಕಾರ್ಡ್‌ಗಳು ಹಲವು ಶುಲ್ಕಗಳನ್ನು ಹೊಂದಿರುತ್ತವೆ. ಇವುಗಳ ಬಗ್ಗೆ ತಿಳಿದಿದ್ದರೆ ದೂರವಿಟ್ಟು ಖರ್ಚುವೆಚ್ಚ ನಿಯಂತ್ರಿಸಬಹುದು. 8 ಸಾಮಾನ್ಯ ಕ್ರೆಡಿಟ್‌ ಕಾರ್ಡ್‌ ಶುಲ್ಕಗಳು ಇಂತಿವೆ: ವಾರ್ಷಿಕ ಶುಲ್ಕ, ಬಡ್ಡಿ ದರ, ವಿಳಂಬ ಶುಲ್ಕ, ವಿದೇಶಿ ವರ್ಗಾವಣೆ ಶುಲ್ಕ, ಬ್ಯಾಲೆನ್ಸ್‌ ಟ್ರಾನ್ಸ್‌ಫರ್‌ ಶುಲ್ಕ, ಕ್ಯಾಶ್‌ ಅಡ್ವಾನ್ಸ್‌ ಫೀ, ಓವರ್‌ ದಿ ಲಿಮಿಟ್‌ ಫೀ, ರಿಟರ್ನ್ಡ್‌ ಪೇಮೆಂಟ್‌ ಫೀ.

ಕ್ರೆಡಿಟ್‌ ಕಾರ್ಡ್‌ದಾರರು ಪ್ರತಿ ವರ್ಷ ವಾರ್ಷಿಕ ಶುಲ್ಕಗಳನ್ನು ನೀಡಬೇಕಾಗುತ್ತದೆ. ಇದು ಕ್ರೆಡಿಟ್‌ಕಾರ್ಡಿನ ಫೀಚರ್‌ಗಳನ್ನು ಅವಲಂಬಿಸಿರುತ್ತದೆ. ಕಾರ್ಡ್‌ ಖರೀದಿ ದರದ 2%ರಿಂದ 5% ತನಕ ಇರುತ್ತದೆ. ಕ್ರೆಡಿಟ್‌ಕಾರ್ಡ್‌ಗಳು ಬಳಕೆದಾರರಿಗೆ ಎಟಿಎಂಗಳಿಂದ ನಗದು ಹಿಂತೆಗೆದುಕೊಳ್ಳಲು ಅವಕಾಶ ನೀಡುತ್ತದೆ. ಆದರೆ ಇದಕ್ಕೆ ಶುಲ್ಕ ವಿಧಿಸುತ್ತವೆ. ನೀವು ಕ್ರೆಡಿಟ್‌ಕಾರ್ಡ್‌ಗೆ ವಾರ್ಷಿಕ ಶುಲ್ಕ ನೀಡಲು ಬಯಸದಿದ್ದರೆ ಸರಳವಾಗಿ no-annual fee card ಆಯ್ಕೆ ಮಾಡಬಹುದು.

ನೀವು ಪ್ರತಿ ಬಿಲ್ಲಿಂಗ್‌ ಸೈಕಲ್‌ನಲ್ಲಿ (billing cycle) ಬಿಲ್‌ ಕುರಿತ ಹಣ ಪಾವತಿಸದಿದ್ದರೆ ಕ್ರೆಡಿಟ್‌ ಕಾರ್ಡ್‌ ಬಡ್ಡಿ ದರ ವಿಧಿಸುತ್ತವೆ. ಬಡ್ಡಿ ದರ ದೂರವಿಡಲು ಪ್ರತಿ ತಿಂಗಳು ಸಕಾಲಕ್ಕೆ ಪಾವತಿಸಿ.

2,000 ರೂ. ನೋಟು ಹಿಂತೆಗೆತದಿಂದ ಎಕಾನಮಿಗೆ ತೊಂದರೆ ಇಲ್ಲ:

ಚಲಾವಣೆಯಿಂದ 2000 ರೂ. ನೋಟನ್ನು ವಿತ್‌ಡ್ರಾವಲ್‌ ಮಾಡಿರುವುದರಿಂದ ಆರ್ಥಿಕತೆಗೆ ಯಾವುದೇ ಸಮಸ್ಯೆ ಇಲ್ಲ ಎಂದು ರಿಸರ್ವ್‌ ಬ್ಯಾಂಕ್‌ ಗವರ್ನರ್‌ ಶಕ್ತಿಕಾಂತ ದಾಸ್ ಅವರು ತಿಳಿಸಿದ್ದಾರೆ. ನಾನೊಂದು ವಿಷಯವನ್ನು ಸ್ಪಷ್ಟವಾಗಿ ಹೇಳುತ್ತೇನೆ. 2000 ರೂ. ನೋಟನ್ನು ಹಿಂತೆಗೆದುಕೊಂಡಿರುವುದರಿಂದ ಎಕಾನಮಿಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ದಾಸ್‌ ಹೇಳಿದ್ದಾರೆ.

Exit mobile version