ನವದೆಹಲಿ: ಬಂಗಾರ ಮತ್ತು ಬೆಳ್ಳಿಯ ದರದಲ್ಲಿ ಶುಕ್ರವಾರ ಯಾವುದೇ ದರ ವ್ಯತ್ಯಾಸವಾಗಿಲ್ಲ. (Gold price) ಉಭಯ ಲೋಹಗಳ ದರಗಳಲ್ಲಿ ಯಥಾಸ್ಥಿತಿ ಕಂಡು ಬಂದಿದೆ. ಆದರೆ ಪ್ಲಾಟಿನಮ್ ದರದಲ್ಲಿ ೧೦ ಗ್ರಾಮ್‌ಗೆ ೨೩೦ ರೂ. ಏರಿಕೆಯಾಗಿದೆ. (೨೩,೭೮೦ ರೂ.)
ಕಳೆದ ೫ ದಿನಗಳಲ್ಲಿ ೨೪ ಕ್ಯಾರಟ್ ಬಂಗಾರದ ದರ (೧೦ ಗ್ರಾಮ್)
ಆಗಸ್ಟ್ ೧೮: ೫೨,೩೧೦ ರೂ.
ಆಗಸ್ಟ್ ೧೭: ೫೨,೩೧೦ ರೂ.
ಆಗಸ್ಟ್ ೧೬: ೫೨,೪೨೦ ರೂ.
ಆಗಸ್ಟ್ ೧೫: ೫೨,೫೮೦ ರೂ.
ಬಂಗಾರದ ದರ ೬೦,೦೦೦ ರೂ.ಗೆ ಏರಿಕೆ?: ಚಿನ್ನದ ದರದಲ್ಲಿ ಮುಂದಿನ ವರ್ಷ ೧೦ ಗ್ರಾಮ್‌ಗೆ ೬೦,೦೦೦ ರೂ.ಗೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ತಜ್ಞರು ತಿಳಿಸಿದ್ದಾರೆ. ಮುಂದಿನ ವರ್ಷ ಚಿನ್ನದ ದರ ಪ್ರತಿ ಔನ್ಸ್‌ಗೆ ೨೦೦೦ ಡಾಲರ್‌ಗೆ ಏರಿಕೆಯಾಗುವ ಸಾಧ್ಯತೆ ಇದೆ. ಆಗ ಭಾರತದಲ್ಲಿ ಬಂಗಾರದ ದರ ೬೦,೦೦೦ ರೂ.ಗೆ ಏರಿಕೆಯಾಗಬಹುದು ಎಂದು ತಜ್ಞರು ಹೇಳಿದ್ದಾರೆ. ಹಣದುಬ್ಬರ ಇನ್ನೂ ಒಂದು ವರ್ಷ ಉನ್ನತ ಮಟ್ಟದಲ್ಲಿ ಮುಂದುವರಿಯುವ ಸಾಧ್ಯತೆ ಇರುವುದರಿಂದ ಬಂಗಾರದ ದರ ಏರುಗತಿಯಲ್ಲಿ ಮುಂದುವರಿಯುವ ನಿರೀಕ್ಷೆ ಇದೆ. ಅಂತಾರಾಷ್ಟ್ರೀಯ ದರವನ್ನು ಆಧರಿಸಿ ಸ್ಥಳೀಯ ದರಗಳು ನಿರ್ಧಾರವಾಗುತ್ತವೆ. ಏಕೆಂದರೆ ಭಾರತ ಬಂಗಾರವನ್ನು ಹೆಚ್ಚಾಗಿ ಆಮದು ಮಾಡಿಕೊಳ್ಳಬೇಕಾದ ಸ್ಥಿತಿಯಲ್ಲಿದೆ. ಸ್ಥಳೀಯವಾಗಿ ಉತ್ಪಾದನೆ ಅತ್ಯಲ್ಪ. ಆದರೆ ಬೇಡಿಕೆ ಗರಿಷ್ಠ.