ನಿಮ್ಮ ಆಧಾರ್ ಕಾರ್ಡ್ 10 ವರ್ಷಕ್ಕಿಂತ ಹಳೆಯದಾಗಿದೆಯೇ? ಹಾಗೂ ಅದರಲ್ಲಿ ನಿಮ್ಮ ವಿಳಾಸ ಮತ್ತು ಇತರ ಕೆವೈಸಿ ಮಾಹಿತಿಯನ್ನು ಕಳೆದ ಹತ್ತು ವರ್ಷದಲ್ಲಿ ಒಮ್ಮೆಯೂ ಪರಿಷ್ಕರಣೆ ಮಾಡಿಲ್ಲವೇ? ಹಾಗಾದರೆ, ಒಂದು ಸಲ ಪರಿಷ್ಕರಣೆ ಮಾಡಿಕೊಳ್ಳಬೇಕು ಎಂದು ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ ಯುಐಡಿಎಐ (Unique Identification Authority of India) (ವಿಸ್ತಾರ Money Guide | UIDAI )ತಿಳಿಸಿದೆ.
ಪ್ರತಿ 10 ವರ್ಷಕ್ಕೊಮ್ಮೆ ಆಧಾರ್ ಕಾರ್ಡ್ ಅನ್ನು ಕನಿಷ್ಠ ಒಂದು ಸಲ ಪರಿಷ್ಕರಣೆ ಮಾಡಬೇಕು ಎಂದು ಕೇಂದ್ರ ಸರ್ಕಾರ, ಈಗಾಗಲೇ ನಿಯಮಾವಳಿಗೆ ತಿದ್ದುಪಡಿ ತಂದಿದೆ. (Aadhaar Rules) ಈ ಬಗ್ಗೆ ಮತ್ತೊಮ್ಮೆ ಸಾರ್ವಜನಿಕರನ್ನು ಯುಐಡಿಎಐ ಮನವಿ ಮಾಡಿದೆ. ನಕಲಿ ಆಧಾರ್ ಕಾರ್ಡ್‌ಗಳಿದ್ದರೆ, ಅವುಗಳನ್ನು ನಿರ್ಮೂಲನೆ ಮಾಡಲೂ ಈ ಪ್ರಕ್ರಿಯೆ ಸಹಕಾರಿ.
ಆಧಾರ್‌ಗೆ ಪೂರಕವಾಗಿರುವ ದಾಖಲೆಗಳನ್ನು ಪರಿಷ್ಕರಣೆ ಮಾಡಬೇಕಾದ ಅಗತ್ಯ ಇದೆ. ಹತ್ತು ವರ್ಷಕ್ಕೆ ಕನಿಷ್ಠ ಒಂದು ಸಲ ಪರಿಷ್ಕರಣೆ ಮಾಡುವುದರಿಂದ ಸೆಂಟ್ರಲ್ ಐಡೆಂಟಿಟೀಸ್ ಡೇಟಾ ರೆಪೊಸಿಟರಿಯಲ್ಲಿ (CIDR) ಆಧಾರ್ ಸಂಬಂಧಿತ ಮಾಹಿತಿಗಳು ನಿಖರವಾಗಿ ಇರುತ್ತವೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ ತಿಳಿಸಿದೆ.
ಆಧಾರ್ ಕಾರ್ಡ್‌ದಾರರು ತಮ್ಮ ಗುರುತಿನ ಚೀಟಿ (Proof of Identity) ಮತ್ತು ವಿಳಾಸದ ದೃಢೀಕರಣ (Proof of Address) ಕುರಿತ ದಾಖಲಾತಿಗಳನ್ನು ಸಲ್ಲಿಸಬೇಕಾಗುತ್ತದೆ ಎಂದು ಅಧಿಸೂಚನೆ ತಿಳಿಸಿದೆ.
ಆನ್‌ಲೈನ್ ಮೂಲಕ ಪರಿಷ್ಕರಣೆ ಸಾಧ್ಯ: ಅಧಿಸೂಚನೆಯ ಪ್ರಕಾರ ಆಧಾರ್ ಕಾರ್ಡ್ ಪರಿಷ್ಕರಣೆಯನ್ನು ಆನ್‌ಲೈನ್ ಮೂಲಕ ಮಾಡಿಕೊಳ್ಳಬಹುದು. ಇದಕ್ಕಾಗಿ ಯುಐಡಿಎಐ ಹೊಸ ಫೀಚರ್ ಅನ್ನು ( Update document) ಅಭಿವೃದ್ಧಿಪಡಿಸಿದೆ. myAadhaar portal ಮತ್ತು myAadhaar app ಮೂಲಕ ಆನ್‌ಲೈನ್‌ನಲ್ಲಿ ಪರಿಷ್ಕರಣೆ ಮಾಡಬಹುದು. ನಿಮ್ಮ ಸಮೀಪದ ಯಾವುದೇ ಆಧಾರ್ ಎನ್‌ರೋಲ್‌ಮೆಂಟ್ ಸೆಂಟರ್‌ಗೆ ತೆರಳಿಯೂ ಪರಿಷ್ಕರಣೆ ಮಾಡಲು ಸಾಧ್ಯವಿದೆ.
ಹೊಸ ಫೀಚರ್‌ನಲ್ಲಿ ಆಧಾರ್ ಕಾರ್ಡ್‌ದಾರರು ತಮ್ಮ ಹೆಸರು, ಭಾವಚಿತ್ರವನ್ನು ಒಳಗೊಂಡಿರುವ (Proof of Personal Identity- POI) ಮತ್ತು ಹೆಸರು ಹಾಗೂ ವಿಳಾಸವನ್ನು ಒಳಗೊಂಡಿರುವ (Proof of Identification- POA) ದಾಖಲಾತಿಗಳನ್ನು ಪರಿಷ್ಕರಣೆ ಮಾಡಬಹುದು. ಇದುವರೆಗೆ 135 ಕೋಟಿ ಆಧಾರ್ ಕಾರ್ಡ್ ವಿತರಣೆಯಾಗಿದೆ. ಕಳೆದ ವರ್ಷ 16 ಕೋಟಿ ಕಾರ್ಡ್‌ಗಳು ಪರಿಷ್ಕರಣೆಯಾಗಿತ್ತು.
ಆನ್‌ಲೈನ್‌ನಲ್ಲಿ ಆಧಾರ್ ಪರಿಷ್ಕರಣೆ ಹೀಗೆ
ನೀವು ಮನೆ ಬದಲಿಸಿದ್ದೀರಾ, ಹಾಗಿದ್ದರೆ ಆಧಾರ್ ಕಾರ್ಡ್‌ನಲ್ಲಿ ವಿವರವನ್ನು ಪರಿಷ್ಕರಣೆ ಮಾಡಬಹುದು. ಹತ್ತು ವರ್ಷದಲ್ಲಿ ಒಮ್ಮೆಯೂ ಅಪ್ ಡೇಟ್ ಮಾಡದಿದ್ದರೆ ಮತ್ತೊಮ್ಮೆಯೂ ಪರಿಷ್ಕರಿಸಬಹುದು.
ಹೆಜ್ಜೆ-1 : ನೀವು uidai.gov.in ವೆಬ್‌ಸೈಟ್‌ಗೆ ಲಾಗಿನ್ ಆಗಿ.
ಹೆಜ್ಜೆ-2 : My Aadhaar tab ಸೆಲೆಕ್ಟ್ ಮಾಡಿಕೊಳ್ಳಿ. Demographics Data ಮತ್ತು status ಪರಿಶೀಲಿಸಿ.
ಹೆಜ್ಜೆ-3 : ನೀವು website: https://myaadhaar.uidai.gov.in/ ಇಲ್ಲಿಗೆ redirect ಆಗುತ್ತೀರಿ. ಇಲ್ಲಿ ನೀವು ಲಾಗಿನ್ ಆಗಬೇಕು.
ಹೆಜ್ಜೆ-4 : ನಿಮ್ಮ ಆಧಾರ್ ಸಂಖ್ಯೆ, captcha code ನಮೂದಿಸಿ. ಸೆಂಡ್ OTP ಕ್ಲಿಕ್ಕಿಸಿ. ಒನ್ ಟೈಮ್ ಪಾಸ್ ವರ್ಡ್ ನಿಮ್ಮ ನೋಂದಾಯಿತ ಮೊಬೈಲ್ ನಂಬರ್‌ಗೆ ಹೋಗುತ್ತದೆ.
ಹೆಜ್ಜೆ-5 : ಮೈ ಆಧಾರ್ ವೆಬ್ ಸೈಟ್‌ಗೆ ಲಾಗಿನ್ ಆಗಿ ಅಪ್‌ಡೇಟ್ ಆಧಾರ್ ಆನ್‌ಲೈನ್ ಸೆಲೆಕ್ಟ್ ಮಾಡಿಕೊಳ್ಳಿ.
ಹೆಜ್ಜೆ-6 : proceed to update aadhaar ಮೇಲೆ ಕ್ಲಿಕ್ಕಿಸಿ
ಹೆಜ್ಜೆ-7 : ನೀವು ಪರಿಷ್ಕರಣೆ ಮಾಡಬೇಕಿರುವ ಮಾಹಿತಿಯನ್ನು ಸೆಲೆಕ್ಟ್ ಮಾಡಿಕೊಂಡು ಪರಿಷ್ಕರಿಸಿ. ಅಗತ್ಯ ಇರುವ ದಾಖಲೆಗಳನ್ನು , ಅಂದರೆ ಮನೆ ವಿಳಾಸ ಬದಲಿಸುವುದಿದ್ದರೆ ಅದರ ಆಧಾರವನ್ನು ಅಪ್ ಲೋಡ್ ಮಾಡಿಕೊಳ್ಳಿ. Proceed to Aadhaar ಮೇಲೆ ಕ್ಲಿಕ್ಕಿಸಿ.
ಹೆಜ್ಜೆ-8: ವಿವರಗಳನ್ನು ಭರ್ತಿಗಳಿಸಿದ ಮೇಲೆ ಮತ್ತೊಮ್ಮೆ ಪರಿಶೀಲಿಸಿ submit ಮಾಡಿ.
ಹೆಜ್ಜೆ-9 : ನೀವು ಪೇಮೆಂಟ್ ಪೋರ್ಟಲ್‌ಗೆ ರಿಡೈರೆಕ್ಟ್ ಆಗುವಿರಿ. ಪರಿಷ್ಕರಣೆಗೆ 50 ರೂ. ಪೇಮೆಂಟ್ ಮಾಡಬೇಕಾಗುತ್ತದೆ.