ಮುಂದಿನ ಸಲ ನೀವು ನಿಮ್ಮ ಆದಾಯ ತೆರಿಗೆಯನ್ನು ನೂತನ ಆದಾಯ ತೆರಿಗೆ ವೆಬ್ ಪೋರ್ಟಲ್ ಮೂಲಕ ಮಾಡುವ ಸಂದರ್ಭದಲ್ಲಿ ಕೆಲವು ಪೇಮೆಂಟ್ ಪದ್ಧತಿಗೆ ಕನ್ವೀನಿಯನ್ಸ್ ಶುಲ್ಕ ಮತ್ತು ಜಿಎಸ್‌ಟಿಯನ್ನು ಪಾವತಿಸಬೇಕಾಗುತ್ತದೆ. ಹೀಗಿದ್ದರೂ, ಯುಪಿಐ, ಡೆಬಿಟ್ ಕಾರ್ಡ್ (ವಿಸ್ತಾರ Money Guide) ಮೂಲಕ ಪಾವತಿಗೆ ಶುಲ್ಕ ಇರುವುದಿಲ್ಲ.
ಉದಾಹರಣೆಗೆ ನೀವು ಕೆಲವು ಪೇಮೆಂಟ್ ಪದ್ಧತಿಗಳಲ್ಲಿ 30,000 ರೂ. ಆದಾಯ ತೆರಿಗೆ ಕಟ್ಟಲು 300 ರೂ. ಶುಲ್ಕ ನೀಡಬೇಕಾಗುತ್ತದೆ. ಇ-ಫೈಲಿಂಗ್ ಆದಾಯ ತೆರಿಗೆ ವೆಬ್‌ಸೈಟ್‌ನಲ್ಲಿ ಪೇಮೆಂಟ್ ಗೇಟ್‌ವೇ (Payment gateway) ಬಳಸಿ ಆನ್‌ಲೈನ್ ಮೂಲಕ ತೆರಿಗೆ ಪಾವತಿಗೆ ಕೆಳಕಂಡ ಶುಲ್ಕಗಳು ಅನ್ವಯವಾಗುತ್ತದೆ. ವೆಬ್‌ಸೈಟ್‌ನಲ್ಲಿ ನೀವು Transaction charges ಕ್ಲಿಕ್ ಮಾಡಿದಾಗ ಕೆಳಕಂಡ ಟೇಬಲ್ ಕಾಣುತ್ತದೆ.
ಪೇಮೆಂಟ್ ಪದ್ಧತಿ | ವರ್ಗಾವಣೆ ಶುಲ್ಕ |
ನೆಟ್ ಬ್ಯಾಂಕಿಂಗ್ | ಕನ್ವೀನಿಯನ್ಸ್ ಶುಲ್ಕ |
ಎಚ್‌ಡಿಎಫ್‌ಸಿ ಬ್ಯಾಂಕ್: 12 ರೂ. | |
ಐಸಿಐಸಿಐ ಬ್ಯಾಂಕ್: 9 ರೂ. | |
ಎಸ್‌ಬಿಐ ಬ್ಯಾಂಕ್: 7 ರೂ. | |
ಎಕ್ಸಿಸ್ ಬ್ಯಾಂಕ್: 7 ರೂ. | |
ಇತರ ಬ್ಯಾಂಕ್ ( ಫೆಡರಲ್ ಬ್ಯಾಂಕ್): 5 ರೂ. | |
ಜಿಎಸ್‌ಟಿ @18% | |
ಕ್ರೆಡಿಟ್ ಕಾರ್ಡ್ | 0.85% + ಜಿಎಸ್‌ಟಿ @ 18% |
ಡೆಬಿಟ್ ಕಾರ್ಡ್ | ಇಲ್ಲ |
ಯುಪಿಐ | ಇಲ್ಲ |
ನೀವು ಕ್ರೆಡಿಟ್ ಕಾರ್ಡ್ ಬಳಸಿ 30,000 ರೂ. ಆದಾಯ ತೆರಿಗೆ ಪಾವತಿಸುತ್ತೀರಿ ಎಂದಿಟ್ಟುಕೊಳ್ಳಿ. ಕನ್ವೀನಿಯನ್ಸ್ ಶುಲ್ಕ 255 ರೂ. ತಗಲುತ್ತದೆ. ಜತೆಗೆ 255 ರೂ. ಮೇಲೆ 45.9 ರೂ. ಜಿಎಸ್‌ಟಿ ಅನ್ವಯವಾಗುತ್ತದೆ. (30,000+255+45.9= 30,300.9) ಬಹುತೇಕ 301 ರೂ.ಗಳನ್ನು ಹೆಚ್ಚುವರಿ ನೀಡಬೇಕಾಗುತ್ತದೆ.
ಶುಲ್ಕ ಯಾವುದಕ್ಕೆ ಇಲ್ಲ?
ಇ-ಫೈಲಿಂಗ್ ಆದಾಯ ತೆರಿಗೆ ವೆಬ್ ಪೋರ್ಟಲ್ ಪ್ರಕಾರ, ಪ್ರಾಮಾಣೀಕೃತ ಬ್ಯಾಂಕ್‌ಗಳ ಆಯ್ಕೆಯನ್ನು ಬಳಸಿ ತೆರಿಗೆ ಪಾವತಿಗೆ ವರ್ಗಾವಣೆ ಶುಲ್ಕ ಇರುವುದಿಲ್ಲ. ಹೀಗಿದ್ದರೂ, ಈಗ ಕೇವಲ ಮೂರು ಬ್ಯಾಂಕ್‌ಗಳನ್ನು ಮಾತ್ರ ಪ್ರಾಮಾಣೀಕೃತ ಎಂದು ವೆಬ್‌ಸೈಟ್ ಪರಿಗಣಿಸಿದೆ. ಫೆಡರಲ್ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಇಂಡಿಯಾ ಈ ಮೂರು ಬ್ಯಾಂಕ್‌ಗಳಾಗಿವೆ. ಈ ಬ್ಯಾಂಕ್‌ಗಳ ನೆಟ್ ಬ್ಯಾಂಕಿಂಗ್ ಬಳಸಿದರೆ ವರ್ಗಾವಣೆ ಶುಲ್ಕ ಇರುವುದಿಲ್ಲ. ಬ್ಯಾಂಕ್ ಕೌಂಟರ್‌ಗಳಲ್ಲಿ ಚೆಕ್‌ಗಳ ಮೂಲಕ ಶುಲ್ಕಗಳನ್ನು ಪಾವತಿಸಿದರೆ ಸಾಮಾನ್ಯವಾಗಿ ಶುಲ್ಕ ಅನ್ವಯವಾಗುವುದಿಲ್ಲ.