Site icon Vistara News

Health Insurance: ಕ್ಯಾಶ್​ಲೆಸ್​ ಕ್ಲೈಮ್‌ ಗಳಿಗೆ ಆಸ್ಪತ್ರೆಯಲ್ಲಿ ಇನ್ನು ಹೆಚ್ಚು ಹೊತ್ತು ಕಾಯಬೇಕಿಲ್ಲ; ಇಲ್ಲಿದೆ ಹೊಸ ನಿಯಮ

health-insurence

health-insurence

ಬೆಂಗಳೂರು: ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು (IRDAI) ಆರೋಗ್ಯ ವಿಮಾ ಪಾಲಿಸಿಗಳ (Health Insurance) ಮಾನದಂಡಗಳಲ್ಲಿ ಹಲವು ಪ್ರಮುಖ ಬದಲಾವಣೆಗಳನ್ನು ಮಾಡಿದೆ. 55 ಸುತ್ತೋಲೆಗಳನ್ನು ರದ್ದುಗೊಳಿಸಿ ಆರೋಗ್ಯ ವಿಮಾ ಉತ್ಪನ್ನಗಳ ಕುರಿತು ಸಮಗ್ರವಾಗಿ ಒಂದು ಸುತ್ತೋಲೆ ಪ್ರಕಟಿಸಿದೆ. ಪ್ರಮುಖವಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ (hospital discharge) ವಿನಂತಿ ಸ್ವೀಕರಿಸಿದ ಕ್ಯಾಶ್​ಲೆಸ್​ ಕ್ಲೈಮ್ ಗಳನ್ನು ಮೂರು ಗಂಟೆಗಳ ಒಳಗೆ ಇತ್ಯರ್ಥಗೊಳಿಸಬೇಕು ಐಆರ್ ಡಿಎಐ ಸೂಚಿಸಿದೆ.

ಯಾವುದೇ ಸಂದರ್ಭದಲ್ಲಿ ಪಾಲಿಸಿದಾರರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲು ಹೆಚ್ಚು ಕಾಯುವಂತೆ ಮಾಡಬಾರದು. ಮೂರು ಗಂಟೆಗಳಿಗಿಂತ ಹೆಚ್ಚು ವಿಳಂಬವಾದರೆ ಆಸ್ಪತ್ರೆಯಿಂದ ವಿಧಿಸಲಾದ ಹೆಚ್ಚುವರಿ ಮೊತ್ತವನ್ನು ವಿಮಾದಾರರು ಭರಿಸಬೇಕಾಗುತ್ತೆ ಎಂದು ಕಂಪನಿ ತಿಳಿಸಿದೆ. ತುರ್ತು ಸಂದರ್ಭಗಳಲ್ಲಿ ಬರುವ ನಗದು ರಹಿತ ವಿನಂತಿಯನ್ನು ವಿಮಾದಾರರು ತಕ್ಷಣವೇ ನಿರ್ಧರಿಸಬೇಕು ಎಂದು ಐಆರ್ ಡಿ ಎಐ ಹೇಳಿದೆ.

2024ರ ಜುಲೈ 31ರೊಳಗೆ ಅಗತ್ಯ ವ್ಯವಸ್ಥೆಗಳನ್ನು ಮಾಡಲು ವಿಮಾದಾರರಿಗೆ ಆದೇಶಿಸಿರುವ ಐಆರ್ ಡಿಎಐ ನಗದು ಕ್ಯಾಶ್​ಲೆಸ್​​ ವಿನಂತಿಗಳನ್ನು ಸ್ವೀಕರಿಸಲು ವಿಮಾದಾರರು ಆಸ್ಪತ್ರೆಯಲ್ಲಿ ಹೆಲ್ಪ್​ ಡೆಸ್ಕ್‌ಗಳನ್ನು ಸಹ ವ್ಯವಸ್ಥೆಗೊಳಿಸಬಹುದು ಎಂದು ಹೇಳಿದೆ.


ಇತರ ಕೆಲವು ಬದಲಾವಣೆಗಳು ?

ಲಭ್ಯವಿರುವ ಉತ್ಪನ್ನಗಳ ಮೂಲಕ ಪಾಲಿಸಿದಾರರಿಗೆ ವಿಮಾ ಕಂಪನಿಗಳು ವ್ಯಾಪಕ ಆಯ್ಕೆಗಳನ್ನು ಒದಗಿಸಬೇಕು ಎಂದು ಐಆರ್ ಡಿಎಐ ಹೇಳಿದೆ. ಅದೇ ಉದ್ದೇಶವನ್ನು ಪೂರೈಸಲು, ವಿಮಾದಾರರು ಎಲ್ಲಾ ವಯಸ್ಸಿನವರು, ಪ್ರದೇಶಗಳು, ಔದ್ಯೋಗಿಕ ವಿಭಾಗಗಳು, ವೈದ್ಯಕೀಯ ಪರಿಸ್ಥಿತಿಗಳು/ ಚಿಕಿತ್ಸೆಗಳು, ಎಲ್ಲಾ ರೀತಿಯ ಆಸ್ಪತ್ರೆಗಳು ಮತ್ತು ಆರೋಗ್ಯ ರಕ್ಷಣೆ ಒದಗಿಸುವವರಿಗೆ ವೈವಿಧ್ಯಮಯ ವಿಮಾ ಉತ್ಪನ್ನಗಳನ್ನು ಒದಗಿಸಬೇಕು ಎಂದು ಹೇಳಿದೆ.

ಇದನ್ನೂ ಓದಿ: Health Insurance Benefits : ಉದ್ಯೋಗಿಗಳ ಆರೋಗ್ಯ ವಿಮೆ ಏಕೆ ಮಹತ್ವಪೂರ್ಣ? ಇಲ್ಲಿದೆ ಡಿಟೇಲ್ಸ್

ಹಲವು ಆರೋಗ್ಯ ವಿಮಾ ಪಾಲಿಸಿಗಳನ್ನು ಹೊಂದಿರುವ ಪಾಲಿಸಿದಾರನು ಸ್ವೀಕಾರಾರ್ಹ ಕ್ಲೈಮ್ ಮೊತ್ತವನ್ನು ಪಡೆಯುವ ಪಾಲಿಸಿ ಆಯ್ಕೆಯನ್ನು ಹೊಸ ಸುತ್ತೋಲೆಯಲ್ಲಿ ಪಡೆಯುತ್ತಾನೆ. ವಿಮಾದಾರರು ಪ್ರತಿ ಪಾಲಿಸಿ ಡಾಕ್ಯುಮೆಂಟ್ ಜೊತೆಗೆ ಗ್ರಾಹಕರ ಮಾಹಿತಿ ಶೀಟ್​​ (CIS) ಒದಗಿಸಬೇಕಾಗುತ್ತದೆ. ಪಾಲಿಸಿ ಅವಧಿಯಲ್ಲಿ ಯಾವುದೇ ಕ್ಲೈಮ್‌ಗಳು ಮಾಡದಿದ್ದರೆ ವಿಮಾ ಮೊತ್ತವನ್ನು ಹೆಚ್ಚಿಸುವ ಅಥವಾ ಪ್ರೀಮಿಯಂ ಮೊತ್ತವನ್ನು ರಿಯಾಯಿತಿ ಮಾಡಬೇಕಾಗುತ್ತದೆ.

ಒಂದು ವೇಳೆ ಪಾಲಿಸಿದಾರರು, ಚಾಲ್ತಿಯಲ್ಲಿರು ಪಾಲಿಸಿಯನ್ನು ಯಾವುದೇ ಸಮಯದಲ್ಲಿ ರದ್ದುಮಾಡಲು ಬಯಸಿದರೆ ಅವಧಿ ಪ್ರೀಮಿಯಂ/ ಅನುಪಾತದ ಪ್ರೀಮಿಯಂನ ಮರುಪಾವತಿ ಮಾಡಬೇಕಾಗುತ್ತದೆ.

ರೋಗಿಯನ್ನು ದಾಖಲಿಸುವ ಮೊದಲು ವಿಮಾ ಕಂಪನಿಯು ಆಸ್ಪತ್ರೆಯ ಟಿಪಿಎ ಡೆಸ್ಕ್‌ಗೆ ಪೂರ್ವ-ಅನುಮೋದನೆಯನ್ನು ಒದಗಿಸಿದ ಮೇಲೂ ಶೇ.43ರಷ್ಟು ವಿಮಾ ಪಾಲಿಸಿದಾರರು ತಮ್ಮ “ಆರೋಗ್ಯ ವಿಮೆ” ಕ್ಲೈಮ್‌ಗಳನ್ನು ಪಡೆಯಲು ತೊಂದರೆಗಳನ್ನು ಎದುರಿಸಿದ್ದಾರೆ ಎಂದು ಸಮೀಕ್ಷೆಯೊಂದರಲ್ಲಿ ತಿಳಿದು ಬಂದಿದೆ. ಕೆಲವು ಪ್ರಕರಣಗಳಲ್ಲಿ, ರೋಗಿಯು ಡಿಸ್ಚಾರ್ಜ್‌ಗೆ ಸಿದ್ಧವಾದ ಅನಂತರ 10- 12 ಗಂಟೆಗಳ ಬಳಿಕ ಕ್ಲೇಮ್​ ನೀಡಲಾಗಿದೆ.

Exit mobile version