ಬೆಂಗಳೂರು: ಗೃಹ ಸಾಲದ ಬಡ್ಡಿ ದರಗಳು ಬ್ಯಾಂಕಿನಿಂದ ಬ್ಯಾಂಕಿಗೆ ಭಿನ್ನವಾಗಿರುತ್ತದೆ. ಇದಕ್ಕೆ ನಾನಾ ಕಾರಣಗಳಿರುತ್ತವೆ. ಆದರೆ ಬಡ್ಡಿ ದರದಲ್ಲಿ ಅಲ್ಪ ಪ್ರಮಾಣದ ವ್ಯತ್ಯಾಸ ಇದ್ದರೂ, ಸಾಲಗಾರರ ಮೇಲೆ ಗಣನೀಯ ಪ್ರಭಾವ ಬೀರುತ್ತದೆ. ಆರ್‌ಬಿಐ 2010ರಲ್ಲಿ ಬೇಸ್ ಲೆಂಡಿಂಗ್ ರೇಟ್ (Base Lending Rate-BLR) ವ್ಯವಸ್ಥೆಯನ್ನು 2010ರಲ್ಲಿ ಜಾರಿಗೊಳಿಸಿತ್ತು. ಇದು 2016ರಲ್ಲಿ ಮಾರ್ಜಿನಲ್ ಕಾಸ್ಟ್ ಆಫ್ ಫಂಡ್ಸ್ ಬೇಸ್ಡ್ ಲಿಂಕ್ಡ್ ಲೆಂಡಿಂಗ್ ರೇಟ್ (MCLR) ಆಯಿತು. 2019ರಿಂದ ರೆಪೊ ಲಿಂಕ್ಡ್ ಲೆಂಡಿಂಗ್ ರೇಟ್ (RLLR) ಜಾರಿಯಾಗಿದೆ.
ಬ್ಯಾಂಕ್‌ನ ಹೆಸರು | RLLR | ಕನಿಷ್ಠ ಬಡ್ಡಿ ದರ (%) | ಗರಿಷ್ಠ ಬಡ್ಡಿ ದರ |
ಇಂಡಿಯನ್ ಬ್ಯಾಂಕ್ | 9.20 | 8.45% | 9.1% |
ಎಚ್‌ಡಿಎಫ್‌ಸಿ ಬ್ಯಾಂಕ್ | — | 8.45% | 9.85% |
ಇಂಡಸ್‌ಇಂಡ್ ಬ್ಯಾಂಕ್ | — | 8.5% | 9.75% |
ಪಂಜಾಬ್ ನ್ಯಾಶನಲ್ ಬ್ಯಾಂಕ್ | 9.25 | 8.6% | 9.45% |
ಬ್ಯಾಂಕ್ ಆಫ್ ಮಹಾರಾಷ್ಟ್ರ | 9.30 | 8.6% | 10.3% |
ಬ್ಯಾಂಕ್ ಆಫ್ ಬರೋಡಾ | 9.15 | 8.6% | 10.5% |
ಬ್ಯಾಂಕ್ ಆಫ್ ಇಂಡಿಯಾ | 9.25 | 8.65% | 10.6% |
ಕರ್ಣಾಟಕ ಬ್ಯಾಂಕ್ | — | 8.75% | 10.43% |
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ | 9.30 | 8.75% | 10.5% |
ಕೋಟಕ್ ಮಹೀಂದ್ರಾ ಬ್ಯಾಂಕ್ | — | 8.85% | 9.35% |
ಬಡ್ಡಿ ದರಗಳು ಹೆಚ್ಚುತ್ತಿರುವ ದಿನಗಳಲ್ಲಿ ಗೃಹ ಸಾಲ ಹೊರೆ ಎನ್ನಿಸುತ್ತಿದ್ದರೆ, ಕಡಿಮೆ ಬಡ್ಡಿ ದರ ನೀಡುವ ಬ್ಯಾಂಕನ್ನು ಆಯ್ಕೆ ಮಾಡಿಕೊಂಡು ಸಾಲವನ್ನು ಅದಕ್ಕೆ ವರ್ಗಾಯಿಸುವುದು ಸೂಕ್ತ. ಹೀಗಿದ್ದರೂ, ಬಡ್ಡಿ ದರ ಮಾತ್ರವಲ್ಲದೆ, ಸಂಸ್ಕರಣೆ ಶುಲ್ಕ, ಮುದ್ರಾಂಕ ಶುಲ್ಕ, ಕಾನೂನು ಸೇವಾ ಶುಲ್ಕ, ಮೌಲ್ಯಮಾಪನ ಶುಲ್ಕ, ವರ್ಗಾವಣೆ ತಂತ್ರಜ್ಞಾನ ಶುಲ್ಕ ಎಲ್ಲ ಸೇರಿ ಎಷ್ಟಾಗುತ್ತದೆ ಎಂಬುದನ್ನು ಲೆಕ್ಕಾಚಾರ ಹಾಕಿಕೊಳ್ಳಿ. ಅನುಕೂಲ-ಅನಾನುಕೂಲ ತಿಳಿದ ಬಳಿಕ ನಿರ್ಧರಿಸಿ.
ಯಾವಾಗ ಹಳೆ ಗೃಹ ಸಾಲವನ್ನು ಹೊಸ ಪದ್ಧತಿಗೆ ಬದಲಿಸಬಹುದು?
ನಿಮ್ಮ ಗೃಹ ಸಾಲ ಬಡ್ಡಿ ದರ ಈಗಿನ ಬಡ್ಡಿ ದರಕ್ಕಿಂತ ಭಾರಿ ಉನ್ನತ ಮಟ್ಟದಲ್ಲಿ ಇದ್ದರೆ ಹೊಸತಕ್ಕೆ ಬದಲಿಸಿರಿ. ಅಗತ್ಯ ಶುಲ್ಕಗಳನ್ನು ಪಾವತಿಸಿ ಬದಲಿಸಬಹುದು. ಸಾಲಗಳಿಗೆ ಬೇಡಿಕೆ ಸೃಷ್ಟಿಯಾದಾಗ ಅದನ್ನು ವಿತರಿಸಲು ಬೇಕಾದ ಫಂಡ್ ಅಥವಾ ನಿಧಿಯನ್ನು ಸಂಗ್ರಹಿಸುವ ಸವಾಲು ಬ್ಯಾಂಕ್‌ಗಳಿಗೆ ಸಹಜವಾಗಿಯೇ ಎದುರಾಗುತ್ತದೆ. ಹೀಗಾಗಿ ಎಫ್‌ಡಿ ಬಡ್ಡಿ ದರಗಳನ್ನು ಬ್ಯಾಂಕ್‌ಗಳು ಏರಿಸುತ್ತವೆ. ಅಧಿಕ ಬಡ್ಡಿ ದರದ ಆಸೆಯಿಂದ ಜನತೆ ಬ್ಯಾಂಕ್ ಗಳಲ್ಲಿ ದುಡ್ಡನ್ನು ಠೇವಣಿ ಇಡುತ್ತಾರೆ.
ಆರ್‌ಬಿಐ 2000 ರೂ. ನೋಟನ್ನು ಚಲಾವಣೆಯಿಂದ ಹಿಂತೆಗೆದುಕೊಂಡಿರುವುದರಿಂದ ಜನರು ಆ ನೋಟನ್ನು ಬ್ಯಾಂಕ್‌ಗಳಿಗೆ ಜಮೆ ಮಾಡುತ್ತಿದ್ದಾರೆ. ಇದರ ಪರಿಣಾಮ ಬ್ಯಾಂಕ್‌ಗಳಲ್ಲಿ ಠೇವಣಿ ಸಂಗ್ರಹವೂ ಏರಿಕೆಯಾಗುತ್ತದೆ. ಬ್ಯಾಂಕ್‌ಗಳಲ್ಲಿ ತಾತ್ಕಾಲಿಕವಾಗಿ ನಗದು ಲಭ್ಯತೆ ಹೆಚ್ಚುತ್ತದೆ. ಆಗ ಎಫ್‌ಡಿ ಬಡ್ಡಿ ದರ ಏರಿಸುವ ಅಗತ್ಯ ಬರುವುದಿಲ್ಲ. ಹೀಗಾಗಿ ಎಫ್‌ಡಿ ಬಡ್ಡಿ ದರ ಇಳಿಕೆಯಾಗುವ ಸಾಧ್ಯತೆ ಸೃಷ್ಟಿಯಾಗಿದೆ ಎನ್ನುತ್ತಾರೆ ಬ್ಯಾಂಕಿಂಗ್ ತಜ್ಞರು.
ಒಂದು ಅಂದಾಜಿನ ಪ್ರಕಾರ 2000 ರೂ. ನೋಟು ಹಿಂತೆಗೆತದಿಂದ ಬ್ಯಾಂಕ್‌ಗಳಿಗೆ 1.5-1.6 ಲಕ್ಷ ಕೋಟಿ ರೂ. ಹರಿದು ಬರಬಹುದು. ಅದು ಠೇವಣಿ ರೂಪದಲ್ಲಿ ಜಮೆಯಾಗಲಿದೆ. ಹೀಗಾಗಿ ಎಫ್‌ಡಿ ಬಡ್ಡಿ ದರ ಇಳಿಕೆಗೆ ಹಾದಿಯಾಗಿದೆ.