ಸಾರ್ವಜನಿಕ ವಲಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಇದೀಗ ತನ್ನ ವಾಟ್ಸ್‌ಆ್ಯಪ್ ಬ್ಯಾಂಕಿಂಗ್ ಸೇವೆಯನ್ನು ( WhatsApp Banking Service) ಆರಂಭಿಸಿದೆ. ಇದು ಬ್ಯಾಂಕಿನ ಗ್ರಾಹಕರಿಗೆ ಹಲವು ಅನುಕೂಲಗಳನ್ನು ನೀಡಲಿದೆ. ಹಾಗಾದರೆ ನೀವು ಎಸ್‌ಬಿಐ ಗ್ರಾಹಕರಾಗಿದ್ದರೆ, ಈ ಸೌಲಭ್ಯವನ್ನು ಪಡೆಯುವುದು ಹೇಗೆ? ಇಲ್ಲಿದೆ ವಿವರ.
” ವಾಟ್ಸ್‌ಆ್ಯಪ್‌ನಲ್ಲಿ ಈಗ ನಿಮ್ಮ ಬ್ಯಾಂಕ್ʼ ಎಂಬುದಾಗಿ ಈ ಸೇವೆಯ ಮಹತ್ವವನ್ನು ಎಸ್‌ಬಿಐ ಹೇಳಿಕೊಂಡಿದೆ. ನೀವು ಎಟಿಎಂಗೆ ಹೋಗದೆಯೂ, ವಾಟ್ಸ್‌ಆ್ಯಪ್ ಮೂಲಕ ನಿಮ್ಮ ಬ್ಯಾಂಕ್ ಅಕೌಂಟ್ ಬ್ಯಾಲೆನ್ಸ್ ಮತ್ತು ಮಿನಿ ಸ್ಟೇಟ್‌ಮೆಂಟ್ ಅನ್ನು ನೋಡಬಹುದು ಎಂದು ಎಸ್‌ಬಿಐ ಟ್ವೀಟ್ ಮಾಡಿದೆ.
ಸೌಲಭ್ಯ ಪಡೆಯುವುದು ಹೇಗೆ?: ಎಸ್‌ಬಿಐ ವಾಟ್ಸ್‌ಆ್ಯಪ್ ಬ್ಯಾಂಕಿಂಗ್ ಸೇವೆ ಪಡೆಯಲು ಗ್ರಾಹಕರು ಕೆಳಕಂಡ ವಿಧಾನಗಳನ್ನು ಅನುಸರಿಸಬಹುದು.
೧. ಎಸ್‌ಬಿಐ ವಾಟ್ಸ್‌ಆ್ಯಪ್ ಬ್ಯಾಂಕಿಂಗ್ ಸೇವೆಯನ್ನು ಪಡೆಯಲು ನೀವು ಬ್ಯಾಂಕ್ ಒದಗಿಸಿರುವ 7208933148 ಸಂಖ್ಯೆಗೆ WAREG ಎಂಬ ಸಂದೇಶ ಕಳಿಸಿ ನೋಂದಣಿ ಆಗಬೇಕಾಗುತ್ತದೆ. ನಿಮ್ಮ ಖಾತೆ ಸಂಖ್ಯೆಯ ಮಾಹಿತಿ ನೀಡಬೇಕಾಗುತ್ತದೆ. ಎಸ್‌ಬಿಐ ಖಾತೆಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯ ಮೂಲಕವೇ ವಿವರವನ್ನು ಕಳಿಸಬೇಕು.
೨. ಎಸ್‌ಬಿಐ ವಾಟ್ಸ್‌ಆ್ಯಪ್ ಬ್ಯಾಂಕಿಂಗ್ ಸೇವೆಗೆ ನೋಂದಣಿ ಆದ ಬಳಿಕ +919022690226 ಸಂಖ್ಯೆಗೆ ” Hi ʼ ಎಂದು ಟೈಪಿಸಿ ಸಂದೇಶ ಕಳಿಸಿ. ಆಗ ನಿಮ್ಮ ನೋಂದಣಿ ಯಶಸ್ವಿ ಆಗಿರುವುದರ ಬಗ್ಗೆ ನಿಮಗೆ ಸಂದೇಶ ಬರುತ್ತದೆ.
೩. ನೋಂದಣಿ ಆಗಿರುವುದರ ಬಗ್ಗೆ ಮೆಸೇಜ್ ಬಂದ ಬಳಿಕ ಕೆಳಕಂಡ ಸೇವೆಗಳನ್ನು ಪಡೆಯಬಹುದು- ೧. ಅಕೌಂಟ್ ಬ್ಯಾಲೆನ್ಸ್, ೨. ಮಿನಿ ಸ್ಟೇಟ್‌ಮೆಂಟ್, ೩. ವಾಟ್ಸ್‌ಆ್ಯಪ್ ಬ್ಯಾಂಕಿಂಗ್ ಸೇವೆಯಿಂದ ನೋಂದಣಿಯ ರದ್ದತಿ.
ಎಸ್‌ಬಿಐ ವಾಟ್ಸ್‌ಆ್ಯಪ್ ಬ್ಯಾಂಕಿಂಗ್ ಸೇವೆಯನ್ನು ತನ್ನ ಕ್ರೆಡಿಟ್ ಕಾರ್ಡ್‌ದಾರರಿಗೆ ಕೂಡ ನೀಡುತ್ತಿದೆ. ಇದಕ್ಕಾಗಿ ಎಸ್‌ಬಿಐ ಕಾರ್ಡ್ ವಾಟ್ಸ್‌ಆ್ಯಪ್ ಕನೆಕ್ಟ್ ಎಂಬ ಸೇವೆ ಇದೆ. ಇದರ ಮೂಲಕ ಅಕೌಂಟ್ ಬ್ಯಾಲೆನ್ಸ್, ರಿವಾರ್ಡ್ ಪಾಯಿಂಟ್ ಮಾಹಿತಿ ಪಡೆಯಬಹುದು.
ಇದನ್ನೂ ಓದಿ: ವಿಸ್ತಾರ Money Guide| ಕೇವಲ 100 ರೂ.ಗೆ ಅಂಚೆ ಆರ್‌ಡಿ ಖಾತೆ ತೆರೆದು, ಬ್ಯಾಂಕ್ ಎಸ್‌ಬಿಗಿಂತ ಹೆಚ್ಚು ಬಡ್ಡಿ ಗಳಿಸಿ!