ಆದಾಯ ತೆರಿಗೆ ವಿವರ ಸಲ್ಲಿಕೆಗೆ (Income tax returns) ಜುಲೈ 31 ಕೊನೆಯ ದಿನವಾಗಿದೆ. ಜೂನ್ 26ರ ತನಕ ಒಂದು ಕೋಟಿಗೂ ಹೆಚ್ಚು ಐಟಿಆರ್ ಸಲ್ಲಿಕೆಯಾಗಿದೆ. ತೆರಿಗೆದಾರರು ಕೊನೆಯ ಕ್ಷಣದ ತನಕ ಕಾಯದೆ ಆದಷ್ಟು ಬೇಗ ತಮ್ಮ ಐಟಿ ರಿಟರ್ನ್ ಸಲ್ಲಿಸುವುದು ಉತ್ತಮ. ಐಟಿ ರಿಟರ್ನ್ ಸಲ್ಲಿಸುವ ವೇಳೆ ಜನತೆ ಕೆಲವು ತಪ್ಪುಗಳನ್ನು ಮಾಡುತ್ತಾರೆ. ಅವುಗಳನ್ನು ದೂರವಿಡುವುದು ಸೂಕ್ತ.
- ರಿಟರ್ನ್ ಫೈಲ್ ಮಾಡುವಾಗ ಗಡುವನ್ನು ತಪ್ಪುವುದು. ಈ ಸಲ ಜುಲೈ 31 ಗಡುವು. ಆದರೆ ಅದನ್ನು ಮೀರುವುದು ಸಾಮಾನ್ಯವಾಗಿ ಮಾಡುವ ಮಿಸ್ಟೇಕ್. ಗಡುವು ಮೀರಿದ ಬಳಿಕ ಐಟಿಆರ್ ಫೈಲ್ ಮಾಡುವಾಗ 5,000 ರೂ. ವಿಳಂಬ ಶುಲ್ಕ ಪಾವತಿಸಬೇಕಾಗುತ್ತದೆ. ಬಾಕಿ ತೆರಿಗೆ ಮೇಲೆ 1% ಮಾಸಿಕ ಬಡ್ಡಿ ಅನ್ವಯವಾಗುತ್ತದೆ. ತೆರಿಗೆ ರಿಫಂಡ್ ವಿಳಂಬವಾಗಬಹುದು.
- ITR ಸಲ್ಲಿಸದೆ ಇರುವುದು: ಐಟಿಆರ್ ಸಲ್ಲಿಸದೆ ಇರುವುದರಿಂದ ಗಂಭೀರ ಸಮಸ್ಯೆ ಆಗಬಹುದು. ಇದಕ್ಕಾಗಿ ದಂಡ ತೆರಬೇಕಾಗಿ ಬರಬಹುದು. ಬಾಕಿ ತೆರಿಗೆ ಮೇಲೆ ದಂಡ ಮತ್ತು ಬಡ್ಡಿ ಹೊರೆ ಬರಬಹುದು.
- ಸರಿಯಾದ ಐಟಿ ರಿಟರ್ನ್ ಫಾರ್ಮ್ ಆಯ್ಕೆ ಮಾಡದಿರುವುದು: ತಪ್ಪಾದ ಐಟಿಆರ್ ಫೈಲಿಂಗ್ ಮತ್ತೊಂದು ಸಾಮಾನ್ಯ ಮಿಸ್ಟೇಕ್.
- ಬ್ಯಾಂಖ್ ಅಕೌಂಟ್ ವ್ಯಾಲಿಡೇಟ್ ಮಾಡುವಲ್ಲಿ ವಿಫಲೌಾಗುವುದು: ಐಟಿ ರಿಟರ್ನ್ ಮಾಡುವಾಗ ಬ್ಯಾಂಖ್ ಅಕೌಂಟ್ ಪ್ರಿ-ವ್ಯಾಲಿಡೇಟ್ ಮಾಡುವುದು ಮುಖ್ಯ. ಟ್ಯಾಕ್ಸ್ ರಿಫಂಡ್ ವೇಳೆ ಇದರ ಅಗತ್ಯ ಇರುತ್ತದೆ. ತಪ್ಪಿದರೆ ಆದಾಯ ತೆರಿಗೆ ಇಲಾಖೆಗೆ ಆದಾಯ ತೆರಿಗೆ ರಿಫಂಡ್ ಮಾಡಲು ಸಾಧ್ಯವಾಗುವುದಿಲ್ಲ.
- ಐಟಿಆರ್ ವೆರಿಫೈ ಮಾಡಲು ಮರೆಯುವುದು: ಮತ್ತೊಂದು ಸಾಮಾನ್ಯ ಮಿಸ್ಟೇಕ್ ಏನೆಂದರೆ ಐಟಿಆರ್ ವೆರಿಫೈ ಮಾಡಲು ಮರೆಯುವುದು. ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್ ಸ್ವೀಕರಿಸಿದ ಬಳಿಕವಷ್ಟೆ ತೆರಿಗೆದಾರರು ಈ ಎರರ್ ಅನ್ನು ಅರ್ಥ ಮಾಡಿಕೊಳ್ಳುತ್ತಾರೆ. ಈಗ ತೆರಿಗೆದಾರರು ಐಟಿಆರ್ ವೆರಿಫೈ ಮಾಡಲು, ಐಟಿಆರ್ ಸಲ್ಲಿಸಿದ ಬಳಿಕ 30 ದಿನಗಳ ಕಾಲಾವಕಾಶ ಹೊಂದಿದ್ದಾರೆ.
- ವೈಯಕ್ತಿಕ ವಿವರಗಳನ್ನು ಒದಗಿಸದೆ ಇರುವುದು: ಕೆಲವೊಮ್ಮೆ ಜನರು ಆದಾಯ ತೆರಿಗೆ ವಿವರ ಸಲ್ಲಿಕೆಯ ವಿವರಗಳನ್ನು ಸರಿಯಾಗಿ ಸಲ್ಲಿಸುವುದಿಲ್ಲ. ಇದು ಸಮಸ್ಯೆಯಾಗಿ ಪರಿಣಮಿಸಬಹುದು.
- ಅಸೆಸ್‌ಮೆಂಟ್ ವರ್ಷದ ಆಯ್ಕೆ ಸರಿಯಾಗಿ ಇರದಿರುವುದು: ಹಲವು ಮಿಸ್ಟೇಕ್‌ಗಳಲ್ಲಿ ಇದೂ ಒಂದು. ಅಸೆಸ್ ಮೆಂಟ್ ವರ್ಷ (assessment year) ಮತ್ತು ಫೈನಾನ್ಷಿಯಲ್ ವರ್ಷ (financial year) ಬಗ್ಗೆ ತೆರಿಗೆದಾರರಲ್ಲಿ ಗೊಂದಲ ಇರುತ್ತದೆ. ಫೈನಾನ್ಷಿಯಲ್ ವರ್ಷ ಎನ್ನುವುದು ಆದಾಯ ಗಳಿಸಿದ ಅವಧಿಯದ್ದಾಗಿರುತ್ತದೆ. ಅಸೆಸ್‌ಮೆಂಟ್ ವರ್ಷ ಟ್ಯಾಕ್ಸ್ ರಿಟರ್ನ್ ಮಾಡುವ ವರ್ಷ ಆಗಿರುತ್ತದೆ. ಈ ವ್ಯತ್ಯಾಸವನ್ನು ಗಮನಿಸಬೇಕು. ಹೀಗಾಗಿ ಈಗ ಫೈಲ್ ಮಾಡುವಾಗ ಅಸೆಸ್‌ಮೆಂಟ್ ಇಯರ್ ಆಗಿ 2023-24 ಅನ್ನು ತೆಗೆದುಕೊಳ್ಳಬೇಕು.
- ಎಲ್ಲ ಆದಾಯ ಮೂಲಗಳನ್ನು ಡಿಕ್ಲೇರ್ ಮಾಡದಿರುವುದು: ಐಟಿಆರ್ ಫೈಲ್ ಮಾಡುವಾಗ ಆದಾಯದ ಎಲ್ಲ ಮೂಲಗಳನ್ನು ನಮೂದಿಸಬೇಕು. ವೇತನದಾರರೂ ಬೇರೆ ಆದಾಯ ಮೂಲವನ್ನು ಹೊಂದಿರಬಹುದು. ವಸತಿ ಅಥವಾ ಕಮರ್ಶಿಯಲ್ ಪ್ರಾಪರ್ಟಿಗಳಿಂದ ಬಾಡಿಗೆ ಆದಾಯ ಬರುತ್ತಿರಬಹುದು. ಷೇರು ವ್ಯವಹಾರದ ಆದಾಯ ಇರಬಹುದು. ಬ್ಯಾಂಕ್ ಎಫ್‌ಡಿ ಆದಾಯ ಇರಬಹುದು.
- ಉದ್ಯೋಗ ಬದಲಾವಣೆ ಎಫೆಕ್ಟ್: ನೀವು ಉದ್ಯೋಗ ಬದಲಾವಣೆ ಮಾಡಿದಾಗ ಹಳೆಯ ಮತ್ತು ಹೊಸ ಉದ್ಯೋಗದಾತರಿಂದ ಪಡೆದ ಆದಾಯದ ವಿವರ ನಮೂದಿಸಬೇಕು.
- ಕ್ಯಾಪಿಟಲ್ ಗೈನ್ಸ್ ಮತ್ತು ನಷ್ಟ: ಹಲವು ತೆರಿಗೆದಾರರು ಕ್ಯಾಪಿಟಲ್ ಗೈನ್ಸ್ ಮತ್ತು ನಷ್ಟದ ವಿವರಗಳನ್ನು ಸರಿಯಾಗಿ ನಮೂದಿಸಿರುವುದಿಲ್ಲ. ಇದು ಪ್ರತಿಕೂಲ ಪರಿಣಾಮ ಉಂಟು ಮಾಡಬಹುದು. ಈಗಿನ ತೆರಿಗೆ ರೂಲ್ಸ್ ಪ್ರಕಾರ ಎಲ್ಲ ಕ್ಯಾಪಿಟಲ್ ಗೈನ್ಸ್ ಮತ್ತು ನಷ್ಟವನ್ನು ಐಟಿಆರ್‌ನಲ್ಲಿ ನಮೂದಿಸಬೇಕು.
Over one crore ITRs have been filed till 26th June 2023 compared to one crore ITRs filed till 8th of July last year.
— All India Radio News (@airnewsalerts) June 27, 2023
One crore milestone reached 12 days early this year compared to corresponding period in the preceding year: Income Tax Department @IncomeTaxIndia