Site icon Vistara News

ITR filing : ಬಾಡಿಗೆಯ ಮೇಲೆ ತೆರಿಗೆ ಅನುಕೂಲಗಳನ್ನು ಪಡೆಯುವುದು ಹೇಗೆ?

Income tax return filing

ಅನೇಕ ಮಂದಿ ತೆರಿಗೆ ಕಡಿತದ ಅನುಕೂಲಗಳನ್ನು ಪಡೆಯುವ ಸಲುವಾಗಿ ಪೋಷಕರಿಗೆ ಬಾಡಿಗೆಯನ್ನು ಕೊಡುತ್ತಾರೆ. ಆದರೆ ನೀವು ಅವರಿಗೆ ಬಾಡಿಗೆ ನೀಡುತ್ತಿರುವುದನ್ನು ಖಾತರಿಪಡಿಸಿಕೊಳ್ಳಿ. ಡಾಕ್ಯುಮೆಂಟ್‌ಗಳನ್ನು ಮತ್ತು ರೆಂಟ್‌ ರಿಸಿಪ್ಟ್‌ಗಳನ್ನು ತೆಗೆದಿಟ್ಟುಕೊಳ್ಳಿ. ನೀವು ಎಚ್‌ಆರ್‌ಎಗೆ ಅರ್ಹತೆ ಹೊಂದಿರದಿದ್ದರೆ ಸೆಕ್ಷನ್‌ 80 ಜಿಜಿ ಅಡಿಯಲ್ಲಿ ತೆರಿಗೆ ಕಡಿತದ ಅನುಕೂಲವನ್ನು ಪಡೆಯಬಹುದು. ನೀವು ಮನೆ ಬಾಡಿಗೆಯನ್ನು ಪೋಷಕರಿಗೆ ನೀಡುತ್ತಿದ್ದೀರಿ ಎಂದಿದ್ದರೆ, ಅಗ್ರಿಮೆಂಟ್‌ ಆಗಿರಬೇಕು. ಜತೆಗೆ ರೆಂಟ್‌ ರಿಸಿಪ್ಟ್‌ ಹೊಂದಿರಬೇಕು.

ಬಹುತೇಕ ಸ್ಯಾಲರಿ ಸ್ಲಿಪ್‌ನಲ್ಲಿ (salary slip) ಮನೆ ಬಾಡಿಗೆ ಭತ್ಯೆ (house rent allowance-HRA) ಸಾಮಾನ್ಯ ಅಂಶ. ಎಚ್‌ಆರ್‌ಎಗೆ ಸಂಬಂಧಿಸಿದ ವಿನಾಯಿತಿಗಳ ಬಗ್ಗೆಯೂ ಎಲ್ಲರೂ ತಿಳಿದಿರುತ್ತಾರೆ. ಹೀಗಿದ್ದರೂ, ಎಚ್‌ಆರ್‌ಎ ಸಂಬಂಧಿತ ತೆರಿಗೆ ವಿನಾಯಿತಿ (tax exemption) ಬಗ್ಗೆ ಹಲವರಿಗೆ ಮಾಹಿತಿ ತಿಳಿಯದೆಯೂ ಇರಬಹುದು.

ರಿಟರ್ನ್‌ ಫೈಲಿಂಗ್‌ ವೇಳೆ ಎಚ್‌ಆರ್‌ಎ ಬೆನಿಫಿಟ್‌ ಪಡೆಯಿರಿ: ವೇತನದಾರರು ತಮ್ಮ ಕಂಪನಿಗೆ ಇನ್ವೆಸ್ಟ್‌ಮೆಂಟ್‌ ಡಿಕ್ಲರೇಶನ್‌ ಸಲ್ಲಿಸುವಾಗ ಎಚ್‌ಆರ್‌ಎ ವಿನಾಯಿತಿಯನ್ನು ಸಾಮಾನ್ಯವಾಗಿ ಮಿಸ್‌ ಮಾಡಿಕೊಳ್ಳುವುದಿಲ್ಲ. ನೀವು ಸಕಾಲಕ್ಕೆ ಅಗತ್ಯ ಪ್ರೂಫ್‌ಗಳನ್ನು ಸಲ್ಲಿಸದಿದ್ದರೆ ಕಂಪನಿಯು ನಿಮ್ಮ ವೇತನದಲ್ಲಿ ಎಚ್‌ಆರ್‌ಎ ಕುರಿತ ಟಿಡಿಎಸ್‌ ಅನ್ನು ತಡೆ ಹಿಡಿಯುವ ಸಾಧ್ಯತೆ ಇದೆ.

ಅಂಥ ಸಂದರ್ಭದಲ್ಲಿ ನೀವು ಐಟಿ ರಿಟರ್ನ್‌ ಸಲ್ಲಿಕೆಯ ವೇಳೆ ಎಚ್‌ಆರ್‌ಎ ವಿನಾಯಿತಿಯನ್ನು (HRA exemption) ಕ್ಲೇಮ್‌ ಮಾಡಿಕೊಳ್ಳಬಹುದು. ಮೆಟ್ರೊಯೇತರ ನಗರದಲ್ಲಿ ನೀವಿದ್ದರೆ ಎಚ್‌ಆರ್‌ಎ ತೆರಿಗೆ ವಿನಾಯಿತಿಯು ಮೂಲ ವೇತನದ 40% ತನಕ ಇರುತ್ತದೆ. ಐಟಿ ರಿಟನ್ಸ್‌ ಸಲ್ಲಿಕೆ ವೇಳೆ ಬಾಡಿಗೆ ಕರಾರು, ರಿಸಿಪ್ಟ್‌ ಕೊಡಬೇಕಿಲ್ಲವಾದರೂ, ದಾಖಲೆಗಳನ್ನು ಸಂರಕ್ಷಿಸಿಟ್ಟುಕೊಳ್ಳಿ.

ನಿಮ್ಮ ಬಾಡಿಗೆ ಮಾಸಿಕ 50,000 ರೂ. ದಾಟಿದ್ದರೆ ನೀವು ಮಾಲೀಕರಿಗೆ ಕೊಡುವುದಕ್ಕೆ ಮುನ್ನ ತೆರಿಗೆ ಕಡಿತ ಮಾಡಬೇಕಾಗುತ್ತದೆ. ಹೀಗಿದ್ದರೂ ಪ್ರತಿ ತಿಂಗಳು ಕಡಿತ ಮಾಡುವುದರ ಬದಲಿಗೆ ಮಾರ್ಚ್‌ನಲ್ಲಿ ಒಮ್ಮಗೆಯೇ ಕಡಿತ ಮಾಡಬಹುದು ಎನ್ನುತ್ತಾರೆ ಮುಂಬಯಿ ಮೂಲದ ಚಾರ್ಟರ್ಡ್‌ ಅಕೌಂಟೆನ್ಸಿ ಕಂಪನಿಯ ಸೀನಿಯರ್‌ ಪಾರ್ಟ್‌ನರ್‌ ಭವೀಶ್‌ ಶಾ.

ಎಚ್‌ಆರ್‌ಎ ಇಲ್ಲವೇ? ಆದರೂ ತೆರಿಗೆ ಕಡಿತದ ಅನುಕೂಲ ಪಡೆಯಿರಿ: ನೀವು ಸ್ವ ಉದ್ಯೋಗಿಯಾಗಿದ್ದರೆ, ಅಥವಾ ನಿಮ್ಮ ವೇತನದಲ್ಲಿ ಎಚ್‌ಆರ್‌ಎ ಇರದಿದ್ದರೆ ಸೆಕ್ಷನ್‌ 10(13ಎ) ಅಡಿಯಲ್ಲಿ ಎಚ್‌ಆರ್‌ಎ ವಿನಾಯಿತಿಗೆ ಅರ್ಹತೆಯನ್ನು ನೀವು ಪಡೆಯುವುದಿಲ್ಲ. ಹೀಗಿದ್ದರೂ ನೀವು ಸೆಕ್ಷನ್‌ 90ಜಿಜಿ ಅಡಿಯಲ್ಲಿ ರಿಲೀಫ್‌ ಪಡೆಯಬಹುದು. ನೀವು ಮಾಸಿಕ 5,000 ರೂ. ತನಕ ಡಿಡಕ್ಷನ್‌ ಕ್ಲೇಮ್‌ ಮಾಡಿಕೊಳ್ಳಬಹುದು. ಅಂದರೆ ನಿಮ್ಮ ಒಟ್ಟು ಆದಾಯದ 25% ಅಥವಾ ಬಾಡಿಗೆಯಿಂದ ಒಟ್ಟು ಆದಾಯದ 10% ಮೈನಸ್‌ ಮಾಡಿಕೊಳ್ಳಬೇಕು. ಇವೆರೆರಡರಲ್ಲಿ ಯಾವುದು ಕನಿಷ್ಠವೋ ಅಷ್ಟು ಡಿಡಕ್ಷನ್‌ ಕ್ಲೇಮ್‌ ಮಾಡಿಕೊಳ್ಳಬಹುದು. ಆದರೆ ನೀವು ಸ್ವಂತ ಮನೆಯಲ್ಲಿದ್ದರೆ ಈ ಸೌಲಭ್ಯ ಸಿಗುವುದಿಲ್ಲ.

ಪೋಷಕರ ಮನೆಯಲ್ಲಿ ಬಾಡಿಗೆಗೆ ಇದ್ದಾಗ: ನೀವು ಹೆತ್ತವರ ಮನೆಯಲ್ಲಿ ಇದ್ದು ಅವರಿಗೆ ಬಾಡಿಗೆ ನೀಡುತ್ತಿದ್ದರೆ ಅದಕ್ಕಾಗಿ ಎಚ್‌ಆರ್‌ಎ ತೆರಿಗೆ ವಿನಾಯಿತಿ ಕ್ಲೇಮ್‌ ಮಾಡಿಕೊಳ್ಳಬಹುದು. ಹೀಗಿದ್ದರೂ, ನೀವು ಕೊಡುವ ಬಾಡಿಗೆಯು ಪೋಷಕರ ಆದಾಯವಾಗಿ ಪರಿವರ್ತನೆಯಾಗುತ್ತದೆ. ಆದ್ದರಿಂದ ಬಾಡಿಗೆ ಆದಾಯ ಸೇರಿಸಿದಾಗ ಅವರ ತೆರಿಗೆ ಶ್ರೇಣಿ ಯಾವುದು ಹಾಗೂ ಅದರ ಮೇಲೆ ಪರಿಣಾಮ ಏನು ಎಂಬುದನ್ನು ಗಮನಿಸಿ.

ಅನೇಕ ಮಂದಿ ಪೋಷಕರಿಗೆ ಬಾಡಿಗೆ ನೀಡುವ ಸಂದರ್ಭ ಅವರು ಯಾವ ಟ್ಯಾಕ್ಸ್‌ ಬ್ರಾಕೆಟ್‌ಗೆ ಬರುತ್ತಾರೆ ಎಂಬುದ ನು ಗಮನಿಸುವುದಿಲ್ಲ. ಆದರೆ ಪ್ಯಾನ್‌ ಕಾರ್ಡ್‌ ವಿವರ ಕೊಡುವುದರಿಂದ ಬಾಡಿಗೆ ಆದಾಯವು ಪೋಷಕರ annual information statementನಲ್ಲಿ ದಾಖಲಾಗುತ್ತದೆ.

ಇದನ್ನೂ ಓದಿ: ವಿಸ್ತಾರ Money Guide : ಎಂಆರ್‌ಎಫ್‌ ಷೇರಿನಲ್ಲಿ 30,000 ರೂ. ಹೂಡಿಕೆ ಮಾಡಿರುತ್ತಿದ್ದರೆ ಈಗ 4 ಲಕ್ಷ ರೂ. ಲಾಭ!

Exit mobile version